ಶಾಟ್‌ಗನ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಭಾರತೀಯ ಮಾರುಕಟ್ಟೆಗಾಗಿ ಹೊಸ ಬೈಕ್‍ಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿದೆ, ಇದರಲ್ಲಿ ಕೆಲವು ಮಾದರಿಗಳು ಭಾರತದ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟ್ ನಡೆಸುತ್ತಿರುವಾಗ ಕಾಣಿಸಿಕೊಂಡಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ.

ಶಾಟ್‌ಗನ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯು ಇತ್ತೀಚೆಗೆ ಶಾಟ್‌ಗನ್ ಎಂಬ ಹೊಸ ಹೆಸರಿಗಾಗಿ ಟ್ರೇಡ್‌ಮಾರ್ಕ್ ಅನ್ನು ಸಲ್ಲಿಸಿದೆ ಎಂದು ವರದಿಗಳಾಗಿದೆ .ರಾಯಲ್ ಎನ್‌ಫೀಲ್ಡ್ ಎರಡು 650ಸಿಸಿ ಬೈಕ್‍ಗಳನ್ನು ಪರೀಕ್ಷಿಸುತ್ತಿದೆ. ಅವುಗಳಲ್ಲಿ ಒಂದು ಕಡಿಮೆ ಸ್ಲಂಗ್ ಕ್ರೂಸರ್ ಮತ್ತು ಇನ್ನೊಂದು ಹೆಚ್ಚು ಸಾಂಪ್ರದಾಯಿಕ ಶೈಲಿಯ ಬೈಕ್ ಆಗಿರುತ್ತದೆ. ಈ ಎರಡು ಬೈಕ್‍ಗಳಲ್ಲಿ 650 ಸಿಸಿ ಕ್ರೂಸರ್‌ಗೆ ಮಿಟಿಯೊರ್ ಎಂದು ಮತ್ತು ಇನ್ನೊಂದನ್ನು ಕ್ಲಾಸಿಕ್ 650 ಎಂದು ಹೆಸರಿಡಬಹುದು ಎಂದು ಈ ಹಿಂದೆ ವರದಿಗಳಾಗಿತ್ತು.

ಶಾಟ್‌ಗನ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ರಾಯಲ್ ಎನ್‌ಫೀಲ್ಡ್

ಈ ಎರಡು ಬೈಕ್‍ಗಳಲ್ಲಿ ಕಾಂಟಿನೆಂಟಲ್ ಜಿಟಿ 650 ಮತ್ತು ಇಂಟರ್‌ಸೆಪ್ಟರ್ 650 ಬೈಕ್‍ಗಳಲ್ಲಿರುವ ಒಂದೇ 648 ಸಿಸಿ, ಏರ್/ಆಯಿಲ್-ಕೂಲ್ಡ್, ಪ್ಯಾರೆಲಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 47.65 ಬಿಹೆಚ್‌ಪಿ ಪವರ್ ಮತ್ತು 52 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಶಾಟ್‌ಗನ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ರಾಯಲ್ ಎನ್‌ಫೀಲ್ಡ್

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿರುತ್ತದೆ. ಇದರಲ್ಲಿ ರಾಯಲ್ ಎನ್‍ಫೀಲ್ಡ್ 650ಸಿಸಿ ಕ್ರೂಸರ್ ಬೈಕ್ 2018ರ ಇಐಸಿಎಂಎ ನಲ್ಲಿ ಪ್ರದರ್ಶಿಸಲಾದ ಕೆಎಕ್ಸ್ ಬಾಬರ್ ಕಾನ್ಸೆಪ್ಟ್‌ಗೆ ಹೋಲುತ್ತದೆ.

ಶಾಟ್‌ಗನ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ರಾಯಲ್ ಎನ್‌ಫೀಲ್ಡ್

ಇನ್ನು ಸ್ಪೈ ಚಿತ್ರದಲ್ಲಿ ಹೊಸ ರಾಯಲ್ ಎನ್‍ಫೀಲ್ಡ್ 650ಸಿಸಿ ಕ್ರೂಸರ್ ಬೈಕಿನಲ್ಲಿ ದುಂಡಗಿನ ಆಕಾರದ ಹೆಡ್‌ಲ್ಯಾಂಪ್‌ಗಳಿಂದ ಅದರ ಪಕ್ಕದಲ್ಲಿ ಇರಿಸಲಾಗಿರುವ ಬ್ರ್ಯಾಂಡ್‌ನ ಟಿಪ್ಪರ್ ನ್ಯಾವಿಗೇಷನ್ ಯುನಿಟ್ ನೊಂದಿಗೆ ಸಿಂಗಲ್-ಪಾಡ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಶಾಟ್‌ಗನ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ರಾಯಲ್ ಎನ್‌ಫೀಲ್ಡ್

ಈ ಹೊಸ ರಾಯಲ್ ಎನ್‍ಫೀಲ್ಡ್ 650ಸಿಸಿ ಕ್ರೂಸರ್ ಬೈಕ್ ಎರಡೂ ಬದಿಗಳಲ್ಲಿ ಟ್ವಿನ್-ಕ್ರೋಮ್ ಫಿನಿಶಿಂಗ್ ಎಕ್ಸಾಸ್ಟ್ ಅನ್ನು ಒಳಗೊಂಡಿರುತ್ತದೆ. ಫ್ಯೂಯಲ್ ಟ್ಯಾಂಕ್‌ನ ಕೆಳಗೆ ಇರಿಸಲಾಗಿರುವ ಹೀಟ್-ಗಾರ್ಡ್ ಪ್ಲೇಟ್, ಎರಡು ವಿಭಿನ್ನ ಅಲಾಯ್ ವ್ಹೀಲ್ ಗಳನ್ನು ಹೊಂದಿರಲಿವೆ.

