ಅಂತಿಮ ಹಂತದ ನಿರ್ಮಾಣ ಪ್ರಕ್ರಿಯೆಯಲ್ಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕ

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಇದೇ ತಿಂಗಳು 15ರಂದು ಬಿಡುಗಡೆಯಾಗುತ್ತಿದ್ದು, ಹೊಸ ಸ್ಕೂಟರ್ ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ನೀಡಲು ಕಂಪನಿಯು ಕಂಪನಿಯು ಅಂತಿಮ ಹಂತದ ಸಿದ್ದತೆ ನಡೆಸುತ್ತಿದೆ.

ಅಂತಿಮ ಹಂತದ ನಿರ್ಮಾಣ ಪ್ರಕ್ರಿಯೆಯಲ್ಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕ

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗಾಗಿ ಓಲಾ ಕಂಪನಿಯು ಈಗಾಗಲೇ ರೂ. 499 ಮುಂಗಡದೊಂದಿಗೆ ಬುಕ್ಕಿಂಗ್ ಪ್ರಕ್ರಿಯೆಯನ್ನು ಕೂಡಾ ಆರಂಭಿಸಿದ್ದು, ಹೊಸ ಸ್ಕೂಟರ್ ಖರೀದಿಗಾಗಿ ಇದುವರೆಗೆ ಸುಮಾರು 1.50 ಲಕ್ಷಕ್ಕೂ ಹೆಚ್ಚು ಗ್ರಾಹಕರು ಮುಂಗಡ ಪಾವತಿಸಿದ್ದಾರೆ. ಹೀಗಾಗಿ ಉತ್ಪಾದನಾ ಪ್ರಕ್ರಿಯೆಗೆ ಶೀಘ್ರದಲ್ಲೇ ಚಾಲನೆ ನೀಡಲಿರುವ ಓಲಾ ಕಂಪನಿಯು ಮುಂದಿನ ಕೆಲವೇ ತಿಂಗಳಿನಲ್ಲಿ ವಿತರಣೆ ಆರಂಭಿಸಲಿದೆ.

ಅಂತಿಮ ಹಂತದ ನಿರ್ಮಾಣ ಪ್ರಕ್ರಿಯೆಯಲ್ಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕ

ಓಲಾ ಕಂಪನಿಯು ಸದ್ಯಕ್ಕೆ ಹೊಸ ಸ್ಕೂಟರ್ ಮಾದರಿಯನ್ನು ಅನಾವರಣಗೊಳಿಸುವ ಮೂಲಕ ಹೊಸ ಸ್ಕೂಟರಿನ ಅಧಿಕೃತ ತಾಂತ್ರಿಕ ಅಂಶಗಳನ್ನು ಹಂಚಿಕೊಳ್ಳಬಹುದಾಗಿದ್ದು, ಉತ್ಪಾದನಾ ಘಟಕದ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರವಷ್ಟೇ ಹೊಸ ಸ್ಕೂಟರಿನ ಬೆಲೆ ಬಹಿರಂಗಪಡಿಸಿ ವಿತರಣೆಗೆ ಚಾಲನೆ ನೀಡಬಹುದಾಗಿದೆ.

ಅಂತಿಮ ಹಂತದ ನಿರ್ಮಾಣ ಪ್ರಕ್ರಿಯೆಯಲ್ಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕ

ಭಾರತದಲ್ಲಿಯೇ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದನೆ ಮಾಡಿ ದೇಶಿಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೇ ವಿದೇಶಿ ಮಾರುಕಟ್ಟೆಗಳಿಗೂ ರಫ್ತು ಗುರಿ ಹೊಂದಿರುವ ಓಲಾ ಎಲೆಕ್ಟ್ರಿಕ್ ಕಂಪನಿಯ ಈಗಾಗಲೇ ಶೇ.70ರಷ್ಟು ನಿರ್ಮಾಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಹೊಸ ಯೋಜನೆಗಾಗಿ ನೇದರ್ಲ್ಯಾಂಡ್ ಮೂಲದ ಎಟರ್ಗೋ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಕಂಪನಿಯೊಂದಿಗೆ ಜೊತೆಗೂಡಿದೆ.

