ಪೂರ್ತಿಯಾಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಚಲಿಸುತ್ತದೆ ಈ ಎಲೆಕ್ಟ್ರಿಕ್ ಸೈಕಲ್

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚುತ್ತಿದೆ. ಎಲೆಕ್ಟ್ರಿಕ್ ಬೈಕ್‌, ಎಲೆಕ್ಟ್ರಿಕ್ ಸ್ಕೂಟರ್‌, ಎಲೆಕ್ಟ್ರಿಕ್ ಆಟೋ ಹಾಗೂ ಎಲೆಕ್ಟ್ರಿಕ್ ಕಾರುಗಳ ನಂತರ ಎಲೆಕ್ಟ್ರಿಕ್ ಮಿನಿ ಲೋಡ್ ವ್ಯಾನ್‌ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಇದರ ಜೊತೆಗೆ ಎಲೆಕ್ಟ್ರಿಕ್ ಸೈಕಲ್‌ಗಳು ಸಹ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ.

ಪೂರ್ತಿಯಾಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಚಲಿಸುತ್ತದೆ ಈ ಎಲೆಕ್ಟ್ರಿಕ್ ಸೈಕಲ್

ಭಾರತದ ಆಟೋ ಮೊಬೈಲ್ ಉದ್ಯಮವು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚು ಗಮನ ಹರಿಸುತ್ತಿದೆ. ಬಹುತೇಕ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳನ್ನು ತಯಾರಿಸಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿವೆ. ಭಾರತೀಯ ಗ್ರಾಹಕರು ಸಹ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿದ್ದಾರೆ.

ಪೂರ್ತಿಯಾಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಚಲಿಸುತ್ತದೆ ಈ ಎಲೆಕ್ಟ್ರಿಕ್ ಸೈಕಲ್

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ದಿನ ನಿತ್ಯ ವಾಹನಗಳನ್ನು ಬಳಸುವ ವಾಹನ ಸವಾರರು ಕಂಗಾಲಾಗಿದ್ದಾರೆ. ಈ ಕಾರಣಕ್ಕೆ ವಾಹನ ಸವಾರರು ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಆರಂಭಿಸಿದ್ದಾರೆ. ಇದರ ಲಾಭ ಪಡೆಯಲು ಕೆಲವು ಕಂಪನಿಗಳು ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸೈಕಲ್'ಗಳನ್ನು ಬಳಸುತ್ತಿವೆ.

ಪೂರ್ತಿಯಾಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಚಲಿಸುತ್ತದೆ ಈ ಎಲೆಕ್ಟ್ರಿಕ್ ಸೈಕಲ್

ಎಲೆಕ್ಟ್ರಿಕ್ ಸೈಕಲ್'ಗಳು ದಿನ ನಿತ್ಯ ದ್ವಿಚಕ್ರ ವಾಹನ ಬಳಸುವವರಿಗೆ ವರದಾನವಾಗಿವೆ ಎಂದೇ ಹೇಳಬಹುದು. ಎಲೆಕ್ಟ್ರಿಕ್ ಸೈಕಲ್'ಗಳು ಎಲೆಕ್ಟ್ರಿಕ್ ಸ್ಕೂಟರ್‌ ಹಾಗೂ ಎಲೆಕ್ಟ್ರಿಕ್ ಬೈಕ್‌ಗಳಿಗೆ ಸರಿ ಸಮಾನವಾಗಿ ಮಾರಾಟವಾಗುತ್ತಿವೆ. ಭಾರತದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ Nexzu ಮೊಬಿಲಿಟಿ ತನ್ನ ರೋಡ್‌ಲಾರ್ಕ್ ಎಲೆಕ್ಟ್ರಿಕ್ ಸೈಕಲ್ ಮಾಹಿತಿಯನ್ನು ಬಹಿರಂಗಪಡಿಸಿದೆ.

ಪೂರ್ತಿಯಾಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಚಲಿಸುತ್ತದೆ ಈ ಎಲೆಕ್ಟ್ರಿಕ್ ಸೈಕಲ್

ಈ ಎಲೆಕ್ಟ್ರಿಕ್ ಸೈಕಲ್ ಪೂರ್ತಿಯಾಗಿ ಚಾರ್ಜ್ ಆದ ನಂತರ ಸುಮಾರು100 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಯಾವುದೇ ಆಕಾರ, ಗಾತ್ರ ಹಾಗೂ ವಿಶೇಷತೆಯ ಎಲೆಕ್ಟ್ರಿಕ್ ವಾಹನವನ್ನು ಪರಿಗಣಿಸುವ ಯಾರಿಗಾದರೂ ಈ ವ್ಯಾಪ್ತಿಯು ಸಾಕಷ್ಟು ದೊಡ್ಡದಾಗಿದೆ ಎಂದೇ ಹೇಳಬಹುದು. ಅಂದ ಹಾಗೆ ಈ ಎಲೆಕ್ಟ್ರಿಕ್ ಸೈಕಲ್ ಬೆಲೆ ರೂ. 44,083 ಗಳಾಗಿದೆ.

