ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Royal Enfield Hunter 350 ಬೈಕ್

ಚೆನ್ನೈ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‍ಫೀಲ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಕಂಪನಿಯು ಮುಂದೆ ಬಿಡುಗಡೆಗೊಳಿಸುವ ಬೈಕ್‌ಗಳ ಪಟ್ಟಿಯಲ್ಲಿ ಸ್ಕ್ರಾಮ್ 411 ಮತ್ತು ಹಂಟರ್ 350 ಸೇರಿವೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Royal Enfield Hunter 350 ಬೈಕ್

ರಾಯಲ್ ಎನ್‍ಫೀಲ್ಡ್ ಸ್ಕ್ರಾಮ್ 411 ಬೈಕ್ ಮುಂದಿನ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ, ಇನ್ನು ರಾಯಲ್ ಎನ್‍ಫೀಲ್ಡ್ ಹಂಟರ್ 350 ಬೈಕ್ ಇದರ ನಂತರ ಬಿಡುಗಡೆಯಾಗಬಹುದು. ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್ ಬ್ರ್ಯಾಂಡ್‌ನ 350ಸಿಸಿ ವಿಭಾಗದಲ್ಲಿ ಇರಿಸಲಾಗುತ್ತದೆ. ಮುಂಬರುವ ಹಂಟರ್ 350 ಬೈಕಿನ ಟೀಸರ್ ವಿಡಿಯೋವನ್ನು ರಾಯಲ್ ಎನ್‍ಫೀಲ್ಡ್ ಕಂಪನಿಯು ಯುಟ್ಯೂಬ್ ನಲ್ಲಿ ಹಂಚಿಕೊಂಡಿದೆ. ಟೀಸರ್ ವಿಡಿಯೋದಲ್ಲಿ ಹಂಟರ್‌ನ ಹಿಂದಿನ ಭಾಗವನ್ನು ಸ್ಪಷ್ಟವಾಗಿ ನೋಡಬಹುದು.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Royal Enfield Hunter 350 ಬೈಕ್

ರಾಯಲ್ ಎನ್‍ಫೀಲ್ಡ್ ಹಂಟರ್ 350 ಬೈಕಿನ ಸಿಂಗಲ್ ಸೀಟ್ ವೀಡಿಯೊದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ, ಇದು ಭಾರತೀಯ ರಸ್ತೆಗಳಲ್ಲಿ ಈ ಹಿಂದೆ ಗುರುತಿಸಲಾದ ಹಂಟರ್ 350 ನ ಮೂಲಮಾದರಿಯನ್ನು ಹೋಲುತ್ತದೆ. ಹಿಂದಿನ ಸಬ್‌ಫ್ರೇಮ್ ಅನ್ನು 2019 ರಲ್ಲಿ ಬಿಡುಗಡೆಯಾದ ಕಂಪನಿಯ ಜನಪ್ರಿಯ ಮೆಟಿಯರ್ 350 ಬೈಕಿನಿಂದ ತೆಗೆದುಕೊಳ್ಳಲಾಗಿದೆ ಎಂದು ತೋರುತ್ತಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Royal Enfield Hunter 350 ಬೈಕ್

ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕನ್ನು ಬ್ರ್ಯಾಂಡ್‌ನ ಹೊಸ ಜೆ-ಪ್ಲಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ಈ ಹೊಸ ಹಂಟರ್ 350 ಬೈಕ್ ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಈ ಬೈಕ್ ಸ್ಫಾಟ್ ಟೆಸ್ಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳು ಬಹಿರಂಗವಾಗಿತ್ತು.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Royal Enfield Hunter 350 ಬೈಕ್

ಹೊಸ ಹಂಟರ್ 350 ಬೈಕಿನ ವಿನ್ಯಾಸ, ಫೀಚರ್ ಮತ್ತು ಹೆಚ್ಚಿನ ಮಾಹಿತಿಗಳು ಬಹಿರಂಗವಾಗಿವೆ. ಸ್ಫಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಮಾದರಿಯು ಕ್ಲಾಸಿಕ್-ರೋಡ್‌ಸ್ಟರ್ ಲುಕ್ ಅನ್ನು ಹೊಂದಿದೆ. ಈ ಬೈಕಿನ ವೃತಕಾರದ ಹೆಡ್‌ಲ್ಯಾಂಪ್, ಟೈಲ್‌ಲ್ಯಾಂಪ್ ಮತ್ತು ಟರ್ನ್ ಸಿಗ್ನಲ್ ಇಂಡಿಗೇಟರ್ ಗಳನ್ನು ಒಳಗೊಂಡಿವೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Royal Enfield Hunter 350 ಬೈಕ್

ಇದರ ವೃತ್ತಾಕಾರದ ಹೆಡ್‌ಲ್ಯಾಂಪ್ ಕ್ಲಸ್ಟರ್ ಸಂಯೋಜಿತ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಸ್ಕಲಪಡಡ್ ಫ್ಯೂಯಲ್ ಟ್ಯಾಂಕ್, ಮೆತ್ತನೆಯ ಸ್ಪ್ಲಿಟ್-ಸೀಟುಗಳು, ವಿಶಾಲವಾದ ಹ್ಯಾಂಡಲ್‌ಬಾರ್, ಅಪ್-ಸ್ವಿಪ್ಟ್ ಎಕ್ಸಾಸ್ಟ್ ಮತ್ತು ಸೈಡ್ ಕವರ್‌ಗಳನ್ನು ಮಿಟಿಯೊರ್ 350 ಮಾದರಿಯಲ್ಲಿ ಇದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Royal Enfield Hunter 350 ಬೈಕ್

