ಮಾಡಿಫೈ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಕಾರ್ಯನಿರ್ವಹಣೆ ಹೇಗಿರುತ್ತದೆ?

ಮಾಡಿಫೈ ವಾಹನಗಳಿಗಾಗಿ ಹೆಚ್ಚಿನ ಬೇಡಿಕೆಯಿದ್ದು, ಹಲಾವಾರು ಕಂಪನಿಗಳು ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾಡಿಫೈ ಪ್ಯಾಕೇಜ್‌ ಸೌಲಭ್ಯ ಹೊಂದಿವೆ. ನಮ್ಮ ಬೆಂಗಳೂರಿನ ಎನ್ಎಂಡಬ್ಲ್ಯು(NMW) ರೇಸಿಂಗ್ ಕಂಪನಿಯು ಕೂಡಾ 2 ಸ್ಟ್ರೋಕ್ ವಾಹನಗಳ ಕಾಲದಿಂದಲೇ ದ್ವಿಚಕ್ರ ವಾಹನಗಳ ಮಾಡಿಫೈನಲ್ಲಿ ಉತ್ತಮ ಬೇಡಿಕೆ ಹೊಂದಿದ್ದು, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಅಡ್ವೆಂಚರ್ ಬೈಕ್ ಮಾದರಿಗಾಗಿ ವಿಶೇಷವಾದ ರೇಸಿಂಗ್ ಕಿಟ್ ಸಿದ್ದಪಡಿಸಿದೆ.

ಎನ್ಎಂಡಬ್ಲ್ಯು ಕಂಪನಿಯು ಮಾಡಿಫೈಗೊಳಿಸಲಾದ ಹಿಮಾಲಯನ್ ಬೈಕ್ ಮಾದರಿಯ ಆಸಕ್ತಿದಾಯಕವಾದ ತಾಂತ್ರಿಕ ಅಂಶಗಳನ್ನು ಕಂಪನಿಯು ಡ್ರೈವ್‌ಸ್ಪಾರ್ಕ್ ತಂಡದೊಂದಿಗೆ ಹೊಸದಾಗಿ ಸರಣಿ ರೂಪದಲ್ಲಿ ನಿಮಗೆ ತಿಳಿಸಿಕೊಡಲು ಮುಂದಾಗಿದ್ದು, ವಿವಿಧ ಸಂಚಿಕೆಗಳಲ್ಲಿ ಕಾನೂನು ವ್ಯಾಪ್ತಿಯಲ್ಲಿ ಗ್ರಾಹಕರು ಪಡೆದುಕೊಳ್ಳಬಹುದಾದ ಮಾಡಿಫೈ ಸೌಲಭ್ಯಗಳ ಬಗೆಗೆ ಮಾಹಿತಿ ಹಂಚಿಕೊಳ್ಳುತ್ತಿದೆ.

ಕಳೆದ ಸಂಚಿಕೆಯಲ್ಲಿ ಮಾಡಿಫೈ ಆರ್‌ಇ ಹಿಮಾಲಯನ್ ಬೈಕಿನ ಎಂಜಿನ್ ಕಾರ್ಯಕ್ಷಮತೆ ಮತ್ತು ಕಾರ್ಯಕ್ಷಮತೆಯ ಹೆಚ್ಚಳಕ್ಕಾಗಿ ಬಳಸಲಾದ ಮಾಡಿಫೈ ಕಿಟ್ ಕುರಿತಾಗಿ ಮಹಿತಿ ನೀಡಿದ್ದೆವು. ಇದೀಗ ಎರಡನೇ ಸಂಚಿಕೆಯಲ್ಲಿ ಮಾಡಿಫೈ ಬೈಕ್ ಮಾದರಿಯ ಎಂಜಿನ್‌ ಒಳಭಾಗದ ತಂತ್ರಜ್ಞಾನ ಮತ್ತು 5-ಸ್ಪೀಡ್ ಗೇರ್‌ಬಾಕ್ಸ್‌ನ ಕಾರ್ಯನಿರ್ವಹಣೆಯ ಬಗೆಗೆ ಮಾಹಿತಿ ನೀಡಲಿದ್ದೇವೆ.

ವಿಶೇಷ ತಾಂತ್ರಾಶದೊಂದಿಗೆ ಮಾಡಿಫೈಗೊಂಡಿವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 500ಸಿಸಿ ಮಾದರಿಯಲ್ಲಿ ಬಿಗ್ ಬೋರ್ ಕಿಟ್, ದೊಡ್ಡದಾದ ವಾಲ್ವ್, ಪೋರ್ಟೆಡ್ ಇಂಜಿನ್ ಹೆಡ್, ಹೈ-ಲಿಫ್ಟ್ ಕ್ಯಾಮ್‌ಶಾಫ್ಟ್ ಮತ್ತು 4-ಮ್ಯಾಪ್ ರೇಸಿಂಗ್ ಇಸಿಯು ಜೋಡಿಸಲಾಗಿದೆ.

ಇದು ಎಂಜಿನ್ ಕಾರ್ಯಕ್ಷಮತೆ ಹೆಚ್ಚಿಸುವ ಮೂಲಕ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯಲಿದ್ದು, ಮಾಡಿಫೈ ಬೈಕ್ ಬಗೆಗೆ ಮತ್ತಷ್ಟು ಮಾಹಿತಿಗಳನ್ನು ಈ ವಿಡಿಯೋದಲ್ಲಿ ಚರ್ಚಿಸಲಾಗಿದೆ.

Most Read Articles

Kannada
English summary
Royal enfield himalayan modified with big bore kit nmw racing video
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X