ರಿವೋಲ್ಟ್ ಎಲೆಕ್ಟ್ರಿಕ್ ಬೈಕ್‌ಗಳ ಖರೀದಿ ಮೇಲೆ ರೂ.68 ಸಾವಿರ ಸಬ್ಸಡಿ

ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರವು ಫೇಮ್ 2 ಯೋಜನೆಯ ತಿದ್ದುಪಡಿಯ ಮೂಲಕ ಇವಿ ದ್ವಿಚಕ್ರ ವಾಹನಗಳಿಗೆ ಭರ್ಜರಿ ಸಬ್ಸಡಿ ನೀಡುತ್ತಿದ್ದು, ಕೇಂದ್ರ ಸರ್ಕಾರದ ಹೊಸ ಸಬ್ಸಡಿ ಘೋಷಣೆ ಬೆನ್ನಲ್ಲೇ ಗುಜರಾತ್ ಸರ್ಕಾರವು ಸಹ ಇವಿ ವಾಹನ ಖರೀದಿ ಉತ್ತೇಜಿಸಲು ರಾಜ್ಯ ಮಟ್ಟದಲ್ಲಿ ತನ್ನದೇ ಆದ ಹೊಸ ಇವಿ ವಾಹನ ನೀತಿ ಜಾರಿಗೆ ತಂದಿದೆ.

ರಿವೋಲ್ಟ್ ಎಲೆಕ್ಟ್ರಿಕ್ ಬೈಕ್‌ಗಳ ಖರೀದಿ ಮೇಲೆ ರೂ.68 ಸಾವಿರ ಸಬ್ಸಡಿ

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರದ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಸಹ ತಮ್ಮದೇ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿರುವ ಇವಿ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ಲಭ್ಯವಾಗಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ರಿವೋಲ್ಟ್ ಎಲೆಕ್ಟ್ರಿಕ್ ಬೈಕ್‌ಗಳ ಖರೀದಿ ಮೇಲೆ ರೂ.68 ಸಾವಿರ ಸಬ್ಸಡಿ

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದೆ.

ರಿವೋಲ್ಟ್ ಎಲೆಕ್ಟ್ರಿಕ್ ಬೈಕ್‌ಗಳ ಖರೀದಿ ಮೇಲೆ ರೂ.68 ಸಾವಿರ ಸಬ್ಸಡಿ

ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ವಿವಿಧ ರಾಜ್ಯದ ಸರ್ಕಾರಗಳು ಸಹ ಕೆಲವು ವಿನಾಯ್ತಿಗಳನ್ನು ನೀಡುತ್ತಿದ್ದು, ಗುಜುರಾತ್ ಸರ್ಕಾರವು ಸಹ ಹೊಸ ಇವಿ ನೀತಿ ಘೋಷಣೆಯೊಂದಿಗೆ ಇವಿ ವಾಹನಗಳನ್ನು ಖರೀದಿಸುವ ಗ್ರಾಹಕರಿಗಾಗಿ ರೂ. 870 ಕೋಟಿ ಸಬ್ಸಡಿ ನೀಡಲು ನಿರ್ಧರಿಸಿದೆ.

ರಿವೋಲ್ಟ್ ಎಲೆಕ್ಟ್ರಿಕ್ ಬೈಕ್‌ಗಳ ಖರೀದಿ ಮೇಲೆ ರೂ.68 ಸಾವಿರ ಸಬ್ಸಡಿ

ಹೊಸ ನೀತಿಯಡಿ ಇವಿ ಚಾರ್ಜಿಂಗ್ ಮೂಲಸೌಕರ್ಯ ಹೆಚ್ಚಳಕ್ಕೆ ಸಹಕಾರಿಯಾಗುವುದಲ್ಲದೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ರೂ.20,000ವರೆಗೆ ಮತ್ತು ಎಲೆಕ್ಟ್ರಿಕ್ ಕಾರುಗಳಿಗೆ ರೂ.1.50 ಲಕ್ಷಗಳವರೆಗೆ ಸಬ್ಸಡಿ ಲಭ್ಯವಾಗಲಿದ್ದು, ಇವಿ ವಾಹನ ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಗುಜರಾತ್ ಸರ್ಕಾರವು ನೀಡುತ್ತಿರುವುದು ಸಬ್ಸಡಿ ಜೊತೆಗೆ ಕೇಂದ್ರ ಸರ್ಕಾರದ ಸಬ್ಸಡಿ ಸಹ ಅನ್ವಯವಾಗಲಿದೆ.

