ಮತ್ತಷ್ಟು ವಿಳಂಬವಾಗಲಿದೆ Ola ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ

ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿಯಾದ ಓಲಾ ಎಲೆಕ್ಟ್ರಿಕ್ (Ola Electric) ಶೀಘ್ರದಲ್ಲೇ ತನ್ನ ಓಲಾ ಎಸ್ 1 ಹಾಗೂ ಓಲಾ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿತರಣೆಯನ್ನು ಆರಂಭಿಸಲಿದೆ ಎಂದು ಹೇಳಲಾಗಿತ್ತು. ಆದರೆ ಈಗ ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಎಸ್ 1 ಹಾಗೂ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿತರಣೆಯನ್ನು ಎರಡು ವಾರಗಳಿಂದ ಒಂದು ತಿಂಗಳವರೆಗೆ ಮುಂದೂಡಿದೆ ಎಂದು ವರದಿಯಾಗಿದೆ.

ಮತ್ತಷ್ಟು ವಿಳಂಬವಾಗಲಿದೆ Ola ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ

ಜಾಗತಿಕವಾಗಿ ಸೆಮಿಕಂಡಕ್ಟರ್ ಚಿಪ್‌ಗಳ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಕಂಪನಿಯು ಈ ನಿರ್ಧಾರ ಕೈಗೊಂಡಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆಕಂಪನಿಯು ಈ ಬಗ್ಗೆ ಇ- ಮೇಲ್ ಕಳುಹಿಸಿದೆ ಎಂದು ವರದಿಯಾಗಿದೆ. ಡೆಲಿವರಿ ವಿಳಂಬ ಅನಿವಾರ್ಯವಾಗಿದೆ ಎಂದು ತಿಳಿಸಿರುವ ಕಂಪನಿಯು ಇ-ಮೇಲ್ ಮೂಲಕ ಗ್ರಾಹಕರಲ್ಲಿ ಕ್ಷಮೆಯಾಚಿಸಿದೆ.

ಮತ್ತಷ್ಟು ವಿಳಂಬವಾಗಲಿದೆ Ola ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ

ಸ್ಕೂಟರ್‌ಗಳನ್ನು ಗ್ರಾಹಕರಿಗೆ ಬೇಗ ತಲುಪಿಸಲು ಉತ್ಪಾದನೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ. ಓಲಾ ಕಂಪನಿಯು ನವೆಂಬರ್ 10 ರಂದು ತನ್ನ ಎಸ್ 1 ಹಾಗೂ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಅಂತಿಮ ಪಾವತಿ ವಿಂಡೋವನ್ನು ತೆರೆದು, ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ವಾಹನಗಳನ್ನು ವಿತರಿಸುವ ಭರವಸೆ ನೀಡಿತ್ತು. ಅದೇ ದಿನ ಕಂಪನಿಯು ಬೆಂಗಳೂರು, ದೆಹಲಿ, ಅಹಮದಾಬಾದ್ ಹಾಗೂ ಕೋಲ್ಕತ್ತಾದಲ್ಲಿ ಗ್ರಾಹಕರಿಗೆ ಟೆಸ್ಟ್ ರೈಡ್ ಗಳನ್ನು ಆರಂಭಿಸಿತು.

ಮತ್ತಷ್ಟು ವಿಳಂಬವಾಗಲಿದೆ Ola ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ

ಇದರ ನಂತರ ನವೆಂಬರ್ 19 ರಂದು, ಕಂಪನಿಯು ಮುಂಬೈ, ಚೆನ್ನೈ, ಹೈದರಾಬಾದ್, ಕೊಚ್ಚಿ ಹಾಗೂ ಪುಣೆ ಸೇರಿದಂತೆ ಒಟ್ಟು ಐದು ನಗರಗಳಲ್ಲಿ ಟೆಸ್ಟ್ ರೈಡ್ ಗಳನ್ನು ಆರಂಭಿಸಿತು. ಕಂಪನಿಯು ಈಗ ಡಿಸೆಂಬರ್ ಮಧ್ಯದ ವೇಳೆಗೆ ದೇಶದ 1,000 ನಗರಗಳು ಹಾಗೂ ಪಟ್ಟಣಗಳಲ್ಲಿ ಟೆಸ್ಟ್ ರೈಡ್ ಗಳನ್ನು ಆರಂಭಿಸಲಿದೆ.

ಮತ್ತಷ್ಟು ವಿಳಂಬವಾಗಲಿದೆ Ola ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ

ಈ ಕಾರ್ಯಕ್ರಮದ ಅಡಿಯಲ್ಲಿ ಕಂಪನಿಯು ತನ್ನ ಎಸ್ 1 ಮತ್ತು ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳ ಟೆಸ್ಟ್ ರೈಡ್ ಗಳನ್ನು ನಡೆಸುತ್ತದೆ. ಕಂಪನಿಯು ಇದನ್ನು ದೇಶದ ಅತಿ ದೊಡ್ಡ ಎಲೆಕ್ಟ್ರಿಕ್ ವಾಹನ ಟೆಸ್ಟ್ ಡ್ರೈವ್ ಪ್ರೋಗ್ರಾಂ ಎಂದು ಕರೆದಿದೆ. ಟೆಸ್ಟ್ ರೈಡ್ ಈವೆಂಟ್‌ಗೆ ಪ್ರತಿಕ್ರಿಯೆ ತುಂಬಾ ಸಕಾರಾತ್ಮಕವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಮತ್ತಷ್ಟು ವಿಳಂಬವಾಗಲಿದೆ Ola ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ

