ಅಧಿಕ ರೇಂಜ್ ಹೊಂದಿರುವ ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್ ಮಾಹಿತಿ ಬಹಿರಂಗ

ಪಿಯಾಜಿಯೊ ಕಂಪನಿಯು ತನ್ನ ಹೊಸ ಒನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಳೆದ ತಿಂಗಳು ಅನಾವರಣಗೊಳಿಸಿತ್ತು. ವಿಶೇಷವೆಂದರೆ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಆದ ಟಿಕ್ ಟಾಕ್‌ನಲ್ಲಿ ಅನಾವರಣಗೊಳಿಸಲಾಯಿತು.

ಅಧಿಕ ರೇಂಜ್ ಹೊಂದಿರುವ ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್ ಮಾಹಿತಿ ಬಹಿರಂಗ

ಆಕರ್ಷಕವಾದ ಈ ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಯುವಗ್ರಾಹಕರನ್ನು ಗುರಿಯಾಗಿಸಿ ಬಿಡುಗಡೆಗೊಳಿಸಲಾಗುತ್ತದೆ. ಕಂಪನಿಯು ಸ್ಕೂಟರ್‌ನ ರೂಪಾಂತರಗಳ ಮಾಹಿತಿಗಳನ್ನು ಬಹಿರಂಗಪಡಿಸಿದೆ. ಪಿಯಾಜಿಯೊ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು. ಇನ್ನು ಈ ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್ ಒನ್, ಒಮ್ ಪ್ಲಸ್ ಮತ್ತು ಒನ್ ಆಕ್ಟಿವ್ ಎಂಬ ಮೂರೂ ರೂಪಾಂತರಗಳಲ್ಲಿ ಲಭ್ಯವಿರುತ್ತದೆ.

ಅಧಿಕ ರೇಂಜ್ ಹೊಂದಿರುವ ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್ ಮಾಹಿತಿ ಬಹಿರಂಗ

ಎಲ್ಲಾ ಮೂರು ರೂಪಾಂತರಗಳು ಒಂದೇ ವಿನ್ಯಾಸವನ್ನು ಹೊಂದಿವೆ ಮತ್ತು ಒಂದೇ ರೀತಿಯ ವೈಶಿಷ್ಟ್ಯಗಳನ್ನು ಪಡೆಯುತ್ತವೆ ಆದರೆ ಬ್ಯಾಟರಿ ಮತ್ತು ಮೋಟರ್ ವಿಭಿನ್ನವಾಗಿವೆ. ಇದರಲ್ಲಿ ಬೇಸ್ ಒನ್ ರೂಪಾಂತರವು 48 ವೋಲ್ಟ್ 1.8 ಕಿಲೋವ್ಯಾಟ್ ಬ್ಯಾಟರಿಯೊಂದಿಗೆ 1.2 ಕಿ.ವ್ಯಾಟ್ ಮೋಟರ್ ಅನ್ನು ಪಡೆಯುತ್ತದೆ.

MOST READ: ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಹೋಂಡಾ ಶೈನ್ ಬೈಕ್

ಅಧಿಕ ರೇಂಜ್ ಹೊಂದಿರುವ ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್ ಮಾಹಿತಿ ಬಹಿರಂಗ

ಇದು ಒಟ್ಟು 85 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಬೇಸ್ ಸ್ಪೆಕ್ ಒನ್ ಸ್ಕೂಟರ್ 45 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ರೂಪಾಂತರವನ್ನು ಪೂರ್ತಿಯಾಗಿ ಚಾರ್ಚ್ ಮಾಡಿದರೆ 55 ಕಿ.ಮೀ ಚಲಿಸುತ್ತದೆ.

ಅಧಿಕ ರೇಂಜ್ ಹೊಂದಿರುವ ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್ ಮಾಹಿತಿ ಬಹಿರಂಗ

ಟಾಪ್-ಸ್ಪೆಕ್ ಒನ್ ಪ್ಲಸ್ ರೂಪಾಂತರವು ದೊಡ್ಡದಾದ 2.3 ಕಿಲೋವ್ಯಾಟ್ ಬ್ಯಾಟರಿ ಯುನಿಟ್ ನೊಂದಿಗೆ ಒಂದೇ ಮೋಟರ್ ಅನ್ನು ಪಡೆಯುತ್ತದೆ. ಈ ರೂಪಾಂತರದ ಟಾಪ್ ಸ್ಫೀಡ್ 55 ಕಿ.ಮೀ ಆಗಿದೆ. ಇನ್ನು ಪೂರ್ತಿಯಾಗಿ ಚಾರ್ಚ್ ಮಾಡಿದರೆ 100 ಕಿ.ಮೀ ಚಲಿಸುತ್ತದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಅಧಿಕ ರೇಂಜ್ ಹೊಂದಿರುವ ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್ ಮಾಹಿತಿ ಬಹಿರಂಗ

ಇನ್ನು ಒನ್ ಆಕ್ಟಿವ್ ರೂಪಾಂತರವು 2.3 ಕಿಲೋವ್ಯಾಟ್ ಬ್ಯಾಟರಿಯನ್ನು ಪಡೆಯುತ್ತದೆ. ಇದರ ದೊಡ್ಡದಾದ 2 ಕಿಲೋವ್ಯಾಟ್ ಮೋಟರ್ 95 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ರೂಪಾಂತರದ ಟಾಪ್ ಸ್ಫೀಡ್ 85 ಕಿ.ಮೀ ಆಗಿದೆ.ಈ ರೂಪಾಂತರವನ್ನು ಪೂರ್ತಿಯಾಗಿ ಚಾರ್ಚ್ ಮಾಡಿದರೆ 55 ಕಿ.ಮೀ ಚಲಿಸುತ್ತದೆ.

ಅಧಿಕ ರೇಂಜ್ ಹೊಂದಿರುವ ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್ ಮಾಹಿತಿ ಬಹಿರಂಗ

ಎಲ್ಲಾ ರೂಪಾಂತರಗಳು ಪೂರ್ತಿಯಾಗಿ ಚಾರ್ಜ್ ಆಗಲು 6 ಗಂಟೆಗಳ ಅವಧಿಯನ್ನು ತೆಗೆದುಕೊಳ್ಳುತ್ತದೆ. ಇನ್ನು ಈ ಹೊಸ ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್ ಆಕರ್ಷಕ ಲುಕ್ ಅನ್ನು ಹೊಂದಿದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಅಧಿಕ ರೇಂಜ್ ಹೊಂದಿರುವ ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್ ಮಾಹಿತಿ ಬಹಿರಂಗ

ಹೊಸ ಒನ್ ಎಲೆಕ್ಟ್ರಿಕ್ ಸ್ಕೂಟರ್ ಸಹ ಹಲವಾರು ಪೀಚರ್ಸ್ ಮತ್ತು ತಂತ್ರಜ್ಞಾನದೊಂದಿಗೆ ಬರುತ್ತದೆ ಎಂದು ಹೇಳಲಾಗುತ್ತಿದೆ, ಇವುಗಳಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸುತ್ತಲೂ ಎಲ್ಇಡಿ ಲ್ಯಾಂಪ್ ಗಳು, ಕೀ ಲೆಸ್ ಎಂಟ್ರಿ ಮತ್ತು ವಿಶಾಲವಾದ ಅಂಡರ್-ಸೀಟ್ ಸ್ಟೋರೆಂಜ್ ಸೇಸ್ ಅನ್ನು ಹೊಂದಿದೆ.

ಅಧಿಕ ರೇಂಜ್ ಹೊಂದಿರುವ ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್ ಮಾಹಿತಿ ಬಹಿರಂಗ

ಈ ತಿಂಗಳಲ್ಲಿ ಹೊಸ ಒನ್ ಎಲೆಕ್ಟ್ರಿಕ್ ಸ್ಕೂಟರ್ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಮಾರಾಟವಾಗಲಿದೆ ಎಂದು ನಿರೀಕ್ಷಿಸುತ್ತೇವೆ. ಇನ್ನು ಉಳಿದಂತೆ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ನಂತರದ ಹಂತದಲ್ಲಿ ಬಿಡುಗಡೆಗೊಳಿಸಬಹುದು. ಆದರೆ ಭಾರತದಲ್ಲಿ ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಗುವುದರ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.

Most Read Articles

Kannada
English summary
Piaggio One Electric Scooter Variant Details Revealed. Read In Kannada.
Story first published: Tuesday, June 8, 2021, 17:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X