ತ್ರಿಚಕ್ರ ವಾಹನವಾಗಿ ಬದಲಾದ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್

ದ್ವಿಚಕ್ರ ವಾಹನಗಳು ಯುವಕ, ಯುವತಿಯರನ್ನು ಮಾತ್ರವಲ್ಲದೇ ವೃದ್ಧರನ್ನೂ ಸಹ ತಮ್ಮತ್ತ ಆಕರ್ಷಿಸುತ್ತವೆ. ಇದನ್ನು ಪುಷ್ಟೀಕರಿಸುವಂತಹ ಘಟನೆಯೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ತ್ರಿಚಕ್ರ ವಾಹನವಾಗಿ ಬದಲಾದ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್

ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕಿನ ಅಭಿಮಾನಿಯಾಗಿರುವ ವಯೋವೃದ್ಧರೊಬ್ಬರು ತಮ್ಮ ಬಳಿಯಿರುವ ಬೈಕನ್ನು ಮೂರು ಚಕ್ರಗಳ ವಾಹನವನ್ನಾಗಿ ಮಾಡಿಫೈಗೊಳಿಸಿದ್ದಾರೆ. ಈ ಬುಲೆಟ್ ಬೈಕಿನ ಮಾಡಿಫೈ ವೀಡಿಯೊವನ್ನು ಎನ್‌ಸಿಆರ್ ಬೈಕರ್ಸ್ ಎಂಬ ಯೂಟ್ಯೂಬ್ ಚಾನೆಲ್ ಬಿಡುಗಡೆಗೊಳಿಸಿದೆ.

ತ್ರಿಚಕ್ರ ವಾಹನವಾಗಿ ಬದಲಾದ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್

ಸಾಮಾನ್ಯವಾಗಿ ವಾಹನ ಮಾಡಿಫಿಕೇಶನ್ ಮಾಡಿದಾಗ ಅವುಗಳ ವಿನ್ಯಾಸ ಹಾಗೂ ಶೈಲಿಯನ್ನು ಬದಲಿಸಲಾಗುತ್ತದೆ. ಈ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಅನ್ನು ಸಹ ಇದೇ ರೀತಿಯಲ್ಲಿ ಮಾಡಿಫೈಗೊಳಿಸಲಾಗಿದೆ. ಆದರೆ ಈ ಮಾಡಿಫಿಕೇಶನ್ ಸ್ವಲ್ಪ ವಿಭಿನ್ನವಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ತ್ರಿಚಕ್ರ ವಾಹನವಾಗಿ ಬದಲಾದ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್

ಈ ಬೈಕಿನ ಕೆಲವು ಭಾಗಗಳನ್ನು ತ್ರಿಚಕ್ರ ವಾಹನದ ರೀತಿಯಲ್ಲಿ ಮಾಡಿಫೈಗೊಳಿಸಲಾಗಿದೆ. ಪೆಟ್ರೋಲ್ ಟ್ಯಾಂಕ್‌ಗೆ ಹೊಂದಿಕೊಳ್ಳುವಂತೆ ಬಾರ್ ಅನ್ನು ಮುಂಭಾಗದ ಹ್ಯಾಂಡಲ್‌ನಿಂದ ತೆಗೆದು ಬದಿಯಲ್ಲಿ ಜೋಡಿಸಲಾಗಿದೆ.

ತ್ರಿಚಕ್ರ ವಾಹನವಾಗಿ ಬದಲಾದ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್

ಈ ಬೈಕಿನ ಮುಂಭಾಗದ ವ್ಹೀಲ್ ಹಾಗೂ ಹ್ಯಾಂಡಲ್ ಬಾರ್ ಹೊರತುಪಡಿಸಿ ಎಲ್ಲಾ ಭಾಗಗಳನ್ನು ವಾಹನದ ಬದಿಯಲ್ಲಿ ಕಾಣುವಂತೆ ಮಾಡಿಫೈಗೊಳಿಸಲಾಗಿದೆ. ಈ ಹೊಸ ಲುಕ್ ನೀಡಲು ಬೈಕಿನ ಸೀಟ್, ರೇರ್ ವ್ಹೀಲ್ ಹಾಗೂ ಮಡ್‌ಗಾರ್ಡ್'ಗಳನ್ನು ತೆಗೆದುಹಾಕಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ತ್ರಿಚಕ್ರ ವಾಹನವಾಗಿ ಬದಲಾದ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್