ಮಾಹಿತಿಯ ಪ್ರಕಾರ, ಓಲಾ ಎಲೆಕ್ಟ್ರಿಕ್ ತನ್ನ ಟೆಸ್ಟ್ ರೈಡ್ ಕಾರ್ಯಕ್ರಮವನ್ನು ಆರಂಭಿಸಲಿರುವ ನಗರಗಳಲ್ಲಿ ಸೂರತ್, ತಿರುವನಂತಪುರ, ಕೋಝಿಕ್ಕೋಡ್, ವಿಶಾಖಪಟ್ಟಣಂ, ವಿಜಯವಾಡ, ಕೊಯಮತ್ತೂರು, ವಡೋದರಾ, ಭುವನೇಶ್ವರ್, ತಿರುಪ್ಪೂರ್, ಜೈಪುರ ಹಾಗೂ ನಾಗ್ಪುರ ನಗರಗಳು ಸೇರಿವೆ. ನವೆಂಬರ್ 27 ರಿಂದ ಈ ನಗರಗಳಲ್ಲಿ ಟೆಸ್ಟ್ ರೈಡ್ ಆರಂಭವಾಗಲಿದೆ.

ಮತ್ತಷ್ಟು ವಿಳಂಬವಾಗಲಿದೆ Ola ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ

ಇನ್ನು ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯ ಬಗ್ಗೆ ಹೇಳುವುದಾದರೆ, ಓಲಾ ಎಸ್ 1 ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1 ಲಕ್ಷಗಳಾದರೆ, ಓಲಾ ಎಸ್ 1 ಪ್ರೊ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1.30 ಲಕ್ಷಗಳಾಗಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ 3.9 ಕಿ.ವ್ಯಾ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್‌ ಅಳವಡಿಸಲಾಗಿದೆ.

ಮತ್ತಷ್ಟು ವಿಳಂಬವಾಗಲಿದೆ Ola ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ

ಈ ಸ್ಕೂಟರಿನಲ್ಲಿರುವ ಎಲೆಕ್ಟ್ರಿಕ್ ಮೋಟರ್ 8.5 ಕಿ.ವ್ಯಾ ಪವರ್ ಉತ್ಪಾದಿಸುತ್ತದೆ. 750 ವ್ಯಾ ಸಾಮರ್ಥ್ಯದ ಪೋರ್ಟಬಲ್ ಚಾರ್ಜರ್‌ನೊಂದಿಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿಯನ್ನು ಸುಮಾರು 6 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಫಾಸ್ಟ್ ಚಾರ್ಜರ್‌ ಮೂಲಕ ಕೇವಲ 18 ನಿಮಿಷಗಳಲ್ಲಿ 75% ವರೆಗೆ ಚಾರ್ಜ್ ಮಾಡಬಹುದು.

ಮತ್ತಷ್ಟು ವಿಳಂಬವಾಗಲಿದೆ Ola ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ

ಓಲಾ ಕಂಪನಿಯ ಇತ್ತೀಚಿನ ಮಾಹಿತಿಯ ಪ್ರಕಾರ, ಓಲಾ ಎಲೆಕ್ಟ್ರಿಕ್ ಸಂಸ್ಥಾಪಕ ಹಾಗೂ ಸಿಇಒ ಭವಿಶ್ ಅಗರ್ವಾಲ್ ರವರು ಓಲಾ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಕಸ್ಟಮ್ ಪೇಂಟ್ ಫಿನಿಶ್ ಒದಗಿಸಲು ಕಂಪನಿಯು ಸಿದ್ಧತೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಳಂಬವಾಗಲಿದೆ Ola ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ

ಆದರೆ ಕಂಪನಿಯು ಇದನ್ನು ಯಾವಾಗ ಆರಂಭಿಸುತ್ತದೆ ಎಂಬ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ. ಓಲಾ ಎಲೆಕ್ಟ್ರಿಕ್ ಒಟ್ಟು 9 ಓಲಾ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಭಾರತದಲ್ಲಿರುವ ನೆದರ್‌ಲ್ಯಾಂಡ್ಸ್ ರಾಯಭಾರ ಕಚೇರಿಗೆ ತಲುಪಿಸುತ್ತದೆ ಎಂದು ಕಂಪನಿಯು ಇತ್ತೀಚೆಗೆ ತಿಳಿಸಿತ್ತು.

ಮತ್ತಷ್ಟು ವಿಳಂಬವಾಗಲಿದೆ Ola ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ

ಕಂಪನಿಯು ಈ ಮಾದರಿಗಳಲ್ಲಿ ಡಚ್ ಆರೆಂಜೆ ಎಂಬ ವಿಶಿಷ್ಟ ಬಣ್ಣದ ಆಯ್ಕೆಯನ್ನು ಒದಗಿಸುತ್ತದೆ. ಓಲಾ ಎಲೆಕ್ಟ್ರಿಕ್ ತನ್ನ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಸ್ಟಮೈಸ್ ಮಾಡಲು ಬಯಸುವ ಗ್ರಾಹಕರಿಗೆ ಕಸ್ಟಮ್ ಪೇಂಟ್ ಫಿನಿಶ್ ನೀಡಲು ನಿರ್ಧರಿಸಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಹಲವಾರು ಹೊಸ ಹಾಗೂ ಆಧುನಿಕ ಫೀಚರ್ ಗಳನ್ನು ನೀಡಲಾಗಿದೆ.

Most Read Articles

Kannada
English summary
Ola electric scooters delivery further delayed details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X