ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350, ಬುಲೆಟ್ 350 ಬೈಕ್‍ಗಳು

ರಾಯಲ್ ಎನ್‌ಫೀಲ್ಡ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಬೈಕ್‍ಗಳ ಬೆಲೆಯನ್ನು ಪರಿಷ್ಕರಿಸಿದೆ. ಇದರಲ್ಲಿ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಮತ್ತು ಬುಲೆಟ್ 350 ಬೈಕ್‍ಗಳು ಕೂಡ ಸೇರಿದೆ. ಇದರಿಂದ ಈ ಎರಡು ಬೈಕ್‍ಗಳು ಭಾರತೀಯ ಮಾರುಕಟ್ಟೆಯಲ್ಲಿ ತುಸು ದುಬಾರಿಯಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350, ಬುಲೆಟ್ 350 ಬೈಕ್‍ಗಳು

ಇದರಲ್ಲಿ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕಿನ ಬೆಲೆಯನ್ನು ರೂ,10,048 ವರೆಗೂ ಹೆಚ್ಚಿಸಲಾಗಿದೆ, ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕ್ ಗಿಫ್ಟ್ ಫೈರ್‌ಬಾಲ್, ಸ್ಟೆಲ್ಲಾರ್ ಮತ್ತು ಸೂಪರ್‌ನೊವಾ ಎಂಬ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಬೆಲೆ ಏರಿಕೆಯ ಬಳಿಕ, ಮಿಟಿಯೊರ್ 350 ಬೈಕಿನ ಫೈರ್‌ಬಾಲ್ ರೂಪಾಂತರದ ಬೆಲೆ ರೂ.1,92,109 ಗಳಾದರೆ, ಸ್ಟೆಲ್ಲಾರ್ ರೂಪಾಂತರದ ಬೆಲೆಯು ರೂ.1,98,099 ಗಳಾಗಿದೆ. ಇನ್ನು ಸೂಪರ್‌ನೊವಾ ರೂಪಾಂತರದ ಬೆಲೆಯು ರೂ.2,08,084 ಗಳಾಗಿದೆ. ಈ ಎಲ್ಲಾ ಬೆಲೆಗಳು ಬೆಂಗಳೂರು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350, ಬುಲೆಟ್ 350 ಬೈಕ್‍ಗಳು

ಇನ್ನು ಬೆಲೆ ಏರಿಕೆಯಾದ ಬಳಿಕ, ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕಿನ ಸಿಲ್ವರ್ ಬ್ಲ್ಯಾಕ್ ಮಾದರಿಯ ಬೆಲೆಯು ರೂ,1,58,485 ಗಳಾಗಿದೆ, ಇನ್ನು ಬುಲೆಟ್ 350 ಬ್ಲ್ಯಾಕ್ ಮಾದರಿಯ ಬೆಲೆಯು ರೂ.1,65,754 ಗಳಾಗಿದೆ. ಇನ್ನು ಬುಲೆಟ್ 350 ಇಎಸ್ ಮಾದರಿಯ ಬೆಲೆಯು ರೂ,1,82,190 ಗಳಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350, ಬುಲೆಟ್ 350 ಬೈಕ್‍ಗಳು

ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕಿನ ಬಗ್ಗೆ ಹೇಳುವುದಾದರೆ, ಇದರಲ್ಲಿ 349ಸಿಸಿ ಫ್ಯೂಲ್ ಇಂಜೆಕ್ಷೆಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 20.2-ಬಿಎಚ್‌ಪಿ ಪವರ್ ಮತ್ತು 27-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಎಂಜಿನ್ ಅನ್ನು 5-ಸ್ಪೀಡ್ ಗೇ‌ರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350, ಬುಲೆಟ್ 350 ಬೈಕ್‍ಗಳು

ಈ ಮಿಟಿಯೊರ್ 350 ಬೈಕಿನಲ್ಲಿ ಟಿಪ್ಪರ್ ಪಾಡ್ ಒಳಗೊಂಡಿರುವ ಟರ್ನ್-ಬೈ-ಟರ್ನ್ ಗೂಗಲ್ ನ್ಯಾವಿಗೇಷನ್, ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಬಹುದಾದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇನ್ನು ಇದರೊಂದಿಗೆ ಹಲವಾರು ಫೀಚರ್ ಗಳನ್ನು ಒಳಗೊಂಡಿದೆ.

ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350, ಬುಲೆಟ್ 350 ಬೈಕ್‍ಗಳು

ಡಬಲ್ ಡೌನ್‌ಟ್ಯೂಬ್ ಕ್ರೆಡಲ್ ಫ್ರೇಮ್ ಮೇಲೆ ಅಭಿವೃದ್ದಿಗೊಂಡಿರುವ ಮಿಟಿಯೊರ್ 350 ಬೈಕ್ ಥಂಡರ್‌ಬರ್ಡ್ ಮಾದರಿಗಿಂತಲೂ ಹೆಚ್ಚು ಅರಾಮದಾಯಕ ರೈಡಿಂಗ್ ಅನುಭವ ನೀಡುತ್ತದೆ. ಈ ಬೈಕಿನ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ 41-ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ 6 ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಟ್ವಿನ್ ಶಾಕ್‌ ಅಬ್ಸಾರ್ಬರ್‌ ನೀಡಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350, ಬುಲೆಟ್ 350 ಬೈಕ್‍ಗಳು

ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಬೈಕಿನ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ 346 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‍ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ.

ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350, ಬುಲೆಟ್ 350 ಬೈಕ್‍ಗಳು

ಈ ಎಂಜಿನ್ 19.3 ಬಿ‍‍ಹೆಚ್‍‍ಪಿ ಪವರ್ ಮತ್ತು 28 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350, ಬುಲೆಟ್ 350 ಬೈಕ್‍ಗಳು

ಇನ್ನು ಈ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಟ್ವಿನ್ ರೇರ್ ಶಾಕ್ ಅಬ್ಸಾರ್ಬರ್ ಅನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಸುರಕ್ಷತೆಗಾಗಿ 280 ಎಂಎಂ ಫ್ರಂಟ್ ಡಿಸ್ಕ್ ಮತ್ತು 153 ಎಂಎಂ ಡ್ರಮ್ ಬೈಕ್ ಅನ್ನು ಹೊಂದಿದೆ. ಇದರೊಂದಿಗೆ ಸಿಂಗಲ್ ಚಾನೆಲ್ ಎಬಿಎಸ್ ಸ್ಟ್ಯಾಡಂರ್ಡ್ ಆಗಿ ಅಳವಡಿಸಿದೆ.

Most Read Articles

Kannada
English summary
Royal Enfield Meteor 350, Bullet 350 Prices Increased. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X