Just In
- 6 hrs ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 6 hrs ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 7 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 7 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇವಿ ಸ್ಕೂಟರ್ ಮಾರಾಟದಲ್ಲಿ ಮೊದಲ ಬಾರಿಗೆ ಭರ್ಜರಿ ಬೇಡಿಕೆ ಪಡೆದುಕೊಂಡ Pure EV
ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗುತ್ತಿದೆ.
ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಈಗಾಗಲೇ ಫೇಮ್ 2 ಸಬ್ಸಡಿ ಯೋಜನೆಯನ್ನು ಜಾರಿಗೆ ತಂದಿದ್ದು, ಹೊಸ ಯೋಜನೆಯಡಿ ಎಲೆಕ್ಟ್ರಿಕ್ ವಾಹನ ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದೆ.
ಹಾಗೆಯೇ ಫೇಮ್ 2 ಯೋಜನೆಯೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ತಮ್ಮದೇ ಆದ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿದ್ದು, ಕೇಂದ್ರ ಸರ್ಕಾರದ ಯೋಜನೆಗಳ ಜೊತಗೆ ರಾಜ್ಯ ಸರ್ಕಾರಗಳು ಸಹ ಇವಿ ವಾಹನ ಬಳಕೆ ಹೆಚ್ಚಳಕ್ಕೆ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿವೆ.
ದೆಹಲಿ ಸರ್ಕಾರವು ಇತರೆ ರಾಜ್ಯಗಳಿಗಳಿಂತಲೂ ಹೊಸ ಇವಿ ನೀತಿ ಅಡಿಯಲ್ಲಿ ಪರಿಸರಕ್ಕೆ ಪೂರಕವಾದ ವಾಹನಗಳ ನೋಂದಣಿಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿದಾರರನ್ನು ಉತ್ತೇಜಿಸಲು ಗರಿಷ್ಠ ಸಬ್ಸಡಿ ಮತ್ತು ನೋಂದಣಿ ಶುಲ್ಕ ಮನ್ನಾದಂತಹ ಯೋಜನೆಗಳನ್ನು ಪ್ರಕಟಿಸಿ ಇವಿ ವಾಹನ ಬಳಕೆಯನ್ನು ಉತ್ತೇಜಿಸುತ್ತಿದೆ.
ಹೊಸ ಸಬ್ಸಡಿ ಯೋಜನೆಯ ಪರಿಣಾಮ ದೆಹಲಿಯಲ್ಲಿ ಮಾತ್ರವಲ್ಲ ಇತರೆ ರಾಜ್ಯಗಳಲ್ಲೂ ಇವಿ ವಾಹನಗಳ ನೋಂದಣಿ ತಿಂಗಳಿನಿಂದ ತಿಂಗಳಿಗೆ ದ್ವಿಗುಣಗೊಳ್ಳುತ್ತಿದ್ದು, ಕಳೆದ ಒಂದೂವರೆ ವರ್ಷದಲ್ಲಿ ಎಲೆಕ್ಟ್ರಿಕ್ ವಾಹನ ಮಾರಾಟವು ಸಾಕಷ್ಟು ಏರಿಕೆಯಾಗಿದೆ.
ಹೈದ್ರಾಬಾದ್ ಮೂಲದ ಪ್ಯೂರ್ ಇವಿ ಕಂಪನಿಯು ತನ್ನ ಎಲೆಕ್ಟ್ರಿಕ್ ವಾಹನಗಳ ವಾರಂಟಿ ಹೆಚ್ಚಿಸುವ ಮೂಲಕ ಇವಿ ವಾಹನ ಖರೀದಿಗೆ ಉತ್ತೇಜಿಸುತ್ತಿದ್ದು, ಬ್ಯಾಟರಿ ಮತ್ತು ಮೋಟಾರ್ ಮೇಲಿನ ಸ್ಟ್ಯಾಂಡರ್ಡ್ ವಾರಂಟಿಯನ್ನು 2 ವರ್ಷಗಳಿಂದ 5 ವರ್ಷಗಳಿಗೆ ಹೆಚ್ಚಿಸುವ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಂಡಿದೆ.
ಪ್ಯೂರ್ ಇವಿ ಕಂಪನಿಯ ಹೇಳಿಕೆಯ ಪ್ರಕಾರ ಕಳೆದ ಒಂದೂವರೆ ವರ್ಷದಲ್ಲಿ ಸುಮಾರು 25 ಸಾವಿರ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಮಾರಾಟ ಮಾಡಿರುವುದಾಗಿ ಹೇಳಿಕೊಂಡಿದ್ದು, ಕಳೆದ ಕೆಲ ತಿಂಗಳಿನಿಂದ ಸಾಕಷ್ಟು ಬೇಡಿಕೆ ದಾಖಲಾಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದೆ.
