ಸೆಪ್ಟೆಂಬರ್ ತಿಂಗಳಿನಲ್ಲಿ 30 ಸಾವಿರಕ್ಕೂ ಹೆಚ್ಚು ಬೈಕುಗಳನ್ನು ಮಾರಾಟ ಮಾಡಿದ Royal Enfield

Royal Enfield ಕಂಪನಿಯು 2021ರ ಸೆಪ್ಟೆಂಬರ್ ತಿಂಗಳಿನಲ್ಲಿ 33,529 ಯುನಿಟ್ ದ್ವಿ ಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಈ ಪ್ರಮಾಣವು 2020 ರ ಸೆಪ್ಟೆಂಬರ್ ತಿಂಗಳಿನಲ್ಲಿ ಮಾರಾಟವಾದ ವಾಹನಗಳಿಗಿಂತ 40% ನಷ್ಟು ಕಡಿಮೆಯಾಗಿದೆ. ಚೆನ್ನೈ ಮೂಲದ Royal Enfield ಕಂಪನಿಯು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 60,331 ಯುನಿಟ್ ದ್ವಿ ಚಕ್ರ ವಾಹನಗಳನ್ನು ಮಾರಾಟ ಮಾಡಿತ್ತು.

ಸೆಪ್ಟೆಂಬರ್ ತಿಂಗಳಿನಲ್ಲಿ 30 ಸಾವಿರಕ್ಕೂ ಹೆಚ್ಚು ಬೈಕುಗಳನ್ನು ಮಾರಾಟ ಮಾಡಿದ Royal Enfield

ಇನ್ನು ಕಳೆದ ತಿಂಗಳು ದಾಖಲಾದ 33,529 ಯುನಿಟ್ ಮಾರಾಟ ಪ್ರಮಾಣವು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾದ ಹಾಗೂ ವಿದೇಶಗಳಿಗೆ ರಫ್ತು ಮಾಡಲಾದ ವಾಹನಗಳನ್ನು ಒಳಗೊಂಡಿದೆ. ಕಂಪನಿಯು ಕಳೆದ ತಿಂಗಳು 27,233 ಯುನಿಟ್ ಬೈಕುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದರೆ, 6,296 ಯುನಿಟ್ ಬೈಕುಗಳನ್ನು ರಫ್ತು ಮಾಡಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 30 ಸಾವಿರಕ್ಕೂ ಹೆಚ್ಚು ಬೈಕುಗಳನ್ನು ಮಾರಾಟ ಮಾಡಿದ Royal Enfield

ಕಳೆದ ತಿಂಗಳು ಮಾರಾಟವಾದ Royal Enfield ಬೈಕ್‌ಗಳ ಒಟ್ಟು ಪ್ರಮಾಣವು ದೇಶಿಯ ಮಾರುಕಟ್ಟೆಯಲ್ಲಿಯೇ 81.22% ನಷ್ಟಾಗಿದೆ. ಅದೇ ರೀತಿ Royal Enfield ಕಂಪನಿಯ ಒಟ್ಟು ಮಾರಾಟವನ್ನು 350 ಸಿಸಿ ಹಾಗೂ 350 ಸಿಸಿಗಿಂತ ಕಡಿಮೆ ಎಂದು ವಿಂಗಡಿಸಬಹುದು. Royal Enfield ಕಂಪನಿಯು 350 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಬೈಕುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 30 ಸಾವಿರಕ್ಕೂ ಹೆಚ್ಚು ಬೈಕುಗಳನ್ನು ಮಾರಾಟ ಮಾಡಿದ Royal Enfield

ಒಟ್ಟು ಮಾರಾಟದಲ್ಲಿ ಸುಮಾರು 76.11% ಅಥವಾ 25,520 ಯುನಿಟ್‌ಗಳು 350 ಸಿಸಿಗಿಂತ ಕಡಿಮೆ ಸಾಮರ್ಥ್ಯವನ್ನು ಹೊಂದಿವೆ. ಉಳಿದ 8,009 ಯುನಿಟ್ ಗಳು 350 ಸಿಸಿಗಿಂತ ಹೆಚ್ಚು ಸಾಮರ್ಥ್ಯವನ್ನು ಹೊಂದಿವೆ. ವಾಸ್ತವವಾಗಿ Royal Enfield ಕಂಪನಿಯ 350 ಸಿಸಿಗಿಂತ ಕಡಿಮೆ ಇರುವ ಬೈಕುಗಳ ಮಾರಾಟವು ಕಳೆದ ತಿಂಗಳು ಸುಮಾರು 53.12% ನಷ್ಟು ಕುಸಿದಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 30 ಸಾವಿರಕ್ಕೂ ಹೆಚ್ಚು ಬೈಕುಗಳನ್ನು ಮಾರಾಟ ಮಾಡಿದ Royal Enfield

