ಕೇವಲ ಎರಡು ದಿನಗಳಲ್ಲಿ ರೂ.1,100 ಕೋಟಿ ಮೌಲ್ಯದ ಇವಿ ಸ್ಕೂಟರ್ ಮಾರಾಟ ಮಾಡಿದ Ola Electric

ವಿನೂತನ ವಿನ್ಯಾಸ ಮತ್ತು ಅತಿ ಹೆಚ್ಚು ಮೈಲೇಜ್ ಹೊಂದಿರುವ ಎಸ್1(S1) ಮತ್ತು ಎಸ್1 ಪ್ರೊ(S1 Pro) ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಿರುವ ಓಲಾ ಎಲೆಕ್ಟ್ರಿಕ್(Ola Electric) ಕಂಪನಿಯು ಮಾರಾಟ ಪ್ರಕ್ರಿಯೆ ಆರಂಭಿಸಿದ ಆರಂಭದಲ್ಲೇ ಭಾರೀ ಪ್ರಮಾಣದ ವಹಿವಾಟು ನಡೆಸಿದೆ.

ಕೇವಲ ಎರಡು ದಿನಗಳಲ್ಲಿ ರೂ.1,100 ಕೋಟಿ ಮೌಲ್ಯದ ಇವಿ ಸ್ಕೂಟರ್ ಮಾರಾಟ ಮಾಡಿದ Ola Electric

ಎಸ್1 ಮತ್ತು ಎಸ್1 ಪ್ರೊ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬುಕ್ಕಿಂಗ್ ಆಧಾರದ ಮೇಲೆ ಆಸಕ್ತ ಗ್ರಾಹಕರಿಂದ ಖರೀದಿ ಪ್ರಕ್ರಿಯೆ ಆರಂಭಿಸಿದ್ದ ಓಲಾ ಕಂಪನಿಯು ಕೇವಲ ಎರಡು ದಿನಗಳಲ್ಲಿ ಸುಮಾರು ರೂ.1,100 ಕೋಟಿ ಮೌಲ್ಯದ ಇವಿ ಸ್ಕೂಟರ್‌ಗಳಿಗೆ ಬುಕ್ಕಿಂಗ್ ಪಡೆದುಕೊಂಡಿದೆ. ಖರೀದಿ ಪ್ರಕ್ರಿಯೆ ಆರಂಭವಾದ ಮೊದಲ ದಿನವೇ ಸುಮಾರು ರೂ.600 ಕೋಟಿ ವಹಿವಾಟು ನಡೆಸಿದ್ದ ಓಲಾ ಕಂಪನಿಯು ಎರಡನೇ ದಿನ ರೂ.500 ಕೋಟಿ ಮೌಲ್ಯದ ಇವಿ ಸ್ಕೂಟರ್‌ಗಳಿಗೆ ಬುಕ್ಕಿಂಗ್ ಪಡೆದುಕೊಂಡಿತು.

ಕೇವಲ ಎರಡು ದಿನಗಳಲ್ಲಿ ರೂ.1,100 ಕೋಟಿ ಮೌಲ್ಯದ ಇವಿ ಸ್ಕೂಟರ್ ಮಾರಾಟ ಮಾಡಿದ Ola Electric

ಪೂರ್ವ ನಿಗದಿಯಂತೆ ಎರಡು ದಿನಗಳ ಮಾತ್ರ ಬುಕ್ಕಿಂಗ್ ಖಚಿತ ಪಡಿಸಿಕೊಳ್ಳುವುದಾಗಿ ಹೇಳಿದ್ದ ಕಂಪನಿಯು ಇದೀಗ ಬುಕ್ಕಿಂಗ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದು, ಮುಂಬರುವ ನವೆಂಬರ್‌ನಲ್ಲಿ ಮತ್ತೆ ಎರಡನೇ ಹಂತದ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಿದೆ.

ಕೇವಲ ಎರಡು ದಿನಗಳಲ್ಲಿ ರೂ.1,100 ಕೋಟಿ ಮೌಲ್ಯದ ಇವಿ ಸ್ಕೂಟರ್ ಮಾರಾಟ ಮಾಡಿದ Ola Electric

ಸದ್ಯ ಬುಕ್ಕಿಂಗ್ ದಾಖಲಿಸಿ ಖರೀದಿ ಪ್ರಕ್ರಿಯೆಯನ್ನು ಖಚಿತಪಡಿಸಿರುವ ಗ್ರಾಹಕರಿಗೆ ಮಾತ್ರ ಇವಿ ಸ್ಕೂಟರ್‌ಗಳನ್ನು ವಿತರಣೆ ಮಾಡಲಿದ್ದು, ಕಂಪನಿಯ ಮಾಹಿತಿ ಪ್ರಕಾರ ಹೊಸ ಸ್ಕೂಟರ್ ಮಾದರಿಗಳು ಅಕ್ಟೊಬರ್ ಮಧ್ಯಂತರ ಗ್ರಾಹಕರ ಕೈಸೇರಲಿವೆ.

