Just In
- 24 min ago ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- 36 min ago TVS iQube: ಲಕ್ಷಾಂತರ ಭಾರತೀಯರ ನೆಚ್ಚಿನ ಸ್ಕೂಟರ್ನ ಡೌನ್ಪೇಮೆಂಟ್, ಇಎಂಐ, ಲೋನ್ ವಿವರ!
- 40 min ago viral video: ಬೆಂಗಳೂರಿನಲ್ಲಿ ಮಾತ್ರ ಸಾಧ್ಯ: ಹೆಣ್ಮಗು.. ಹೆಣ್ಮಗು ಓಹ್.. ಎಂದ ನೆಟ್ಟಿಗರು!
- 54 min ago ಯುಗಾದಿ ಜಾತ್ರೆ: ಶ್ರೀಶೈಲ ಮಲ್ಲಿಕಾರ್ಜುನನ ಭಕ್ತರಿಗೆ ಸಿಹಿಸುದ್ದಿ.. NWKRTCಯಿಂದ ವಿಶೇಷ ಬಸ್ ಸೇವೆ
Don't Miss!
- News ಮಂಗಳೂರಿನಲ್ಲಿ ಅಗ್ನಿ ಅವಘಡ: ಹೊತ್ತಿ ಉರಿದ ಫಿಶ್ ಆಯಿಲ್ ಫ್ಯಾಕ್ಟರಿ
- Sports IPL 2024 RR vs DC: ರಾಯಲ್ಸ್ ವಿರುದ್ಧ ಗೆಲುವಿನೊಂದಿಗೆ ಪುಟಿದೇಳುವುದೇ ಕ್ಯಾಪಿಟಲ್ಸ್?; ಸಂಭಾವ್ಯ ಆಡುವ 11ರ ಬಳಗ
- Lifestyle ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- Technology OnePlus: ಒನ್ಪ್ಲಸ್ ನಾರ್ಡ್ CE 4 ಫೋನ್ನ ಭಾರತದ ಬೆಲೆ ಮಾಹಿತಿ ಲೀಕ್! ಲಾಂಚ್ಗೆ ನಾಲ್ಕೇ ದಿನ ಬಾಕಿ
- Finance ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು: ಐಟಿ ಕಂಪೆನಿಗಳನ್ನು ಕೇರಳಕ್ಕೆ ಆಹ್ವಾನಿಸಿದ ಸಚಿವ
- Movies ಲೋಕಸಭೆ ಚುನಾವಣೆ: ಬಿಜೆಪಿ 7ನೇ ಪಟ್ಟಿಯಲ್ಲಿ ದರ್ಶನ್ ಜೊತೆ ನಟಿಸಿದ್ದ ನಟಿಗೂ ಸಿಕ್ತು ಟಿಕೆಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಕರ್ಷಕ ಬೆಲೆಯಲ್ಲಿ ಕೇರ್ 24 ಸರ್ವಿಸ್ ಪ್ಯಾಕೇಜ್ ಘೋಷಿಸಿದ ರಾಯಲ್ ಎನ್‌ಫೀಲ್ಡ್
ಕ್ಲಾಸಿಕ್ ಬೈಕ್ ಮಾರಾಟದಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿರುವ ರಾಯಲ್ ಎನ್‌ಫೀಲ್ಡ್ ಕಂಪನಿಯು ಮಾರಾಟದಲ್ಲಿ ಸುಧಾರಣೆಗಾಗಿ ಹಲವಾರು ಬದಲಾವಣೆಗಳನ್ನು ಪರಚಯಿಸಿ ಯಶಸ್ವಿಯಾಗುತ್ತಿದ್ದು, ಕಂಪನಿಯು ಇದೀಗ ತನ್ನ ಪ್ರಮುಖ ಬೈಕ್ ಮಾದರಿಗಳಿಗೆ ಅತ್ಯುತ್ತಮ ಸರ್ವಿಸ್ ಸೇವೆಗಳನ್ನು ಒದಗಿಸಲು ಕೇರ್ 24 ಪ್ಯಾಕೇಜ್ ಘೋಷಣೆ ಮಾಡಿದೆ.
ರಾಯಲ್ ಎನ್‌ಫೀಲ್ಡ್ ಕಂಪನಿಯು ಘೋಷಣೆ ಮಾಡರುವ ಹೊಸ ಕೇರ್ 24 ಪ್ಯಾಕೇಜ್ ಮಾದರಿಯು ಸ್ಟ್ಯಾಂಡರ್ಡ್ ಸರ್ವಿಸ್ ಪ್ಯಾಕೇಜ್ ಹೊರತುಪಡಿಸಿ ಹೆಚ್ಚುವರಿ ಮೊತ್ತಕ್ಕೆ ಖರೀದಿ ಮಾಡಬೇಕಿದ್ದು, ಹೊಸ ಕೇರ್ 24 ಪ್ಯಾಕೇಜ್‌ನಲ್ಲಿ ನಿಗದಿ ಅವಧಿಯೊಳಗೆ ಮೂರು ಸಾಮಾನ್ಯ ಸರ್ವಿಸ್ ಮತ್ತು ಎರಡು ಬಾರಿ ಆಯಿಲ್ ಬದಲಾಯಿಸಿ ಕೊಡಲಾಗುತ್ತದೆ.