Royal Enfield ಕಂಪನಿಯು 2020ರ ಸೆಪ್ಟೆಂಬರ್ ತಿಂಗಳಿನಲ್ಲಿ 53,434 ಯುನಿಟ್ 350 ಸಿಸಿ ಬೈಕ್‌ಗಳನ್ನು ಮಾರಾಟ ಮಾಡಿತ್ತು. ಇದೇ ವೇಳೆ 350 ಸಿಸಿಗಿಂತ ಹೆಚ್ಚು ಸಾಮರ್ಥ್ಯದ ಬೈಕುಗಳ ಮಾರಾಟದಲ್ಲಿ Royal Enfield ಕಂಪನಿಯು 35.81% ನಷ್ಟು ಹೆಚ್ಚಳ ಕಂಡಿದೆ. ಕಂಪನಿಯು 350 ಸಿಸಿಗಿಂತ ಹೆಚ್ಚು ಸಾಮರ್ಥ್ಯದ Himalayan, Interceptor 650 ಹಾಗೂ Continental GT 650 ಬೈಕ್‌ಗಳನ್ನು ಮಾರಾಟ ಮಾಡುತ್ತದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 30 ಸಾವಿರಕ್ಕೂ ಹೆಚ್ಚು ಬೈಕುಗಳನ್ನು ಮಾರಾಟ ಮಾಡಿದ Royal Enfield

Royal Enfield ಕಂಪನಿಯ 650 ಸಿಸಿ ಬೈಕ್‌ಗಳಲ್ಲಿ ಹೆಚ್ಚಿನ ಬೈಕ್‌ಗಳು ವಿದೇಶಿ ಮಾರುಕಟ್ಟೆಗಳಿಗೆ ರಫ್ತಾಗುತ್ತವೆ. ಕಳೆದ ತಿಂಗಳ ಮಾರಾಟದ ಅಂಕಿ ಅಂಶಗಳಿಂದ ಇದು ದೃಢಪಟ್ಟಿದೆ. Royal Enfield ಕಂಪನಿಯ ದೇಶಿಯ ಮಾರಾಟವು 51.54% ನಷ್ಟು ಕುಸಿದಿದ್ದು 350 ಸಿಸಿ ಬೈಕ್‌ಗಳ ಮಾರಾಟ ಪ್ರಮಾಣವು ಕಡಿಮೆಯಾಗಿದೆ. ಈ ಮಾರಾಟ ಪ್ರಮಾಣವು 2020ರ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಮಾತ್ರವಲ್ಲದೇ ಈ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೂ ಕಡಿಮೆಯಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 30 ಸಾವಿರಕ್ಕೂ ಹೆಚ್ಚು ಬೈಕುಗಳನ್ನು ಮಾರಾಟ ಮಾಡಿದ Royal Enfield

ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ Royal Enfield ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹಾಗೂ ವಿದೇಶಿ ಮಾರುಕಟ್ಟೆಯಲ್ಲಿ 45,860 ಬೈಕ್‌ಗಳನ್ನು ಮಾರಾಟ ಮಾಡಿತ್ತು. 350 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಬೈಕುಗಳ ಮಾರಾಟವನ್ನು ಹೊರತುಪಡಿಸಿ, ಉಳಿದ ಎಲ್ಲಾ ಬೈಕುಗಳ ದೇಶಿಯ ಮಾರಾಟ ಹಾಗೂ ರಫ್ತು ಮಾರಾಟ ಪ್ರಮಾಣವು ಗಣನೀಯವಾಗಿ ಕುಸಿದಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 30 ಸಾವಿರಕ್ಕೂ ಹೆಚ್ಚು ಬೈಕುಗಳನ್ನು ಮಾರಾಟ ಮಾಡಿದ Royal Enfield

Royal Enfield ಕಂಪನಿಯು ಕಳೆದ ಒಂದು ವರ್ಷದ ಅವಧಿಯಲ್ಲಿ ಅಕ್ಟೋಬರ್ 2020 - ಸೆಪ್ಟೆಂಬರ್ 2021 ಭಾರತವೂ ಸೇರಿದಂತೆ 2,47,067 ಬೈಕ್‌ಗಳನ್ನು ವಿಶ್ವಾದಾದ್ಯಂತ ಮಾರಾಟ ಮಾಡಿದೆ. ಈ ಪ್ರಮಾಣವು 2019ರ ಅಕ್ಟೋಬರ್ - 2020ರ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ 19% ನಷ್ಟು ಕಡಿಮೆಯಾಗಿದೆ. ಈ ಅವಧಿಯಲ್ಲಿ Royal Enfield ಕಂಪನಿಯು 2,08,078 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು.

