ಜಾಗೃತಿ ಅಭಿಯಾನಕ್ಕಾಗಿ ಉತ್ತರಖಾಂಡ್ ತನಕ ಬೈಕ್ ರೈಡ್‌ ಆರಂಭಿಸಿದ ಬೆಂಗಳೂರಿನ ಮಹಿಳೆ

ಪ್ರತಿಯೊಬ್ಬ ಬೈಕ್ ರೈಡರ್‌ಗಳಿಗೆ ಅವಕಾಶ ಸಿಕ್ಕಾಗ ದೂರದ ಪ್ರವಾಸಗಳನ್ನು ಕೈಗೊಳ್ಳುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ ಮೋಟಾರ್ಸೈಕಲ್ ರೈಡ್ ಅನ್ನು ಅನೇಕರು ವಿವಿಧ ಕಾರಣಗಳಿಗಾಗಿ ಕೈಗೊಂಡರೂ ಅದರಲ್ಲಿ ಇನ್ನೊಬ್ಬರಿಗೆ ಸಹಾಯವಾಗಿ ಎನ್ನುವ ಉದ್ದೇಶ ತೀರಾ ಕಡಮೆ ಎಂದರೆ ತಪ್ಪಾಗುವುದಿಲ್ಲ.

ಜಾಗೃತಿ ಅಭಿಯಾನಕ್ಕಾಗಿ ಉತ್ತರಖಾಂಡ್ ತನಕ ಬೈಕ್ ರೈಡ್‌ ಆರಂಭಿಸಿದ ಬೆಂಗಳೂರಿನ ಮಹಿಳೆ

ಮೋಟಾರ್‌ಸೈಕಲ್ ರೈಡ್ ಅನ್ನು ಕೆಲವರು ಮೋಜು ಮಸ್ತಿಗಾಗಿ ಕೈಗೊಂಡರೆ ಇನ್ನು ಕೆಲವರು ನೆಮ್ಮದಿಯ ಬದುಕಿಗಾಗಿ ಹೊಸ ಸ್ಥಳಗಳನ್ನು ಅರಸಿ ಪ್ರಯಾಣ ಬೆಳೆಸುವುದು ಸಾಮಾನ್ಯವಾಗುತ್ತಿದೆ. ಹಾಗೆಯೇ ಇನ್ನು ಕೆಲವರು ತಮ್ಮ ಅಮೂಲ್ಯ ಪ್ರಯಾಣವನ್ನು ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದವರನ್ನು ಬೆಂಬಲಿಸಲು ಮತ್ತು ಅವರಿಗೆ ಸಹಕಾರಿಯಾಗಲು ರೈಡ್ ಮೂಲಕ ಅಭಿಯಾನ ಕೈಗೊಳ್ಳುವುದು ತೀರಾ ಕಡಿಮೆ. ಆದರೆ ಇತ್ತೀಚೆಗೆ ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದವರನ್ನು ಬೆಂಬಲಿಸುವ ಉದ್ದೇಶದಿಂದ ಯುವಜನತೆಯು ಮುಂದೆ ಬರುತ್ತಿರುವುದು ಹೊಸ ಬದಲಾವಣೆಗಳಿಗೆ ಕಾರಣವಾಗುತ್ತಿದೆ.

ಜಾಗೃತಿ ಅಭಿಯಾನಕ್ಕಾಗಿ ಉತ್ತರಖಾಂಡ್ ತನಕ ಬೈಕ್ ರೈಡ್‌ ಆರಂಭಿಸಿದ ಬೆಂಗಳೂರಿನ ಮಹಿಳೆ

ಹೌದು, ಶಾರೀಕವಾಗಿ ಎಲ್ಲಾ ಸರಿ ಇದ್ದರೆ ಮಾತ್ರ ಶ್ರೇಷ್ಠರು ಎನ್ನುವ ಮನೋಭಾವನೆ ತೊಡೆದುಹಾಕಿ ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದವರನ್ನು ಬೆಂಬಲಿಸುವ ಉದ್ದೇಶದಿಂದ ಬೈಕ್ ರೈಡ್ ಅಭಿಯಾನ ಆಂಭಿಸಿರುವ ಬೆಂಗಳೂರಿನ ಅರ್ಚನಾ ತಿಮ್ಮರಾಜು ಅವರ ಕಾರ್ಯವನ್ನು ನಾವು ಮೆಚ್ಚಲೇಬೇಕು.

ಜಾಗೃತಿ ಅಭಿಯಾನಕ್ಕಾಗಿ ಉತ್ತರಖಾಂಡ್ ತನಕ ಬೈಕ್ ರೈಡ್‌ ಆರಂಭಿಸಿದ ಬೆಂಗಳೂರಿನ ಮಹಿಳೆ

ಅರ್ಚನಾ ತಿಮ್ಮರಾಜು ಅವರು ಬೈಕ್ ರೈಡ್ ಆರಂಭಿಸಿರುವುದು ಕೇವಲ ಪ್ರವಾಸ ಕೈಗೊಳ್ಳುವುದಲ್ಲ. ಬದಲಾಗಿ ಪ್ರವಾಸದ ಉದ್ದಕ್ಕೂ ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಶ್ರವಣದೋಷ ಮಕ್ಕಳ ಬಗ್ಗೆ ವಿಶೇಷ ಕಾಳಜಿ ಮತ್ತು ಅವರಲ್ಲಿರುವ ಕೌಶಲ್ಯತೆ ಗುರುತಿಸುವ ಕುರಿತು ಬೆಂಗಳೂರಿನಿಂದ ಉತ್ತಾರಖಂಡ್ ತನಕ ಬೈಕ್ ರೈಡ್ ಆರಂಭಿಸಿದ್ದಾರೆ.