ಅಂತಿಮ ಹಂತದ ನಿರ್ಮಾಣ ಪ್ರಕ್ರಿಯೆಯಲ್ಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕ

ಓಲಾ ಕಂಪನಿಯು ಹೊಸ ವಾಹನ ಉತ್ಪಾದನಾ ಘಟಕವನ್ನು ಇಂಡಸ್ಟ್ರಿ 4.0 ತತ್ವದ ಆಧಾರದ ಮೇಲೆ ತಮಿಳುನಾಡಿನ ಹೊಸೂರಿನಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಹೊಸ ಘಟಕವು ದೇಶದ ಅತ್ಯಾಧುನಿಕ ವಾಹನ ಉತ್ಪಾದನಾ ಘಟಕಗಳಲ್ಲಿ ಒಂದಾಗಲಿದೆ.

ಅಂತಿಮ ಹಂತದ ನಿರ್ಮಾಣ ಪ್ರಕ್ರಿಯೆಯಲ್ಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕ

ಆಧುನಿಕ ವಾಹನ ಉತ್ಪಾದನಾ ಘಟಕದಲ್ಲಿ ಸಾವಿರಾರು ಉದ್ಯೋಗಗಳ ಜೊತೆಗೆ ವಾಹನಗಳನ್ನು ಅಸೆಂಬಲ್ ಮಾಡಲು ಸುಮಾರು 5 ಸಾವಿರ ರೋಬೋಟ್‌ಗಳನ್ನು ಹೊಸ ಘಟಕದಲ್ಲಿ ನಿಯೋಜಿಸಲಾಗುತ್ತಿದ್ದು, ಬರೋಬ್ಬರಿ 500 ಎಕರೆ ವ್ಯಾಪ್ತಿ ಹೊಂದಿರುವ ಹೊಸ ವಾಹನ ಉತ್ಪಾದನಾ ಘಟಕದಲ್ಲಿ ವಾರ್ಷಿಕವಾಗಿ 20 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್‌ಗಳ ಉತ್ಪಾದನೆ ಮಾಡಲು ಯೋಜಿಸಲಾಗಿದೆ.

ಅಂತಿಮ ಹಂತದ ನಿರ್ಮಾಣ ಪ್ರಕ್ರಿಯೆಯಲ್ಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕ

ಸದ್ಯಕ್ಕೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾತ್ರ ನಿರ್ಮಾಣ ಮಾಡಲಿರುವ ಓಲಾ ಕಂಪನಿಯು ಉತ್ಪಾದನಾ ಘಟಕದ ವಿಸ್ತರಣೆಯೊಂದಿಗೆ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಸಹ ಉತ್ಪಾದನೆ ಮಾಡಲಿದ್ದು, ಹೊಸ ಯೋಜನೆಯಿಂದ ಸುಮಾರು 10 ಸಾವಿರ ಉದ್ಯೋಗಗಳು ಪ್ರತ್ಯೇಕ್ಷವಾಗಿ ಮತ್ತು ಪರೋಕ್ಷವಾಗಿ ಸೃಷ್ಠಿಯಾಗಲಿದೆ ಎನ್ನಲಾಗಿದೆ.

ಅಂತಿಮ ಹಂತದ ನಿರ್ಮಾಣ ಪ್ರಕ್ರಿಯೆಯಲ್ಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕ

ಹೊಸ ಯೋಜನೆಗಾಗಿ ಓಲಾ ಕಂಪನಿಯು ಆರಂಭಿಕ ಬಂಡವಾಳವಾಗಿ ರೂ. 2,400 ಕೋಟಿ ಹೂಡಿಕೆ ಮಾಡುತ್ತಿದ್ದು, ಹೊಸ ಇವಿ ವಾಹನ ಉತ್ಪಾದನಾ ಘಟಕದೊಂದಿಗೆ ಓಲಾ ಕಂಪನಿಯು ಜಾಗತಿಕ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿದೆ.

ಅಂತಿಮ ಹಂತದ ನಿರ್ಮಾಣ ಪ್ರಕ್ರಿಯೆಯಲ್ಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕ

ಹೊಸ ವಾಹನ ಉತ್ಪಾದನಾ ಘಟಕದಲ್ಲಿ ಉತ್ಪಾದಿಸುವ ಸ್ಕೂಟರ್‌ಗಳನ್ನು ಭಾರತದಲ್ಲಿ ಮಾತ್ರವಲ್ಲದೇ ಯುರೋಪ್, ಇಂಗ್ಲೆಂಡ್, ಲ್ಯಾಟಿನ್ ಅಮೆರಿಕಾದ ಪ್ರಮುಖ ರಾಷ್ಟ್ರಗಳಲ್ಲಿ ಮಾರಾಟಗೊಳ್ಳಲಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಓಲಾ ಇವಿ ಸ್ಕೂಟರ್ ಹೊಸ ಸಂಚಲನ ಸೃಷ್ಠಿಸಲಿದೆ.

ಅಂತಿಮ ಹಂತದ ನಿರ್ಮಾಣ ಪ್ರಕ್ರಿಯೆಯಲ್ಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕ

ಹೊಸ ಸ್ಕೂಟರಿನ ಅಧಿಕೃತ ಚಿತ್ರಗಳನ್ನು ಈಗಾಗಲೇ ಬಹಿರಂಗಪಡಿಸಿರುವ ಓಲಾ ಕಂಪನಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 240 ಕಿ.ಮೀ ಮೈಲೇಜ್ ಹಿಂದಿರುಗಿಸುವ ಭರವಸೆ ನೀಡಿದ್ದು, ಹೊಸ ಸ್ಕೂಟರ್ ರೂ. 1.10 ಲಕ್ಷದಿಂದ ರೂ. 1.30 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದಾಗಿದೆ.

ಅಂತಿಮ ಹಂತದ ನಿರ್ಮಾಣ ಪ್ರಕ್ರಿಯೆಯಲ್ಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕ

ಓಲಾ ಎಲೆಕ್ಟ್ರಿಕ್ ಕಂಪನಿಯು ಚಾರ್ಜಿಂಗ್ ಸೌಲಭ್ಯಗಳಿಗೆ ಅನುಗುಣವಾಗಿ ಹೊಸ ಸ್ಕೂಟರ್ ಮಾದರಿಯನ್ನು ಆರಂಭಿಕವಾಗಿ ಕೆಲವೇ ನಗರಗಳಲ್ಲಿ ಬಿಡುಗಡೆ ಮಾಡಬಹುದು ಎನ್ನಲಾಗಿದ್ದು, ಸ್ಕೂಟರ್ ಉತ್ಪಾದನೆ ಹೆಚ್ಚಿದಂತೆ ಮಾರಾಟ ವ್ಯಾಪ್ತಿಯನ್ನು ಹೆಚ್ಚಿಸಲಿದೆ.

ಅಂತಿಮ ಹಂತದ ನಿರ್ಮಾಣ ಪ್ರಕ್ರಿಯೆಯಲ್ಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕ

ಹೊಸ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸುಮಾರು ಹತ್ತು ಹೊಸ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಪ್ಯಾಸ್ಟೆಲ್ ರೆಡ್, ಯೆಲ್ಲೊ, ಬ್ಲ್ಯೂ, ವೈಟ್, ಮೆಟಾಲಿಕ್ ಸಿಲ್ವರ್, ರೋಜ್ ಗೋಲ್ಡ್, ಪಿಂಕ್, ಮ್ಯಾಟೆ ಬ್ಲ್ಯಾಕ್, ಬ್ಲ್ಯೂ ಮತ್ತು ಗ್ರೆ ಬಣ್ಣಗಳ ಆಯ್ಕೆ ಪಡೆದುಕೊಳ್ಳಲಿದೆ.

ಅಂತಿಮ ಹಂತದ ನಿರ್ಮಾಣ ಪ್ರಕ್ರಿಯೆಯಲ್ಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕ

ಈ ಮೂಲಕ ಓಲಾ ಹೊಸ ಸ್ಕೂಟರ್ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಹೊಸ ಸ್ಕೂಟರ್ ಬಿಡುಗಡೆಗೂ ಮುನ್ನ ಹೆಚ್ಚಿನ ಸಂಖ್ಯೆಯಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುತ್ತಿದೆ.

Most Read Articles

Kannada
English summary
Ola ev mega factory almost ready for production soon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X