ಪ್ಯೂರ್ ಇವಿ ಕಂಪನಿಯು ಇಪ್ಯೂಟೊ 7ಜಿ, ಇಟ್ರಾನ್ ನಿಯೋ, ಇಪ್ಯೂಟೊ ಮತ್ತು ಇಟ್ರಾನ್ಸ್ ಪ್ಲಸ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಹೊಸ ಸ್ಕೂಟರ್ಗಳ ಸ್ಟ್ಯಾಂಡರ್ಡ್ ವಾರಂಟಿಯನ್ನು ಬ್ಯಾಟರಿ ಮೇಲೆ 5 ವರ್ಷ, ಮೋಟಾರ್ ಮೇಲೆ 3 ವರ್ಷ ಮತ್ತು ಕಂಟ್ರೊಲರ್ ಸಿಸ್ಟಂ ಮೇಲೆ 2 ವರ್ಷ ವಾರಂಟಿ ಹೆಚ್ಚಿಸಿರುವುದು ಕೂಡಾ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.
ಎಲೆಕ್ಟ್ರಿಕ್ ವಾಹನಗಳು ಬಾಳಿಕೆ ಕಡಿಮೆ, ಬ್ಯಾಟರಿ ದಕ್ಷತೆ ಕಡಿಮೆ ಎನ್ನುವ ಗ್ರಾಹಕರ ತಪ್ಪು ತಿಳುವಳಿಕೆಗಳನ್ನು ಹೊಗಲಾಡಿಸಲು ಗರಿಷ್ಠ ವಾರಂಟಿ ಘೋಷಣೆ ಮಾಡಿರುವ ಪ್ಯೂರ್ ಇವಿ ಕಂಪನಿಯು ಶೀಘ್ರದಲ್ಲೇ ಮತ್ತಷ್ಟು ಹೊಸ ವಾಹನಗಳ ಬಿಡುಗಡೆ ಸಿದ್ದವಾಗಿದೆ.
ಸದ್ಯಕ್ಕೆ ಸೀಮಿತ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟ ಸೌಲಭ್ಯ ಹೊಂದಿರುವ ಪ್ಯೂರ್ ಇವಿ ಕಂಪನಿಯು ಮುಂದಿನ ಕೆಲವೇ ತಿಂಗಳುಗಳಲ್ಲಿ 20ಕ್ಕೂ ರಾಜ್ಯಗಳಲ್ಲಿ 100 ಹೊಸ ಮಾರಾಟ ಮಳಿಗೆಗಳನ್ನು ತೆರೆಯುತ್ತಿದ್ದು, ಹೊಸದಾಗಿ ಬಿಡುಗಡೆಯಾಗಿರುವ ಇಟ್ರಿಸ್ಟ್ 350 ಬೈಕ್ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ.
ಮುಂದಿನ ಕೆಲವೇ ತಿಂಗಳಿನಲ್ಲಿ ಹೊಸ ಎಲೆಕ್ಟ್ರಿಕ್ ಬೈಕ ಮಾದರಿಯನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸುತ್ತಿರುವ ಪ್ಯೂರ್ ಇವಿ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಇಟ್ರಿಸ್ಟ್ 350 ಎನ್ನುವ ಇವಿ ಬೈಕ್ ಬಿಡುಗಡೆ ಮಾಡುತ್ತಿದೆ.
ಹೊಸ ಬೈಕ್ ಉತ್ಪಾದನಾ ಆವೃತ್ತಿಯ ಚಿತ್ರವನ್ನು ಹೊರತುಪಡಿಸಿ ಯಾವುದೇ ಹಂಚಿಕೊಳ್ಳದ ಪ್ಯೂರ್ ಕಂಪನಿಯು ಮುಂಬರುವ ಸೆಪ್ಟೆಂಬರ್ಹೊಸ ಇಟ್ರಿಸ್ಟ್ 350 ಇವಿ ಬೈಕ್ ಮಾದರಿಯಲ್ಲಿ 3.5 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಜೋಡಿಸುವ ಸಾಧ್ಯತೆಗಳಿದ್ದು, ಹೊಸ ಬೈಕ್ ಮಾದರಿಯು ಪ್ರತಿ ಚಾರ್ಜ್ಗೆ 85 ಕಿ.ಮೀ ಟಾಪ್ ಸ್ಪೀಡ್ ಚಾಲನೆಯೊಂದಿಗೆ 125 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದಾಗಿದೆ.
ಹೊಸ ಇಟ್ರಿಸ್ಟ್ 350 ಇವಿ ಬೈಕ್ ಮಾದರಿಯಲ್ಲಿ 3.5 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಜೋಡಿಸುವ ಸಾಧ್ಯತೆಗಳಿದ್ದು, ಹೊಸ ಬೈಕ್ ಮಾದರಿಯು ಪ್ರತಿ ಚಾರ್ಜ್ಗೆ 85 ಕಿ.ಮೀ ಟಾಪ್ ಸ್ಪೀಡ್ ಚಾಲನೆಯೊಂದಿಗೆ 125 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದಾಗಿದೆ.