ಕೇವಲ 2 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ Royal Enfield ಟ್ವಿನ್ ಬೈಕುಗಳು

ರಾಯಲ್ ಎನ್‌ಫೀಲ್ಡ್ (Royal Enfield) ಕಂಪನಿಯ ವಾಹನಗಳಿಗೆ ಭಾರತದಲ್ಲಿ ಯಾವಾಗಲೂ ವಿಶಿಷ್ಟವಾದ ಸ್ಥಾನವಿದೆ. ಇದನ್ನು ದೃಢಪಡಿಸುವ ಘಟನೆಯೊಂದು ವರದಿಯಾಗಿದೆ. ಕಂಪನಿಯು ಇತ್ತೀಚೆಗೆ ಕಾಂಟಿನೆಂಟಲ್ GT 650 ಹಾಗೂ ಇಂಟರ್‌ಸೆಪ್ಟರ್ 650 ಟ್ವಿನ್ ಬೈಕ್ ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಕಂಪನಿಯು ಇತ್ತೀಚೆಗೆ ಈ ಬೈಕುಗಳಿಗೆ ಬುಕ್ಕಿಂಗ್ ಸಹ ಆರಂಭಿಸಿದೆ.

ಕೇವಲ 2 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ Royal Enfield ಟ್ವಿನ್ ಬೈಕುಗಳು

ಬುಕ್ಕಿಂಗ್ ಆರಂಭವಾದ 120 ಸೆಕೆಂಡುಗಳಲ್ಲಿ ಎಲ್ಲಾ ಯುನಿಟ್‌ಗಳು ಮಾರಾಟವಾಗಿವೆ. ಕಂಪನಿಯು ದೇಶಿಯ ಮಾರುಕಟ್ಟೆಗಾಗಿ ಕೇವಲ 120 ಯುನಿಟ್‌ಗಳನ್ನು ಮಾತ್ರ ಮೀಸಲಿಟ್ಟಿತ್ತು. ಇವೆಲ್ಲವೂ 120 ಸೆಕೆಂಡುಗಳಲ್ಲಿ ಮಾರಾಟವಾಗಿವೆ. ಅಂದರೆ ಕೇವಲ ಎರಡು ನಿಮಿಷಗಳಲ್ಲಿ ಎಲ್ಲಾ ಯುನಿಟ್‌ಗಳು ಮಾರಾಟವಾಗಿವೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ 120 ನೇ ವಾರ್ಷಿಕೋತ್ಸವದ ಸಂಭ್ರಮಕ್ಕಾಗಿ ಈ ವಿಶೇಷ ಆವೃತ್ತಿಗಳನ್ನು ಬಿಡುಗಡೆಗೊಳಿಸಿದೆ.

ಕೇವಲ 2 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ Royal Enfield ಟ್ವಿನ್ ಬೈಕುಗಳು

ಈ ಬೈಕುಗಳನ್ನು ವರ್ಲ್ಡ್ ಆಟೋಮೋಟಿವ್ ಸ್ಟೇಡಿಯಂ EICMA 2021ನಲ್ಲಿ ಅನಾವರಣಗೊಳಿಸಲಾಗಿತ್ತು. 120 ಯುನಿಟ್‌ಗಳಲ್ಲಿ, 60 ಯುನಿಟ್‌ಗಳು ಕಾಂಟಿನೆಂಟಲ್ GT 650 ಮಾದರಿಯಾಗಿದ್ದರೆ, 60 ಯುನಿಟ್‌ಗಳು ಇಂಟರ್‌ಸೆಪ್ಟರ್ 650 ಮಾದರಿಯಾಗಿವೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಡಿಸೆಂಬರ್ 6 ರಂದು ಸಂಜೆ 7 ಗಂಟೆಗೆ ಈ ಬೈಕುಗಳ ಮಾರಾಟವನ್ನು ಆರಂಭಿಸಿತು.

ಕೇವಲ 2 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ Royal Enfield ಟ್ವಿನ್ ಬೈಕುಗಳು

ಬಿಡುಗಡೆಯಾದ 120 ಸೆಕೆಂಡುಗಳಲ್ಲಿ ಎಲ್ಲಾ ಯುನಿಟ್‌ಗಳು ಮಾರಾಟವಾಗಿವೆ. ಈ ಬೈಕ್ ಗಾಗಿ ಭಾರತೀಯರು ಕಾತುರದಿಂದ ಕಾದು ಬುಕ್ಕಿಂಗ್ ಮಾಡಿರುವುದು ಬೆಳಕಿಗೆ ಬಂದಿದೆ. ಇಷ್ಟೊಂದು ವೇಗದಲ್ಲಿ ವಾಹನ ಮಾರಾಟವಾಗುತ್ತಿರುವುದು ವಿಶ್ವದಲ್ಲೇ ಇದೇ ಮೊದಲು ಎನ್ನಬಹುದು. ವಿಶೇಷ ಟ್ವಿನ್ ಬೈಕ್ ಗಳು ದೇಶದಲ್ಲಿ ಬಿಸಿ ದೋಸೆಯಂತೆ ಮಾರಾಟವಾಗುತ್ತಿವೆ. ಈ ಮೂಲಕ ರಾಯಲ್ ಎನ್‌ಫೀಲ್ಡ್ ಕಂಪನಿಯು ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿದೆ.

