ಕಾರಣಾಂತರಗಳಿಂದ ಎಲೆಕ್ಟ್ರಿಕ್ ಸ್ಕೂಟರ್ ಎರಡನೇ ಹಂತದ ಬುಕ್ಕಿಂಗ್ ಮುಂದೂಡಿಕೆ ಮಾಡಿದ ಓಲಾ

ಓಲಾ ಎಲೆಕ್ಟ್ರಿಕ್(Ola Electric) ಕಂಪನಿಯು ತನ್ನ ಬಹುನೀರಿಕ್ಷಿತ ಎಸ್1 ಮತ್ತು ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸುವ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಂಡಿದ್ದು, ಮೊದಲ ಹಂತದಲ್ಲಿ ಬುಕ್ಕಿಂಗ್ ಸಲ್ಲಿಸಿರುವ ಗ್ರಾಹಕರಿಗೆ ಹೊಸ ಇವಿ ಸ್ಕೂಟರ್‌ಗಳ ವಿತರಣೆಗೆ ಸಜ್ಜಾಗುತ್ತಿರುವ ಓಲಾ ಕಂಪನಿಯು ಡಿಸೆಂಬರ್ 15ರಿಂದ ಎರಡನೇ ಹಂತದ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸುವುದಾಗಿ ಹೇಳಿಕೊಂಡಿತ್ತು.

ಕಾರಣಾಂತರಗಳಿಂದ ಎಲೆಕ್ಟ್ರಿಕ್ ಸ್ಕೂಟರ್ ಎರಡನೇ ಹಂತದ ಬುಕ್ಕಿಂಗ್ ಮುಂದೂಡಿಕೆ ಮಾಡಿದ ಓಲಾ

ಎಸ್1 ಮತ್ತು ಎಸ್1 ಪ್ರೊ ಮಾದರಿಗಳಿಗೆ ಮೊದಲ ಹಂತದಲ್ಲಿ 1 ಲಕ್ಷಕ್ಕೂ ಅಧಿಕ ಬುಕ್ಕಿಂಗ್ ಪಡೆದುಕೊಂಡಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಇದೇ ತಿಂಗಳು 10ರಿಂದ ಟೆಸ್ಟ್ ರೈಡ್ ಆರಂಭಿಸಿದ್ದು, ಟೆಸ್ಟ್ ರೈಡ್ ಆರಂಭದೊಂದಿಗೆ ಕಂಪನಿಯು 2ನೇ ಹಂತದ ಬುಕ್ಕಿಂಗ್ ಆರಂಭಿಸಲು ಯೋಜನೆಯಲ್ಲಿತ್ತು. ಆದರೆ ಕಾರಣಾಂತರಗಳಿಂದ ಕಂಪನಿಯು ಹೊಸ ಇವಿ ಸ್ಕೂಟರ್‌ಗಾಗಿ ಎರಡನೇ ಹಂತದ ಬುಕ್ಕಿಂಗ್ ಪ್ರಕ್ರಿಯೆಯನ್ನು ಮುಂದೂಡಿಕೆ ಮಾಡಿದ್ದು, ಮೊದಲ ಹಂತದ ವಿತರಣೆ ಪ್ರಕ್ರಿಯೆಯಲ್ಲೂ ಕೂಡಾ ವಿಳಂಬವಾಗುತ್ತಿದೆ.

ಕಾರಣಾಂತರಗಳಿಂದ ಎಲೆಕ್ಟ್ರಿಕ್ ಸ್ಕೂಟರ್ ಎರಡನೇ ಹಂತದ ಬುಕ್ಕಿಂಗ್ ಮುಂದೂಡಿಕೆ ಮಾಡಿದ ಓಲಾ

ಮೊದಲ ಹಂತದಲ್ಲಿ ಬುಕ್ಕಿಂಗ್ ಮಾಡಲಾದ ಗ್ರಾಹಕರಿಗೆ ಓಲಾ ಕಂಪನಿಯು ಇದೇ 10ರಿಂದ ಟೆಸ್ಟ್ ರೈಡ್ ಆರಂಭಿಸಿದ್ದರೂ ಸ್ಕೂಟರ್ ವಿತರಣೆಯನ್ನು ಆರಂಭಿಸಲು ಇನ್ನು ಕನಿಷ್ಠ ಒಂದು ತಿಂಗಳು ತೆಗೆದುಕೊಳ್ಳುವ ಬಗೆಗೆ ಕಂಪನಿಯೇ ಮಾಹಿತಿ ಹಂಚಿಕೊಂಡಿದ್ದು, ಎರಡನೇ ಹಂತದ ಬುಕ್ಕಿಂಗ್ ಪ್ರಕ್ರಿಯೆ 2022ರ ಜನವರಿ ಕೊನೆಯಲ್ಲಿ ಆರಂಭವಾಗಬಹುದು ಎನ್ನಲಾಗಿದೆ.

