Just In
- 3 hrs ago
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- 4 hrs ago
2021ರ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ
- 4 hrs ago
ವಿದೇಶಿ ಮಾರುಕಟ್ಟೆಗೂ ಲಗ್ಗೆಯಿಟ್ಟ ಮೇಡ್ ಇನ್ ಇಂಡಿಯಾ ಹೋಂಡಾ ಹೈನೆಸ್ ಸಿಬಿ 350
- 4 hrs ago
ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿನೂತನ ಫೀಚರ್ಸ್ ಹೊಂದಿರುವ ಒಡಿಸ್ಸಿ ಲೋ ಸ್ಪೀಡ್ ಇವಿ ಸ್ಕೂಟರ್ಗಳು ಬಿಡುಗಡೆ
ಗುಜರಾತ್ ಮೂಲದ ಒಡಿಸ್ಸಿ ಎಲೆಕ್ಟ್ರಿಕ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದ್ದು, ಇದೀಗ ಮತ್ತೆರಡು ವಿನೂತನ ಫೀಚರ್ಸ್ ಹೊಂದಿರುವ ಇ2ಗೊ ಮತ್ತು ಇ2ಗೊ ಲೈಟ್ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಬಿಡುಗಡೆ ಮಾಡಿದೆ.

ಇ2ಗೊ ಮತ್ತು ಇ2ಗೊ ಲೈಟ್ ಎಲೆಕ್ಟ್ರಿಕ್ ಸ್ಕೂಟರ್ಗಳು ಎಕ್ಸ್ಶೋರೂಂ ಪ್ರಕಾರ ರೂ. 52,999 ಮತ್ತು ರೂ. 63,999 ಬೆಲೆ ಹೊಂದಿದ್ದು, ಪ್ರತಿ ಗಂಟೆಗೆ ಗರಿಷ್ಠ 25 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಹೊಸ ಸ್ಕೂಟರ್ಗಳು ಪ್ರತಿ ಚಾರ್ಜ್ಗೆ ಗರಿಷ್ಠ 60 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ. 250 ವ್ಯಾಟ್, 60ವೊಲ್ಟ್ ಬಿಎಲ್ಡಿಸಿ ವಾಟರ್ಪ್ರೂಫ್ ಮೋಟಾರ್ ಹೊಂದಿರುವ ಹೊಸ ಸ್ಕೂಟರ್ಗಳಲ್ಲಿ ಗ್ರಾಹಕರು ಲೀಥಿಯಂ ಅಯಾನ್ ಅಥವಾ ಲೀಡ್ ಆ್ಯಸಿಡ್ ಬ್ಯಾಟರಿ ಆಯ್ಕೆಗಳು ಪಡೆಯಬಹುದಾಗಿದೆ.

ಹೊಸ ಇವಿ ಸ್ಕೂಟರ್ಗಳಲ್ಲಿ 1.26KWH ಲೀಥಿಯಂ ಅಯಾನ್ ಮತ್ತು 28AH ಲೀಡ್ ಆ್ಯಸಿಡ್ ಬ್ಯಾಟರಿ ಆಯ್ಕೆ ಮಾಡಬಹುದಾಗಿದ್ದು, ಇದರಲ್ಲಿ ಲೀಥಿಯಂ ಅಯಾನ್ ಬ್ಯಾಟರಿ ತೆಗೆದುಹಾಕಬಹುದಾಗಿದೆ.

ಬ್ಯಾಟರಿ ತೆಗೆದುಹಾಕಬಹುದಾದ ಸೌಲಭ್ಯದಿಂದಾಗಿ ಬ್ಯಾಟರಿಯನ್ನು ಪ್ರತ್ಯೇಕವಾಗಿ ಹೋಂ ಚಾರ್ಜರ್ ಮೂಲಕ ಚಾರ್ಜ್ ಮಾಡಲು ಅನುಕೂಲಕವಾಗಿದ್ದು, ಸ್ಕೂಟರ್ ಕಳ್ಳತನಕ್ಕೆ ಬ್ರೇಕ್ ಹಾಕಲು ಹೊಸ ಸ್ಕೂಟರ್ಗಳಲ್ಲಿ ಆ್ಯಂಟಿ ಥೇಪ್ಟ್ ಅಲರ್ಟ್ ಸಿಸ್ಟಂ ಜೋಡಣೆ ಮಾಡಲಾಗಿದೆ.

