ಭಾರತದಲ್ಲಿ ಬಿಡುಗಡೆಯಾಗಲಿದೆ ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ Raft Indus NX ಇವಿ ಸ್ಕೂಟರ್

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಗೊಳಿಸುವಲ್ಲಿ ಸ್ಟಾರ್ಟ್ಅಪ್ ಕಂಪನಿಗಳು ಯಶಸ್ವಿಯಾಗುತ್ತಿವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ Raft Indus NX ಇವಿ ಸ್ಕೂಟರ್

ದುಬಾರಿ ಇಂಧನ ದರ ಮತ್ತು ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಯಾಗಿ ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಹಲವಾರು ಪ್ರೋತ್ಸಾಹಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಹೊಸ ಯೋಜನೆಗಳಿಂದಾಗಿ ಕಳೆದ ಒಂದು ವರ್ಷದಿಂದ ಇವಿ ವಾಹನಗಳ ಮಾರಾಟದಲ್ಲಿ ಸಾಕಷ್ಟು ಏರಿಕೆಯಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ Raft Indus NX ಇವಿ ಸ್ಕೂಟರ್

ಮುಂಬೈ ಮೂಲದ ರಾಫ್ಟ್ ಮೋಟಾರ್ಸ್(Raftmotors) ಕಂಪನಿಯು ಕೂಡಾ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಹೊಸ ಇವಿ ಸ್ಕೂಟರ್‌ಗಳ ಮಾರಾಟಕ್ಕೆ ಚಾಲನೆ ನೀಡಿದ್ದು, ಲೋ ಸ್ಪೀಡ್ ವೈಶಿಷ್ಟ್ಯತೆಯ ಸ್ಕೂಟರ್ ಮಾದರಿಗಳೊಂದಿಗೆ ಅತ್ಯುತ್ತಮ ತಾಂತ್ರಿಕ ಅಂಶಗಳನ್ನು ಹೊಂದಿರುವ ಅತ್ಯಧಿಕ ಮೈಲೇಜ್ ಮಾದರಿಗಳನ್ನು ಸಹ ಪರಿಚಯಿಸುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ Raft Indus NX ಇವಿ ಸ್ಕೂಟರ್

ರಾಫ್ಟ್ ಹೊಸ ಸ್ಕೂಟರ್ ಅತ್ಯಧಿಕ ಶ್ರೇಣಿಯನ್ನು ನೀಡುವ ವಿಶ್ವದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಾಗಿರಲಿದೆ ಎಂದು ಕಂಪನಿಯು ಹೇಳಿಕೊಂಡಿದ್ದು, ಸದ್ಯ ಮಾರಾಟದಲ್ಲಿರುವ ಇಂಡಸ್ ಎನ್ಎಕ್ಸ್(Indus NX) ಮಾದರಿಯನ್ನೇ ಉತ್ಪನ್ನತೀಕರಿಸಿ ಬಿಡುಗಡೆ ಮಾಡುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ Raft Indus NX ಇವಿ ಸ್ಕೂಟರ್

ಹೊಸ ಇಂಡಸ್ ಇವಿ ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ರೇಂಜ್ ಹೊಂದಿದ್ದು, ಹೊಸ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ 1 ಲಕ್ಷ ಕಿ.ಮೀ ಇಲ್ಲವೇ ಮೂರು ವರ್ಷಗಳ ಅವಧಿಗೆ ಕಂಪನಿಯು ಬ್ಯಾಟರಿ ಮೇಲೆ ವಾರಂಟಿ ನೀಡುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ Raft Indus NX ಇವಿ ಸ್ಕೂಟರ್

ರಾಫ್ಟ್ ಮೋಟಾರ್ಸ್ ಕಂಪನಿಯು ಹೊಸ ಇಂಡಸ್ ಎನ್ಎಕ್ಸ್ ಇವಿ ಸ್ಕೂಟರ್ ಮಾದರಿಯನ್ನು ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಮೂರು ವೆರಿಯಂಟ್‌ಗಳಲ್ಲಿ ಬಿಡುಗಡೆ ಮಾಡುತ್ತಿದ್ದು, ಇದರಲ್ಲಿ ಎಂಟ್ರಿ ಲೆವೆಲ್, ಮಿಡ್ ರೇಂಜ್ ಮತ್ತು ಟಾಪ್ ವೆರಿಯೆಂಟ್ ಸೇರಿವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ Raft Indus NX ಇವಿ ಸ್ಕೂಟರ್

ಇಂಡಸ್ ಎನ್ಎಕ್ಸ್ ಇವಿ ಸ್ಕೂಟರಿನ ಎಂಟ್ರಿ ಲೆವಲ್ ಮಾದರಿಯು 48V 65Ah ತೆಗೆಯಬಹುದಾದ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಈ ಸ್ಕೂಟರ್‌ನಲ್ಲಿ ತೆಗೆದು ಹಾಕಬಹುದಾದ ಬ್ಯಾಟರಿಯನ್ನು ಮಾಲೀಕರು ತಮ್ಮ ಅನುಕೂಲಕ್ಕೆ ತತ್ಕಂತೆ ಚಾರ್ಜ್ ಮಾಡಬಹುದಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ Raft Indus NX ಇವಿ ಸ್ಕೂಟರ್

