20,000 ಟೆಸ್ಟ್ ರೈಡ್‌ಗಳನ್ನು ಪೂರ್ಣಗೊಳಿಸಿದ Ola Electric

ಓಲಾ ಎಲೆಕ್ಟ್ರಿಕ್ (Ola Electric) ಕಂಪನಿಯು ತನ್ನ S1 ಹಾಗೂ S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಾಗಿ 20,000 ಟೆಸ್ಟ್ ರೈಡ್‌ಗಳನ್ನು ಪೂರ್ಣಗೊಳಿಸಿದೆ. ಕಂಪನಿಯು ಈಗ ಡಿಸೆಂಬರ್ ತಿಂಗಳಿನಿಂದ 1,000 ನಗರಗಳಲ್ಲಿ ಪ್ರತಿ ದಿನ 10,000 ಟೆಸ್ಟ್ ರೈಡ್‌ಗಳನ್ನು ನಡೆಸುವ ಗುರಿಯನ್ನು ಹೊಂದಿದೆ. ಕಂಪನಿಯು ದೇಶದ ಅತಿ ದೊಡ್ಡ ಇವಿ ಟೆಸ್ಟ್ ಡ್ರೈವ್ ಕಾರ್ಯಕ್ರಮವನ್ನು ನವೆಂಬರ್ ತಿಂಗಳ ಆರಂಭದಲ್ಲಿ ಆರಂಭಿಸಿತು.

20,000 ಟೆಸ್ಟ್ ರೈಡ್‌ಗಳನ್ನು ಪೂರ್ಣಗೊಳಿಸಿದ Ola Electric

ಈ ಬಗ್ಗೆ ಓಲಾ ಎಲೆಕ್ಟ್ರಿಕ್ ಕಂಪನಿಯ ಸಿಇಒ ಭವಿಶ್ ಅಗರ್ವಾಲ್ ರವರು ತಮ್ಮ ಟ್ವಿಟರ್ ಖಾತೆಯ ಮೂಲಕ ಮಾಹಿತಿ ನೀಡಿದ್ದಾರೆ. ನಾವು ಈಗಷ್ಟೇ 20,000 ಟೆಸ್ಟ್ ರೈಡ್‌ಗಳನ್ನು ಪೂರ್ಣಗೊಳಿಸಿದ್ದೇವೆ! ಇದು ಬಹುಶಃ ಭಾರತದಲ್ಲಿ ಮಾತ್ರವಲ್ಲದೆ ಇಡೀ ಪ್ರಪಂಚದಲ್ಲಿಯೇ ದೊಡ್ಡ ಟೆಸ್ಟ್ ರೈಡ್ ಆಗಿದೆ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಆದರೆ ನಿಗದಿತ ಸಮಯಕ್ಕೆ ಸ್ಕೂಟರ್ ವಿತರಣೆಯಾಗದ ಕಾರಣ ಸ್ಕೂಟರ್ ಬುಕ್ ಮಾಡಿರುವ ಗ್ರಾಹಕರು ಕಂಗಾಲಾಗಿದ್ದಾರೆ.

20,000 ಟೆಸ್ಟ್ ರೈಡ್‌ಗಳನ್ನು ಪೂರ್ಣಗೊಳಿಸಿದ Ola Electric

ಈ ಬಗ್ಗೆ ಟ್ವಿಟರ್ ಬಳಕೆದಾರರೊಬ್ಬರು, ಓಲಾ ಎಲೆಕ್ಟ್ರಿಕ್ ಸಿಇಒ ಭವಿಶ್ ಅಗರ್ವಾಲ್ ಅವರನ್ನೇ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ. ಓಲಾ ಎಲೆಕ್ಟ್ರಿಕ್ ಶೀಘ್ರದಲ್ಲೇ ತನ್ನ ಓಲಾ ಎಸ್ 1 ಹಾಗೂ ಓಲಾ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿತರಣೆಯನ್ನು ಆರಂಭಿಸಲಿದೆ ಎಂದು ಕೆಲವು ದಿನಗಳ ಹಿಂದೆ ಹೇಳಲಾಗಿತ್ತು. ಆದರೆ ಈಗ ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಎಸ್ 1 ಹಾಗೂ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿತರಣೆಯನ್ನು ಎರಡು ವಾರಗಳಿಂದ ಒಂದು ತಿಂಗಳವರೆಗೆ ಮುಂದೂಡಿದೆ ಎಂದು ವರದಿಯಾಗಿದೆ.

