Ola ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಘಟಕಕ್ಕೆ ಸೇರ್ಪಡೆಯಾಗಲಿದ್ದಾರೆ 10000 ಮಹಿಳಾ ಉದ್ಯೋಗಿಗಳು

Ola ಎಲೆಕ್ಟ್ರಿಕ್ ಕಾರ್ಖಾನೆಯು ವಿಶ್ವದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಘಟಕವಾಗುವುದರ ಜೊತೆಗೆ ಮಹಿಳಾ ಕಾರ್ಮಿಕರಿಂದ ನಡೆಸಲ್ಪಡುವ ವಿಶ್ವದ ಅತಿ ದೊಡ್ಡ ಉತ್ಪಾದನಾ ಘಟಕವಾಗಿರಲಿದೆ. Ola ಎಲೆಕ್ಟ್ರಿಕ್ ಕಂಪನಿಯು ತನ್ನ ಉತ್ಪಾದನಾ ಘಟಕದಲ್ಲಿ 10,000 ಮಹಿಳಾ ಉದ್ಯೋಗಿಗಳನ್ನು ನೇಮಿಸಲಿದೆ. ಇದರಿಂದ ಈ ಉತ್ಪಾದನಾ ಘಟಕದಲ್ಲಿ ಸಂಪೂರ್ಣ ಕೆಲಸ ಮಹಿಳೆಯರ ಕೈಯಲ್ಲಿರಲಿದೆ.

Ola ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಘಟಕಕ್ಕೆ ಸೇರ್ಪಡೆಯಾಗಲಿದ್ದಾರೆ 10000 ಮಹಿಳಾ ಉದ್ಯೋಗಿಗಳು

ಸ್ವಾವಲಂಬಿ ಭಾರತಕ್ಕೆ ಸ್ವಾವಲಂಬಿ ಮಹಿಳೆಯರ ಅಗತ್ಯವಿದೆ ಎಂದು Ola ಕಂಪನಿ ಹೇಳಿದೆ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯ ಮೂಲಕ ಮಾಹಿತಿ ನೀಡಿರುವ Ola ಕಂಪನಿ ಸಿಇಒ ಭವಿಶ್ ಅಗರ್ ವಾಲ್, Ola ಕಂಪನಿಯ ಭವಿಷ್ಯದ ಉತ್ಪಾದನಾ ಘಟಕವನ್ನು ಸಂಪೂರ್ಣವಾಗಿ ಮಹಿಳೆಯರೇ ನಡೆಸಲಿದ್ದಾರೆ ಎಂದು ತಿಳಿಸಲು ನನಗೆ ಹೆಮ್ಮೆಯಾಗುತ್ತಿದೆ. ಈ ವಾರ ಮಹಿಳಾ ಉದ್ಯೋಗಿಗಳ ಮೊದಲ ಬ್ಯಾಚ್ ಅನ್ನು ನಾವು ಸ್ವಾಗತಿಸಿದ್ದೇವೆ.

Ola ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಘಟಕಕ್ಕೆ ಸೇರ್ಪಡೆಯಾಗಲಿದ್ದಾರೆ 10000 ಮಹಿಳಾ ಉದ್ಯೋಗಿಗಳು

ಈ ಘಟಕವು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯಾಚರಣೆ ಆರಂಭಿಸಿದ ನಂತರ ಈ ಘಟಕದಲ್ಲಿ 10,000 ಮಹಿಳೆಯರು ಇರಲಿದ್ದಾರೆ ಎಂದು ಹೇಳಿದ್ದಾರೆ. Ola ಕಂಪನಿಯು ಆಗಸ್ಟ್ 15 ರಂದು ತನ್ನ S 1 ಹಾಗೂ S 1 Pro ಎಂಬ ಎರಡು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. Ola S 1 ಎಲೆಕ್ಟ್ರಿಕ್ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 99,999 ಗಳಾಗಿದೆ.

Ola ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಘಟಕಕ್ಕೆ ಸೇರ್ಪಡೆಯಾಗಲಿದ್ದಾರೆ 10000 ಮಹಿಳಾ ಉದ್ಯೋಗಿಗಳು

ಇನ್ನು S 1 Pro ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1,29,999 ಗಳಾಗಿದೆ. Ola ಎಲೆಕ್ಟ್ರಿಕ್ ಸ್ಕೂಟರಿನಲ್ಲಿ 3.9 ಕಿ.ವ್ಯಾ ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಈ ಬ್ಯಾಟರಿ ಪ್ಯಾಕ್ ನಲ್ಲಿರುವ ಎಲೆಕ್ಟ್ರಿಕ್ ಮೋಟಾರ್ 8.5 ಕಿ.ವ್ಯಾ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Ola ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಘಟಕಕ್ಕೆ ಸೇರ್ಪಡೆಯಾಗಲಿದ್ದಾರೆ 10000 ಮಹಿಳಾ ಉದ್ಯೋಗಿಗಳು

