ಹೊಸ ಇವಿ ಸ್ಕೂಟರ್ ಟಾಪ್ ಸ್ಪೀಡ್ ಕುರಿತಾಗಿ ಹೊಸ ಮಾಹಿತಿ ಹಂಚಿಕೊಂಡ ಓಲಾ

ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಬಹುನೀರಿಕ್ಷಿತ ಇವಿ ಸ್ಕೂಟರ್ ಬಿಡುಗಡೆಗಾಗಿ ಭರ್ಜರಿ ಸಿದ್ದತೆ ನಡೆಸುತ್ತಿದ್ದು, ಕಂಪನಿಯು ಹೊಸ ಸ್ಕೂಟರ್ ತಾಂತ್ರಿಕ ಸೌಲಭ್ಯಗಳ ಕುರಿತಾಗಿ ಒಂದೊಂದೆ ಮಹಿತಿಗಳನ್ನು ಬಿಡುಗಡೆ ಮಾಡುತ್ತಿದೆ.

ಹೊಸ ಇವಿ ಸ್ಕೂಟರ್ ಟಾಪ್ ಸ್ಪೀಡ್ ಕುರಿತಾಗಿ ಹೊಸ ಮಾಹಿತಿ ಹಂಚಿಕೊಂಡ ಓಲಾ

ಹೊಸ ಎಲೆಕ್ಟ್ರಿಕ್ ಸ್ಕೂಟರ್ ವಿನ್ಯಾಸವನ್ನು ಈಗಾಗಲೇ ಬಹಿರಂಗಪಡಿಸಿರುವ ಓಲಾ ಕಂಪನಿಯು ಬುಕ್ಕಿಂಗ್ ಆರಂಭಿಸುವ ಮೂಲಕ ಸ್ಕೂಟರ್ ಬಣ್ಣದ ಆಯ್ಕೆ ಮತ್ತು ಮಾರಾಟ ಪ್ರಕ್ರಿಯೆಗಳ ಬಗೆಗೆ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದು, ಇದೀಗ ಹೊಸ ಸ್ಕೂಟರ್‌ನ ಪ್ರಮುಖ ತಾಂತ್ರಿಕ ಅಂಶವಾಗಿರುವ ಟಾಪ್ ಸ್ಪೀಡ್ ಕುರಿತಾಗಿ ಟ್ವಿಟರ್ ಪೋಲ್ ಮೂಲಕ ಸ್ಕೂಟರ್ ವೇಗದ ಮಾಹಿತಿ ಬಹಿರಂಗಪಡಿಸಿದೆ.

ಹೊಸ ಇವಿ ಸ್ಕೂಟರ್ ಟಾಪ್ ಸ್ಪೀಡ್ ಕುರಿತಾಗಿ ಹೊಸ ಮಾಹಿತಿ ಹಂಚಿಕೊಂಡ ಓಲಾ

ಹೊಸ ಸ್ಕೂಟರ್ ಟಾಪ್ ಸ್ಪೀಡ್ ಅನ್ನು ಪ್ರತಿ ಗಂಟೆ 80 ಕಿ.ಮೀ, 90 ಕಿ.ಮೀ, 100 ಕಿ.ಮೀ ರೇಂಜ್‌ನಲ್ಲಿ ಯಾವುದು ನಿಮ್ಮ ಆಯ್ಕೆ? ಎಂದು ಗ್ರಾಹಕರಿಂದ ಸಲಹೆ ಕೇಳಿದ್ದು, ಸುಮಾರು ಶೇ. 48ರಷ್ಟು ಗ್ರಾಹಕರು ಹೊಸ ಸ್ಕೂಟರ್ ಟಾಪ್ ಸ್ಪೀಡ್ ಅನ್ನು 100 ಕಿ.ಮೀ ನಿಗದಿಪಡಿಸಲು ಮನವಿ ಮಾಡಿದ್ದಾರೆ.

ಹೊಸ ಇವಿ ಸ್ಕೂಟರ್ ಟಾಪ್ ಸ್ಪೀಡ್ ಕುರಿತಾಗಿ ಹೊಸ ಮಾಹಿತಿ ಹಂಚಿಕೊಂಡ ಓಲಾ

ಓಲಾ ಕಂಪನಿಯು ಕೂಡಾ ಹೊಸ ಸ್ಕೂಟರಿನ ಟಾಪ್ ಸ್ಪೀಡ್ ಅನ್ನು 90 ಕಿ.ಮೀ ಇಲ್ಲವೇ 100 ಕಿ.ಮೀ ಗೆ ನಿಗದಿಪಡಿಸುವ ಸಾಧ್ಯತೆಗಳಿದ್ದು, ಹೊಸ ಸ್ಕೂಟರ್ ಕೇವಲ 3.5 ಸೆಕೆಂಡುಗಳಲ್ಲಿ ಪ್ರತಿಗಂಟೆಗೆ 40 ಕಿ.ಮೀ ವೇಗಪಡಿಕೊಂಡಿರುವ ಬಗ್ಗೆ ಈ ಹಿಂದಿನ ಟ್ವಿಟರ್ ಪೊಸ್ಟ್‌ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿತ್ತು.

ಹೊಸ ಇವಿ ಸ್ಕೂಟರ್ ಟಾಪ್ ಸ್ಪೀಡ್ ಕುರಿತಾಗಿ ಹೊಸ ಮಾಹಿತಿ ಹಂಚಿಕೊಂಡ ಓಲಾ

ಹೀಗಾಗಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ನಗರಪ್ರದೇಶದಲ್ಲಿನ ಸಂಚಾರಕ್ಕೆ ಮಾತ್ರವಲ್ಲ ದೂರದ ಪ್ರಯಾಣಕ್ಕೂ ಅನುಕೂಲಕರವಾಗಿದ್ದು, ಹೊಸ ಸ್ಕೂಟರ್ ಮಾದರಿಯು ಶೀಘ್ರದಲ್ಲೇ ಉತ್ಪಾದನಾ ಮಾದರಿಯೊಂದಿಗೆ ಅನಾವರಣಗೊಳ್ಳುವ ನೀರಿಕ್ಷೆಯಿದೆ.