20,000 ಟೆಸ್ಟ್ ರೈಡ್‌ಗಳನ್ನು ಪೂರ್ಣಗೊಳಿಸಿದ Ola Electric

ಜಾಗತಿಕವಾಗಿ ಸೆಮಿಕಂಡಕ್ಟರ್ ಚಿಪ್‌ಗಳ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಕಂಪನಿಯು ಈ ನಿರ್ಧಾರ ಕೈಗೊಂಡಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ಕಂಪನಿಯು ಈ ಬಗ್ಗೆ ಇ- ಮೇಲ್ ಕಳುಹಿಸಿದೆ ಎಂದು ವರದಿಯಾಗಿದೆ. ಡೆಲಿವರಿ ವಿಳಂಬ ಅನಿವಾರ್ಯವಾಗಿದೆ ಎಂದು ತಿಳಿಸಿರುವ ಕಂಪನಿಯು ಇ-ಮೇಲ್ ಮೂಲಕ ಗ್ರಾಹಕರಲ್ಲಿ ಕ್ಷಮೆಯಾಚಿಸಿದೆ.

20,000 ಟೆಸ್ಟ್ ರೈಡ್‌ಗಳನ್ನು ಪೂರ್ಣಗೊಳಿಸಿದ Ola Electric

ಸ್ಕೂಟರ್‌ಗಳನ್ನು ಗ್ರಾಹಕರಿಗೆ ಬೇಗ ತಲುಪಿಸಲು ಉತ್ಪಾದನೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ. ಓಲಾ ಕಂಪನಿಯು ನವೆಂಬರ್ 10 ರಂದು ತನ್ನ ಎಸ್ 1 ಹಾಗೂ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಅಂತಿಮ ಪಾವತಿ ವಿಂಡೋವನ್ನು ತೆರೆದು, ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ವಾಹನಗಳನ್ನು ವಿತರಿಸುವ ಭರವಸೆ ನೀಡಿತ್ತು. ಅದೇ ದಿನ ಕಂಪನಿಯು ಬೆಂಗಳೂರು, ದೆಹಲಿ, ಅಹಮದಾಬಾದ್ ಹಾಗೂ ಕೋಲ್ಕತ್ತಾದಲ್ಲಿ ಗ್ರಾಹಕರಿಗೆ ಟೆಸ್ಟ್ ರೈಡ್ ಗಳನ್ನು ಆರಂಭಿಸಿತು.

20,000 ಟೆಸ್ಟ್ ರೈಡ್‌ಗಳನ್ನು ಪೂರ್ಣಗೊಳಿಸಿದ Ola Electric

ಮೊದಲ ಬ್ಯಾಚ್ ಸ್ಕೂಟರ್‌ಗಳನ್ನು ಅಕ್ಟೋಬರ್ 25 ರಿಂದ ನವೆಂಬರ್ 25 ರ ನಡುವೆ ವಿತರಿಸಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಈಗ ಅದು ಡಿಸೆಂಬರ್ 15 ರಿಂದ ಡಿಸೆಂಬರ್ 30 ರ ನಡುವೆ ವಿತರಿಸುವ ಸಾಧ್ಯತೆಗಳಿವೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು - S1 ಹಾಗೂ S1 Pro ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. S 1 ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1 ಲಕ್ಷಗಳಾಗಿದೆ.

