Just In
- 9 hrs ago
ಕೊನೆಯ ಆಸೆಯೆಂತೆ ರಾಜಕುಮಾರ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್
- 10 hrs ago
ಜಪಾನ್ನಲ್ಲಿ ಬಿಡುಗಡೆಯಾಯ್ತು ಮೇಡ್ ಇನ್ ಇಂಡಿಯಾ 2021ರ ಸುಜುಕಿ ಜಿಕ್ಸರ್ 250 ಬೈಕ್
- 11 hrs ago
ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ
- 11 hrs ago
ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್
Don't Miss!
- Sports
ಆರ್ಸಿಬಿ ಪರ ನಿರ್ಣಾಯಕ ಪಾತ್ರವಹಿಸಲು ಕಾರಣವಾದ ಅಂಶವನ್ನು ವಿವರಿಸಿದ ಗ್ಲೆನ್ ಮ್ಯಾಕ್ಸ್ವೆಲ್
- News
ಬೆಂಗಳೂರಲ್ಲಿ ರೆಮಿಡಿಸ್ವಿರ್ ಔಷಧಿ ಪೂರೈಕೆಗೆ SAST ಏಜೆನ್ಸಿ ನಿಯೋಜನೆ
- Lifestyle
ಗುರುವಾರದ ದಿನ ಭವಿಷ್ಯ: ಈ ದಿನ ಹೇಗಿದೆ ನಿಮ್ಮ ರಾಶಿಫಲ
- Finance
ಚಿನ್ನ, ಬೆಳ್ಳಿ ಸ್ವಲ್ಪ ಕುಸಿತ: ಏಪ್ರಿಲ್ 14ರಂದು ಎಲ್ಲೆಡೆ ಬೆಲೆ ಎಷ್ಟಿದೆ?
- Movies
40, 50, 60ರ ಸೀಕ್ರೆಟ್ ಬಿಚ್ಚಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಪಾಟ್ ಟೆಸ್ಟ್'ನಲ್ಲಿ ಕಂಡು ಬಂದ ರಾಯಲ್ ಎನ್‌ಫೀಲ್ಡ್ 650 ಕ್ರೂಸರ್ ಬೈಕ್
ರಾಯಲ್ ಎನ್‌ಫೀಲ್ಡ್ 650 ಕ್ರೂಸರ್ ಬೈಕ್ ಅನ್ನು ಇತ್ತೀಚೆಗೆ ಮರು-ಪರೀಕ್ಷಿಸಲಾಗಿದೆ. ಇತ್ತೀಚಿಗೆ ಬಿಡುಗಡೆಯಾಗಿರುವ ವೀಡಿಯೊದಲ್ಲಿ ಕ್ರೂಸರ್ 650 ಬೈಕಿನ ಜೊತೆಗೆ ಮತ್ತೆರಡು ಬೈಕುಗಳಿರುವುದನ್ನು ಕಾಣಬಹುದು. ಆ ಇತರ ಎರಡು ಇತರ 650 ಬೈಕುಗಳು ಕ್ಲಾಸಿಕ್ ಅಥವಾ ಮೆಟಿಯೊರ್ 650 ಆಗಿರುವ ಸಾಧ್ಯತೆಗಳಿವೆ.

ರಾಯಲ್ ಎನ್‌ಫೀಲ್ಡ್ ಕಂಪನಿಯ 650 ಟ್ವಿನ್ ಬೈಕುಗಳು ಭಾರತವೂ ಸೇರಿದಂತೆ ವಿಶ್ವಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದ ಹಿನ್ನೆಲೆಯಲ್ಲಿ ಕಂಪನಿಯು ಈ ಸೆಗ್ ಮೆಂಟಿನಲ್ಲಿ ಹಲವಾರು ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಅವುಗಳಲ್ಲಿ 650 ಕ್ರೂಸರ್ ಬೈಕ್ ಸಹ ಸೇರಿದ್ದು, ಈ ಬೈಕ್ ಅನ್ನು ಹಲವಾರು ದಿನಗಳಿಂದ ಪರೀಕ್ಷಿಸಲಾಗುತ್ತಿದೆ.