ಕೇವಲ 2 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ Royal Enfield ಟ್ವಿನ್ ಬೈಕುಗಳು

ಈ ವಿಶೇಷ ಆವೃತ್ತಿಯ ಬೈಕುಗಳಿಗೆ ಕಂಪನಿಯು ಮೂರು ವರ್ಷಗಳ ವಾರಂಟಿಯನ್ನು ನೀಡುತ್ತದೆ. ಹೆಚ್ಚುವರಿಯಾಗಿ ಕಂಪನಿಯು ನಾಲ್ಕು ವರ್ಷ ಹಾಗೂ ಐದು ವರ್ಷಗಳ ವಿಸ್ತೃತ ವಾರಂಟಿಯನ್ನು ನೀಡುತ್ತದೆ. ಸದ್ಯಕ್ಕೆ ಈ ಬೈಕ್‌ಗಳು ಏಷ್ಯಾ, ಅಮೆರಿಕಾ, ಯುರೋಪಿಯನ್ ದೇಶಗಳು ಹಾಗೂ ಭಾರತದಲ್ಲಿ ಮಾರಾಟಕ್ಕೆ ಸಿದ್ಧವಾಗಿವೆ. ಈ ಬೈಕ್ ಅನ್ನು ಮಾರಾಟ ಮಾಡಲು ಕಂಪನಿಯು EICMA ವರ್ಲ್ಡ್ ಮೋಟಾರ್ ಶೋ ವೇದಿಕೆಯನ್ನು ಬಳಸಿಕೊಂಡಿದೆ.

ಕೇವಲ 2 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ Royal Enfield ಟ್ವಿನ್ ಬೈಕುಗಳು

ವಿಶೇಷ ಆವೃತ್ತಿಯ 650 ಟ್ವಿನ್ ಬೈಕುಗಳ ಒಟ್ಟು 480 ಯುನಿಟ್‌ಗಳನ್ನು ಭಾರತದ ರೀತಿಯಲ್ಲಿಯೇ ಪ್ರತಿ ಮಾರುಕಟ್ಟೆಗೆ ಒಟ್ಟು 120 ಯುನಿಟ್‌ಗಳನ್ನು ರಚಿಸಲಾಗಿದೆ. ಈ ವಿಶೇಷ ಆವೃತ್ತಿಯ ಬೈಕುಗಳು ನವೀನ ಬಾಹ್ಯ ನೋಟವನ್ನು ಹೊಂದಿವೆ. ಈ ಬೈಕುಗಳನ್ನು ವಿಶೇಷ ಬಣ್ಣ, ಸ್ಟಿಕ್ಕರ್‌, ಲೋಗೊ ಹಾಗೂ ಗ್ರಾಫಿಕ್ಸ್‌ನಿಂದ ಅಲಂಕರಿಸಲಾಗಿದೆ. ಅದರಲ್ಲೂ 120 ವರ್ಷಗಳನ್ನು ಗುರುತಿಸಲು ಬೈಕ್ ಸುತ್ತ ವಿಶೇಷ ಗ್ರಾಫಿಕ್ಸ್ ನೀಡಲಾಗಿದೆ.

ಕೇವಲ 2 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ Royal Enfield ಟ್ವಿನ್ ಬೈಕುಗಳು

ಈ ರೀತಿಯ ಗಣನೀಯ ವಿಶೇಷತೆಗಳನ್ನು ಹೊಂದಿರುವ ಟ್ವಿನ್ 650 ಬೈಕ್‌ಗಳು ಮಾರಾಟಕ್ಕೆ ಬಂದಿವೆ. ಈ ಬೈಕುಗಳಲ್ಲಿ ಕಪ್ಪು ಹಾಗೂ ಬಂಗಾರದ ಬಣ್ಣವನ್ನು ವಿಶೇಷ ಬಣ್ಣಗಳಾಗಿ ಬಳಸಲಾಗಿದೆ. ಈ ಹೊಸ ಬಣ್ಣದಿಂದ ಈಗಾಗಲೇ ಆಕರ್ಷಕವಾಗಿದ್ದ ಬೈಕ್‌ಗಳು ಈಗ ಹಲವು ಪಟ್ಟು ಹೆಚ್ಚು ಆಕರ್ಷಕವಾಗಿ ಕಾಣುತ್ತಿವೆ. ಸೈಲೆನ್ಸರ್, ಪೆಟ್ರೋಲ್ ಟ್ಯಾಂಕ್, ವ್ಹೀಲ್, ಬಾಡಿ ಪ್ಯಾನೆಲ್ ಗಳಂತಹ ಅನೇಕ ಭಾಗಗಳನ್ನು ಕಪ್ಪು ಬಣ್ಣದಲ್ಲಿ ಅಲಂಕರಿಸಲಾಗಿದೆ.