20,000 ಟೆಸ್ಟ್ ರೈಡ್‌ಗಳನ್ನು ಪೂರ್ಣಗೊಳಿಸಿದ Ola Electric

ಇನ್ನು S 1 Pro ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1.30 ಲಕ್ಷಗಳಾಗಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ನೀಡುವ ಸಬ್ಸಿಡಿ ಆಧಾರದ ಮೇಲೆ ಈ ಸ್ಕೂಟರ್ ಗಳ ಬೆಲೆ ಕಡಿಮೆಯಾಗಲಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್'ನಲ್ಲಿ 3.9 ಕಿ.ವ್ಯಾ ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್‌ ಅಳವಡಿಸಲಾಗಿದೆ. ಇದರ ಎಲೆಕ್ಟ್ರಿಕ್ ಮೋಟಾರ್ 8.5 ಕಿ.ವ್ಯಾ ಪವರ್ ಉತ್ಪಾದಿಸುತ್ತದೆ.

20,000 ಟೆಸ್ಟ್ ರೈಡ್‌ಗಳನ್ನು ಪೂರ್ಣಗೊಳಿಸಿದ Ola Electric

750 ವ್ಯಾ ಸಾಮರ್ಥ್ಯದ ಪೋರ್ಟಬಲ್ ಚಾರ್ಜರ್‌ನೊಂದಿಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿರುವ ಬ್ಯಾಟರಿಯನ್ನು ಸುಮಾರು 6 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಇದಲ್ಲದೇ ಫಾಸ್ಟ್ ಚಾರ್ಜರ್ ಮೂಲಕ ಈ ಬ್ಯಾಟರಿಯನ್ನು ಕೇವಲ 18 ನಿಮಿಷಗಳಲ್ಲಿ 75% ನಷ್ಟು ಚಾರ್ಜ್ ಮಾಡಬಹುದು. Ola S1 ಎಲೆಕ್ಟ್ರಿಕ್ ಸ್ಕೂಟರ್ ಪೂರ್ತಿಯಾಗಿ ಚಾರ್ಜ್ ಆದ ನಂತರ 121 ಕಿ.ಮೀಗಳವರೆಗೆ ಚಲಿಸುತ್ತದೆ.

20,000 ಟೆಸ್ಟ್ ರೈಡ್‌ಗಳನ್ನು ಪೂರ್ಣಗೊಳಿಸಿದ Ola Electric

ಇನ್ನು ಟಾಪ್ ಎಂಡ್ ಮಾದರಿಯಾದ S1 Pro ಎಲೆಕ್ಟ್ರಿಕ್ ಸ್ಕೂಟರ್ ಪೂರ್ತಿಯಾಗಿ ಚಾರ್ಜ್ ಆದ ನಂತರ 181 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಎರಡೂ ಸ್ಕೂಟರ್‌ಗಳ ಟಾಪ್ ಸ್ಪೀಡ್ ಬಗ್ಗೆ ಹೇಳುವುದಾದರೆ, Ola S1 ಎಲೆಕ್ಟ್ರಿಕ್ ಸ್ಕೂಟರ್ ಪ್ರತಿ ಗಂಟೆಗೆ 90 ಕಿ.ಮೀ ಟಾಪ್ ಸ್ಪೀಡ್'ನಲ್ಲಿ ಚಲಿಸಿದರೆ, Ola S1 Pro ಎಲೆಕ್ಟ್ರಿಕ್ ಸ್ಕೂಟರ್ ಪ್ರತಿ 115 ಕಿ.ಮೀ ಟಾಪ್ ಸ್ಪೀಡ್'ನಲ್ಲಿ ಚಲಿಸುತ್ತದೆ.

20,000 ಟೆಸ್ಟ್ ರೈಡ್‌ಗಳನ್ನು ಪೂರ್ಣಗೊಳಿಸಿದ Ola Electric

ಕೆಲವು ದಿನಗಳ ಹಿಂದಷ್ಟೇ Ola ಎಲೆಕ್ಟ್ರಿಕ್ ಕಂಪನಿಯು ವಿಶೇಷ ಬೇಡಿಕೆಯ ಮೇರೆಗೆ ನೆದರ್ಲ್ಯಾಂಡ್ಸ್ ರಾಯಭಾರ ಕಚೇರಿಗೆ ಒಂಬತ್ತು ಕಸ್ಟಮೈಸ್ ಮಾಡಿದ Ola S1 ಪ್ರೊ ಸ್ಕೂಟರ್‌ಗಳನ್ನು ಹಸ್ತಾಂತರಿಸಿತ್ತು. ಈ ಒಂಬತ್ತು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಭಾರತದಲ್ಲಿರುವ ನೆದರ್‌ಲ್ಯಾಂಡ್ಸ್‌ನ ಮೂರು ರಾಜತಾಂತ್ರಿಕ ಕಾರ್ಯಾಚರಣೆಗಳಲ್ಲಿ ಬಳಸಲಾಗುವುದು.