750 ವೋ ಸಾಮರ್ಥ್ಯದ ಪೋರ್ಟಬಲ್ ಚಾರ್ಜರ್‌ನೊಂದಿಗೆ ಈ Ola ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿರುವ ಬ್ಯಾಟರಿಯನ್ನು ಸುಮಾರು 6 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡ ಬಹುದು. ಇದರ ಹೊರತಾಗಿ ಫಾಸ್ಟ್ ಚಾರ್ಜರ್‌ ಮೂಲಕ ಈ ಬ್ಯಾಟರಿಯನ್ನು ಕೇವಲ 18 ನಿಮಿಷಗಳಲ್ಲಿ 75% ನಷ್ಟು ಚಾರ್ಜ್ ಮಾಡಬಹುದು. ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ Ola ಕಂಪನಿಯು ಹಲವಾರು ಹೊಸ ಹಾಗೂ ಆಧುನಿಕ ಫೀಚರ್ ಗಳನ್ನು ನೀಡಿದೆ.

Ola ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಘಟಕಕ್ಕೆ ಸೇರ್ಪಡೆಯಾಗಲಿದ್ದಾರೆ 10000 ಮಹಿಳಾ ಉದ್ಯೋಗಿಗಳು

ಪೂರ್ಣ ಚಾರ್ಜ್‌ ಆದ ನಂತರ 181 ಕಿ.ಮೀ ಚಾಲನೆ

Ola S 1 ಪೂರ್ತಿಯಾಗಿ ಚಾರ್ಜ್‌ ಆದ ನಂತರ 121 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಹೇಳಲಾಗಿದೆ. ಇನ್ನು ಟಾಪ್ ಎಂಡ್ ಮಾದರಿಯಾದ S 1 Pro ಪೂರ್ತಿಯಾಗಿ ಚಾರ್ಜ್ ಆದ ನಂತರ 181 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಹೇಳಲಾಗಿದೆ.

Ola ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಘಟಕಕ್ಕೆ ಸೇರ್ಪಡೆಯಾಗಲಿದ್ದಾರೆ 10000 ಮಹಿಳಾ ಉದ್ಯೋಗಿಗಳು

ಈ ಎರಡೂ ಸ್ಕೂಟರ್‌ಗಳ ಗರಿಷ್ಠ ವೇಗದ ಬಗ್ಗೆ ಹೇಳುವುದಾದರೆ, Ola S 1 ಎಲೆಕ್ಟ್ರಿಕ್ ಸ್ಕೂಟರ್ ಪ್ರತಿ ಗಂಟೆಗೆ ಗರಿಷ್ಠ 90 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಇನ್ನು Ola S 1 Pro ಎಲೆಕ್ಟ್ರಿಕ್ ಸ್ಕೂಟರ್ ಪ್ರತಿ ಗಂಟೆಗೆ 115 ಕಿ.ಮೀ ವೇಗದಲ್ಲಿ ಚಲಿಸುತ್ತದೆ.

Ola ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಘಟಕಕ್ಕೆ ಸೇರ್ಪಡೆಯಾಗಲಿದ್ದಾರೆ 10000 ಮಹಿಳಾ ಉದ್ಯೋಗಿಗಳು

ಈ ಸ್ಕೂಟರ್ ಕೇವಲ 3 ಸೆಕೆಂಡುಗಳಲ್ಲಿ ಗಂಟೆಗೆ 0 - 60 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಮೂರು ವಿಭಿನ್ನ ರೈಡಿಂಗ್ ಮೋಡ್ ಗಳನ್ನು ಹೊಂದಿದೆ. ಇದರಲ್ಲಿ ನಾರ್ಮಲ್, ಸ್ಪೋರ್ಟ್ ಹಾಗೂ ಹೈಪರ್ ಮೋಡ್ ಗಳು ಸೇರಿವೆ. Ola ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಆಕರ್ಷಕ ನೋಟ ಹಾಗೂ ಬಲವಾದ ಎಲೆಕ್ಟ್ರಿಕ್ ಮೋಟರ್ ನೊಂದಿಗೆ ಒಟ್ಟು 10 ಬಣ್ಣಗಳಲ್ಲಿ ಪರಿಚಯಿಸಿದೆ.

Ola ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಘಟಕಕ್ಕೆ ಸೇರ್ಪಡೆಯಾಗಲಿದ್ದಾರೆ 10000 ಮಹಿಳಾ ಉದ್ಯೋಗಿಗಳು

ಡೋರ್ ಡೆಲಿವರಿ

ಇದುವರೆಗೂ Ola ಎಲೆಕ್ಟ್ರಿಕ್ ಸ್ಕೂಟರ್‌ನ ವಿತರಣೆಯನ್ನು ಆರಂಭಿಸಲಾಗಿಲ್ಲ. ಕಂಪನಿಯು ಇನ್ನೂ ಯಾವುದೇ ನಗರದಲ್ಲಿ ತನ್ನ ವಿತರಕರ ಜಾಲವನ್ನು ಸಹ ಆರಂಭಿಸಿಲ್ಲ. ಮಾಹಿತಿಯ ಪ್ರಕಾರ ಆರಂಭಿಕ ಹಂತದಲ್ಲಿ Ola ಕಂಪನಿಯು ತನ್ನ ಸ್ಕೂಟರ್‌ಗಳನ್ನು ಡೋರ್ ಡೆಲಿವರಿ ಮೂಲಕ ಅಂದರೆ ಗ್ರಾಹಕರ ಮನೆ ಬಾಗಿಲಲ್ಲೇ ವಿತರಿಸಲಿದೆ.