ಕಾರಣಾಂತರಗಳಿಂದ ಎಲೆಕ್ಟ್ರಿಕ್ ಸ್ಕೂಟರ್ ಎರಡನೇ ಹಂತದ ಬುಕ್ಕಿಂಗ್ ಮುಂದೂಡಿಕೆ ಮಾಡಿದ ಓಲಾ

ಡಿಸೆಂಬರ್ 15ರಿಂದ ಎರಡನೇ ಹಂತದ ಬುಕ್ಕಿಂಗ್ ಆರಂಭಗೊಳಿಸುವುದಾಗಿ ಮಾಹಿತಿ ನೀಡಿದ್ದ ಓಲಾ ಎಲೆಕ್ಟ್ರಿಕ್ ಕಂಪನಿಯು ಹೊಸ ವಾಹನಗಳ ಉತ್ಪಾದನೆಗೆ ಅತಿಅವಶ್ಯವಾಗಿರುವ ಸೆಮಿಕಂಡಕ್ಟರ್ ಕೊರತೆಯ ಕಾರಣಕ್ಕೆ ಇವಿ ವಾಹನ ವಿತರಣೆಯು ವಿಳಂಬವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಸೆಮಿಕಂಡಕ್ಟರ್ ಪೂರೈಕೆ ಸಮಸ್ಯೆ ಬಗೆಹರಿಯುವ ತನಕ ವಿತರಣೆಯಲ್ಲಿ ತುಸು ವಿಳಂಬವಾಗುವ ಬಗೆಗೆ ಮಾಹಿತಿ ನೀಡಿದೆ.

ಕಾರಣಾಂತರಗಳಿಂದ ಎಲೆಕ್ಟ್ರಿಕ್ ಸ್ಕೂಟರ್ ಎರಡನೇ ಹಂತದ ಬುಕ್ಕಿಂಗ್ ಮುಂದೂಡಿಕೆ ಮಾಡಿದ ಓಲಾ

ಕನೆಕ್ಟೆಡ್ ಫೀಚರ್ಸ್ ಕಾರ್ಯನಿರ್ವಹಣೆಗಾಗಿ ಸೆಮಿಕಂಡಕ್ಟರ್ ಚಿಪ್‌ ಪ್ರಮುಖವಾಗಿದ್ದು, ಜಾಗತಿಕವಾಗಿ ಉತ್ಪಾದನೆಯಲ್ಲಿ ಆಗಿರುವ ಅಡಚಣೆಯು ಆಟೋ ಉದ್ಯಮದ ಮೇಲೆ ತೀವ್ರ ಹೊಡೆತ ನೀಡುತ್ತಿದೆ. ಹೀಗಾಗಿ ಓಲಾ ಎಲೆಕ್ಟ್ರಿಕ್ ಸೇರಿದಂತೆ ವಿಶ್ವದ ಪ್ರಮುಖ ವಾಹನ ತಯಾರಿಕಾ ಕಂಪನಿಗಳ ಉತ್ಪಾದನೆ ಮೇಲೆ ಹೊಡೆತ ನೀಡುತ್ತಿದ್ದು, ಓಲಾ ಇವಿ ಸ್ಕೂಟರ್ ವಿತರಣೆ ಪಡೆದುಕೊಳ್ಳಲು ತವಕದಲ್ಲಿದ್ದ ಗ್ರಾಹಕರಿಗೆ ಇದೀಗ ಮತ್ತೊಮ್ಮೆ ನಿರಾಸೆ ಉಂಟುಮಾಡಿದೆ.

ಕಾರಣಾಂತರಗಳಿಂದ ಎಲೆಕ್ಟ್ರಿಕ್ ಸ್ಕೂಟರ್ ಎರಡನೇ ಹಂತದ ಬುಕ್ಕಿಂಗ್ ಮುಂದೂಡಿಕೆ ಮಾಡಿದ ಓಲಾ

ಮಾಹಿತಿಗಳ ಪ್ರಕಾರ, ಓಲಾ ಎಲೆಕ್ಟ್ರಿಕ್ ಇವಿ ಸ್ಕೂಟರ್ ಖರೀದಿಗೆ ಮೊದಲ ಹಂತದಲ್ಲಿ ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ಡಿಸೆಂಬರ್ ಕೊನೆಯಲ್ಲಿ ಸ್ಕೂಟರ್ ವಿತರಣೆಯಾಗುವ ಸಾಧ್ಯತೆಗಳಿದ್ದು, ಜನವರಿ ಕೊನೆಯಲ್ಲಿ ಎರಡನೇ ಹಂತದ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ 2022ರ ಮೇ ಹೊತ್ತಿಗೆ ವಿತರಣೆಯಾಗಬಹುದಾಗಿದೆ.