ಎಂಟ್ರಿ ಲೆವಲ್ ಇವಿ ಸ್ಕೂಟರ್ ಮಾದರಿಯು ಒಂದು ಬಾರಿ ಚಾರ್ಜ್ ಮಾಡಿದರೆ ಗರಿಷ್ಠ 156 ಕಿಮೀ ವ್ಯಾಪ್ತಿವರೆಗೆ ಮೈಲೇಜ್ ನೀಡಲಿದ್ದು, ಇದು ಮುಂಬೈನಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ. 1,18,500 ಬೆಲೆ ಪಡೆದುಕೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ Raft Indus NX ಇವಿ ಸ್ಕೂಟರ್

ಇನ್ನು ಇಂಡಸ್ ಎನ್ಎಕ್ಸ್ ಮಧ್ಯಮ ಶ್ರೇಣಿ ಆವೃತ್ತಿಯು 48V 135Ah ಸ್ಥಿರ ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದು ಒಂದು ಬಾರಿ ಚಾರ್ಜ್ ಮಾಡಿದರೆ ಗರಿಷ್ಠ 324 ಕಿಮೀ ಮೈಲೇಜ್ ಹಿಂದಿರುಗಿಸುತ್ತದೆ. ಈ ಸ್ಕೂಟರ್ ಬೆಲೆಯು ಮುಂಬೈ ಎಕ್ಸ್‌ಶೋರೂಂ ಪ್ರಕಾರ ರೂ. 1,91,976 ಬೆಲೆ ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ Raft Indus NX ಇವಿ ಸ್ಕೂಟರ್

ಕೊನೆಯದಾಗಿ ಇಂಡಸ್ ಎನ್ಎಕ್ಸ್ ಹೈ ಎಂಡ್ ಮಾದರಿಯು 9.6 kWh ಸಾಮರ್ಥ್ಯದ ಡ್ಯುಯಲ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದು ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 480 ಕಿ.ಮೀ ಮೈಲೇಜ್ ನೀಡಬಲ್ಲದು.

ಭಾರತದಲ್ಲಿ ಬಿಡುಗಡೆಯಾಗಲಿದೆ ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ Raft Indus NX ಇವಿ ಸ್ಕೂಟರ್

ಪ್ರತಿ ಚಾರ್ಜ್‌ಗೆ ಹೈ ಎಂಡ್ ಮಾದರಿಯು 480 ಕಿ.ಮೀ ಮೈಲೇಜ್ ನೀಡಲಿದ್ದು, ಇದು ಮುಂಬೈ ಎಕ್ಸ್‌ಶೋರೂಂ ದರದಂತೆ ರೂ. 2,57,431 ಬೆಲೆ ಹೊಂದಿದೆ. ಹೊಸ ಸ್ಕೂಟರ್ ಉತ್ಪನ್ನವನ್ನು ಕಂಪನಿಯು ಶೀಘ್ರದಲ್ಲೇ ಅಧಿಕೃತವಾಗಿ ಬಿಡುಗಡೆ ಘೋಷಣೆ ಮಾಡಲಿದ್ದು, ಹೊಸ ಸ್ಕೂಟರ್ ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ Raft Indus NX ಇವಿ ಸ್ಕೂಟರ್

ಸದ್ಯ ಲೋ ಸ್ಪೀಡ್ ಸ್ಕೂಟರ್ ಮತ್ತು ಕಫೆ ರೇಸರ್ ಶೈಲಿಯ ಬೈಕ್ ಮಾದರಿಗಳೊಂದಿಗೆ ಸೀಮಿತ ಮಾರುಕಟ್ಟೆ ಕಾರ್ಯಾಚರಣೆ ಹೊಂದಿರುವ ರಾಫ್ಟ್ ಮೋಟಾರ್ಸ್ ಕಂಪನಿಯು ಶೀಘ್ರದಲ್ಲೇ ದೇಶಾದ್ಯಂತ ಮಾರಾಟ ಮಳಿಗೆಗಳನ್ನು ತೆರೆಯಲಿದ್ದು, ಈಗಾಗಲೇ ಅಸ್ತಿತ್ವದಲ್ಲಿರುವ 550 ಮಾರಾಟ ಮಳಿಗೆಗಳನ್ನು ಮತ್ತಷ್ಟು ಹೊಸ ಬದಲಾವಣೆಯೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ Raft Indus NX ಇವಿ ಸ್ಕೂಟರ್

ಎಲೆಕ್ಟ್ರಿಕ್ ವಾಹನಗಳ ಹೊರತಾಗಿಯೂ ರಾಫ್ಟ್ ಮೋಟಾರ್ಸ್ ಕಂಪನಿಯು ಗ್ರಾಹಕರ ಬಳಕೆಯ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ತಯಾರಿಸುವಲ್ಲಿ ಮುಂಚೂಣಿಯಲ್ಲಿದ್ದು, ಕಂಪನಿಯು ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್ ಟಿವಿಗಳು ಮತ್ತು ಹೈ-ಫೈ ಸೌಂಡ್ ಸಿಸ್ಟಂ ಉತ್ಪಾದನೆಯೊಂದಿಗೆ ಭಾರೀ ಜನಪ್ರಿಯತೆ ಮತ್ತು ಬೇಡಿಕೆಯನ್ನು ಗಳಿಸಿದೆ.

Most Read Articles

Kannada
English summary
Raft motors to launch world s longest range ev scooter details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X