ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್

ಪಿಯಾಜಿಯೊ ಕಂಪನಿಯು ತನ್ನ ಹೊಸ ಒನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಎಲೆಕ್ಟ್ರಿಕ್ ಸ್ಕೂಟರ್‌ನ ಅಧಿಕೃತ ಅನಾವರಣವು ಸಾಮಾಜಿಕ ಜಾಲತಾಣದ ಪ್ಲಾಟ್‌ಫಾರ್ಮ್ ಟಿಕ್ ಟೋಕ್‌ನಲ್ಲಿ ನಡೆಯಿತು, ಆಕರ್ಷಕವಾದ ಈ ಒನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಯುವಗ್ರಾಹಕರನ್ನು ಗುರಿಯಾಗಿಸಿ ಬಿಡುಗಡೆಗೊಳಿಸಲಾಗುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್

ಹೊಸ ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಇನ್ನು ಈ ಹೊಸ ಒನ್ ಎಲೆಕ್ಟ್ರಿಕ್ ಸ್ಕೂಟರ್ ಸಹ ಹಲವಾರು ಪೀಚರ್ಸ್ ಮತ್ತು ತಂತ್ರಜ್ಞಾನದೊಂದಿಗೆ ಬರುತ್ತದೆ ಎಂದು ಹೇಳಲಾಗುತ್ತಿದೆ, ಇವುಗಳಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸುತ್ತಲೂ ಎಲ್ಇಡಿ ಲ್ಯಾಂಪ್ ಗಳು, ಕೀ ಲೆಸ್ ಎಂಟ್ರಿ ಮತ್ತು ವಿಶಾಲವಾದ ಅಂಡರ್-ಸೀಟ್ ಸ್ಟೋರೆಂಜ್ ಸೇಸ್ ಅನ್ನ್ ಹೊಂದಿದೆ. ಇದರೊಂದಿಗೆ ರೂಬಸ್ಟ್ ಪುಲ್ ಔಟ್ ಫುಟ್‌ಪೆಗ್‌ಗಳು ಮತ್ತು ವಿಶಾಲವಾದ ಫುಟ್‌ಬೋರ್ಡ್ ಸೇರಿವೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್

ಎಲೆಕ್ಟ್ರಿಕ್ ಸ್ಕೂಟರ್‌ನ ತಾಂತ್ರಿಕ ವಿಶೇಷಣಗಳನ್ನು ಪಿಯಾಜಿಯೊ ಬಹಿರಂಗಪಡಿಸಲಿಲ್ಲ. 2021ರ ಮೇ 28 ರಂದು ಬೀಜಿಂಗ್ ಮೋಟಾರು ಶೋನಲ್ಲಿ ಮೊದಲ ಬಾರಿಗೆ ತಾಂತ್ರಿಕ ವಿಶೇಷಣಗಳನ್ನು ಬಹಿರಂಗಪಡಿಸಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್

ಆದರೆ ಪಿಯಾಜಿಯೊ ಒನ್ ಅನ್ನು ಅನೇಕ ರೂಪಾಂತರಗಳಲ್ಲಿ ನೀಡಲಾಗುವುದು ಎಂದು ಕಂಪನಿಯು ಹೇಳಿಕೊಂಡಿದೆ. ಇನ್ನು ಈ ಹೊಸ ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ತೆಗೆಯಬಹುದಾದ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಬರಲಿದ್ದು, ಚಾರ್ಜಿಂಗ್ ಸುಲಭವಾಗುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್

ಭಾರತೀಯ ಮಾರುಕಟ್ಟೆಯಲ್ಲಿ ಪಿಯಾಜಿಯೊ ಕಂಪನಿಯು ತನ್ನ ಸೇಲ್ಸ್ ಹಾಗೂ ಸರ್ವೀಸ್ ಹೆಚ್ಚಿಸಲು ಮತ್ತಷ್ಟು ಡೀಲರ್​ಶಿಪ್'ಗಳನ್ನು ತೆರೆಯಲು ಬಯಸಿದೆ. ಇಟಲಿ ಮೂಲದ ವಾಹನ ತಯಾರಕ ಕಂಪನಿಯಾದ ಪಿಯಾಜಿಯೊ, ಏಪ್ರಿಲಿಯಾ ಹಾಗೂ ವೆಸ್ಪಾ ಬ್ರಾಂಡ್‌ ಸ್ಕೂಟರ್‌ಗಳನ್ನು ತಯಾರಿಸುತ್ತದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್