ಪೂರ್ತಿಯಾಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಚಲಿಸುತ್ತದೆ ಈ ಎಲೆಕ್ಟ್ರಿಕ್ ಸೈಕಲ್

ಇದರಿಂದ ದ್ವಿಚಕ್ರ ವಾಹನ ವಿಭಾಗದಲ್ಲಿ ಎಲ್ಲಾ ಇತರ ಉತ್ಪನ್ನಗಳನ್ನು ಹಿಂದಿಕ್ಕಲು ಈ ಎಲೆಕ್ಟ್ರಿಕ್ ಸೈಕಲ್‌ಗೆ ಸಾಧ್ಯವಾಗಲಿದೆ. ಈ ಎಲೆಕ್ಟ್ರಿಕ್ ಸೈಕಲ್ ನಲ್ಲಿ ಬಿ‌ಎಲ್‌ಡಿ‌ಸಿ 250 ವ್ಯಾ 36 ವೋಲ್ಟ್ ಎಲೆಕ್ಟ್ರಿಕ್ ಮೋಟರ್‌ ಅಳವಡಿಸಲಾಗಿದೆ. ಇದು ನೆಕ್ಸ್‌ಜು ರೋಡ್‌ಲಾರ್ಕ್ ಪೆಡಲ್ ಅಸಿಸ್ಟ್ ಮೋಡ್‌ನಲ್ಲಿ 100 ಕಿ.ಮೀ ವ್ಯಾಪ್ತಿ ಚಲಿಸಲು ಅನುವು ಮಾಡಿ ಕೊಡುತ್ತದೆ.

ಪೂರ್ತಿಯಾಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಚಲಿಸುತ್ತದೆ ಈ ಎಲೆಕ್ಟ್ರಿಕ್ ಸೈಕಲ್

ಒಂದು ಬಾರಿ ಪೂರ್ತಿಯಾಗಿ ಈ ಎಲೆಕ್ಟ್ರಿಕ್ ಸೈಕಲ್ ಅನ್ನು ಚಾರ್ಜ್ ಮಾಡಿದರೆ ಇಷ್ಟು ದೂರ ಚಲಿಸಬಹುದು ಎಂದು ಕಂಪನಿ ಹೇಳಿದೆ. Nexzu Roadlark ಎಲೆಕ್ಟ್ರಿಕ್ ಸೈಕಲ್'ನ ಗರಿಷ್ಠ ವೇಗ ಪ್ರತಿ ಗಂಟೆಗೆ 25 ಕಿ.ಮೀಗಳಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. Nexzu ಮೊಬಿಲಿಟಿಯ ಮುಖ್ಯ ಮಾರುಕಟ್ಟೆ ಅಧಿಕಾರಿ ಪಂಕಜ್ ತಿವಾರಿ ಅವರು ಹೊಸ Nexzu ರೋಡ್‌ಲಾರ್ಕ್ ಬಗ್ಗೆ ಮಾಹಿತಿ ನೀಡಿದ್ದಾರೆ.

ಪೂರ್ತಿಯಾಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಚಲಿಸುತ್ತದೆ ಈ ಎಲೆಕ್ಟ್ರಿಕ್ ಸೈಕಲ್

ಈ ಬಗ್ಗೆ ಮಾತನಾಡಿರುವ ಅವರು, ಎಲೆಕ್ಟ್ರಿಕ್ ಸೈಕಲ್ ವಿಭಾಗದಲ್ಲಿ Nexzu ರೋಡ್‌ಲಾರ್ಕ್ ಒಂದು ಅದ್ಭುತ ಉತ್ಪನ್ನವಾಗಿದೆ ಎಂದು ನಾವು ರೋಮಾಂಚನಗೊಂಡಿದ್ದೇವೆ. ನಾವು 100 ಕಿ.ಮೀ ವ್ಯಾಪ್ತಿ ನೀಡುವ ಎಲೆಕ್ಟ್ರಿಕ್ ಸೈಕಲ್‌ನೊಂದಿಗೆ ಉಳಿದವುಗಳಿಗಿಂತ ಮುಂದಿದ್ದೇವೆ. ಈ ಉತ್ಪನ್ನವು ಸೈಕ್ಲಿಂಗ್ ಅಳವಡಿಕೆಯನ್ನು ಹೆಚ್ಚಿಸಲು ಮತ್ತಷ್ಟು ನೆರವು ನೀಡಲಿದೆ.