ಕೇವಲ ಎರಡು ದಿನಗಳಲ್ಲಿ ರೂ.1,100 ಕೋಟಿ ಮೌಲ್ಯದ ಇವಿ ಸ್ಕೂಟರ್ ಮಾರಾಟ ಮಾಡಿದ Ola Electric

ಸದ್ಯ ಮುಂಗಡ ಪಾವತಿಯನ್ನು ಪಡೆದುಕೊಂಡಿರುವ ಬಗೆಗೆ ಗ್ರಾಹಕರಿಗೆ ಖಚಿತಪಡಿಸಿರುವ ಓಲಾ ಕಂಪನಿಯು ಅಕ್ಟೋಬರ್ 18ರಂದು ಉಳಿದ ಮೊತ್ತ ಪಾವತಿಸುವ ಬಗೆಗೆ ಮಾಹಿತಿ ಕೇಳಲಿದ್ದು, ಗ್ರಾಹಕರು ಒಂದೇ ಬಾರಿಗೆ ಪೂರ್ತಿ ಹಣ ಪಾವತಿಸಿ ಖರೀದಿಸಬಹುದು ಇಲ್ಲವೇ ಇಎಂಐ ಆಯ್ಕೆಗಳಲ್ಲಿ ಖರೀದಿ ಮಾಡಬಹುದು.

ಕೇವಲ ಎರಡು ದಿನಗಳಲ್ಲಿ ರೂ.1,100 ಕೋಟಿ ಮೌಲ್ಯದ ಇವಿ ಸ್ಕೂಟರ್ ಮಾರಾಟ ಮಾಡಿದ Ola Electric

ಹೊಸ ಇವಿ ಸ್ಕೂಟರ್ ಖರೀದಿ ಪ್ರಕ್ರಿಯೆಗಾಗಿ ಶೋರೂಂಗಳ ಬದಲಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಸ್ಕೂಟರ್ ಖರೀದಿ ಪ್ರಕ್ರಿಯೆ ಪ್ರಕ್ರಿಯೆ, ವಿತರಣೆ ಮತ್ತು ಮಾರಾಟ ನಂತರದ ಗ್ರಾಹಕರ ಸೇವೆಗಳು ಸಹ ಮನೆ ಬಾಗಿಲಿಗೆ ಒದಗಿಸುವ ಭರವಸೆ ನೀಡಿದೆ.

ಕೇವಲ ಎರಡು ದಿನಗಳಲ್ಲಿ ರೂ.1,100 ಕೋಟಿ ಮೌಲ್ಯದ ಇವಿ ಸ್ಕೂಟರ್ ಮಾರಾಟ ಮಾಡಿದ Ola Electric

ಓಲಾ ಹೊಸ ಇವಿ ಸ್ಕೂಟರ್‌ಗಳ ಖರೀದಿಗಾಗಿ ದೇಶಾದ್ಯಂತ ಪ್ರಮುಖ ನಗರಗಳಿಂದ ಸುಮಾರು 1.50 ಲಕ್ಷಕ್ಕೂ ಅಧಿಕ ಗ್ರಾಹಕರು ಬುಕ್ಕಿಂಗ್ ದಾಖಲಿಸಿದ್ದು, ಸ್ಕೂಟರ್ ಖರೀದಿದಾಗಿ ಕಂಪನಿಯು ಪ್ರಮುಖ ಬ್ಯಾಂಕ್‌ಗಳ ಪಾಲುದಾರಿಕೆಯೊಂದಿಗೆ ಗರಿಷ್ಠ ಸಾಲ ಸೌಲಭ್ಯದೊಂದಿಗೆ ಆಕರ್ಷಕ ಇಎಂಐ ಆಯ್ಕೆಗಳನ್ನು ನೀಡಿದೆ.

ಕೇವಲ ಎರಡು ದಿನಗಳಲ್ಲಿ ರೂ.1,100 ಕೋಟಿ ಮೌಲ್ಯದ ಇವಿ ಸ್ಕೂಟರ್ ಮಾರಾಟ ಮಾಡಿದ Ola Electric

ಜೊತೆಗೆ ಓಲಾ ಫೈನಾನ್ಸಿಲ್ ಸರ್ವಿಸ್ ಮೂಲಕವೂ ಗ್ರಾಹಕರು ಹೊಸ ಸ್ಕೂಟರ್ ಖರೀದಿ ಮಾಡಬಹುದಾಗಿದ್ದು, ಹೊಸ ಎಸ್1 ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 99,999 ಬೆಲೆ ಹೊಂದಿದ್ದರೆ ಎಸ್1 ಪ್ರೊ ಮಾದರಿಯು ರೂ. 1,29,999 ಬೆಲೆ ಹೊಂದಿದೆ.