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಒಡಿಸ್ಸಿ ಎಲೆಕ್ಟ್ರಿಕ್ ಕಂಪನಿಯು ಹ್ವಾಕ್, ರೇಸರ್ ಮತ್ತು ರೈಸರ್ ಲೈಟ್ ಎನ್ನುವ ಮೂರು ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಮಾರಾಟ ಮಾಡುತ್ತಿದೆ. ಇದರಲ್ಲಿ ಇವೊಕಿಸ್ ಎನ್ನುವ ಒಂದು ಎಲೆಕ್ಟ್ರಿಕ್ ಮೋಟಾರ್ಸೈಕಲ್ ಅನ್ನು ಮಾರಾಟ ಮಾಡುತ್ತಿರುವ ಒಡಿಸ್ಸಿ ಕಂಪನಿಯು ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಲೀಥಿಯಂ ಅಯಾನ್ ಮತ್ತು ಆ್ಯಸಿಡ್ ಬ್ಯಾಟರಿ ಮಾದರಿಗಳಲ್ಲಿ ಅಭಿವೃದ್ದಿಪಡಿಸುತ್ತಿದೆ.

ವಿವಿಧ ಸ್ಕೂಟರ್ ಮಾದರಿಗಳಲ್ಲಿ ಲೀಥಿಯಂ ಅಯಾನ್ ಮತ್ತು ಆ್ಯಸಿಡ್ ಬ್ಯಾಟರಿ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದ್ದರೆ ಎಲೆಕ್ಟ್ರಿಕ್ ಬೈಕ್ ಮಾದರಿಯು ಕೇವಲ ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿರುತ್ತದೆ.

ಬ್ಯಾಟರಿ ಪ್ಯಾಕ್ ಆಧಾರದ ಮೇಲೆ ಒಡಿಸ್ಸಿ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳು ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ.52,999 ಮತ್ತು ಟಾಪ್ ಎಂಡ್ ಮಾದರಿಯು ರೂ. 70,500 ಬೆಲೆ ಪಡೆದುಕೊಂಡಿದೆ.

ಹ್ವಾಕ್, ರೇಸರ್ ಮತ್ತು ರೈಸರ್ ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳು ಪ್ರತಿ ಚಾರ್ಜ್ಗೆ 70ಕಿ.ಮೀ ನಿಂದ 75 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಹೊಸ ಸ್ಕೂಟರ್ಗಳು ನಗರಪ್ರದೇಶದಲ್ಲಿ ಸಂಚಾರಕ್ಕೆ ಅನುಕೂಲಕರವಾಗುವಂತೆ ಪ್ರತಿ ಗಂಟೆಗೆ ಗರಿಷ್ಠ 45 ಕಿ.ಮೀ ಟಾಪ್ ಸ್ಪೀಡ್ ನೀಡಲಾಗಿದೆ.
MOST READ: ಪ್ರತಿ ಚಾರ್ಜ್ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಒಡಿಸ್ಸಿ ನಿರ್ಮಾಣದ ಇವೊಕಿಸ್ ಮೋಟಾರ್ಸೈಕಲ್ ಮಾದರಿಯು ಕೂಡಾ ಅತ್ಯುತ್ತಮ ತಾಂತ್ರಿಕ ಅಂಶಗಳನ್ನು ಹೊಂದಿದ್ದು, ಎಕ್ಸ್ಶೋರೂಂ ಪ್ರಕಾರ ಇವೊಕಿಸ್ ಇವಿ ಬೈಕ್ ಮಾದರಿಯು ರೂ. 1.50 ಲಕ್ಷ ಬೆಲೆ ಹೊಂದಿದೆ.

ಇವೊಕಿಸ್ ಇವಿ ಮೋಟಾರ್ಸೈಕಲ್ ಮಾದರಿಯಲ್ಲಿ ಒಡಿಸ್ಸಿ ಕಂಪನಿಯು 4.32kWh ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆ ಮಾಡಿದ್ದು, 3kW ಎಲೆಕ್ಟ್ರಿಕ್ ಮೋಟಾರ್ ಮೂಲಕ ಪ್ರತಿ ಚಾರ್ಜ್ಗೆ 140 ಕಿ.ಮೀ ಮೈಲೇಜ್ನೊಂದಿಗೆ ಪ್ರತಿ ಗಂಟೆಗೆ 80 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಹೋಂ ಚಾರ್ಜರ್ ಮೂಲಕ 6 ಗಂಟೆಗಳ ಅವಧಿಯಲ್ಲಿ ಪೂರ್ಣ ಪ್ರಮಾಣದ ಚಾರ್ಜ್ ಮಾಡಬಹುದಾಗಿದ್ದು, ಸಾಮಾನ್ಯ ಸ್ಟ್ರೀಟ್ ಫೈಟರ್ ಬೈಕ್ ಮಾದರಿಗಳಿಂತೆ ಅತ್ಯುತ್ತಮ ಡಿಸೈನ್ನೊಂದಿಗೆ ಸುರಕ್ಷತೆಯಲ್ಲೂ ಗಮನಸೆಳೆಯುತ್ತಿದೆ.