ಬ್ಯಾಟ್‌ಮ್ಯಾನ್‌ ಬೈಕ್‌ನಂತೆ ಮಾಡಿಫೈಗೊಂಡ ರಾಯಲ್‌ ಎನ್‌ಫೀಲ್ಡ್‌ ಥಂಡರ್‌ಬರ್ಡ್

ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳ ಮೇಲೆ ಜನರಿಗಿರುವ ಕ್ರೇಜ್‌ ಇಂದು ನೆನ್ನೆಯದಲ್ಲ, ಅದು ಹಲವಾರು ದಶಕಗಳಿಂದ ಇರುವ ಕ್ರೇಜ್. ಇಂದಿಗೂ ರಾಯಲ್ ಎನ್‍ಫೀಲ್ಡ್ ಬೈಕ್ ಯುವಕರ ಕನಸಿನ ಬೈಕ್ ಮಾತ್ರವಲ್ಲ ಯುವತಿಯರ ಕನಸಿನ ಬೈಕ್ ಕೂಡ ಆಗಿದೆ.

ಬ್ಯಾಟ್‌ಮ್ಯಾನ್‌ನ ಬೈಕ್‌ನಂತೆ ಮಾಡಿಫೈಗೊಂಡ ರಾಯಲ್‌ ಎನ್‌ಫೀಲ್ಡ್‌ ಥಂಡರ್‌ಬರ್ಡ್

ರಾಯಲ್ ಎನ್‍ಫೀಲ್ಡ್ ತನ್ನ ಕ್ಲಾಸಿಕ್ ವಿಶಿಷ್ಟವಾದ ಲುಕ್, ಶಬ್ಧ ಮತ್ತು ಆಕರ್ಷಕ ವಿನ್ಯಾಸದಿಂದ ಎಲ್ಲರ ಗಮನಸೆಳೆದ ಬೈಕ್. ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳನ್ನು ಮಾಡಿಫೈಗೊಳಿಸಲು ಹಲವರು ಆಯ್ಕೆ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ದೆಹಲಿ ಮೂಲದ ನೀವ್ ಮೋಟಾರ್‌ಸೈಕಲ್ಸ್ ರಾಯಲ್‌ ಎನ್‌ಫೀಲ್ಡ್‌ ಥಂಡರ್‌ಬರ್ಡ್ 500 ಬೈಕನ್ನು ವಿಭಿನ್ನ ಶೈಲಿಯಲ್ಲಿ ಮಾಡಿಫೈಗೊಳಿಸಿದ್ದಾರೆ. ಇದು ಬ್ಯಾಟ್‌ಪಾಡ್ ಎಂದು ಕರೆಯಲ್ಪಡುವ ಕಾಲ್ಪನಿಕ ಸೂಪರ್ ಹೀರೋ ಬ್ಯಾಟ್‌ಮ್ಯಾನ್ ಬೈಕ್ ಅನ್ನು ನೆನಪಿಸುತ್ತದೆ.

ಬ್ಯಾಟ್‌ಮ್ಯಾನ್‌ನ ಬೈಕ್‌ನಂತೆ ಮಾಡಿಫೈಗೊಂಡ ರಾಯಲ್‌ ಎನ್‌ಫೀಲ್ಡ್‌ ಥಂಡರ್‌ಬರ್ಡ್

ಆದರೆ ನೀವ್ ಮೋಟಾರ್‌ಸೈಕಲ್ಸ್ ಈ ಬೈಕಿಗೆ ಗಾಡ್ಜಿಲ್ಲಾ ಎಂಬ ಹೆಸರನ್ನು ನೀಡಲಾಗಿದೆ. ಈ ಮಾಡಿಫೈ ಗಾಡ್ಜಿಲ್ಲಾ ಮಾದರಿಯನ್ನು ಥಂಡರ್‌ಬರ್ಡ್ 500 ಬೈಕ್ ಎಂದು ಯಾವುದೇ ರೀತಿಯಲ್ಲೂ ತಿಳಿಯದಂತೆ ಸಂಪೂರ್ಣವಾಗಿ ಮಾಡಿಫೈಗೊಂಡಿದೆ.