ಕೇರ್ 24 ಸರ್ವಿಸ್ ಪ್ಯಾಕೇಜ್‌ಗೆ ರೂ. 2,499 ದರ ನಿಗದಿ ಮಾಡದ್ದು, ಹೊಸ ಸರ್ವಿಸ್ ಪ್ಯಾಕೇಜ್ ಗ್ರಾಹಕರ ಹೆಚ್ಚುವರಿಯಾಗಿ ಕೊಡುಗೆಗೆಗಳನ್ನು ಸಹ ನೀಡಲಾಗುತ್ತದೆ.
ಬೈಕ್ ಸರ್ವಿಸ್ ಸಂದರ್ಭದಲ್ಲಿ ಸ್ಟ್ಯಾಂಡರ್ಡ್ ಸರ್ವಿಸ್ ಹೊರತು ಹೆಚ್ಚುವರಿ ಬಿಡಿಭಾಗಗಳ ಸೇವೆ ಅಗತ್ಯವಿದ್ದಲ್ಲಿ ಅದರ ಮೇಲೂ ವಿನಾಯ್ತಿ ನೀಡಲಿದ್ದು, ಲೆಬರ್ ಶುಲ್ಕದ ಮೇಲೂ ಶೇ. 20 ರಷ್ಟು ವಿನಾಯ್ತಿ ನೀಡಲಾಗುತ್ತಿದೆ.
ಹೊಸ ಕೇರ್ 24 ಸರ್ವಿಸ್ ಸೇವೆಗಳಿಗಾಗಿ ಗ್ರಾಹಕರು ಆನ್‌ಲೈನ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದ್ದು, ಹೊಸ ಸರ್ವಿಸ್ ಪ್ಯಾಕೇಜ್‌ನೊಂದಿಗೆ ವಾಹನ ಕಾರ್ಯಕ್ಷಮತೆಗೆ ಹೆಚ್ಚಿಸಲು ಸುಧಾರಿಸಲಿದೆ.
ಇನ್ನು ಕೋವಿಡ್ ಪರಿಣಾಮ ಕಳೆದ ತಿಂಗಳು ತಗ್ಗಿದ್ದ ಹೊಸ ವಾಹನಗಳ ಬುಕ್ಕಿಂಗ್ ಪ್ರಕ್ರಿಯೆ ಇದೀಗ ಮತ್ತೆ ಚುರುಕುಗೊಂಡಿದ್ದು, ರಾಯಲ್ ಎನ್‌ಫೀಲ್ಡ್ ಮಿಟಿಯೊರ್ ಬೈಕ್ ಮಾದರಿಗೂ ಉತ್ತಮ ಬೇಡಿಕೆ ಹರಿದುಬರುತ್ತಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯ ಮಾಹಿತಿಯ ಪ್ರಕಾರ ಹೊಸ ಮಿಟಿಯೊರ್ 350 ಬೈಕ್ ಖರೀದಿಸುವ ಗ್ರಾಹಕರು ಬುಕ್ಕಿಂಗ್ ನಂತರ ವಿತರಣೆಗಾಗಿ ವಿವಿಧ ನಗರಗಳಿಗೆ ಅನುಗುಣವಾಗಿ 2 ರಿಂದ 4 ತಿಂಗಳು ಕಾಯಬೇಕಾಗುತ್ತದೆ.
ಲಾಕ್‌ಡೌನ್ ನಡುವೆಯೂ ಕಂಪನಿಯು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳ ಮೂಲಕ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಶೀಘ್ರದಲ್ಲೇ ಕಂಪನಿಯು ಬೈಕ್ ಉತ್ಪಾದನೆಯನ್ನು ಹೆಚ್ಚಿಸಲು ನಿರ್ಧರಿಸಿದೆ.
ಕೋವಿಡ್ ಪರಿಣಾಮ ಬೈಕ್ ಉತ್ಪಾದನಾ ಘಟಕದಲ್ಲಿ ಕನಿಷ್ಠ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಣೆ ಹಿನ್ನಲೆಯಲ್ಲಿ ಉತ್ಪಾದನಾ ಪ್ರಮಾಣವು ಕುಸಿತ ಕಂಡಿದ್ದು, ಪರಿಸ್ಥಿತಿ ಸುಧಾರಣೆ ಇನ್ನು ಕೆಲವು ತಿಂಗಳು ಕಾಲ ಬೇಕಾಗಬಹುದಾಗಿದೆ.
ಸಂಕಷ್ಟದ ಪರಿಸ್ಥಿತಿಯಲ್ಲೂ ಬೈಕ್ ಮಾರಾಟದಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಗೆ ಉತ್ತಮ ಬೇಡಿಕೆ ಹರಿದುಬಂದಿದ್ದು, ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ 20,073 ಯುನಿಟ್‌ಗಳನ್ನು ಮಾರಾಟಗೊಳಿಸಿದೆ.
ಕಳೆದ ತಿಂಗಳು ದೇಶದ ಹೆಚ್ಚಿನ ಭಾಗಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿತ್ತು. ಅಲ್ಲದೇ ಕೊರೋನಾ ಪಾಸಿಟಿವ್ ಪ್ರಕರಣಗಳು ಕೂಡ ಹೆಚ್ಚಾಗಿತ್ತು. ಇದರ ನಡುವೆ ರಾಯಲ್ ಎನ್‌ಫೀಲ್ಡ್ ಕಂಪನಿಯು 20,073 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಇನ್ನು ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಒಟ್ಟು 48,789 ಯುನಿಟ್‌ಗಳನ್ನು ಮಾರಾಟ ಮಾಡಿದ್ದ ಕಂಪನಿಯು ಕಳೆದ ತಿಂಗಳ ಮಾರಾಟದಲ್ಲಿ ಶೇ.58.8 ರಷ್ಟು ಕುಸಿತ ಕಂಡಿದೆ.