ಎಲೆಕ್ಟ್ರಿಕ್ ಸ್ಕೂಟರ್‌ಗಳ ವಾರಂಟಿಯನ್ನು ಹೆಚ್ಚಿಸಿದ ಪ್ಯೂರ್ ಇವಿ

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ವಿವಿಧ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರವು ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳ ವಾರಂಟಿಯನ್ನು ಹೆಚ್ಚಿಸಿದ ಪ್ಯೂರ್ ಇವಿ

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳ ವಾರಂಟಿಯನ್ನು ಹೆಚ್ಚಿಸಿದ ಪ್ಯೂರ್ ಇವಿ

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಯೋಜನೆ ಸಾಕಷ್ಟು ಸಹಕಾರಿಯಾಗಿದ್ದು, ಗ್ರಾಹಕರ ಸೆಳೆಯಲು ಎಲೆಕ್ಟ್ರಿಕ್ ವಾಹನ ಕಂಪನಿಗಳು ಕೂಡಾ ಹಲವಾರು ಆಫರ್‌ಗಳನ್ನು ಘೋಷಣೆ ಮಾಡುತ್ತಿವೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳ ವಾರಂಟಿಯನ್ನು ಹೆಚ್ಚಿಸಿದ ಪ್ಯೂರ್ ಇವಿ

ಹೈದ್ರಾಬಾದ್ ಮೂಲದ ಪ್ಯೂರ್ ಇವಿ ಕಂಪನಿಯು ತನ್ನ ಎಲೆಕ್ಟ್ರಿಕ್ ವಾಹನಗಳ ವಾರಂಟಿ ಹೆಚ್ಚಿಸುವ ಮೂಲಕ ಇವಿ ವಾಹನ ಖರೀದಿಗೆ ಉತ್ತೇಜಿಸುತ್ತಿದ್ದು, ಬ್ಯಾಟರಿ ಮತ್ತು ಮೋಟಾರ್ ಮೇಲಿನ ಸ್ಟ್ಯಾಂಡರ್ಡ್ ವಾರಂಟಿಯನ್ನು 2 ವರ್ಷಗಳಿಂದ 5 ವರ್ಷಗಳಿಗೆ ಹೆಚ್ಚಿಸಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳ ವಾರಂಟಿಯನ್ನು ಹೆಚ್ಚಿಸಿದ ಪ್ಯೂರ್ ಇವಿ

ಪ್ಯೂರ್ ಇವಿ ಕಂಪನಿಯು ಇಪ್ಯೂಟೊ 7ಜಿ, ಇಟ್ರಾನ್ ನಿಯೋ, ಇಪ್ಯೂಟೊ ಮತ್ತು ಇಟ್ರಾನ್ಸ್ ಪ್ಲಸ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಹೊಸ ಸ್ಕೂಟರ್‌ಗಳ ಸ್ಟ್ಯಾಂಡರ್ಡ್ ವಾರಂಟಿಯನ್ನು ಬ್ಯಾಟರಿ ಮೇಲೆ 5 ವರ್ಷ, ಮೋಟಾರ್ ಮೇಲೆ 3 ವರ್ಷ ಮತ್ತು ಕಂಟ್ರೊಲರ್ ಸಿಸ್ಟಂ ಮೇಲೆ 2 ವರ್ಷ ವಾರಂಟಿ ನೀಡುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳ ವಾರಂಟಿಯನ್ನು ಹೆಚ್ಚಿಸಿದ ಪ್ಯೂರ್ ಇವಿ

ಎಲೆಕ್ಟ್ರಿಕ್ ವಾಹನಗಳು ಬಾಳಿಕೆ ಕಡಿಮೆ, ಬ್ಯಾಟರಿ ದಕ್ಷತೆ ಕಡಿಮೆ ಎನ್ನುವ ಗ್ರಾಹಕರ ತಪ್ಪು ತಿಳುವಳಿಕೆಗಳನ್ನು ಹೊಗಲಾಡಿಸಲು ಗರಿಷ್ಠ ವಾರಂಟಿ ಘೋಷಣೆ ಮಾಡಿರುವ ಪ್ಯೂರ್ ಇವಿ ಕಂಪನಿಯು ಶೀಘ್ರದಲ್ಲೇ ಮತ್ತಷ್ಟು ಹೊಸ ವಾಹನಗಳ ಬಿಡುಗಡೆ ಸಿದ್ದವಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳ ವಾರಂಟಿಯನ್ನು ಹೆಚ್ಚಿಸಿದ ಪ್ಯೂರ್ ಇವಿ

