ಜನಪ್ರಿಯ ಕ್ಲಾಸಿಕ್ 350 ಬೈಕ್ ಬೆಲೆ ಹೆಚ್ಚಿಸಿದ ರಾಯಲ್ ಎನ್‌ಫೀಲ್ಡ್

ಹೊಸ ಹಣಕಾಸಿನ ವರ್ಷದಲ್ಲಿ ಹಲವಾರು ವಾಹನ ಉತ್ಪಾದನಾ ಕಂಪನಿಗಳು ಬೆಲೆ ಏರಿಕೆ ಮಾಡಿದೆ. ಅದರಂತೆ ಜನಪ್ರಿಯ ದ್ವಿಚಕ್ತ್ರ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ಕೂಡ ತನ್ನ ಕ್ಲಾಸಿಕ್ 350 ಬೈಕಿನ ಬೆಲೆ ಹೆಚ್ಚಿಸಿದೆ. ಇದರಿಂದ ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ದುಬಾರಿಯಾಗಿದೆ.

ಜನಪ್ರಿಯ ಕ್ಲಾಸಿಕ್ 350 ಬೈಕ್ ಬೆಲೆ ಹೆಚ್ಚಿಸಿದ ರಾಯಲ್ ಎನ್‌ಫೀಲ್ಡ್

ಯುವಕರ ಹಾಟ್ ಫೇವರೇಟ್ ಆದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ದುಬಾರಿಯಾಗಿರುವುದು ಇದರ ಅಭಿಮಾನಿಗಳಿಗೆ ನಿರಾಸೆ ಮೂಡಿಸಬಹುದು. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿನ ಪ್ರತಿಯೊಂದು ರೂಪಾಂತರವೂ ವಿಭಿನ್ನ ಪ್ರಮಾಣದ ಬೆಲೆ ಏರಿಕೆಯನ್ನು ಸ್ವೀಕರಿಸಿದೆ. ಇದರಲ್ಲಿ ಮ್ಯಾಟ್ ಮತ್ತು ಕ್ರೋಮ್ ರೂಪಾಂತರಗಳು ರೂ,5,992 ಗಳಷ್ಟು ಬೆಲೆ ಏರಿಕೆಯನ್ನು ಪಡೆದುಕೊಂಡಿದೆ.

ಜನಪ್ರಿಯ ಕ್ಲಾಸಿಕ್ 350 ಬೈಕ್ ಬೆಲೆ ಹೆಚ್ಚಿಸಿದ ರಾಯಲ್ ಎನ್‌ಫೀಲ್ಡ್

ಇನ್ನು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿನ ಆರಂಭಿಕ ರೂಪಾಂತರವು ರೂ,5,231 ಗಳವರೆಗೆ ಬೆಲೆ ಹೆಚ್ಚಿಸಿದೆ. ಇನ್ನು ಕ್ಲಾಸಿಕ್ ಬ್ಲ್ಯಾಕ್ ರೂಪಾಂತರಕ್ಕೆ ರೂ.5,475 ರಷ್ಟು ಆದರೆ ಸ್ಪೋಕ್ ವ್ಹೀಲ್ ರೂಪಾಂತರದ ಬೆಲೆಯು ರೂ.5,531 ಗಳವರೆಗೆ ಹೆಚ್ಚಿಸಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಜನಪ್ರಿಯ ಕ್ಲಾಸಿಕ್ 350 ಬೈಕ್ ಬೆಲೆ ಹೆಚ್ಚಿಸಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ತನ್ನ ಸರಣಿಯಲ್ಲಿರುವ ಜನಪ್ರಿಯ ಮಾದರಿಗಳನ್ನು ನವೀಕರಿಸಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಪ್ರಾರಂಭಿಸಿದೆ. ಇದರ ಜೊತೆಗೆ ಹೊಸ ಮಾದರಿಗಳನ್ನು ಕೂಡ ಬಿಡುಗಡೆಗೊಳಿಸಲು ಮುಂದಾಗಿದೆ.