ಹೊಸ ಇವಿ ಸ್ಕೂಟರ್ ಟಾಪ್ ಸ್ಪೀಡ್ ಕುರಿತಾಗಿ ಹೊಸ ಮಾಹಿತಿ ಹಂಚಿಕೊಂಡ ಓಲಾ

ಹೊಸ ಸ್ಕೂಟರ್ ಮಾದರಿಯನ್ನು ಗ್ರಾಹಕರ ಬೇಡಿಕೆಯೆಂತೆ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಉನ್ನತೀಕರಿಸುತ್ತಿದ್ದು, ಹೊಸ ಸ್ಕೂಟರ್ ಡ್ಯುಯಲ್ ಬ್ಯಾಟರಿ ಪ್ಯಾಕ್ ಜೋಡಣೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಹೊಸ ಇವಿ ಸ್ಕೂಟರ್ ಟಾಪ್ ಸ್ಪೀಡ್ ಕುರಿತಾಗಿ ಹೊಸ ಮಾಹಿತಿ ಹಂಚಿಕೊಂಡ ಓಲಾ

ಹೊಸ ಸ್ಕೂಟರ್‌ನಲ್ಲಿ ಓಲಾ ಕಂಪನಿಯು ಎರಡು ಮಾದರಿಯಲ್ಲಿ ಬ್ಯಾಟರಿ ಪ್ಯಾಕ್ ನೀಡಬಹುದಾಗಿದ್ದು, ಸಿಂಗಲ್ ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯು ಪ್ರತಿ ಚಾರ್ಜ್‌ಗೆ 140 ಕಿ.ಮೀ ಮೈಲೇಜ್ ಹಿಂದಿರುಗಿಸಿದ್ದಲ್ಲಿ ಡ್ಯುಯಲ್ ಬ್ಯಾಟರಿ ಬ್ಯಾಕ್ಅಪ್ ಹೊಂದಿರುವ ಸ್ಕೂಟರ್ ಗರಿಷ್ಠ 240 ಕಿ.ಮೀ ಮೈಲೇಜ್ ಪಡೆಯಬಹುದಾಗಿದೆ.

ಹೊಸ ಇವಿ ಸ್ಕೂಟರ್ ಟಾಪ್ ಸ್ಪೀಡ್ ಕುರಿತಾಗಿ ಹೊಸ ಮಾಹಿತಿ ಹಂಚಿಕೊಂಡ ಓಲಾ

ಇನ್ನು ಓಲಾ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗಾಗಿ ರೂ. 499 ಮುಂಗಡ ಹಣದೊಂದಿಗೆ ಬುಕ್ಕಿಂಗ್ ಆರಂಭಿಸಿದ್ದು, ಹೊಸ ಸ್ಕೂಟರಿನಲ್ಲಿ ಕಂಪನಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ.

ಹೊಸ ಇವಿ ಸ್ಕೂಟರ್ ಟಾಪ್ ಸ್ಪೀಡ್ ಕುರಿತಾಗಿ ಹೊಸ ಮಾಹಿತಿ ಹಂಚಿಕೊಂಡ ಓಲಾ

ಹೊಸ ಇವಿ ಸ್ಕೂಟರ್ ಪ್ಯಾಸ್ಟೆಲ್ ರೆಡ್, ಯೆಲ್ಲೊ, ಬ್ಲ್ಯೂ, ವೈಟ್, ಮೆಟಾಲಿಕ್ ಸಿಲ್ವರ್, ರೋಜ್ ಗೋಲ್ಡ್, ಪಿಂಕ್, ಮ್ಯಾಟೆ ಬ್ಲ್ಯಾಕ್, ಬ್ಲ್ಯೂ ಮತ್ತು ಗ್ರೆ ಬಣ್ಣಗಳ ಆಯ್ಕೆ ಪಡೆದುಕೊಳ್ಳಲಿದ್ದು, ಹೊಸ ಸ್ಕೂಟರ್ ಖರೀದಿಗಾಗಿ ಈಗಾಗಲೇ ಸುಮಾರು1.50 ಲಕ್ಷಕ್ಕೂ ಅಧಿಕ ಗ್ರಾಹಕರು ಬುಕ್ಕಿಂಗ್ ದಾಖಲಿಸಿದ್ದಾರೆ.

ಹೊಸ ಇವಿ ಸ್ಕೂಟರ್ ಟಾಪ್ ಸ್ಪೀಡ್ ಕುರಿತಾಗಿ ಹೊಸ ಮಾಹಿತಿ ಹಂಚಿಕೊಂಡ ಓಲಾ

ಈ ಮೂಲಕ ಓಲಾ ಹೊಸ ಸ್ಕೂಟರ್ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಹೊಸ ಸ್ಕೂಟರ್ ಬಿಡುಗಡೆಗೂ ಮುನ್ನ ಓಲಾ ಕಂಪನಿಯು ದೇಶದ 400 ಪ್ರಮುಖ ನಗರಗಳಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣ ಮತ್ತು ಮೆಟ್ರೋ ನಗರಗಳಲ್ಲಿ ಹೈಪರ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುತ್ತಿದೆ.

Most Read Articles

Kannada
English summary
Ola Electric Scooter Speed Suggestion Voting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X