ಎನ್ಎಂಡಬ್ಲ್ಯು ರೇಸಿಂಗ್ ಕಿಟ್ ಹೊಂದಿರುವ ಮಾಡಿಫೈ ಹಿಮಾಲಯನ್ 500 ಪರ್ಫಾಮೆನ್ಸ್ ಹೇಗಿದೆ?

ನಮ್ಮ ಬೆಂಗಳೂರಿನ ಎನ್ಎಂಡಬ್ಲ್ಯು(NMW) ರೇಸಿಂಗ್ ಕಂಪನಿಯು 2 ಸ್ಟ್ರೋಕ್ ಕಾಲದಿಂದಲೂ ದ್ವಿಚಕ್ರ ವಾಹನಗಳ ಮಾಡಿಫೈನಲ್ಲಿ ಉತ್ತಮ ಬೇಡಿಕೆ ಹೊಂದಿದ್ದು, ಅಡ್ವೆಂಚರ್ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಮಾದರಿಗೂ ವಿಶೇಷವಾದ ರೇಸಿಂಗ್ ಕಿಟ್ ಸಿದ್ದಪಡಿಸಿದೆ.


ಪ್ರಸ್ತುತ ಮಾರುಕಟ್ಟೆಯಲ್ಲಿ ಬಹುತೇಕ ವಾಹನಗಳು ವಿವಿಧ ಮಾಡಿಫೈ ಪ್ಯಾಕೇಜ್‌ ಸೌಲಭ್ಯದೊಂದಿಗೆ ಗ್ರಾಹಕರ ಗಮನಸೆಳೆಯುತ್ತಿದ್ದು, ಎನ್ಎಂಡಬ್ಲ್ಯು(NMW) ರೇಸಿಂಗ್ ಕಂಪನಿಯು ಪರ್ಫಾಮೆನ್ಸ್ ಪ್ರಿಯರಿಗಾಗಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 500 ಸಿಸಿ ಬೈಕ್ ಮಾದರಿಯನ್ನು ವಿಶೇಷ ಮಾಡಿಫೈ ಕಿಟ್ ಮೂಲಕ ಅಭಿವೃದ್ದಿಗೊಳಿಸಿದೆ.

ಎನ್ಎಂಡಬ್ಲ್ಯು ಕಂಪನಿಯು ಮಾಡಿಫೈಗೊಳಿಸಲಾದ ಹಿಮಾಲಯನ್ ಬೈಕ್ ಮಾದರಿಯಲ್ಲಿನ ಆಸಕ್ತಿದಾಯಕವಾದ ತಾಂತ್ರಿಕ ಅಂಶಗಳನ್ನು ಕಂಪನಿಯು ಡ್ರೈವ್‌ಸ್ಪಾರ್ಕ್ ತಂಡದ ಮೂಲಕ ಮಾಡಿಫೈ ವಿಧಾನಗಳು ಮತ್ತು ಪ್ರಾಮುಖ್ಯತೆ ಕುರಿತಂತೆ ಸರಣಿ ರೂಪದಲ್ಲಿ ಓದುಗರಿಗೆ ತಿಳಿಸಿಕೊಡಲು ಮುಂದಾಗಿದೆ.

ಮೊದಲ ಸಂಚಿಕೆಯಲ್ಲಿ ಮಾಡಿಫೈ ಆರ್‌ಇ ಹಿಮಾಲಯನ್ ಬೈಕಿನ ಎಂಜಿನ್ ಕಾರ್ಯಕ್ಷಮತೆ ಮತ್ತು ಕಾರ್ಯಕ್ಷಮತೆಯ ಹೆಚ್ಚಳಕ್ಕಾಗಿ ಬಳಸಲಾದ ಮಾಡಿಫೈ ಕಿಟ್ ಕುರಿತಾಗಿ ಮಹಿತಿ ಹಂಚಿಕೊಂಡಿದ್ದು, ಎರಡನೇ ಸಂಚಿಕೆಯಲ್ಲಿ ಮಾಡಿಫೈ ಬೈಕ್ ಮಾದರಿಯ ಎಂಜಿನ್‌ ಒಳಭಾಗದ ತಂತ್ರಜ್ಞಾನ ಮತ್ತು 5-ಸ್ಪೀಡ್ ಗೇರ್‌ಬಾಕ್ಸ್‌ನ ಕಾರ್ಯನಿರ್ವಹಣೆಯ ಬಗೆಗೆ ಮಾಹಿತಿ ನೀಡಲಾಗಿತ್ತು.

ಎನ್ಎಂಡಬ್ಲ್ಯು ರೇಸಿಂಗ್ ಕಿಟ್ ಹೊಂದಿರುವ ಮಾಡಿಫೈ ಹಿಮಾಲಯನ್ 500 ಪರ್ಫಾಮೆನ್ಸ್ ಹೇಗಿದೆ?

ಈ ಸಂಚಿಕೆಯಲ್ಲಿ ವಿಶೇಷ ತಾಂತ್ರಾಶದೊಂದಿಗೆ ಮಾಡಿಫೈಗೊಂಡಿವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 500ಸಿಸಿ ಮಾದರಿಯ ಬಿಗ್ ಬೋರ್ ಕಿಟ್, ದೊಡ್ಡದಾದ ವಾಲ್ವ್, ಪೋರ್ಟೆಡ್ ಇಂಜಿನ್ ಹೆಡ್, ಹೈ-ಲಿಫ್ಟ್ ಕ್ಯಾಮ್‌ಶಾಫ್ಟ್ ಮತ್ತು 4-ಮ್ಯಾಪ್ ರೇಸಿಂಗ್ ಇಸಿಯು ಜೋಡಣೆ ವಿಧಾನವನ್ನು ಚರ್ಚಿಸಿದ್ದೇವೆ.

ಮಾಡಿಫೈ ಕಿಟ್ ಹೊಂದಿರುವ ಎಂಜಿನ್ ಈಗ ಮೋಟಾರ್‌ಸೈಕಲ್‌ಗೆ ಅಳವಡಿಸಿ ಚಾಲನೆ ಮಾಡಲು ಸಿದ್ದವಾಗಿದ್ದು, ಬಿಗ್ ಬೋರ್ ಕಿಟ್ ಕುರಿತಾದ ಮತ್ತಷ್ಟು ಮಾಹಿತಿಗಳು ಮುಂದಿನ ಸಂಚಿಕೆಯಲ್ಲಿ ಪ್ರಕಟಗೊಳ್ಳಲಿವೆ.

Most Read Articles

Kannada
English summary
Royal enfield himalayan 500cc project part 3 kannada video
Story first published: Friday, November 19, 2021, 14:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X