ಕೇವಲ ಎರಡು ದಿನಗಳಲ್ಲಿ ರೂ.1,100 ಕೋಟಿ ಮೌಲ್ಯದ ಇವಿ ಸ್ಕೂಟರ್ ಮಾರಾಟ ಮಾಡಿದ Ola Electric

ಹೊಸ ಸ್ಕೂಟರ್ ಬೆಲೆಯು ಕೆಲವು ರಾಜ್ಯಗಳಲ್ಲಿ ಹೆಚ್ಚುವರಿ ಸಬ್ಸಡಿ ನೀಡುತ್ತಿರುವ ಹಿನ್ನಲೆಯಲ್ಲಿ ಸಬ್ಸಡಿ ಹೊಂದಿರದ ರಾಜ್ಯಗಳಿಂತೂ ತುಸು ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದ್ದು, ಕೇಂದ್ರ ಸರ್ಕಾರವು ಪ್ರತಿ ರಾಜ್ಯಗಳಿಗೂ ಅನ್ವಯವಾಗುವಂತೆ ಫೇಮ್ 2 ಯೋಜನೆ ಅಡಿ ಸಬ್ಸಡಿ ನೀಡುತ್ತಿದೆ.

ಕೇವಲ ಎರಡು ದಿನಗಳಲ್ಲಿ ರೂ.1,100 ಕೋಟಿ ಮೌಲ್ಯದ ಇವಿ ಸ್ಕೂಟರ್ ಮಾರಾಟ ಮಾಡಿದ Ola Electric

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ತೀವ್ರವಾಗಿ ಹೆಚ್ಚಿಸುವ ಉದ್ದೇಶದಿಂದ ದೆಹಲಿ, ಮಹಾರಾಷ್ಟ್ರ, ರಾಜಸ್ತಾನ ಮತ್ತು ಗುಜರಾತ್ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ ಇವಿ ವಾಹನ ಖರೀದಿಸುವ ಗ್ರಾಹಕರಿಗೆ ಕೇಂದ್ರದ ಫೇಮ್ 2 ಸಬ್ಸಡಿ ಜೊತೆಗೆ ರಾಜ್ಯ ಸರ್ಕಾರದಿಂದಲೂ ಹೆಚ್ಚುವರಿ ಸಬ್ಸಡಿ ನೀಡುತ್ತಿವೆ.

ಕೇವಲ ಎರಡು ದಿನಗಳಲ್ಲಿ ರೂ.1,100 ಕೋಟಿ ಮೌಲ್ಯದ ಇವಿ ಸ್ಕೂಟರ್ ಮಾರಾಟ ಮಾಡಿದ Ola Electric

ಓಲಾ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕುರಿತಾದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಉಪಯಕ್ತ ಮಾಹಿತಿಯುಳ್ಳ Ola Electric App ಅಭಿವೃದ್ದಿಪಡಿಸಿದ್ದು, ಹೊಸ ಆ್ಯಪ್ ಮೂಲಕ ವಾಹನ ಖರೀದಿ, ವಿತರಣೆ, ಗ್ರಾಹಕ ಸೇವೆ, ಇನ್ಸುರೆನ್ಸ್, ಮೌಲ್ಯ ವರ್ಧಿತ ಸೇವೆಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.

ಕೇವಲ ಎರಡು ದಿನಗಳಲ್ಲಿ ರೂ.1,100 ಕೋಟಿ ಮೌಲ್ಯದ ಇವಿ ಸ್ಕೂಟರ್ ಮಾರಾಟ ಮಾಡಿದ Ola Electric

ಎಸ್1 ವೆರಿಯೆಂಟ್‌ನಲ್ಲಿ ಕಂಪನಿಯು 2.98kWh ಮತ್ತು ಎಸ್1 ಪ್ರೊ ಮಾದರಿಯಲ್ಲಿ 3.97kWh ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆ ಮಾಡಿದ್ದು, ಪ್ರತಿ ಚಾರ್ಜ್‌ಗೆ ಎಸ್1 ಮಾದರಿಯು ಗರಿಷ್ಠ 121 ಕಿ.ಮೀ ಮೈಲೇಜ್ ಹಿಂದಿರುಗಿಸಿದರೆ ಎಸ್1 ಪ್ರೊ ಮಾದರಿಯು ಪ್ರತಿ ಚಾರ್ಜ್‌ಗೆ 181 ಕಿ.ಮೀ ಮೈಲೇಜ್ ನೀಡಲಿದೆ.