ಸೆಪ್ಟೆಂಬರ್ ತಿಂಗಳಿನಲ್ಲಿ 30 ಸಾವಿರಕ್ಕೂ ಹೆಚ್ಚು ಬೈಕುಗಳನ್ನು ಮಾರಾಟ ಮಾಡಿದ Royal Enfield

2020 - 2021ರ ಅವಧಿಯಲ್ಲಿ ಕಂಪನಿಯ ರಫ್ತು ಪ್ರಮಾಣವು ಸುಮಾರು 222% ನಷ್ಟು ಹೆಚ್ಚಾಗಿದೆ. Royal Enfield ಕಂಪನಿಯು 2019 - 2020 ರಲ್ಲಿ ಕೇವಲ 11,443 ಯುನಿಟ್ ಬೈಕ್‌ಗಳನ್ನು ರಫ್ತು ಮಾಡಿದ್ದರೆ, ಕಳೆದ ವರ್ಷ ಒಟ್ಟು 36,797 ಯುನಿಟ್ ಬೈಕ್‌ಗಳನ್ನು ರಫ್ತು ಮಾಡಿದೆ. ಕರೋನಾ ವೈರಸ್ ಕಾರಣಕ್ಕೆ ಕಳೆದ ರಫ್ತು ಪ್ರಮಾಣವು ತೀವ್ರವಾಗಿ ಕುಸಿದಿತ್ತು.

ಸೆಪ್ಟೆಂಬರ್ ತಿಂಗಳಿನಲ್ಲಿ 30 ಸಾವಿರಕ್ಕೂ ಹೆಚ್ಚು ಬೈಕುಗಳನ್ನು ಮಾರಾಟ ಮಾಡಿದ Royal Enfield

ಇದರ ಜೊತೆಗೆ ಜಾಗತಿಕವಾಗಿ ಸೆಮಿಕಂಡಕ್ಟರ್‌ಗಳ ಕೊರತೆ ಉಂಟಾಗಿರುವುದರಿಂದ ಭಾರತದಲ್ಲಿಯೂ ವಾಹನಗಳ ಉತ್ಪಾದನೆ ಮೇಲೂ ಪರಿಣಾಮ ಬೀರುತ್ತಿದೆ.ಸೆಮಿಕಂಡಕ್ಟರ್‌ಗಳ ಕೊರತೆಯು ಅವುಗಳನ್ನು ಬಳಸುವ ವಾಹನಗಳ ಉತ್ಪಾದನೆಯಲ್ಲಿ ಪರಿಚಯಿಸಲಾಗುವ ಚಿಪ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ. Royal Enfield ಕಂಪನಿಯು ಸೆಪ್ಟೆಂಬರ್ ತಿಂಗಳ ಮಾರಾಟದಲ್ಲಿ ಹಿನ್ನೆಡೆ ಅನುಭವಿಸಲು ಸೆಮಿಕಂಡಕ್ಟರ್‌ಗಳ ಕೊರತೆಯೇ ಪ್ರಮುಖ ಕಾರಣವಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 30 ಸಾವಿರಕ್ಕೂ ಹೆಚ್ಚು ಬೈಕುಗಳನ್ನು ಮಾರಾಟ ಮಾಡಿದ Royal Enfield

ಇತ್ತೀಚಿಗಷ್ಟೇ Royal Enfield ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ತನ್ನ Meteor ಹಾಗೂ Himalayan Adventure ಬೈಕುಗಳ ಬೆಲೆಯನ್ನು ಏರಿಕೆ ಮಾಡಿತ್ತು. Royal Enfield ಕಂಪನಿಯು ತನ್ನ ಜನಪ್ರಿಯ Himalayan Adventure ಬೈಕಿನ ಬೆಲೆಯನ್ನು ರೂ.5,000 ಗಳವರೆಗೆ ಹೆಚ್ಚಿಸಿದೆ. ಇನ್ನು Meteor ಬೈಕುಗಳ ಬೆಲೆಯನ್ನು ರೂ.7 ಸಾವಿರಗಳವರೆಗೆ ಹೆಚ್ಚಿಸಲಾಗಿದೆ.

Most Read Articles

Kannada
English summary
Royal enfield sells more than 30 thousand bikes in september 2021 details
Story first published: Monday, October 4, 2021, 12:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X