Yamaha RX 100 ಬೈಕಿನ ಪ್ರತಿರೂಪದಂತಿದೆ ಈ ಹೊಸ ಎಲೆಕ್ಟ್ರಿಕ್ ಬೈಕ್

ಸ್ವೀಡನ್‌ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಆರ್‌ಜಿಎನ್‌ಟಿ ಯುರೋಪಿನಲ್ಲಿ ನವೀಕರಿಸಿದ ರೆಟ್ರೊ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಬೈಕಿನ ಹಳೆಯ ಮಾದರಿಯನ್ನು RGNT No 1 Classic ಎಂದು ಕರೆಯಲಾಗುತ್ತಿತ್ತು, ಈ ರೆಟ್ರೊ ಶೈಲಿಯ ಆಧುನಿಕ ಕ್ಲಾಸಿಕ್ ಬೈಕ್ ಹೆಸರನ್ನು 1.5 ಎಂದು ಅಪ್‌ಗ್ರೇಡ್ ಮಾಡಲಾಗಿದೆ.

Yamaha RX 100 ಬೈಕಿನ ಪ್ರತಿರೂಪದಂತಿದೆ ಈ ಹೊಸ ಎಲೆಕ್ಟ್ರಿಕ್ ಬೈಕ್

ಈ ಬೈಕಿನ ಬೆಲೆ 12,495 ಯುರೋಗಳು. ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ರೂ. 10.79 ಲಕ್ಷಗಳಾಗಿದೆ. ಬ್ಯಾಟರಿಯಿಂದ ಚಾಲಿತವಾದ ಬೈಕ್ ಆದರೂ ಈ ಬೈಕ್ ಹೆಚ್ಚು ಬೆಲೆಯನ್ನು ಹೊಂದಿದೆ. ಈ ಬೈಕ್ ಅನ್ನು ಸಂಪೂರ್ಣವಾಗಿ ಸ್ವೀಡನ್‌ನ ಕುಂಗ್‌ಸ್‌ಬಾಕಾದಲ್ಲಿರುವ ಉತ್ಪಾದನಾ ಘಟಕದಲ್ಲಿ ನಿರ್ಮಿಸಲಾಗಿದೆ. 2020 ರಲ್ಲಿ ಬಿಡುಗಡೆಯಾದ ಬೈಕ್ ಈಗಾಗಲೇ ಯುರೋಪ್ ಹಾಗೂ ಯುಎಸ್ಎ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

Yamaha RX 100 ಬೈಕಿನ ಪ್ರತಿರೂಪದಂತಿದೆ ಈ ಹೊಸ ಎಲೆಕ್ಟ್ರಿಕ್ ಬೈಕ್

No 1 Classic ಬೈಕ್ ರೆಟ್ರೊ ಶೈಲಿಯ ಬೈಕಿನಂತ ಕಾಣುತ್ತದೆಯಾದರೂ ಅತ್ಯಾಧುನಿಕ ಫೀಚರ್ ಹಾಗೂ ಮಾಲಿನ್ಯ ರಹಿತ ಪವರ್‌ಟ್ರೇನ್‌ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಮಾರುಕಟ್ಟೆಯಲ್ಲಿರುವ ಬೈಕಿಗಿಂತ ಹೆಚ್ಚು ಮೆಕಾನಿಕಲ್ ಅಂಶಗಳನ್ನು ಹೊಂದಿದೆ. ಆದರೂ ತನ್ನ ಸಿಗ್ನೆಚರ್ ರೆಟ್ರೊ ಸ್ಟೈಲಿಂಗ್ ಅನ್ನು ಉಳಿಸಿಕೊಂಡಿದೆ. ಈ ಬೈಕ್ ರೌಂಡ್ ಹೆಡ್ ಲ್ಯಾಂಪ್, ಟಿಯರ್ ಡ್ರಾಪ್ ಶೇಪಿನ ಫ್ಯೂಯಲ್ ಟ್ಯಾಂಕ್, ಸಿಂಗಲ್ ಪೀಸ್ ಬೆಂಚ್ ಸೀಟ್ ಹಾಗೂ ಕ್ಲಾಸಿಕ್ ಸ್ಪೋಕ್ ವ್ಹೀಲ್ ಗಳನ್ನು ಹೊಂದಿದೆ.