ಈ ಬೈಕಿನ ಹಿಂಭಾಗದಲ್ಲಿ ಎರಡು ವ್ಹೀಲ್ ಹಾಗೂ ಎರಡು ಸೀಟುಗಳನ್ನು ನೀಡಲಾಗಿದೆ. ಬಿಸಿಲಿನಿಂದ ಹಾಗೂ ಮಳೆಯಿಂದ ರಕ್ಷಣೆ ಪಡೆಯಲು ಈ ಬೈಕಿನಲ್ಲಿ ರೂಫ್ ಸಹ ಅಳವಡಿಸಲಾಗಿದೆ. ಈ ರಾಯಲ್ ಎನ್‌ಫೀಲ್ಡ್ ಬುಲೆಟ್ ನೋಡಲು ವಿಲಕ್ಷಣವಾಗಿದೆ.

ತ್ರಿಚಕ್ರ ವಾಹನವಾಗಿ ಬದಲಾದ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್

ವಿಲಕ್ಷಣವಾಗಿರುವ ಹಿನ್ನೆಲೆಯಲ್ಲಿ ಯೂಟ್ಯೂಬರ್ ಬೈಕ್ ನಿಲ್ಲಿಸಿ ಬೈಕಿನ ವೀಡಿಯೊ ಮಾಡಿದ್ದಾನೆ. ಈ ವೀಡಿಯೊ ಸದ್ಯಕ್ಕೆ ಎನ್‌ಸಿಆರ್ ಬೈಕರ್ಸ್‌ ಚಾನೆಲ್ ಮೂಲಕ ವೈರಲ್ ಆಗುತ್ತಿದೆ. ಮಾಡಿಫೈಗೊಂಡಿರುವ ಈ ಬೈಕ್, ರಾಯಲ್ ಎನ್‌ಫೀಲ್ಡ್ 350 ಸಿಸಿ ಎಬಿಎಸ್ ಮಾದರಿಯಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ತ್ರಿಚಕ್ರ ವಾಹನವಾಗಿ ಬದಲಾದ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್

ಈ ವಯೋವೃದ್ದರು ಬೈಕ್ ಅನ್ನು ತಮಗಾಗಿ ವಿಶೇಷ ಸೌಲಭ್ಯಗಳನ್ನು ಹೊಂದಿರುವ ಮೂರು ಚಕ್ರಗಳ ವಾಹನವಾಗಿ ಮಾಡಿಫೈ ಮಾಡಿಕೊಂಡಿದ್ದಾರೆ. ಈ ಬೈಕಿನಲ್ಲಿರುವ ಗೇರ್ ಸಿಸ್ಟಂ ಅನ್ನು ಸಹ ಬದಲಿಸಲಾಗಿದೆ.

ಗೇರ್ ಲಿವರ್ ಅನ್ನು ಗೇರ್'ನೊಂದಿಗೆ ಒದಗಿಸಲಾಗಿದೆ. ಅವುಗಳನ್ನು ಕಾಲುಗಳಿಂದ ಬದಲಿಸಬಹುದು. ಇದರಿಂದ ವಯಸ್ಸಾದವರಿಗೆ ಬಳಸಲು ಸುಲಭವಾಗುತ್ತದೆ. ಈ ಬೈಕಿನಲ್ಲಿ ಈ ರೀತಿಯ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ತ್ರಿಚಕ್ರ ವಾಹನವಾಗಿ ಬದಲಾದ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್

ಈ ಬೈಕಿನ ಬೆಲೆ ರೂ.1.75 ಲಕ್ಷಗಳಾಗಿದ್ದು, ಮಾಡಿಫೈಗೊಳಿಸಲು ರೂ.1.25 ಲಕ್ಷ ಖರ್ಚು ಮಾಡಲಾಗಿದೆ. ಒಟ್ಟಾರೆಯಾಗಿ ಈ ಬೈಕಿನ ಮೇಲೆ ರೂ.3 ಲಕ್ಷ ಖರ್ಚು ಮಾಡಲಾಗಿದೆ. ಇದರ ಹೊರತುಪಡಿಸಿ ಬೈಕಿನಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಎಂಬುದು ಗಮನಾರ್ಹ. ಈ ಚಿತ್ರಗಳನ್ನು ಎನ್‌ಸಿಆರ್ ಬೈಕರ್ಜ್'ನಿಂದ ಪಡೆಯಲಾಗಿದೆ.

Most Read Articles

Kannada
English summary
Royal Enfield bullet modified as a three wheeler bike. Read in Kannada.
Story first published: Monday, January 25, 2021, 16:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X