ಪೂರ್ತಿಯಾಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಚಲಿಸುತ್ತದೆ ಈ ಎಲೆಕ್ಟ್ರಿಕ್ ಸೈಕಲ್

ಈ ಎಲೆಕ್ಟ್ರಿಕ್ ಸೈಕಲ್ ಮುಂಬರುವ ವರ್ಷಗಳಲ್ಲಿ ಪೆಟ್ರೋಲ್ ಸ್ಕೂಟರ್ ಹಾಗೂ ಮೊಪೆಡ್‌ಗಳನ್ನು ಬದಲಾಯಿಸುವ ಭರವಸೆಯ ನಾವೀನ್ಯತೆಯಾಗಿದೆ ಎಂದು ಹೇಳಿದರು. ಕೋವಿಡ್ ಸಾಂಕ್ರಾಮಿಕದ ನಂತರ ಭಾರತದಲ್ಲಿ ಹಾಗೂ ಪ್ರಪಂಚದಾದ್ಯಂತ ಅನೇಕ ಜನರಿಗೆ ಸೈಕ್ಲಿಂಗ್ ಅನಿವಾರ್ಯ ಆಯ್ಕೆಯಾಗಿ ಹೊರಹೊಮ್ಮಿದೆ. ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೈಕಲ್ ಗಳ ಬಳಕೆಯನ್ನು ಆರಂಭಿಸಿದ್ದಾರೆ.

ಪೂರ್ತಿಯಾಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಚಲಿಸುತ್ತದೆ ಈ ಎಲೆಕ್ಟ್ರಿಕ್ ಸೈಕಲ್

ಭಾರತದ ಹಲವು ನಗರಗಳಲ್ಲಿ ಮನರಂಜನಾ ಸೈಕ್ಲಿಂಗ್ ವೇಗವನ್ನು ಪಡೆದುಕೊಂಡಿದೆ. ಈ ಜಾಗದಲ್ಲಿ ಪ್ರಮುಖ ಎಲೆಕ್ಟ್ರಿಕ್ ಸೈಕಲ್ ತಯಾರಕ ಕಂಪನಿಗಳು ಬ್ಯಾಟರಿ ಶಕ್ತಿಯ ಭರವಸೆಯೊಂದಿಗೆ ಸಂಭಾವ್ಯ ಖರೀದಿದಾರರನ್ನು ಆಕರ್ಷಿಸಲು ಪ್ರಯತ್ನಿಸುತ್ತಿವೆ. Nexzu ಮೊಬಿಲಿಟಿ ಕಂಪನಿಯು ಮಧುರೈ, ಗುರುಗ್ರಾಮ, ಅಹಮದಾಬಾದ್ ಸೇರಿದಂತೆ ಹಲವು ನಗರಗಳಲ್ಲಿ ಡೀಲರ್‌ಶಿಪ್‌ಗಳನ್ನು ಹೊಂದಿದೆ.

ಪೂರ್ತಿಯಾಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಚಲಿಸುತ್ತದೆ ಈ ಎಲೆಕ್ಟ್ರಿಕ್ ಸೈಕಲ್

Nexzu ಕಂಪನಿಯು ರೋಡ್‌ಲಾರ್ಕ್ ಎಲೆಕ್ಟ್ರಿಕ್ ಸೈಕಲ್ ಅನ್ನು ತನ್ನ ಪೋರ್ಟ್‌ಫೋಲಿಯೊದಲ್ಲಿ ಪ್ರಮುಖ ಉತ್ಪನ್ನವಾಗಿಸುವ ಸಾಧ್ಯತೆಗಳಿವೆ. ಅದರ ಸಹಾಯದಿಂದ ಕಂಪನಿಯು ತನ್ನ ಪ್ಯಾನ್ ಇಂಡಿಯಾ ಉಪಸ್ಥಿತಿಯನ್ನು ವಿಸ್ತರಿಸಲು ಮುಂದಾಗಿದೆ.

ಪೂರ್ತಿಯಾಗಿ ಚಾರ್ಜ್ ಆದ ನಂತರ 100 ಕಿ.ಮೀಗಳವರೆಗೆ ಚಲಿಸುತ್ತದೆ ಈ ಎಲೆಕ್ಟ್ರಿಕ್ ಸೈಕಲ್

ಈ ಎಲೆಕ್ಟ್ರಿಕ್ ಸೈಕಲ್ ಗಳನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಆರ್ಡರ್ ಮಾಡುವ ಗ್ರಾಹಕರ ಮನೆ ಬಾಗಿಲಿಗೆ ನೇರವಾಗಿ ಸಾಗಿಸುವ ಮಾದರಿಯನ್ನು ಅನುಸರಿಸುವುದಾಗಿ Nexzu ಮೊಬಿಲಿಟಿ ಕಂಪನಿ ತಿಳಿಸಿದೆ. ಈ ಮೂಲಕ ಗ್ರಾಹಕರು ಭಾರತದ ಯಾವುದೇ ನಗರದಲ್ಲಿ Nexzu ಮೊಬಿಲಿಟಿ ಉತ್ಪನ್ನಗಳನ್ನು ಖರೀದಿಸಬಹುದು.

Most Read Articles

Kannada
English summary
Nexzu roadlark electric bicycle moves up to 100 kms in single charge details
Story first published: Tuesday, November 30, 2021, 19:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X