ಪಿಯಾಜಿಯೊ, ವೆಸ್ಪಾ ಹಾಗೂ ಏಪ್ರಿಲಿಯಾ ವಾಹನಗಳಿಗೆ ಭಾರತವು ಪ್ರಮುಖ ಮಾರುಕಟ್ಟೆಯಾಗಿದೆ. ಮಾಹಿತಿಗಳ ಪ್ರಕಾರ ಪಿಯಾಜಿಯೊ ಕಂಪನಿಯ 45%ನಷ್ಟು ವಾಹನಗಳು ಭಾರತದಲ್ಲಿ ಮಾರಾಟವಾಗಿವೆ. ಈಗ ಕಂಪನಿಯು ತನ್ನ ಡೀಲರ್​ಶಿಪ್'ಗಳನ್ನು ವಿಸ್ತರಿಸಲು ಮುಂದಾಗಿದ್ದು, ಮುಂದಿನ ವರ್ಷ 100 ಹೊಸ ಡೀಲರ್​ಶಿಪ್'ಗಳನ್ನು ತೆರೆಯುವ ಯೋಜನೆಯನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್

ಇದರೊಂದಿಗೆ ಪಿಯಾಜಿಯೊ ಕಂಪನಿಯು ತನ್ನ ಜನಪ್ರಿಯ ಬೆವಿರ್ಲಿ ಸ್ಕೂಟರ್ ಅನ್ನು ನವೀಕರಿಸಲಾಗಿದೆ. ಈ 2021ರ ಪಿಯಾಜಿಯೊ ಬೆವಿರ್ಲಿ ಸ್ಕೂಟರ್ ಅನ್ನು ಹೊಸ ಸ್ಟೈಲಿಂಗ್, ಹೆಚ್ಚು ಟೆಕ್ ಮತ್ತು ಪರಿಷ್ಕೃತ ಚಾಸಿಸ್ ಭಾಗಗಳೊಂದಿಗೆ ನವೀಕರಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್

ಈ ಪಿಯಾಜಿಯೊ ಬೆವಿರ್ಲಿ ಸ್ಕೂಟರ್ ನಲ್ಲಿ 300 ಸಿಸಿ, ಲಿಕ್ವಿಡ್-ಕೂಲ್ಡ್, ಫ್ಯೂಯಲ್-ಇಂಜೆಕ್ಟ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8,000 ಆರ್‌ಪಿಎಂನಲ್ಲಿ 25.5 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ, ಇದು ಹಿಂದಿನ ಮಾದರಿಗೆ ಹೋಲಿಸಿದರೆ ಶೇ.23 ರಷ್ಟು ಬಿಹೆಚ್‍ಪಿ ಪವರ್ ಹೆಚ್ಚು ಉತ್ಪಾದಿಸುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಪಿಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್

ಈ ವರ್ಷದ ಜೂನ್‌ನಿಂದ ಹೊಸ ಒನ್ ಎಲೆಕ್ಟ್ರಿಕ್ ಸ್ಕೂಟರ್ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಮಾರಾಟವಾಗಲಿದೆ ಎಂದು ಕಂಪನಿಯು ಪಿಯಾಜಿಯೊ ಖಚಿತಪಡಿಸಿದೆ. ಇನ್ನು ಉಳಿದಂತೆ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ನಂತರದ ಹಂತದಲ್ಲಿ ಬಿಡುಗಡೆಗೊಳಿಸಬಹುದು. ಆದರೆ ಭಾರತದಲ್ಲಿ ಯಾಜಿಯೊ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಗುವುದರ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.

Most Read Articles

Kannada
English summary
piaggio one electric scooter unveiled. Read In Kannada.
Story first published: Tuesday, May 25, 2021, 12:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X