20,000 ಟೆಸ್ಟ್ ರೈಡ್‌ಗಳನ್ನು ಪೂರ್ಣಗೊಳಿಸಿದ Ola Electric

ಈ ಸ್ಕೂಟರ್‌ಗಳನ್ನು ನೆದರ್‌ಲ್ಯಾಂಡ್ಸ್ ಅಧಿಕೃತ ಬಣ್ಣವಾದ ಕಸ್ಟಮ್ ಕಿತ್ತಳೆ ಬಣ್ಣದಲ್ಲಿ ನೀಡಲಾಗಿದೆ. ಈ ಸ್ಕೂಟರ್‌ಗಳು ನೆದರ್‌ಲ್ಯಾಂಡ್‌ನ ಅಧಿಕೃತ ಲೋಗೋವನ್ನು ಸಹ ಹೊಂದಿವೆ. ಓಲಾ ಈ ಸ್ಕೂಟರ್‌ಗಳನ್ನು ಡಚ್ ಆರೆಂಜ್ ಬಣ್ಣದಲ್ಲಿ ಪರಿಚಯಿಸಿದೆ.

20,000 ಟೆಸ್ಟ್ ರೈಡ್‌ಗಳನ್ನು ಪೂರ್ಣಗೊಳಿಸಿದ Ola Electric

ಓಲಾ ತನ್ನ S1 ಹಾಗೂ S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತನ್ನ ಫ್ಯೂಚರ್ ಘಟಕದಲ್ಲಿ ಉತ್ಪಾದಿಸುತ್ತದೆ. ಕಂಪನಿಯು ಸುಧಾರಿತ ಉತ್ಪಾದನೆ ಹಾಗೂ ಉದ್ಯಮ 4.0 ಪ್ರಕ್ರಿಯೆಗಳನ್ನು ಬಳಸುತ್ತದೆ. ಕಂಪನಿಯು ತನ್ನ ಉತ್ಪಾದನೆಯಲ್ಲಿ ಯಾವುದೇ ಅಡಚಣೆಯಿಲ್ಲದ ರೀತಿಯಲ್ಲಿ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ಸ್ಕೂಟರ್‌ಗಳನ್ನು ಸುಲಭವಾಗಿ ಕಸ್ಟಮೈಸ್ ಮಾಡುತ್ತದೆ.

20,000 ಟೆಸ್ಟ್ ರೈಡ್‌ಗಳನ್ನು ಪೂರ್ಣಗೊಳಿಸಿದ Ola Electric

Ola S1 ಶ್ರೇಣಿಯ ಅತ್ಯುತ್ತಮ ಕಾರ್ಯಕ್ಷಮತೆಗಾಗಿ ಅತ್ಯುತ್ತಮ ತಂತ್ರಜ್ಞಾನವನ್ನು ಬಳಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಓಲಾ ಫ್ಯೂಚರ್ ಘಟಕವುವಿಶ್ವದ ಅತಿ ದೊಡ್ಡ, ಅತ್ಯಾಧುನಿಕ ಹಾಗೂ ನವೀಕರಿಸಬಹುದಾದ ಇಂಧನ ಚಾಲಿತ ದ್ವಿಚಕ್ರ ವಾಹನ ಉತ್ಪಾದನಾ ಘಟಕವಾಗಿದೆ.

Most Read Articles

Kannada
English summary
Ola completes 20000 test ride for its electric scooters details
Story first published: Thursday, December 2, 2021, 19:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X