ಕಾರಣಾಂತರಗಳಿಂದ ಎಲೆಕ್ಟ್ರಿಕ್ ಸ್ಕೂಟರ್ ಎರಡನೇ ಹಂತದ ಬುಕ್ಕಿಂಗ್ ಮುಂದೂಡಿಕೆ ಮಾಡಿದ ಓಲಾ

ಓಲಾ ಕಂಪನಿಯು ಹೊಸ ಇವಿ ಸ್ಕೂಟರ್ ಖರೀದಿ ಪ್ರಕ್ರಿಯೆಗಾಗಿ ಶೋರೂಂಗಳ ಬದಲಾಗಿ ಸಂಪೂರ್ಣವಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಸ್ಕೂಟರ್ ಖರೀದಿ ಪ್ರಕ್ರಿಯೆ ಪ್ರಕ್ರಿಯೆ, ವಿತರಣೆ ಮತ್ತು ಮಾರಾಟ ನಂತರದ ಗ್ರಾಹಕರ ಸೇವೆಗಳು ಸಹ ಮನೆ ಬಾಗಿಲಿಗೆ ಒದಗಿಸುವ ಭರವಸೆ ನೀಡಿದೆ.

ಕಾರಣಾಂತರಗಳಿಂದ ಎಲೆಕ್ಟ್ರಿಕ್ ಸ್ಕೂಟರ್ ಎರಡನೇ ಹಂತದ ಬುಕ್ಕಿಂಗ್ ಮುಂದೂಡಿಕೆ ಮಾಡಿದ ಓಲಾ

ಹೊಸ ಎಸ್1 ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 99,999 ಬೆಲೆ ಹೊಂದಿದ್ದರೆ ಎಸ್1 ಪ್ರೊ ಮಾದರಿಯು ರೂ. 1,29,999 ಬೆಲೆ ಹೊಂದಿದ್ದು, ಎರಡು ಇವಿ ಮಾದರಿಗಳಲ್ಲೂ ಕಂಪನಿಯು ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಆಕರ್ಷಕ ಮೈಲೇಜ್ ರೇಂಜ್ ನೀಡಿದೆ.

ಕಾರಣಾಂತರಗಳಿಂದ ಎಲೆಕ್ಟ್ರಿಕ್ ಸ್ಕೂಟರ್ ಎರಡನೇ ಹಂತದ ಬುಕ್ಕಿಂಗ್ ಮುಂದೂಡಿಕೆ ಮಾಡಿದ ಓಲಾ

ಎಸ್1 ವೆರಿಯೆಂಟ್‌‌ನಲ್ಲಿ 2.98kWh ಮತ್ತು ಎಸ್1 ಪ್ರೊ ಮಾದರಿಯಲ್ಲಿ 3.97kWh ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆ ಮಾಡಿದ್ದು, ಪ್ರತಿ ಚಾರ್ಜ್‌ಗೆ ಎಸ್1 ಮಾದರಿಯು ಗರಿಷ್ಠ 121 ಕಿ.ಮೀ ಮೈಲೇಜ್ ಹಿಂದಿರುಗಿಸಿದರೆ ಎಸ್1 ಪ್ರೊ ಮಾದರಿಯು ಪ್ರತಿ ಚಾರ್ಜ್‌ಗೆ 181 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಕಾರಣಾಂತರಗಳಿಂದ ಎಲೆಕ್ಟ್ರಿಕ್ ಸ್ಕೂಟರ್ ಎರಡನೇ ಹಂತದ ಬುಕ್ಕಿಂಗ್ ಮುಂದೂಡಿಕೆ ಮಾಡಿದ ಓಲಾ

ಎಸ್1 ಮಾದರಿಯು ಗಂಟೆಗೆ 90 ಕಿ.ಮೀ ಟಾಪ್ ಸ್ಪೀಡ್‌ ಹೊಂದಿದ್ದರೆ ಎಸ್1 ಪ್ರೊ ಮಾದರಿಯು ಪ್ರತಿ ಗಂಟೆಗೆ 115ಕಿ.ಮೀ ಟಾಪ್ ಸ್ಪೀಡ್‌ ಹೊಂದಿದ್ದು, ಎಸ್1 ಮಾದರಿಯಲ್ಲಿ ನಾರ್ಮಲ್ ಮತ್ತು ಸ್ಪೋರ್ಟ್ ರೈಡ್ ಮೋಡ್‌ಗಳಿದ್ದರೆ ಎಸ್1 ಪ್ರೊ ಮಾದರಿಯಲ್ಲಿ ನಾರ್ಮಲ್, ಸ್ಪೋರ್ಟ್ ಮತ್ತು ಹೈಪರ್ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ಕಾರಣಾಂತರಗಳಿಂದ ಎಲೆಕ್ಟ್ರಿಕ್ ಸ್ಕೂಟರ್ ಎರಡನೇ ಹಂತದ ಬುಕ್ಕಿಂಗ್ ಮುಂದೂಡಿಕೆ ಮಾಡಿದ ಓಲಾ