ಕೇವಲ 2 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ Royal Enfield ಟ್ವಿನ್ ಬೈಕುಗಳು

ರಾಯಲ್ ಎನ್‌ಫೀಲ್ಡ್ 120 ನೇ ವಾರ್ಷಿಕೋತ್ಸವದ ಅಂಗವಾಗಿ 12 ವಿಶೇಷ ಆವೃತ್ತಿಯ ಹೆಲ್ಮೆಟ್‌ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂಬುದು ಗಮನಾರ್ಹ. ಈ ಹೆಲ್ಮೆಟ್ ಗಳನ್ನು ಕೈಯಿಂದ ರಚಿಸಲಾಗಿದೆ. ಕಂಪನಿಯು ಈ ಹೆಲ್ಮೆಟ್ ಗಳನ್ನು ಬಿಡುಗಡೆಗೊಳಿಸಿದ ಬೆನ್ನಲ್ಲೇ ವಿಶೇಷ ಆವೃತ್ತಿಯ ಬೈಕ್‌ಗಳನ್ನು ಸಹ ಬಿಡುಗಡೆಗೊಳಿಸಿದೆ.

ಕೇವಲ 2 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ Royal Enfield ಟ್ವಿನ್ ಬೈಕುಗಳು

ರಾಯಲ್ ಎನ್‌ಫೀಲ್ಡ್ ಭಾರತದಲ್ಲಿನ ಅತಿದೊಡ್ಡ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರಾಂಡ್ ಗಳಲ್ಲಿ ಒಂದಾಗಿದೆ. ಈ ರಾಯಲ್ ಎನ್‌ಫೀಲ್ಡ್ ಕಂಪನಿಯು 2021ರ ನವೆಂಬರ್ ತಿಂಗಳಿನ ದ್ವಿಚಕ್ರ ವಾಹನಗಳ ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 44,830 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಕೇವಲ 2 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ Royal Enfield ಟ್ವಿನ್ ಬೈಕುಗಳು

ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 59,084 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.24 ರಷ್ಟು ಕುಸಿತವನ್ನು ಕಂಡಿದೆ. ಇನ್ನು ಕಳೆದ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 6,824 ಯುನಿಟ್‌ಗಳನ್ನು ರಫ್ತು ಮಾಡಿದೆ. ಇನ್ನು ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ 4,698 ಯುನಿಟ್‌ಗಳನ್ನು ರಫ್ಟು ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ರಫ್ತಿಗೆ ಹೋಲಿಸಿದರೆ ಶೇ.45 ರಷ್ಟು ಹೆಚ್ಚಳವಾಗಿದೆ.

ಕೇವಲ 2 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ Royal Enfield ಟ್ವಿನ್ ಬೈಕುಗಳು

ಒಟ್ಟಾರೆಯಾಗಿ, ರಾಯಲ್ ಎನ್‌ಫೀಲ್ಡ್‌ ಕಂಪನಿಯು ಈ ವರ್ಷದ ನವೆಂಬರ್‌ನಲ್ಲಿ ಒಟ್ಟು 51,654 ಯುನಿಟ್‌ಗಳನ್ನು ಮಾರಾಟ ಮಾಡುವುದರೊಂದಿಗೆ ಶೇಕಡಾ 19 ರಷ್ಟು ಕುಸಿತವನ್ನು ಕಂಡಿದೆ, ಕಳೆದ ವರ್ಷದ ಇದೇ ತಿಂಗಳಿಗೆ 63,782 ಯುನಿಟ್‌ಗಳು ಮಾರಾಟವಾಗಿದ್ದವು. ರಾಯಲ್ ಎನ್‌ಫೀಲ್ಡ್ ಮಾಸಿಕ ಆಧಾರದ ಮೇಲೆ ಮಾರಾಟದಲ್ಲಿ ಕುಸಿತವನ್ನು ಕಂಡಿದೆ.

ಕೇವಲ 2 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ Royal Enfield ಟ್ವಿನ್ ಬೈಕುಗಳು

ಕಂಪನಿಗೆ ಪ್ರತಿ ತಿಂಗಳು ರಫ್ತುಗಳು ಬಲವಾಗಿ ಬೆಳೆಯುತ್ತಿದೆ. ಏಪ್ರಿಲ್ ಮತ್ತು ನವೆಂಬರ್ ನಡುವೆ ರಾಯಲ್ ಎನ್‌ಫೀಲ್ಡ್ ಮಾರಾಟವು 2,95,711 ಯುನಿಟ್‌ಗಳಷ್ಟು ಆದರೆ ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ 3,18,577 ಯುನಿಟ್‌ಗಳಾಗಿತ್ತು, ಇದರಲ್ಲಿ ಶೇಕಡಾ 7 ರಷ್ಟು ಕುಸಿತವಾಗಿದೆ.

Most Read Articles

Kannada
English summary
Royal enfield 120 year anniversary edition bikes sold out with in 120 seconds details
Story first published: Tuesday, December 7, 2021, 18:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X