ಜನಪ್ರಿಯ ಕ್ಲಾಸಿಕ್ 350 ಬೈಕ್ ಬೆಲೆ ಹೆಚ್ಚಿಸಿದ ರಾಯಲ್ ಎನ್‌ಫೀಲ್ಡ್

ಇದರ ನಡುವೆ ಇತ್ತೀಚೆಗೆ 2021ರ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್ ಭಾರತದಲ್ಲಿ ಹಲವು ಬಾರಿ ಟೆಸ್ಟ್ ಅನ್ನು ನಡೆಸಿದೆ. ಸ್ಪೈ ಚಿತ್ರಗಳಲ್ಲಿ ನವೀಕರಿಸಿದ ಇನ್ಸ್ ಟ್ರೂಮೆಟ್ ಕ್ಲಸ್ಟರ್ ಮಾಹಿತಿ ಬಹಿರಂಗವಾಗಿದೆ. ಚಿತ್ರದಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಈಗ ಅನಲಾಗ್ ಸ್ಪೀಡೋಮೀಟರ್ ಕೆಳಗೆ ಸಣ್ಣ ಡಿಜಿಟಲ್ ಡಿಸ್ ಪ್ಲೇಯನ್ನು ಹೊಂದಿರುತ್ತದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಜನಪ್ರಿಯ ಕ್ಲಾಸಿಕ್ 350 ಬೈಕ್ ಬೆಲೆ ಹೆಚ್ಚಿಸಿದ ರಾಯಲ್ ಎನ್‌ಫೀಲ್ಡ್

ಈ ಡಿಸ್ ಪ್ಲೇಯಲ್ಲಿ ಫ್ಯೂಯಲ್ ಇಂಡಿಕೇಟರ್, ಓಡೋಮೀಟರ್ ಮತ್ತು ಇತರ ವಿವರಗಳನ್ನು ಪ್ರದರ್ಶಿಸುತ್ತದೆ. ಬದಿಯಲ್ಲಿ ಟ್ರಿಪ್ಪರ್ ನ್ಯಾವಿಗೇಷನ್ ಪಾಡ್ ಇರುವಿಕೆಯು ಅತ್ಯಂತ ಮುಖ್ಯವಾದ ಸೇರ್ಪಡೆಯಾಗಿದೆ. ಟ್ರಿಪ್ಪರ್ ನ್ಯಾವಿಗೇಷನ್ ಫೀಚರ್ ಅನ್ನು ಕೂಡ ಒಳಗೊಂಡಿರುತ್ತದೆ.

ಜನಪ್ರಿಯ ಕ್ಲಾಸಿಕ್ 350 ಬೈಕ್ ಬೆಲೆ ಹೆಚ್ಚಿಸಿದ ರಾಯಲ್ ಎನ್‌ಫೀಲ್ಡ್

ಬ್ಲೂಟೂತ್ ಮತ್ತು ಮೀಸಲಾದ ಅಪ್ಲಿಕೇಶನ್ ಮೂಲಕ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಿ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸೌಲ್ಯಭ್ಯವನ್ನು ಒದಗಿಸುತ್ತದೆ. ಇನ್ನು ಹೊಸ ಕ್ಲಾಸಿಕ್ 350 ಮಾದರಿಯು ಈಗ ವೃತ್ತಾಕಾರದ ಎಲ್ಇಡಿ ಟೈಲ್‌ಲೈಟ್‌ಗಳನ್ನು ಹೊಂದಿದೆ. ಇನ್ನು ಇದರಲ್ಲಿ ಸ್ಪ್ಲಿಟ್ ಸೀಟ್ ಮತ್ತು ಹಿಂಭಾಗದಲ್ಲಿ ಸ್ವಲ್ಪ ದೊಡ್ಡದಾದ ಗ್ರ್ಯಾಬ್ ಹ್ಯಾಂಡಲ್ ಅನ್ನು ಹೊಂದಿರಲಿದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಜನಪ್ರಿಯ ಕ್ಲಾಸಿಕ್ 350 ಬೈಕ್ ಬೆಲೆ ಹೆಚ್ಚಿಸಿದ ರಾಯಲ್ ಎನ್‌ಫೀಲ್ಡ್

