ಪೂರ್ತಿಯಾಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಸಾಗುತ್ತದೆ ಈ ಎಲೆಕ್ಟ್ರಿಕ್ ಸೈಕಲ್

ಎಲೆಕ್ಟ್ರಿಕ್ ಸೈಕಲ್ ತಯಾರಕ ಕಂಪನಿಯಾದ ನೆಕ್ಸ್ಜು ಮೊಬಿಲಿಟಿ ಹೊಸ ಸೂಪರ್ ಲಾಂಗ್ ರೇಂಜ್ ರೋಡ್'ಲಾರ್ಕ್ ಎಲೆಕ್ಟ್ರಿಕ್ ಸೈಕಲ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಪೂರ್ತಿಯಾಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಸಾಗುತ್ತದೆ ಈ ಎಲೆಕ್ಟ್ರಿಕ್ ಸೈಕಲ್

ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಚಲಿಸುವುದು ಈ ಎಲೆಕ್ಟ್ರಿಕ್ ಸೈಕಲ್‌ನ ವಿಶೇಷತೆಯಾಗಿದೆ. ಎಲೆಕ್ಟ್ರಿಕ್ ಸೈಕಲ್ ತಯಾರಕ ಕಂಪನಿಯಾದ ನೆಕ್ಸ್ಜು ಮೊಬಿಲಿಟಿ ವಿನ್ಯಾಸಗೊಳಿಸಿರುವ ಹೊಸ ರೋಡ್'ಲಾರ್ಕ್ ಎಲೆಕ್ಟ್ರಿಕ್ ಸೈಕಲ್ ಹಗುರವಾದ ಸ್ಟೀಲ್ ಫ್ರೇಮ್ ವಿನ್ಯಾಸವನ್ನು ಹೊಂದಿದೆ.

ಪೂರ್ತಿಯಾಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಸಾಗುತ್ತದೆ ಈ ಎಲೆಕ್ಟ್ರಿಕ್ ಸೈಕಲ್

ಇದರ ಜೊತೆಗೆ ಹೆಚ್ಚಿನ ದಕ್ಷತೆಯ ಪವರ್‌ಟ್ರೇನ್‌ ಅನ್ನು ಸಹ ಹೊಂದಿದೆ. ಈ ಎಲೆಕ್ಟ್ರಿಕ್ ಸೈಕಲ್'ನ ವಿಶೇಷ ಲಕ್ಷಣವೆಂದರೆ ರೋಡ್'ಲಾರ್ಕ್ ಡ್ಯುಯಲ್ ಬ್ಯಾಟರಿ ಸಿಸ್ಟಂ ಅನ್ನು ಹೊಂದಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಪೂರ್ತಿಯಾಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಸಾಗುತ್ತದೆ ಈ ಎಲೆಕ್ಟ್ರಿಕ್ ಸೈಕಲ್

ಇವುಗಳಲ್ಲಿ ಹಗುರವಾದ, ಡಿಟ್ಯಾಚೇಬಲ್ ಮೊದಲನೇ ಬ್ಯಾಟರಿಯು 8.7 ಎಎಚ್ ಸಾಮರ್ಥ್ಯವನ್ನು ಹೊಂದಿದ್ದರೆ, 5.2 ಎಎಚ್ ಫ್ರೇಮ್ ಹೊಂದಿರುವ ಎರಡನೇ ಬ್ಯಾಟರಿಯನ್ನು ಹೋಮ್ ಸಾಕೆಟ್'ನಲ್ಲಿ ಚಾರ್ಜ್ ಮಾಡಬಹುದು.

ಪೂರ್ತಿಯಾಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಸಾಗುತ್ತದೆ ಈ ಎಲೆಕ್ಟ್ರಿಕ್ ಸೈಕಲ್

ಈ ಸೈಕಲ್‌ನಲ್ಲಿರುವ ಬ್ಯಾಟರಿಯನ್ನು ಮೂರರಿಂದ ನಾಲ್ಕು ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿದೆ. ಹೊಸ ನೆಕ್ಸ್ಜು ರೋಡ್'ಲಾರ್ಕ್ ಸೈಕಲ್ ಪ್ಯಾಡಲ್ ಮೋಡ್‌ನಲ್ಲಿ 100 ಕಿ.ಮೀ ಹಾಗೂ ಥ್ರೊಟಲ್ ಮೋಡ್‌ನಲ್ಲಿ 75 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಕಂಪನಿ ಹೇಳಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಪೂರ್ತಿಯಾಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಸಾಗುತ್ತದೆ ಈ ಎಲೆಕ್ಟ್ರಿಕ್ ಸೈಕಲ್

ಈ ಎಲೆಕ್ಟ್ರಿಕ್ ಸೈಕಲ್'ನ ವೇಗ ಪ್ರತಿ ಗಂಟೆಗೆ 25 ಕಿ.ಮೀಗಳಾಗಿದೆ. ಕಂಪನಿಯು ಈ ಎಲೆಕ್ಟ್ರಿಕ್ ಸೈಕಲ್'ನಲ್ಲಿ ಡ್ಯುಯಲ್ ವೆಂಟಿಲೇಟೆಡ್ ಡಿಸ್ಕ್ ಬ್ರೇಕ್, ಫ್ರಂಟ್ ಸಸ್ಪೆಂಷನ್ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಿದೆ.