ಹಾಗೆಯೇ ಓಲಾ ಇವಿ ಸ್ಕೂಟರ್‌ಗಳು ಅತ್ಯುತ್ತಮ ವಿನ್ಯಾಸದೊಂದಿಗೆ ಗರಿಷ್ಠ ಮಟ್ಟದ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಸ್ಕೂಟರ್‌ಗಳಲ್ಲಿ ಟ್ವಿನ್ ಪಾಡ್ ಎಲ್ಇಡಿ ಸೆಟ್ಅಪ್, ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್‌ಲ್ಯಾಂಪ್, ಕೌಂಟ್‌ರ್ಡ್ ಸೀಟ್, ಅಲಾಯ್ ವ್ಹೀಲ್, 36-ಲೀಟರ್ ಸಾಮರ್ಥ್ಯ ಅಂಡರ್ ಸೀಟ್ ಸ್ಪೋರೇಜ್, ರಿಯರ್ ಗ್ರ್ಯಾಬ್ ರೈಲ್ಸ್, ಫ್ರಂಟ್ ಸ್ಟೋರೇಜ್ ಪ್ಯಾಕೇಟ್, ಲಗೇಜ್ ಹುಕ್ ಮತ್ತು ಹತ್ತು ವಿವಿಧ ಬಣ್ಣಗಳ ಆಯ್ಕೆ ಹೊಂದಿದೆ.

ಕಾರಣಾಂತರಗಳಿಂದ ಎಲೆಕ್ಟ್ರಿಕ್ ಸ್ಕೂಟರ್ ಎರಡನೇ ಹಂತದ ಬುಕ್ಕಿಂಗ್ ಮುಂದೂಡಿಕೆ ಮಾಡಿದ ಓಲಾ

ಹೊಸ ಸ್ಕೂಟರ್‌ಗಳು 1,859 ಎಂಎಂ ಉದ್ದ, 712 ಎಂಎಂ ಅಗಲ, 1,160 ಎಂಎಂ ಎತ್ತರ, 1,359 ಎಂಎಂ ವ್ಹೀಲ್ ಬೆಸ್, 792 ಎಂಎಂ ಸೀಟ್ ಹೈಟ್, 125 ಕೆ.ಜಿ ತೂಕ ಹೊಂದಿದ್ದು, ಮುಂಭಾಗದಲ್ಲಿ ಸಿಂಗಲ್ ಫೋರ್ಕ್ ಸಸ್ಫೆಷನ್ ಮತ್ತು ಹಿಂಬದಿಯಲ್ಲಿ ಮೊನೊ ಶಾಕ್ ಸಸ್ಷೆಷನ್‌ನೊಂದಿಗೆ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಜೋಡಣೆ ಹೊಂದಿವೆ.

ಕಾರಣಾಂತರಗಳಿಂದ ಎಲೆಕ್ಟ್ರಿಕ್ ಸ್ಕೂಟರ್ ಎರಡನೇ ಹಂತದ ಬುಕ್ಕಿಂಗ್ ಮುಂದೂಡಿಕೆ ಮಾಡಿದ ಓಲಾ

ಜೊತೆಗೆ ಹೊಸ ಸ್ಕೂಟರ್‌ನಲ್ಲಿ 7-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಮತ್ತು ಶಟರ್‌ಪ್ರೂಫ್ ಸ್ಕ್ರೀನ್‌ನೊಂದಿಗೆ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆನ್ ಬೋರ್ಡ್ ನ್ಯಾನಿಗೇಷನ್‌ಗಾಗಿ ಇಸಿಮ್ ಇಂಟರ್‌ನೆಂಟ್ ಕನೆಕ್ಟಿವಿಟಿ, ಸ್ಮಾಟ್‌ಫೋರ್ಟ್ ಮೂಲಕ ವಿವಿಧ ತಾಂತ್ರಿಕ ಅಂಶಗಳನ್ನು ನಿಯಂತ್ರಿಸಲು ಕನೆಕ್ಟೆಡ್ ಫೀಚರ್ಸ್ ಸಹ ನೀಡಲಾಗಿದೆ.

Most Read Articles

Kannada
English summary
Ola electric announced s1 and s1 pro scooter purchase window once again delay
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X