ಸದ್ಯಕ್ಕೆ ಸೀಮಿತ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟ ಸೌಲಭ್ಯ ಹೊಂದಿರುವ ಪ್ಯೂರ್ ಇವಿ ಕಂಪನಿಯು ಮುಂದಿನ ಕೆಲವೇ ತಿಂಗಳುಗಳಲ್ಲಿ 20ಕ್ಕೂ ರಾಜ್ಯಗಳಲ್ಲಿ 100 ಹೊಸ ಮಾರಾಟ ಮಳಿಗೆಗಳನ್ನು ತೆರೆಯುತ್ತಿದ್ದು, ಹೊಸದಾಗಿ ಬಿಡುಗಡೆಯಾಗಿರುವ ಇಟ್ರಿಸ್ಟ್ 350 ಬೈಕ್ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳ ವಾರಂಟಿಯನ್ನು ಹೆಚ್ಚಿಸಿದ ಪ್ಯೂರ್ ಇವಿ

ಮುಂದಿನ ಕೆಲವೇ ತಿಂಗಳಿನಲ್ಲಿ ಹೊಸ ಎಲೆಕ್ಟ್ರಿಕ್ ಬೈಕ ಮಾದರಿಯನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸುತ್ತಿರುವ ಪ್ಯೂರ್ ಇವಿ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಇಟ್ರಿಸ್ಟ್ 350 ಎನ್ನುವ ಇವಿ ಬೈಕ್ ಬಿಡುಗಡೆ ಮಾಡುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳ ವಾರಂಟಿಯನ್ನು ಹೆಚ್ಚಿಸಿದ ಪ್ಯೂರ್ ಇವಿ

ಹೊಸ ಬೈಕ್ ಉತ್ಪಾದನಾ ಆವೃತ್ತಿಯ ಚಿತ್ರವನ್ನು ಹೊರತುಪಡಿಸಿ ಯಾವುದೇ ಹಂಚಿಕೊಳ್ಳದ ಪ್ಯೂರ್ ಕಂಪನಿಯು ಮುಂಬರುವ ಸೆಪ್ಟೆಂಬರ್ಹೊಸ ಇಟ್ರಿಸ್ಟ್ 350 ಇವಿ ಬೈಕ್ ಮಾದರಿಯಲ್ಲಿ 3.5 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಜೋಡಿಸುವ ಸಾಧ್ಯತೆಗಳಿದ್ದು, ಹೊಸ ಬೈಕ್ ಮಾದರಿಯು ಪ್ರತಿ ಚಾರ್ಜ್‌ಗೆ 85 ಕಿ.ಮೀ ಟಾಪ್ ಸ್ಪೀಡ್ ಚಾಲನೆಯೊಂದಿಗೆ 125 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳ ವಾರಂಟಿಯನ್ನು ಹೆಚ್ಚಿಸಿದ ಪ್ಯೂರ್ ಇವಿ

ಹೊಸ ಇಟ್ರಿಸ್ಟ್ 350 ಇವಿ ಬೈಕ್ ಮಾದರಿಯಲ್ಲಿ 3.5 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಜೋಡಿಸುವ ಸಾಧ್ಯತೆಗಳಿದ್ದು, ಹೊಸ ಬೈಕ್ ಮಾದರಿಯು ಪ್ರತಿ ಚಾರ್ಜ್‌ಗೆ 85 ಕಿ.ಮೀ ಟಾಪ್ ಸ್ಪೀಡ್ ಚಾಲನೆಯೊಂದಿಗೆ 125 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದಾಗಿದೆ.

Most Read Articles

Kannada
English summary
Pure EV Electic Scooter Warranty Extended. Read in Kannada.
Story first published: Wednesday, July 28, 2021, 20:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X