ಕೇವಲ ಎರಡು ದಿನಗಳಲ್ಲಿ ರೂ.1,100 ಕೋಟಿ ಮೌಲ್ಯದ ಇವಿ ಸ್ಕೂಟರ್ ಮಾರಾಟ ಮಾಡಿದ Ola Electric

ಓಲಾ ಇವಿ ಸ್ಕೂಟರ್‌ಗಳು ಅತ್ಯುತ್ತಮ ವಿನ್ಯಾಸದೊಂದಿಗೆ ಗರಿಷ್ಠ ಮಟ್ಟದ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಸ್ಕೂಟರ್‌ಗಳಲ್ಲಿ ಟ್ವಿನ್ ಪಾಡ್ ಎಲ್ಇಡಿ ಸೆಟ್ಅಪ್, ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್‌ಲ್ಯಾಂಪ್, ಕೌಂಟ್‌ರ್ಡ್ ಸೀಟ್, ಅಲಾಯ್ ವ್ಹೀಲ್, 36-ಲೀಟರ್ ಸಾಮರ್ಥ್ಯ ಅಂಡರ್ ಸೀಟ್ ಸ್ಪೋರೇಜ್, ರಿಯರ್ ಗ್ರ್ಯಾಬ್ ರೈಲ್ಸ್, ಫ್ರಂಟ್ ಸ್ಟೋರೇಜ್ ಪ್ಯಾಕೇಟ್, ಲಗೇಜ್ ಹುಕ್ ಮತ್ತು ಹತ್ತು ವಿವಿಧ ಬಣ್ಣಗಳ ಆಯ್ಕೆ ಹೊಂದಿದೆ.

ಕೇವಲ ಎರಡು ದಿನಗಳಲ್ಲಿ ರೂ.1,100 ಕೋಟಿ ಮೌಲ್ಯದ ಇವಿ ಸ್ಕೂಟರ್ ಮಾರಾಟ ಮಾಡಿದ Ola Electric

ಹೊಸ ಸ್ಕೂಟರ್‌ಗಳು 1,859 ಎಂಎಂ ಉದ್ದ, 712 ಎಂಎಂ ಅಗಲ, 1,160 ಎಂಎಂ ಎತ್ತರ, 1,359 ಎಂಎಂ ವ್ಹೀಲ್ ಬೆಸ್, 792 ಎಂಎಂ ಸೀಟ್ ಹೈಟ್, 125 ಕೆ.ಜಿ ತೂಕ ಹೊಂದಿದ್ದು, ಮುಂಭಾಗದಲ್ಲಿ ಸಿಂಗಲ್ ಫೋರ್ಕ್ ಸಸ್ಫೆಷನ್ ಮತ್ತು ಹಿಂಬದಿಯಲ್ಲಿ ಮೊನೊ ಶಾಕ್ ಸಸ್ಷೆಷನ್‌ನೊಂದಿಗೆ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಜೋಡಣೆ ಹೊಂದಿವೆ.

ಕೇವಲ ಎರಡು ದಿನಗಳಲ್ಲಿ ರೂ.1,100 ಕೋಟಿ ಮೌಲ್ಯದ ಇವಿ ಸ್ಕೂಟರ್ ಮಾರಾಟ ಮಾಡಿದ Ola Electric

ಜೊತೆಗೆ ಹೊಸ ಸ್ಕೂಟರ್‌ನಲ್ಲಿ 7-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಮತ್ತು ಶಟರ್‌ಪ್ರೂಫ್ ಸ್ಕ್ರೀನ್‌ನೊಂದಿಗೆ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆನ್ ಬೋರ್ಡ್ ನ್ಯಾನಿಗೇಷನ್‌ಗಾಗಿ ಇಸಿಮ್ ಇಂಟರ್‌ನೆಂಟ್ ಕನೆಕ್ಟಿವಿಟಿ, ಸ್ಮಾಟ್‌ಫೋರ್ಟ್ ಮೂಲಕ ವಿವಿಧ ತಾಂತ್ರಿಕ ಅಂಶಗಳನ್ನು ನಿಯಂತ್ರಿಸಲು ಕನೆಕ್ಟೆಡ್ ಫೀಚರ್ಸ್ ಸಹ ನೀಡಲಾಗಿದೆ.

Most Read Articles

Kannada
English summary
Ola s1 s1 pro electric scooters sold worth 1 100 crore in two days
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X