ರಿವೋಲ್ಟ್ ಎಲೆಕ್ಟ್ರಿಕ್ ಬೈಕ್‌ಗಳ ಖರೀದಿ ಮೇಲೆ ರೂ.68 ಸಾವಿರ ಸಬ್ಸಡಿ

ಗುಜರಾತ್ ಸರ್ಕಾರ ಇವಿ ಸಬ್ಸಡಿ ನಂತರ ಇದೀಗ ರಿವೋಲ್ಟ್ ಎಲೆಕ್ಟ್ರಿಕ್ ಬೈಕ್‌ಗಳ ಬೆಲೆಯಲ್ಲಿ ಶೇ. 25ರಿಂದ ಶೇ.40 ರಷ್ಟು ಕಡಿತವಾಗಿದ್ದು, ಕೇಂದ್ರ ಸರ್ಕಾರದ ಸಬ್ಸಡಿ ಯೋಜನೆ ಅಡಿಯಲ್ಲಿ ರೂ. 28 ಸಾವಿರ ಬೆಲೆ ಕಡಿತ ಮಾಡಿದ್ದ ರಿವೋಲ್ಟ್ ಇದೀಗ ಗುಜರಾತ್ ಸರ್ಕಾರದ ಸಬ್ಸಡಿ ಯೋಜನೆ ಅಡಿ ಮತ್ತೆ ರೂ. 20 ಸಾವಿರ ತನಕ ಬೆಲೆ ಕಡಿತ ಮಾಡಿದೆ.

ರಿವೋಲ್ಟ್ ಎಲೆಕ್ಟ್ರಿಕ್ ಬೈಕ್‌ಗಳ ಖರೀದಿ ಮೇಲೆ ರೂ.68 ಸಾವಿರ ಸಬ್ಸಡಿ

ಗುಜರಾತ್ ಸರ್ಕಾರದ ಸಬ್ಸಡಿ ಯೋಜನೆಯು ಆ ರಾಜ್ಯದಲ್ಲಿ ಖರೀದಿಯಾಗುವ ಇವಿ ವಾಹನಗಳಿಗೆ ಮಾತ್ರ ಅನ್ವಯವಾಗಲಿದ್ದು, ಕೇಂದ್ರ ಸರ್ಕಾರದ ಸಬ್ಸಡಿ ಹೆಚ್ಚಳದಿಂದಾಗಿ ದೇಶಾದ್ಯಂತ ಎಲ್ಲಾ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೂ ಲಭ್ಯವಾಗಲಿದೆ.

ರಿವೋಲ್ಟ್ ಎಲೆಕ್ಟ್ರಿಕ್ ಬೈಕ್‌ಗಳ ಖರೀದಿ ಮೇಲೆ ರೂ.68 ಸಾವಿರ ಸಬ್ಸಡಿ

ಕೇಂದ್ರ ಹೊಸ ಸಬ್ಸಡಿ ಅನುಮೋದನೆಗೆ ಮೊದಲು ಆರ್‌ವಿ400 ಎಲೆಕ್ಟ್ರಿಕ್ ಬೈಕ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 1,18,999 ಬೆಲೆ ಹೊಂದಿತ್ತು. ಇದೀಗ ಹೊಸ ಸಬ್ಸಡಿ ದರ ಸೇರಿದ ನಂತರ ಗ್ರಾಹಕರಿಗೆ ಹೊಸ ಬೈಕ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 90,799 ಕ್ಕೆ ಇಳಿಕೆಯಾಗಿದ್ದು, ಗುಜುರಾತ್‌ನಲ್ಲಿ ಇದೇ ಬೈಕ್ ಬೆಲೆಯು ಇನ್ನು ರೂ. 20 ಸಾವಿರದಷ್ಟು ಕಡಿತವಾಗಿದೆ.