ಶಾಟ್‌ಗನ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ರಾಯಲ್ ಎನ್‌ಫೀಲ್ಡ್

ಈ 650ಸಿಸಿ ಕ್ರೂಸರ್ ಬೈಕಿನ ಮುಂಭಾಗ ಮತ್ತು ಹಿಂಭಾಗದ ಅಲಾಯ್ ವ್ಹೀಲ್ ಗಳು ಕ್ರಮವಾಗಿ 17-ಇಂಚು ಮತ್ತು 16-ಇಂಚುಗಳಾಗಿರಬಹುದು. ಹೊಸ ಕ್ರೂಸರ್ ಬೈಕಿನ ಎರಡೂ ತುದಿಗಳಲ್ಲಿ ದುಂಡಾದ-ಫೆಂಡರ್‌ಗಳನ್ನು ಹೊಂದಿದ್ದು, ಹಿಂಭಾಗದಲ್ಲಿ ಕಡಿಮೆ-ಸೆಟ್ ಟರ್ನ್-ಸಿಗ್ನಲ್ ಇಂಡಿಕೇಟರ್ ಗಳೊಂದಿಗೆ ದುಂಡಗಿನ ಆಕಾರದ ಎಲ್ಇಡಿ ಟೈಲ್ ಲ್ಯಾಂಪ್ ಅಳವಡಿಸಲಾಗಿದೆ.

ಶಾಟ್‌ಗನ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ರಾಯಲ್ ಎನ್‌ಫೀಲ್ಡ್

ಈ ಬೈಕ್ ರೆಟ್ರೊ-ಬಾಬರ್ ವಿನ್ಯಾಸವನ್ನು ಕೂಡಿದ್ದು, ಸುಮಾರು 17 ಲೀಟರ್ ಸಾಮರ್ಥ್ಯದ ದೊಡ್ಡ ಫ್ಯೂಯಲ್ ಟ್ಯಾಂಕ್ ಹೊಂದಿದೆ. ಈ ಬೈಕ್ ವಿಶಾಲ ಹ್ಯಾಂಡಲ್‌ಬಾರ್ ಅನ್ನು ಹೊಂದಿದ್ದು, ಸ್ವಲ್ಪ ಮುಂದಕ್ಕೆ ಹೊಂದಿಸಲಾದ ಫುಟ್‌ಪೆಗ್‌ಗಳನ್ನು ಹೊಂದಿದ್ದು, ಆರಾಮವಾಗಿರುವ ಸವಾರಿ ಮಾಡಬಹುದಾಗಿದೆ.

ಶಾಟ್‌ಗನ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ರಾಯಲ್ ಎನ್‌ಫೀಲ್ಡ್

ಹೊಸ 650ಸಿಸಿ ಕ್ರೂಸರ್ ಬೈಕ್ ಬ್ರ್ಯಾಂಡ್‌ನಿಂದ ಪ್ರೀಮಿಯಂ ಕ್ರೂಸರ್ ಬೈಕ್ ಆಗಿರಲಿದೆ. ಈ ಹೊಸ ರಾಯಲ್ ಎನ್‍ಫೀಲ್ಡ್ 650ಸಿಸಿ ಕ್ರೂಸರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಬಹುದೆಂದು ನಿರೀಕ್ಷಿಸುತ್ತೇವೆ.

ಶಾಟ್‌ಗನ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ರಾಯಲ್ ಎನ್‌ಫೀಲ್ಡ್

ಇನ್ನು 650ಸಿಸಿ ಎರಡು ಬೈಕ್‍ಗಳನ್ನು ಅಭಿವೃದ್ಧಿಪಡಿಸಸಲಾಗುತ್ತಿದೆ. ಇದರಲ್ಲಿ 650ಸಿಸಿ ಕ್ರೂಸರ್ ಬೈಕ್ ಈಗಗಾಲೇ ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡಿದೆ. ಆದರೆ ಈ ಎರಡು ಬೈಕ್‍ಗಳಲ್ಲಿ ಯಾವುದಕ್ಕೆ ಶಾಟ್‌ಗನ್ ಎಂಬ ಹೆಸರನ್ನು ನೀಡಲಾಗುತ್ತದೆ ಎಂಬುದು ತಿಳಿದುಬಂದಿಲ್ಲ.

Most Read Articles

Kannada
English summary
Royal Enfield Files Trademark For Shotgun. Read In Kannada.
Story first published: Wednesday, April 28, 2021, 12:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X