ಕ್ರೂಸರ್ 650 ಬೈಕಿನೊಂದಿಗೆ ಕಂಡು ಬಂದ ಇತರ ಎರಡು ಮಾದರಿಗಳ ಬಗ್ಗೆ ಹೇಳುವುದಾದರೆ, ಕ್ಲಾಸಿಕ್ 650 ಬೈಕ್ ವಿಭಿನ್ನ ಸವಾರಿ, ಫುಟ್‌ಪೆಗ್ ಪ್ಲೇಸ್‌ಮೆಂಟ್ ಜೊತೆಗೆ ದೊಡ್ಡದಾದ ಹಾಗೂ ವಿಶಾಲವಾದ ಪಿಲಿಯನ್ ಸೀಟುಗಳನ್ನು ಹೊಂದಿದೆ. ಕ್ರೂಸರ್ 650 ಟ್ವಿನ್ ಎಕ್ಸಾಸ್ಟ್ ಕ್ರೋಮ್ ಫಿನಿಶಿಂಗ್ ಹೊಂದಿದ್ದರೆ, ಇತರ ಎರಡು ಮಾದರಿಗಳು ಕಪ್ಪು ಫಿನಿಶಿಂಗ್ ಹೊಂದಿವೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ವೀಡಿಯೊದಲ್ಲಿ ಕಂಡು ಬರುವ ಈ ಬೈಕುಗಳು 120 - 130 ಕಿ.ಮೀ ವೇಗದಲ್ಲಿ ಸಾಗಿವೆ. 650 ಕ್ರೂಸರ್ ಬೈಕ್ ರೆಟ್ರೊ ವಿನ್ಯಾಸವನ್ನು ಹೊಂದಿದೆ. ಈ ಬೈಕ್ ಸರ್ಕ್ಯುಲರ್ ಹೆಡ್‌ಲ್ಯಾಂಪ್, ರೇರ್ ವೀವ್ ಮಿರರ್, ಟಿಯರ್‌ಡ್ರಾಪ್ ಶೇಪಿನ ಫ್ಯೂಯಲ್ ಟ್ಯಾಂಕ್, ಟರ್ನ್ ಇಂಡಿಕೇಟರ್, ವೈಡ್ ಹ್ಯಾಂಡಲ್‌ಬಾರ್‌ಗಳನ್ನು ಹೊಂದಿದೆ.

ಇದರ ಜೊತೆಗೆ ದೊಡ್ಡ ವಿಂಡ್‌ಸ್ಕ್ರೀನ್, ಡ್ಯುಯಲ್ ಮೆಟಾಲಿಕ್ ಎಕ್ಸಾಸ್ಟ್, ವೈಡ್ ರೇರ್ ಫೆಂಡರ್‌ಗಳನ್ನು ನೀಡಲಾಗಿದೆ. ಆರಾಮದಾಯಕ ಸವಾರಿಗಾಗಿ ಫಾರ್ವರ್ಡ್ ಸೆಟ್ ಫುಟ್‌ಪೆಗ್‌ಗಳನ್ನು ನೀಡಲಾಗಿದೆ. ಸ್ಪ್ಲಿಟ್ ಸೀಟುಗಳು ಪಿಲಿಯನ್ ಬ್ಯಾಕ್‌ರೆಸ್ಟ್‌ಗಳನ್ನು ಹೊಂದಿದ್ದು, ಹಿಂಭಾಗದ ಲಗೇಜ್‌ಗಾಗಿ ಪ್ರತ್ಯೇಕ ಬಾರ್'ಗಳನ್ನು ಸಹ ನೀಡಲಾಗಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಇನ್ನು ಈ ಬೈಕಿನಲ್ಲಿ ಎಂಜಿನ್ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ 650 ಟ್ವಿನ್ ಬೈಕುಗಳಲ್ಲಿರುವ ಎಂಜಿನ್ ಅಳವಡಿಸುವ ಸಾಧ್ಯತೆಗಳಿವೆ. ಆದರೆ ಪವರ್ ಹಾಗೂಟಾರ್ಕ್ ಅಂಕಿ ಅಂಶಗಳನ್ನು ಕ್ರೂಸರ್ ಬೈಕಿನ ಅನುಸಾರ ಸರಿಹೊಂದಿಸಬಹುದು.

650 ಟ್ವಿನ್ ಬೈಕುಗಳಲ್ಲಿರುವ 648 ಸಿಸಿ ಡ್ಯುಯಲ್ ಸಿಲಿಂಡರ್ ಎಂಜಿನ್ 47 ಬಿಹೆಚ್‌ಪಿ ಪವರ್ ಹಾಗೂ 52 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್'ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಜೋಡಿಸಲಾಗಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ
ಕಂಪನಿಯ ಹೊಸ ಮಾದರಿಗಳಂತೆ ಈ ಬೈಕಿನಲ್ಲಿಯೂ ಟ್ರಿಪ್ಪರ್ ನ್ಯಾವಿಗೇಷನ್ ಸಿಸ್ಟಂ ನೀಡುವ ಸಾಧ್ಯತೆಗಳಿವೆ. ಇದರ ಜೊತೆಗೆ ಸೆಮಿ ಡಿಜಿಟಲ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್, ಸ್ಲೀಪರ್ ಕ್ಲಚ್ ಅಸಿಸ್ಟ್ ನೀಡುವ ಸಾಧ್ಯತೆಗಳಿವೆ.

ರಾಯಲ್ ಎನ್‌ಫೀಲ್ಡ್ ಕಂಪನಿಯು ಮುಂಬರುವ ದಿನಗಳಲ್ಲಿ ಹೊಸ ತಲೆಮಾರಿನ ಹಲವಾರು ಬೈಕುಗಳನ್ನು ನಿರಂತರವಾಗಿ ಬಿಡುಗಡೆಗೊಳಿಸಲು ಮುಂದಾಗಿದೆ.ಈ ಚಿತ್ರಗಳನ್ನು ರಾಯಲ್ ಬೆಂಗಳೂರು ರಾಜ್'ರವರಿಂದ ಪಡೆಯಲಾಗಿದೆ.