ಗ್ರಾಹಕರ ಬೇಡಿಕೆಯೆಂತೆ ಹೊಸ ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ವಿವಿಧ ಬಣ್ಣಗಳ ಆಯ್ಕೆ ನೀಡಲಿದೆ ಓಲಾ

ಬಹುನೀರಿಕ್ಷಿತ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಭಾರತದಲ್ಲಿ ಬಿಡುಗಡೆ ಮಾಡುವ ಅಂತಿಮ ಹಂತದ ಸಿದ್ದತೆಯಲ್ಲಿದ್ದು, ಹೊಸ ಸ್ಕೂಟರ್ ಮುಂಬರುವ ಅಗಸ್ಟ್ ಅಥವಾ ಸೆಪ್ಟೆಂಬರ್ ಅಂತ್ಯಕ್ಕೆ ಮಾರುಕಟ್ಟೆಗೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ವಿವಿಧ ಬಣ್ಣಗಳ ಆಯ್ಕೆ ನೀಡಲಿದೆ ಓಲಾ

ಓಲಾ ಎಲೆಕ್ಟ್ರಿಕ್ ಕಂಪನಿಯು ಮೊದಲ ಬಾರಿಗೆ ವಾಹನಗಳ ಉತ್ಪಾದನೆದಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಬೆಲೆ ಮತ್ತು ಮೈಲೇಜ್ ವಿಚಾರವಾಗಿ ಓಲಾ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲಿದೆ. ಓಲಾ ಸಹ ಸಂಸ್ಥಾಪಕ ಭವೀಶ್ ಅಗರವಾಲ್ ನೇತೃತ್ವದಲ್ಲಿ ಮುನ್ನಡೆಯಲಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ವಾರ್ಷಿಕವಾಗಿ 20 ಲಕ್ಷ ಸ್ಕೂಟರ್ ಉತ್ಪಾದನೆಯ ಗುರಿಹೊಂದಲಾಗಿದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಸ್ಕೂಟರ್ ಅಭಿವೃದ್ದಿಪಡಿಸಲಾಗುತ್ತಿದೆ.

ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ವಿವಿಧ ಬಣ್ಣಗಳ ಆಯ್ಕೆ ನೀಡಲಿದೆ ಓಲಾ

ಹೊಸ ಸ್ಕೂಟರಿನ ಅಧಿಕೃತ ಚಿತ್ರಗಳನ್ನು ಈಗಾಗಲೇ ಬಹಿರಂಗಪಡಿಸಿರುವ ಓಲಾ ಕಂಪನಿಯು ಹೊಸ ಸ್ಕೂಟರ್‌ ಅನ್ನು ಬ್ಲ್ಯಾಕ್ ಮ್ಯಾಟೆ ಬಣ್ಣದಲ್ಲಿ ಬಿಡುಗಡೆ ಮಾಡುವ ಖಚಿತವಾಗಿದ್ದು, ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ವಿವಿಧ ಬಣ್ಣಗಳ ಆಯ್ಕೆ ನೀಡಲು ಯೋಜನೆಯಲ್ಲಿದೆ.

ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ವಿವಿಧ ಬಣ್ಣಗಳ ಆಯ್ಕೆ ನೀಡಲಿದೆ ಓಲಾ

ಹೊಸ ಸ್ಕೂಟರಿನಲ್ಲಿ ಬಣ್ಣಗಳ ಆಯ್ಕೆ ಕುರಿತಂತೆ ಸಂಭಾವ್ಯ ಗ್ರಾಹಕರಿಂದ ಬಣ್ಣಗಳ ಆಯ್ಕೆ ಕುರಿತು ಅಭಿಪ್ರಾಯ ಕೇಳಿರುವ ಭವೀಶ್ ಅಗರವಾಲ್ ಅವರು ಹೆಚ್ಚು ಬೇಡಿಕೆಯಲ್ಲಿರುವ ಬಣ್ಣಗಳಿಗೆ ಆದ್ಯತೆ ನೀಡಲಿದ್ದು, ಒಟ್ಟು ಆರರಿಂದ ಎಂಟು ಬಣ್ಣಗಳ ಆಯ್ಕೆ ನೀಡುವ ಸಾಧ್ಯತೆಗಳಿವೆ.

ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ವಿವಿಧ ಬಣ್ಣಗಳ ಆಯ್ಕೆ ನೀಡಲಿದೆ ಓಲಾ

ಇನ್ನು ಓಲಾ ಕಂಪನಿಯ ಹೊಸ ವಾಹನ ಉತ್ಪಾದನಾ ಘಟಕವು ತಮಿಳುನಾಡಿನ ಹೊಸೂರಿನಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಹೊಸ ವಾಹನ ಉತ್ಪಾದನಾ ಘಟಕದಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಉತ್ಪಾದನೆಯನ್ನು ಅಧಿಕೃತವಾಗಿ ಆರಂಭಿಸುವ ಸಿದ್ದತೆಯಲ್ಲಿದೆ.

ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ವಿವಿಧ ಬಣ್ಣಗಳ ಆಯ್ಕೆ ನೀಡಲಿದೆ ಓಲಾ

ಪ್ರತಿ ಚಾರ್ಜ್‌ಗೆ ಗರಿಷ್ಠ 240 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದಾದ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿರುವ ಓಲಾ ಹೊಸ ಸ್ಕೂಟರ್ ಮಾದರಿಯು ಪೆಟ್ರೋಲ್ ಬೆಲೆ ಹೆಚ್ಚುತ್ತಿರುವುದರಿಂದ ಹೊಸ ಸ್ಕೂಟರ್ ಆಕರ್ಷಕ ಮೈಲೇಜ್‌ನೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ವಿವಿಧ ಬಣ್ಣಗಳ ಆಯ್ಕೆ ನೀಡಲಿದೆ ಓಲಾ

ಓಲಾ ಕಂಪನಿಯು ಹೊಸ ಸ್ಕೂಟರ್ ಮಾದರಿಯನ್ನು ಕೇವಲ ಭಾರತದಲ್ಲಿ ಮಾತ್ರವಲ್ಲ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೂ ರಫ್ತು ಮಾಡುವ ಬೃಹತ್ ಯೋಜನೆ ಹೊಂದಿದ್ದು, ಉತ್ಪಾದನಾ ಘಟಕವನ್ನು ಇಂಡಸ್ಟ್ರಿ 4.0 ತತ್ವದ ಆಧಾರದ ಮೇಲೆ ನಿರ್ಮಾಣ ಮಾಡಲಾಗುತ್ತಿದೆ.

ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ವಿವಿಧ ಬಣ್ಣಗಳ ಆಯ್ಕೆ ನೀಡಲಿದೆ ಓಲಾ

ಬರೋಬ್ಬರಿ 500 ಎಕರೆ ವ್ಯಾಪ್ತಿ ಹೊಂದಿರುವ ಓಲಾ ಹೊಸ ವಾಹನ ಉತ್ಪಾದನಾ ಘಟಕದಲ್ಲಿ ವಾರ್ಷಿಕವಾಗಿ 20 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್‌ಗಳ ನಿರ್ಮಾಣದ ಗುರಿ ಹೊಂದಲಾಗಿದ್ದು, ಪ್ರತಿ 2 ಸೆಕೆಂಡುಗಳಲ್ಲಿ 1 ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣಗೊಳ್ಳಲಿದೆ.

ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ವಿವಿಧ ಬಣ್ಣಗಳ ಆಯ್ಕೆ ನೀಡಲಿದೆ ಓಲಾ

ಹೊಸ ಯೋಜನೆಗಾಗಿ ಓಲಾ ಕಂಪನಿಯು ಆರಂಭಿಕ ಬಂಡವಾಳವಾಗಿ ರೂ. 2,400 ಕೋಟಿ ಹೂಡಿಕೆ ಮಾಡಲಾಗುತ್ತಿದ್ದು, ಸದ್ಯ ಇವಿ ಸ್ಕೂಟರ್ ಮಾತ್ರ ಉತ್ಪಾದನೆ ಮಾಡಲಿರುವ ಕಂಪನಿಯು ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ಹಲವು ಹೊಸ ಇವಿ ವಾಹನಗಳನ್ನು ಅಭಿವೃದ್ದಿಪಡಿಸಲಿದೆ.

Most Read Articles

Kannada
English summary
Ola Electric Scooter Hints To Launch Soon. Read in Kannada.
Story first published: Friday, June 25, 2021, 16:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X