Ola ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಘಟಕಕ್ಕೆ ಸೇರ್ಪಡೆಯಾಗಲಿದ್ದಾರೆ 10000 ಮಹಿಳಾ ಉದ್ಯೋಗಿಗಳು

ಇದರಿಂದ ಗ್ರಾಹಕರು ಸ್ಕೂಟರ್ ಪಡೆಯಲು ಶೋರೂಂಗಳಿಗೆ ಹೋಗುವ ಅಗತ್ಯವಿಲ್ಲ. ಈ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಬುಕ್ಕಿಂಗ್ ಮಾಡಿರುವ ಗ್ರಾಹಕರ ಮನೆ ಬಾಗಿಲಿಗೆ ಸ್ಕೂಟರ್ ಗಳನ್ನು ತಲುಪಿಸಲಾಗುತ್ತದೆ. ವಿತರಣೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು Ola ಎಲೆಕ್ಟ್ರಿಕ್ ಕಂಪನಿಯು ಇನ್ನೂ ಹಂಚಿಕೊಂಡಿಲ್ಲ.

Ola ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಘಟಕಕ್ಕೆ ಸೇರ್ಪಡೆಯಾಗಲಿದ್ದಾರೆ 10000 ಮಹಿಳಾ ಉದ್ಯೋಗಿಗಳು

ಡೋರ್ ಸ್ಟೆಪ್ ಸರ್ವಿಸ್

Ola ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ, ಕಂಪನಿಯು ಡೋರ್ ಸ್ಟೆಪ್ ಸೇವೆಯನ್ನು ಒದಗಿಸಲಿದೆ. ಸ್ಕೂಟರಿನಲ್ಲಿ ಏನಾದರೂ ಸಮಸ್ಯೆ ಕಂಡು ಬಂದರೆ ಕಂಪನಿಯ ತಂತ್ರಜ್ಞರು ಸ್ಕೂಟರ್ ರಿಪೇರಿ ಮಾಡಲು ಗ್ರಾಹಕರ ಮನೆಗೆ ಹೋಗುತ್ತಾರೆ. Ola ಎಲೆಕ್ಟ್ರಿಕ್ ಸ್ಕೂಟರ್‌ನ ಮೊಬೈಲ್ ಅಪ್ಲಿಕೇಶನ್ ಹಾಗೂ ವೆಬ್‌ಸೈಟ್‌ನಲ್ಲಿ ಸರ್ವಿಸ್ ರಿಕ್ವೆಸ್ಟ್ ಸೌಲಭ್ಯವನ್ನು ಒದಗಿಸಲಾಗುತ್ತದೆ.

Ola ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಘಟಕಕ್ಕೆ ಸೇರ್ಪಡೆಯಾಗಲಿದ್ದಾರೆ 10000 ಮಹಿಳಾ ಉದ್ಯೋಗಿಗಳು

Ola ಸ್ಕೂಟರ್, ಪ್ರಿಡಿಕ್ಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮೂಲಕ ಬಳಕೆದಾರರಿಗೆ ನಿರ್ವಹಣೆಗೆ ಸಂಬಂಧಿಸಿದ ಅಲರ್ಟ್ ಗಳನ್ನು ನೀಡುತ್ತದೆ. ಮುಂದಿನ ಹಂತದಲ್ಲಿ ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಆನ್‌ಲೈನ್ ಹಾಗೂ ಆಫ್‌ಲೈನ್‌ ಮೂಲಕ ಮಾರಾಟ ಮಾಡುವ ಸಾಧ್ಯತೆಗಳಿವೆ.

Ola ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಘಟಕಕ್ಕೆ ಸೇರ್ಪಡೆಯಾಗಲಿದ್ದಾರೆ 10000 ಮಹಿಳಾ ಉದ್ಯೋಗಿಗಳು

ಈ ಹಿನ್ನೆಲೆಯಲ್ಲಿ ಕಂಪನಿಯು ದೇಶದ ಹಲವು ನಗರಗಳಲ್ಲಿ ತನ್ನ ವಿತರಕರನ್ನು ತೆರೆಯಲು ನಿರ್ಧರಿಸುತ್ತಿದೆ. ಕಂಪನಿಯು ಮುಂದಿನ ಮೂರು ತಿಂಗಳಲ್ಲಿ ದೇಶದ ಪ್ರತಿ ನಗರದಲ್ಲಿ ಒಂದು ಕಸ್ಟಮರ್ ಟಚ್ ಪಾಯಿಂಟ್ ಅನ್ನು ಆರಂಭಿಸಲಿದೆ.

Most Read Articles

Kannada
English summary
Ola company to employ 10000 women workers in factory details
Story first published: Monday, September 13, 2021, 18:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X