ಬ್ಯಾಟ್‌ಮ್ಯಾನ್‌ನ ಬೈಕ್‌ನಂತೆ ಮಾಡಿಫೈಗೊಂಡ ರಾಯಲ್‌ ಎನ್‌ಫೀಲ್ಡ್‌ ಥಂಡರ್‌ಬರ್ಡ್

ಬಹಳ ಕಡಿಮೆ ಫ್ರೇಮ್ ಬಾಡಿ ಪ್ಯಾನೆಲ್‌ಗಳು ಮತ್ತು ಎಲ್ಲಾ ಇತರ ಮೆಕ್ಯಾನಿಕಲ್‌ಗಳನ್ನು ಇತರ ದ್ವಿಚಕ್ರ ವಾಹನಗಳಿಂದ ಎರವಲು ಪಡೆಯಲಾಗಿದೆ. ಗಾಡ್ಜಿಲ್ಲಾ ಬೈಕಿನ ಮುಂಭಾಗ ಹೆಡ್ ಲ್ಯಾಂಪ್ ಅನ್ನು ಹೊಂದಿದ್ದು, ಇದು ಬಜಾಜ್ ಪಲ್ಸರ್ ಎನ್ಎಸ್ 200 ನಿಂದ ಎರವಲು ಪಡೆದಂತೆ ತೋರುತ್ತದೆ.

ಬ್ಯಾಟ್‌ಮ್ಯಾನ್‌ನ ಬೈಕ್‌ನಂತೆ ಮಾಡಿಫೈಗೊಂಡ ರಾಯಲ್‌ ಎನ್‌ಫೀಲ್ಡ್‌ ಥಂಡರ್‌ಬರ್ಡ್

ಇದು ಸಣ್ಣ ವಿಂಡ್‌ಸ್ಕ್ರೀನ್ ಅನ್ನು ಸಹ ಹೊಂದಿದೆ, ಅದು ಮುಂಭಾಗದ ನಂಬರ್ ಪ್ಲೇಟ್ ಅನ್ನು ಸಹ ಹೊಂದಿದೆ. ಸ್ಪೋಕ್ ವಿನ್ಯಾಸದೊಂದಿಗೆ ಕಸ್ಟಮ್ ನಿರ್ಮಿತ ಅಲಾಯ್ ವೀಲ್ ನಿಂದ ಮುಂಭಾಗದ ಷೋಡ್ನಲ್ಲಿ ದೊಡ್ಡ ಟೈರ್ ಪ್ರೊಫೈಲ್ ಅನ್ನು ಇರಿಸಲು ಫ್ರಂಟ್ ಫೆಂಡರ್ ಅನ್ನು ಕತ್ತರಿಸಲಾಗಿದೆ.

ಬ್ಯಾಟ್‌ಮ್ಯಾನ್‌ನ ಬೈಕ್‌ನಂತೆ ಮಾಡಿಫೈಗೊಂಡ ರಾಯಲ್‌ ಎನ್‌ಫೀಲ್ಡ್‌ ಥಂಡರ್‌ಬರ್ಡ್

ಮುಂಭಾಗದಲ್ಲಿರುವ ಸಸ್ಪೆಂಕ್ಷನ್ ಯುನಿಟ್ ಸ್ಟಮ್-ನಿರ್ಮಿತ ಗೇಟರ್‌ಗಳನ್ನು ಒಳಗೊಂಡಿದೆ. ಫ್ಯೂಯಲ್ ಗೇಜ್ ಮತ್ತು ಸ್ಪೀಡೋಮೀಟರ್ ಗಾಗಿ ಅಳವಡಿಸಲಾದ ಟ್ವಿನ್-ಪಾಡ್ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಜೊತೆಗೆ ಬಾಬಾರ್ ನಲ್ಲಿ ನೇರ ಮತ್ತು ಅಗಲವಾದ ಹ್ಯಾಂಡಲ್ ಬಾರ್ ಅನ್ನು ಅಳವಡಿಸಲಾಗಿದೆ. ಇದರ ಬಾರ್-ಎಂಡ್ ಮೋರರ್ ಆಕರ್ಷಕವಾಗಿದೆ.

ಬ್ಯಾಟ್‌ಮ್ಯಾನ್‌ನ ಬೈಕ್‌ನಂತೆ ಮಾಡಿಫೈಗೊಂಡ ರಾಯಲ್‌ ಎನ್‌ಫೀಲ್ಡ್‌ ಥಂಡರ್‌ಬರ್ಡ್

ಮಾಡಿಫೈ ಗಾಡ್ಜಿಲ್ಲಾ ಬೈಕ್ ಡ್ಯುಯಲ್-ಟೋನ್ ಬಣ್ಣದಿಂದ ಕೂಡಿದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಇದು 15-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಆಗಿದೆ. ಇನ್ನು ಈ ಫ್ಯೂಯಲ್ ಟ್ಯಾಂಕ್ ಮೇಲೆ ಗಾಡ್ಜಿಲ್ಲಾ ಎಂಬ ಹೆಸರನ್ನು ಬರೆಯಲಾಗಿದೆ.