ರಿವೋಲ್ಟ್ ಎಲೆಕ್ಟ್ರಿಕ್ ಬೈಕ್‌ಗಳ ಖರೀದಿ ಮೇಲೆ ರೂ.68 ಸಾವಿರ ಸಬ್ಸಡಿ

ಹೊಸ ಸಬ್ಸಡಿ ಮಾನ್ಯತೆಯ ಮಾನದಂಡಗಳಿಗೆ ಅನುಗುಣವಾಗಿ ರಿವೋಲ್ಟ್ ನಿರ್ಮಾಣದ ಎರಡು ಬೈಕ್ ಮಾದರಿಗಳು ಸಬ್ಸಡಿಗೆ ಅರ್ಹವಾಗಿದ್ದು, ಎರಡು ಇವಿ ಬೈಕ್‌ಗಳ ಮೇಲೆ ಸದ್ಯ ಗುಜರಾತ್ ಸರ್ಕಾರದ ಇವಿ ನೀತಿ ಅತಿ ರೂ. 68 ಸಾವಿರದಷ್ಟು ಬೆಲೆ ಇಳಿಕೆಯಾಗಿದೆ.

ರಿವೋಲ್ಟ್ ಎಲೆಕ್ಟ್ರಿಕ್ ಬೈಕ್‌ಗಳ ಖರೀದಿ ಮೇಲೆ ರೂ.68 ಸಾವಿರ ಸಬ್ಸಡಿ

ಹೆಚ್ಚಿನ ಮಟ್ಟದ ಬ್ಯಾಟರಿ ಪ್ಯಾಕ್ ಹೊಂದಿರುವ ಆರ್‌ವಿ400 ಬೈಕ್ ಬೆಲೆಯಲ್ಲಿ ಕೇಂದ್ರ ಮತ್ತು ಗುಜರಾತ್ ಸರ್ಕಾರದ ಸಬ್ಸಡಿಯಲ್ಲಿ ಒಟ್ಟು ರೂ. 48 ಸಾವಿರ ಬೆಲೆ ಇಳಿಕೆಯಾಗಿದ್ದರೆ ಆರ್‌ವಿ300 ಬೆಲೆಯಲ್ಲಿ ರೂ. 20 ಸಾವಿರದಷ್ಟು ಇಳಿಕೆಯಾಗಿದೆ.

ರಿವೋಲ್ಟ್ ಎಲೆಕ್ಟ್ರಿಕ್ ಬೈಕ್‌ಗಳ ಖರೀದಿ ಮೇಲೆ ರೂ.68 ಸಾವಿರ ಸಬ್ಸಡಿ

ರಿವೋಲ್ಟ್ ಆರ್‌ವಿ300 ಬೈಕಿನಲ್ಲಿ 2.7kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 1.5kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಗಂಟೆಗೆ 65 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 180 ಕಿ.ಮಿ ಮೈಲೇಜ್ ಹಿಂದಿರುಗಿಸುತ್ತದೆ.

ರಿವೋಲ್ಟ್ ಎಲೆಕ್ಟ್ರಿಕ್ ಬೈಕ್‌ಗಳ ಖರೀದಿ ಮೇಲೆ ರೂ.68 ಸಾವಿರ ಸಬ್ಸಡಿ

ಹಾಗೆಯೇ ಆರ್‌ವಿ400 ಬೈಕಿನಲ್ಲಿ 3.24kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 3kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಗಂಟೆಗೆ 85 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 156ಕಿ.ಮಿ ಮೈಲೇಜ್ ನೀಡುತ್ತದೆ.

Most Read Articles

Kannada
English summary
Revolt Electric Bikes Gets Subsidy Upto RS 68,000. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X