ಪೂರ್ತಿಯಾಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಸಾಗುತ್ತದೆ ಈ ಎಲೆಕ್ಟ್ರಿಕ್ ಸೈಕಲ್

ಹೊಸ ನೆಕ್ಸ್ಜು ರೋಡ್'ಲಾಕ್ ಪೂರ್ಣ ಫೆಂಡರ್‌ ಹಾಗೂ ಹಲವು ರಿಫ್ಲೆಕ್ಟರ್'ಗಳನ್ನು ಹೊಂದಿದೆ. ಇದರ ಜೊತೆಗೆ ಆರಾಮದಾಯಕ ಸವಾರಿಗಾಗಿ ದೊಡ್ಡ ಸೀಟ್ ಅನ್ನು ಸಹ ನೀಡಲಾಗಿದೆ. ಈ ಎಲೆಕ್ಟ್ರಿಕ್ ಸೈಕಲ್‌ನಲ್ಲಿ ಗೇರ್ ಸಿಸ್ಟಂ ನೀಡಲಾಗಿಲ್ಲ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಪೂರ್ತಿಯಾಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಸಾಗುತ್ತದೆ ಈ ಎಲೆಕ್ಟ್ರಿಕ್ ಸೈಕಲ್

ಹೊಸ ನೆಕ್ಸ್ಜು ರೋಡ್'ಲಾರ್ಕ್ ಎಲೆಕ್ಟ್ರಿಕ್ ಸೈಕಲ್'ನ ಬೆಲೆ ರೂ.42,000ಗಳಾಗಿದೆ. ಈ ಎಲೆಕ್ಟ್ರಿಕ್ ಖರೀದಿಸ ಬಯಸುವವರು ನೆಕ್ಸ್ಜುವಿನ 90ಕ್ಕೂ ಹೆಚ್ಚು ಟಚ್ ಪಾಯಿಂಟ್‌ಗಳಿಂದ ಅಥವಾ ನೆಕ್ಸ್ಜು ಮೊಬಿಲಿಟಿ ಅಧಿಕೃತ ವೆಬ್‌ಸೈಟ್‌ನಿಂದ ಖರೀದಿಸಬಹುದು.

ಪೂರ್ತಿಯಾಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಸಾಗುತ್ತದೆ ಈ ಎಲೆಕ್ಟ್ರಿಕ್ ಸೈಕಲ್

ಈ ಹೊಸ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ ಬಗ್ಗೆ ಮಾತನಾಡಿದ ನೆಕ್ಸ್ಜು ಮೊಬಿಲಿಟಿ ಸಿಒಒ ರಾಹುಲ್ ಶೋನಾಕ್, ಹೊಸ ರೋಡ್'ಲಾರ್ಕ್ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸುವುದಕ್ಕೆ ರೋಮಾಂಚನಗೊಂಡಿದ್ದೇವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಪೂರ್ತಿಯಾಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಸಾಗುತ್ತದೆ ಈ ಎಲೆಕ್ಟ್ರಿಕ್ ಸೈಕಲ್

ಸ್ವ್ಯಾಪ್ ಮಾಡಬಹುದಾದ ಬ್ಯಾಟರಿ ಹೊಂದಿರುವ ಈ ಎಲೆಕ್ಟ್ರಿಕ್ ಸೈಕಲ್ ಪೂರ್ತಿಯಾಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಚಲಿಸುವ ಮೇಕ್ ಇನ್ ಇಂಡಿಯಾ ಮಾದರಿಯಾಗಿದೆ. ನೆಕ್ಸ್ಜು ಗ್ರಾಹಕ ಕೇಂದ್ರಿತ ವಿನ್ಯಾಸ ಹಾಗೂ ಎಂಜಿನಿಯರಿಂಗ್ ಶಕ್ತಿಯನ್ನು ನೀಡುತ್ತದೆ.

ಪೂರ್ತಿಯಾಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಸಾಗುತ್ತದೆ ಈ ಎಲೆಕ್ಟ್ರಿಕ್ ಸೈಕಲ್

ನಮ್ಮ ಎಂಜಿನಿಯರಿಂಗ್ ಹಾಗೂ ವಿನ್ಯಾಸ ತಂಡವು ಗ್ರಾಹಕ ಕೇಂದ್ರಿತ ಚಲನಶೀಲತೆಯನ್ನು ನೀಡುವುದರತ್ತ ಗಮನ ಹರಿಸಿದೆ. ಹೊಸ ರೋಡ್'ಲಾರ್ಕ್'ನೊಂದಿಗೆ ನಾವು ದೂರದ ಎಲೆಕ್ಟ್ರಿಕ್ ಸೈಕಲ್ ಪ್ರವಾಸವನ್ನು ಸುಲಭಗೊಳಿಸಲಿದ್ದೇವೆ ಎಂದು ಹೇಳಿದರು.

Most Read Articles
 
Kannada
English summary
Nexzu mobility launches new Roadlark e bicycle which travels 100 kms after full charge. Read in Kannada.
Story first published: Monday, April 19, 2021, 19:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X