ಬ್ಯಾಟ್‌ಮ್ಯಾನ್‌ನ ಬೈಕ್‌ನಂತೆ ಮಾಡಿಫೈಗೊಂಡ ರಾಯಲ್‌ ಎನ್‌ಫೀಲ್ಡ್‌ ಥಂಡರ್‌ಬರ್ಡ್

ಇನ್ನು ಈ ಬೈಕಿನಲ್ಲಿ ಲೋ-ಸ್ಲಂಗ್ ಸಿಂಗಲ್ ಸೀಟನ್ನು ಹೊಂದಿದೆ. ಇದು ಹಿಂಭಾಗದ ಫೆಂಡರ್ ವಿನ್ಯಾಸವನ್ನು ಪೂರೈಸಲು ಹೆಚ್ಚು ವಕ್ರವಾಗಿಸಿದೆ. ಹಿಂಭಾಗದ ಫೆಂಡರ್‌ಗೆ ಬರುತ್ತಿದ್ದು, ಅಗ್ರೇಸಿವ್ ಲೈನ್ ನೊಂದಿಗೆ ಟೈಲ್ ವಿನ್ಯಾಸವನ್ನು ಹೊಂದಿದೆ.

ಬ್ಯಾಟ್‌ಮ್ಯಾನ್‌ನ ಬೈಕ್‌ನಂತೆ ಮಾಡಿಫೈಗೊಂಡ ರಾಯಲ್‌ ಎನ್‌ಫೀಲ್ಡ್‌ ಥಂಡರ್‌ಬರ್ಡ್

ಹಿಂಭಾಗದ ಫೆಂಡರ್‌ನ ಎರಡೂ ಬದಿಯಲ್ಲಿರುವ ಎಲ್‌ಇಡಿ ಸ್ಟ್ರಿಪ್‌ಗಳು ಟೈಲ್‌ಲ್ಯಾಂಪ್‌ಗಳಾಗಿ ಕಾರ್ಯನಿರ್ವಹಿಸುತ್ತವೆ ,ಇದು ನೀವ್ ಮೋಟಾರ್‌ಸೈಕಲ್ ಪ್ರಕಾರ ಈಗಲ್-ಐ ವಿನ್ಯಾಸವನ್ನು ನೀಡುತ್ತದೆ.

ಬ್ಯಾಟ್‌ಮ್ಯಾನ್‌ನ ಬೈಕ್‌ನಂತೆ ಮಾಡಿಫೈಗೊಂಡ ರಾಯಲ್‌ ಎನ್‌ಫೀಲ್ಡ್‌ ಥಂಡರ್‌ಬರ್ಡ್

ಮಾಡಿಫೈ ಗಾಡ್ಜಿಲ್ಲಾ ಮಾದರಿಯಲ್ಲಿ ಥಂಡರ್ಬರ್ಡ್ 500 ಬೈಕಿನ 499 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 5250 ಆರ್‌ಪಿಎಂನಲ್ಲಿ 27.1 ಬಿಹೆಚ್‌ಪಿ ಮತ್ತು 4000 ಆರ್‌ಪಿಎಂನಲ್ಲಿ 41.3 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬ್ಯಾಟ್‌ಮ್ಯಾನ್‌ನ ಬೈಕ್‌ನಂತೆ ಮಾಡಿಫೈಗೊಂಡ ರಾಯಲ್‌ ಎನ್‌ಫೀಲ್ಡ್‌ ಥಂಡರ್‌ಬರ್ಡ್

ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಸಂಯೋಜಿಸಲಾಗಿದೆ. ಇದರ ಪವರ್ ಉತ್ಪಾದನೆಯನ್ನು ಹೆಚ್ಚಿಸಲು ಗಾಡ್ಜಿಲ್ಲಾಗೆ ಏರ್ ಫಿಲ್ಟರ್ ಬಳಸಿ ಪರ್ಫಾಮೆನ್ಸ್ ಮೋಡ್ ನೀಡಲಾಗಿದೆ. ಒಟ್ಟಿನಲ್ಲಿ ಈ ಬೈಕ್ ವಿಭಿನ್ನ ಶೈಲಿಯ ವಿನ್ಯಾಸದೊಂದಿಗೆ ಸೂಪರ್ ಹೀರೋ ಬ್ಯಾಟ್‌ಮ್ಯಾನ್ ಬ್ಯಾಟ್‌ಪಾಡ್ ಮಾದರಿಯಂತಿದೆ.

Image Courtesy: Neev Motorcycles

Most Read Articles

Kannada
English summary
Royal Enfield Godzilla Custom Bobber Based On Thunderbird 500. Read In Kannada.
Story first published: Saturday, May 22, 2021, 17:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X