ಹೊಸ ಕ್ಲಾಸಿಕ್ 350 ಹ್ಯಾಲೊಜೆನ್ ಯುನಿಟ್ ಸುತ್ತ ವೃತ್ತಾಕಾರದ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ನವೀಕರಿಸಿದ ಹೆಡ್ ಲ್ಯಾಂಪ್ ಕ್ಲಸ್ಟರ್ ಅನ್ನು ಹೊಂದಿರಲಿದೆ. ಈ ಹೊಸ ಹ್ಯಾಂಡಲ್‌ಬಾರ್ ಗ್ರಿಪ್ಸ್ ಮತ್ತು ಸ್ವಿಚ್‌ಗಿಯರ್‌ಗಳನ್ನು ಸಹ ಹೊಂದಿರುತ್ತದೆ. 2021ರ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಪ್ರಸ್ತುತ ಮಾದರಿಯಂತೆಯೇ ವಿನ್ಯಾಸ ಮತ್ತು ಸಿಲೂಯೆಟ್ ಅನ್ನು ಮುಂದಕ್ಕೆ ಸಾಗಿಸುತ್ತದೆ.

ಜನಪ್ರಿಯ ಕ್ಲಾಸಿಕ್ 350 ಬೈಕ್ ಬೆಲೆ ಹೆಚ್ಚಿಸಿದ ರಾಯಲ್ ಎನ್‌ಫೀಲ್ಡ್

ಈ ಹೊಸ ಕ್ಲಾಸಿಕ್ 350 ಬೈಕ್ ಅಲಾಯ್ ವ್ಹೀಲ್ ಗಳು ಮತ್ತು ವಿಂಡ್ ಡಿಫ್ಲೆಕ್ಟರ್ ಅನ್ನು ಪಡೆದುಕೊಂಡಿದೆ. ಹೊಸದಾಗಿ ವಿನ್ಯಾಸಗೊಳಿಸಲಾದ ಟೈಲ್‌ಲ್ಯಾಂಪ್, ಹೊಸ ಗ್ರ್ಯಾಪ್ ರೈಲ್, ಕಡಿಮೆ ಹಿಂಭಾಗದ ಫೆಂಡರ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಅನಲಾಗ್ ಸ್ಪೀಡೋಮೀಟರ್ ಹೊಂದಿರುವ ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಕೂಡ ಒಳಗೊಂಡಿರುತ್ತದೆ.

ಜನಪ್ರಿಯ ಕ್ಲಾಸಿಕ್ 350 ಬೈಕ್ ಬೆಲೆ ಹೆಚ್ಚಿಸಿದ ರಾಯಲ್ ಎನ್‌ಫೀಲ್ಡ್

2021ರ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿನ ಪ್ಲಾಟ್‌ಫಾರ್ಮ್ ಮತ್ತು ಎಂಜಿನ್ ಸೆಟಪ್‌ನಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಲಾಗುತ್ತದೆ. 2021ರ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಅನ್ನು ಹೊಸ ಮಾಡ್ಯುಲರ್ ಜೆ ಪ್ಲಾಟ್‌ಫಾರ್ಮ್‌ನಲ್ಲಿ ತಯಾರಿಸಲಾಗುತ್ತದೆ.

ಜನಪ್ರಿಯ ಕ್ಲಾಸಿಕ್ 350 ಬೈಕ್ ಬೆಲೆ ಹೆಚ್ಚಿಸಿದ ರಾಯಲ್ ಎನ್‌ಫೀಲ್ಡ್

ಇನ್ನು 2021ರ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿನಲ್ಲಿ ಹೊಸ 350ಸಿಸಿ, ಸುಧಾರಿತ ಎಸ್‌ಒಹೆಚ್‌ಸಿ ಕಾನ್ಫಿಗರೇಶನ್‌ನೊಂದಿಗೆ ಸಿಂಗಲ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಟ್ ಎಂಜಿನ್ ಅನ್ನು ಒಳಗೊಂಡಿರುತ್ತದೆ. ಈ 350ಸಿಸಿ ಎಂಜಿನ್ 20.2 ಬಿಹೆಚ್‌ಪಿ ಮತ್ತು 27 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಲಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ.

Most Read Articles

Kannada
English summary
Royal Enfield Classic 350 Prices Increased. Read In Kannada.
Story first published: Monday, April 5, 2021, 20:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X