ಇನ್ನು ಈ ಬೈಕಿನಲ್ಲಿ ಸಣ್ಣ-ಸಿಂಗಲ್-ಪಾಡ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಕೂಡ ಗಮನಿಸಬಹುದು. ಇನ್ನು ಈ ಹೊಸ ಬೈಕಿನಲ್ಲಿ ಟ್ರಿಪ್ಪರ್ ನ್ಯಾವಿಗೇಷನ್ ಫೀಚರ್ ಅನ್ನು ಕೂಡ ನೀಡಬಹುದು ಎಂದು ನಿರೀಕ್ಷಿಸುತ್ತೇವೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Royal Enfield Hunter 350 ಬೈಕ್

ಮೊಬೈಲ್ ಅಪ್ಲಿಕೇಶನ್‌ ಮೂಲಕ ಸ್ಮಾರ್ಟ್‌ಫೋನ್‌ನೊಂದಿಗೆ ಒಮ್ಮೆ ಜೋಡಿಸಿದಾಗ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಒದಗಿಸಲು ಇದು ಸಣ್ಣ ಟಿಎಫ್‌ಟಿ ಡಿಸ್ ಪ್ಲೇಯನ್ನು ಹೊಂದಿರುತ್ತದೆ. ಇದು ಸ್ಪೀಡ್, ಒಡೋಮೀಟರ್, ಟ್ರಿಪ್ ಮೀಟರ್, ಫ್ಯೂಯಲ್ ಗೇಜ್ ಮತ್ತು ಇತರ ಟೆಲ್ಟೇಲ್ ಚಿಹ್ನೆಗಳಂತಹ ಉಳಿದ ವಿವರಗಳನ್ನು ಒದಗಿಸಲು ಮುಖ್ಯ ಕ್ಲಸ್ಟರ್ ಯುನಿಟ್ ಅನ್ನು ಕಾಯ್ದಿರಿಸಲಾಗುತ್ತದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Royal Enfield Hunter 350 ಬೈಕ್

ಇನ್ನು ಈ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನಲ್ಲಿ ಮಿಟಿಯೊರ್ 350 ಮಾದರಿಯಲ್ಲಿರುವ ಅದೇ ಎಂಜಿನ್ ಅನ್ನು ಅಳವಡಿಸಬಹುದು, ಇದು ಹೊಸ ಎಸ್‌ಒಹೆಚ್‌ಸಿ 349ಸಿಸಿ ಸಿಂಗಲ್ ಸಿಲಿಂಡರ್ ಏರ್-ಆಯಿಲ್ ಕೂಲ್ಡ್ ಎಸ್‌ಒಹೆಚ್‌ಸಿ ಎಂಜಿನ್ ಆಗಿರುತ್ತದೆ.

ಈ ಎಂಜಿನ್ 6100 ಆರ್‌ಪಿಎಂನಲ್ಲಿ 20.2 ಬಿಹೆಚ್‍ಪಿ ಪವರ್ ಮತ್ತು 4000 ಆರ್‌ಪಿಎಂನಲ್ಲಿ 27 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ. ಇನ್ನು ಈ ಬೈಕಿನ ಎಕ್ಸಾಸ್ಟ್ ನಿಂದ ಬರುವ ಸೌಂಡ್ ಆಕರ್ಷಕವಾಗಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Royal Enfield Hunter 350 ಬೈಕ್

ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಿಂಭಾಗದಲ್ಲಿ ಟ್ವಿನ್-ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. ಇನ್ನು ಎರಡು ಕಡೆಯಲ್ಲಿ ಡಿಸ್ಕ್ ಬ್ರೇಕ್ ಅನ್ನು ನೀಡಿ, ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Royal Enfield Hunter 350 ಬೈಕ್

ಇನ್ನು ರಾಯಲ್ ಎನ್‍ಫೀಲ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಹಿಮಾಲಯನ್ ಬೈಕಿನ ಹೊಸ ಸ್ಕ್ರ್ಯಾಂಬ್ಲರ್ ವೆರಿಯೆಂಟ್ ಬಿಡುಗಡೆಗೊಳಿಸಲಿದೆ. ಇದರ ಹೆಸರು ಸ್ಕ್ರಾಮ್ 411 ಆಗಿದೆ. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಸ್ಕ್ರಾಮ್ 411 ವೆರಿಯೆಂಟ್ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಲಿದೆ. ವರದಿಗಳ ಪ್ರಕಾರ, ಈ ಹೊಸ ಹಿಮಾಲಯನ್ ಸ್ಕ್ರಾಮ್ 411 ವೆರಿಯೆಂಟ್ ಮುಂದಿನ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಈ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಅನ್ನು ಪರೀಕ್ಷಿಸುವಾಗ ಭಾರತೀಯ ರಸ್ತೆಗಳಲ್ಲಿ ಹಲವಾರು ಬಾರಿ ಗುರುತಿಸಲಾಗಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ Royal Enfield Hunter 350 ಬೈಕ್

ರಾಯಲ್ ಎನ್‌ಫೀಲ್ಡ್ ಕಂಪನಿಯ 350ಸಿಸಿ ವಿಭಾಗದ ಹಂಟರ್ ಬೈಕ್ ಹೊಸ ಮಾದರಿಯಾಗಿದೆ. ಈ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ ಬೈಕ್ ಮುಂದಿನ ವರ್ಷದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದುದೆಂದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಬಳಿಕ ಹೋಂಡಾ ಹೈನೆಸ್ ಸಿಬಿ 350 ಬೈಕಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Royal enfield hunter 350 will launch soon teased video details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X