Yamaha RX 100 ಬೈಕಿನ ಪ್ರತಿರೂಪದಂತಿದೆ ಈ ಹೊಸ ಎಲೆಕ್ಟ್ರಿಕ್ ಬೈಕ್

ಈ ಬೈಕ್ ಅನ್ನು ನೋಡಿದ ತಕ್ಷಣ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದ್ದ Yamaha RX 100 ಬೈಕ್ ನೆನಪಿಗೆ ಬರುತ್ತದೆ. ಆದರೆ ಈ ಬೈಕ್ ಕೆಲವು ಆಧುನಿಕ ಫೀಚರ್ ಗಳನ್ನು ಹೊಂದಿದೆ. ಈ ಬೈಕಿನಲ್ಲಿರುವ 7 ಇಂಚಿನ ಟಚ್‌ಸ್ಕ್ರೀನ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಜಿಪಿಎಸ್ ಆಧಾರಿತ ನ್ಯಾವಿಗೇಷನ್ ಮೂಲಕ ಆಕ್ಟಿವೇಟ್ ಮಾಡಲಾಗಿದೆ. ಈ ಬೈಕ್ ಹೊಸ ಬೈಕ್ ಕಂಟ್ರೋಲ್ ಯೂನಿಟ್ (ಬಿಸಿಯು) ಅನ್ನು ಹೊಂದಿದೆ.

Yamaha RX 100 ಬೈಕಿನ ಪ್ರತಿರೂಪದಂತಿದೆ ಈ ಹೊಸ ಎಲೆಕ್ಟ್ರಿಕ್ ಬೈಕ್

ಈ ಯುನಿಟ್ ಗಾಳಿಯ (ಒಟಿಎ) ನವೀಕರಣಗಳನ್ನು ಸಕ್ರಿಯಗೊಳಿಸುತ್ತದೆ. ಜೊತೆಗೆ ಸಂಪೂರ್ಣ ಎಲ್ಇಡಿ ಪ್ರಕಾಶವನ್ನು ಸಹ ಪಡೆಯುತ್ತದೆ. ಈ ಬೈಕ್ ಕೆಲವು ಪ್ರಮುಖ ಅಪ್ ಡೇಟ್ ಗಳನ್ನು ಪಡೆಯುತ್ತದೆ. ಈ ಬೈಕಿನಲ್ಲಿ ಅಳವಡಿಸಿರುವ ಹೊಸ 9 ಕಿ.ವ್ಯಾ ಎಲೆಕ್ಟ್ರಿಕ್ ಮೋಟಾರ್ 11 ಕಿ.ವ್ಯಾ ಅಂದರೆ 14.7 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

Yamaha RX 100 ಬೈಕಿನ ಪ್ರತಿರೂಪದಂತಿದೆ ಈ ಹೊಸ ಎಲೆಕ್ಟ್ರಿಕ್ ಬೈಕ್

ಈ ಬೈಕಿನಲ್ಲಿರುವ ಹೊಸ ಮೋಟರ್ 30% ನಷ್ಟು ಶಾಖವನ್ನು ಕಡಿಮೆ ಮಾಡಲು ಹೈ ಎಂಡ್ ತಂತ್ರಜ್ಞಾನವನ್ನು ಬಳಸುತ್ತದೆ. ಇದರಿಂದ ಮೋಟರ್ ಅನ್ನು ಪರಿಣಾಮಕಾರಿಯಾಗಿ ಬಳಸಬಹುದು. ಜೊತೆಗೆ ಬ್ಯಾಟರಿ ಪವರ್ ಕಡಿಮೆ ಪ್ರಮಾಣದಲ್ಲಿ ವ್ಯರ್ಥವಾಗುತ್ತದೆ. ಈ ಎಲೆಕ್ಟ್ರಿಕ್ ಮೋಟರ್ 7.7 ಕಿ.ವ್ಯಾ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್‌ನಿಂದ ಪವರ್ ಪಡೆಯುತ್ತದೆ.

Yamaha RX 100 ಬೈಕಿನ ಪ್ರತಿರೂಪದಂತಿದೆ ಈ ಹೊಸ ಎಲೆಕ್ಟ್ರಿಕ್ ಬೈಕ್

ಈ ಬ್ಯಾಟರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ ಹೆದ್ದಾರಿಗಳಲ್ಲಿ 110 ಕಿ.ಮೀ ಹಾಗೂ ಸಿಟಿಯೊಳಗೆ 160 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಎಲೆಕ್ಟ್ರಿಕ್ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 125 ಕಿ.ಮೀಗಳಾಗಿದೆ. ಕೇವಲ ಎಲೆಕ್ಟ್ರಿಕ್ ಬೈಕಿನಲ್ಲಿರುವ ಪವರ್ ಟ್ರೇನ್ ಮಾತ್ರವಲ್ಲದೇ ಅದರ ರೈಡಿಂಗ್ ಡೈನಾಮಿಕ್ಸ್ ಅನ್ನು ಸಹ ಕೂಡ ಅಪ್ ಡೇಟ್ ಮಾಡಲಾಗಿದೆ.

Yamaha RX 100 ಬೈಕಿನ ಪ್ರತಿರೂಪದಂತಿದೆ ಈ ಹೊಸ ಎಲೆಕ್ಟ್ರಿಕ್ ಬೈಕ್

ಈ ಬೈಕಿನ ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಅಪ್ ಡೇಟ್ ಮಾಡಲಾಗಿದೆ. ಬ್ರೇಕಿಂಗ್ ಗಳಿಗಾಗಿ ಗಾಲ್ಫರ್‌ ರೋಟರ್‌ ಹಾಗೂ ಜೆ ಜುವಾನ್‌ ಕಂಪನಿಗಳ ಕ್ಯಾಲಿಪರ್‌ಗಳನ್ನು ನೀಡಲಾಗಿದೆ. ಹೆಚ್ಚುವರಿ ಸುರಕ್ಷತೆಗಾಗಿ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ (ಸಿಬಿಎಸ್) ನೀಡಲಾಗಿದೆ. RGNT ಕಂಪನಿಯು ಸ್ವಲ್ಪ ವಿಭಿನ್ನವಾದ ಶೈಲಿಯೊಂದಿಗೆ ಈ ಬೈಕಿನ ಸ್ಕ್ರಾಂಬ್ಲರ್ ಆವೃತ್ತಿಯನ್ನು ಸಹ ನೀಡುತ್ತದೆ. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ತೀರಾ ಕಡಿಮೆ.

Yamaha RX 100 ಬೈಕಿನ ಪ್ರತಿರೂಪದಂತಿದೆ ಈ ಹೊಸ ಎಲೆಕ್ಟ್ರಿಕ್ ಬೈಕ್

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಗಗನಕ್ಕೇರಿವೆ. ಇದರಿಂದ ಪಾರಾಗಲು ಜನರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ವಾಹನ ತಯಾರಕ ಕಂಪನಿಗಳು ಪೈಪೋಟಿಗೆ ಬಿದ್ದಂತೆ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತಿವೆ.

Yamaha RX 100 ಬೈಕಿನ ಪ್ರತಿರೂಪದಂತಿದೆ ಈ ಹೊಸ ಎಲೆಕ್ಟ್ರಿಕ್ ಬೈಕ್

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಮೂಲಭೂತ ಸೌಕರ್ಯಗಳ ಕೊರತೆಯಿರುವ ಹಿನ್ನೆಲೆಯಲ್ಲಿ ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಇದೇ ವೇಳೆ ಎಲೆಕ್ಟ್ರಿಕ್ ವಾಹನಗಳ ಬಳಕೆ ಹಿಂದೆಂದಿಗಿಂತಲೂ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಹೊಸ ಚಾರ್ಜಿಂಗ್ ಕೇಂದ್ರಗಳ ಆಗಮನದಿಂದ ಈ ಪ್ರಮಾಣವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

Yamaha RX 100 ಬೈಕಿನ ಪ್ರತಿರೂಪದಂತಿದೆ ಈ ಹೊಸ ಎಲೆಕ್ಟ್ರಿಕ್ ಬೈಕ್

ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಹಾಗೂ ಖಾಸಗಿ ಕಂಪನಿಗಳು ನಿರತವಾಗಿವೆ. ಇದರಿಂದ ಖಂಡಿತವಾಗಿಯೂ ಎಲೆಕ್ಟ್ರಿಕ್ ವಾಹನಗಳ ಬಳಕೆ ಹಲವು ಪಟ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ. ಭಾರತದಲ್ಲಿ ಸ್ಟಾರ್ಟ್ ಅಪ್ ಕಂಪನಿಗಳು ಮಾತ್ರವಲ್ಲದೇ ಹಲವು ಖ್ಯಾತ ನಾಮ ಕಂಪನಿಗಳು ಸಹ ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ.

Most Read Articles

Kannada
English summary
Rgnt launches updated classic electric motorcycle in europe details
Story first published: Friday, October 8, 2021, 18:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X