ಜಾಗೃತಿ ಅಭಿಯಾನಕ್ಕಾಗಿ ಉತ್ತರಖಾಂಡ್ ತನಕ ಬೈಕ್ ರೈಡ್‌ ಆರಂಭಿಸಿದ ಬೆಂಗಳೂರಿನ ಮಹಿಳೆ

ಮತ್ತೊಂದು ಪ್ರಮುಖ ವಿಚಾರ ಅಂದ್ರೆ, ಸ್ವಂತ ಶ್ರವಣದೋಷದಿಂದ ಬಳಲಿದ್ದ ಅರ್ಚನಾ ಅವರು ಇಂದು ಶ್ರವಣದೋಷವುಳ್ಳವರಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶದೊಂದಿಗೆ ಎನ್‌ಜಿಒ ಕಟ್ಟಿ ಸಾವಿರಾರು ಜನರಿಗೆ ಹೊಸ ಅವಕಾಶಗಳನ್ನು ತೆರೆದುಕೊಟ್ಟಿದ್ದಾರೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಬೆಂಗಳೂರಿನಿಂದ ಉತ್ತಾರಖಂಡ್ ತನಕ ಬೈಕ್ ಮಾಡಿ ದೇಶದ ವಿವಿಧಡೆ ಜಾಗೃತಿ ಅಭಿಯಾನ ನಡೆಸುವ ಯೋಜನೆ ಕೈಗೊಂಡಿದ್ದು, ಬೈಕ್ ರೈಡ್ ಉದ್ದೇಶಕ್ಕಾಗಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಅರ್ಚನಾ ಅವರಿಗೆ ತನ್ನ ಹೊಸ ಮಿಟಿಯೊರ್ 350 ಕ್ರೂಸರ್ ಬೈಕ್ ನೀಡಿ ಸಹಕರಿಸಿದೆ.

ಜಾಗೃತಿ ಅಭಿಯಾನಕ್ಕಾಗಿ ಉತ್ತರಖಾಂಡ್ ತನಕ ಬೈಕ್ ರೈಡ್‌ ಆರಂಭಿಸಿದ ಬೆಂಗಳೂರಿನ ಮಹಿಳೆ

ಮಿಟಿಯೊರ್ 350 ಕ್ರೂಸರ್ ಬೈಕ್ ಬೆಂಗಳೂರಿನಿಂದ ಆರಂಭವಾಗಿರುವ ಅರ್ಚನಾ ತಿಮ್ಮರಾಜು ಅವರ ಪ್ರಯಾಣವು ಜಾಗೃತಿ ಅಭಿಯಾನದೊಂದಿಗೆ ಉತ್ತಾರಾಖಂಡ್ ತಲುಪಲಿದ್ದು, ಉತ್ತರಾಖಂಡ್‌ ತಲುಪಿ ಮತ್ತೆ ಬೆಂಗಳೂರಿಗೆ ತಲುಪಲಿರುವ ಅರ್ಚನಾ ತಿಮ್ಮರಾಜು ಅವರು ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಅಭಿಯಾನ ನಡೆಸಲಿದ್ದಾರೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಜಾಗೃತಿ ಅಭಿಯಾನಕ್ಕಾಗಿ ಉತ್ತರಖಾಂಡ್ ತನಕ ಬೈಕ್ ರೈಡ್‌ ಆರಂಭಿಸಿದ ಬೆಂಗಳೂರಿನ ಮಹಿಳೆ

ದೂರದ ಪ್ರಯಾಣಕ್ಕಾಗಿ ಅನುಕೂಲಕರವಾಗುವಂತೆ ರಾಯಲ್ ಎನ್‌ಫೀಲ್ಡ್ ಕಂಪನಿಯು ಅರ್ಚನಾ ತಿಮ್ಮರಾಜು ಅವರಿಗೆ ಮಿಟಿಯೋರ್ 350 ಕ್ರೂಸರ್ ಬೈಕ್ ಹಸ್ತಾರಿಸಿದ್ದು, ದೂರ ಪ್ರಯಾಣವನ್ನು ಸುಲಭಗೊಳಿಸಲು ಹೊಸ ಬೈಕ್ ಉತ್ತಮವಾಗಿದೆ.

ಜಾಗೃತಿ ಅಭಿಯಾನಕ್ಕಾಗಿ ಉತ್ತರಖಾಂಡ್ ತನಕ ಬೈಕ್ ರೈಡ್‌ ಆರಂಭಿಸಿದ ಬೆಂಗಳೂರಿನ ಮಹಿಳೆ

ಮಿಟಿಯೊರ್ 350 ಬೈಕ್ ಮಾದರಿಯು 349-ಸಿಸಿ ಫ್ಯೂಲ್ ಇಂಜೆಕ್ಷೆಡ್ ಸಿಂಗಲ್ ಸಿಲಿಂಡರ್ ಹೊಂದಿದ್ದು, 5-ಸ್ಪೀಡ್ ಗೇ‌ರ್‌ಬಾಕ್ಸ್‌ನೊಂದಿಗೆ 20.2-ಬಿಎಚ್‌ಪಿ ಮತ್ತು 27-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಜಾಗೃತಿ ಅಭಿಯಾನಕ್ಕಾಗಿ ಉತ್ತರಖಾಂಡ್ ತನಕ ಬೈಕ್ ರೈಡ್‌ ಆರಂಭಿಸಿದ ಬೆಂಗಳೂರಿನ ಮಹಿಳೆ

ಹೈ ಎಂಡ್ ಮಾದರಿಯಾದ ಮಿಟಿಯೋರ್ 350 ಸೂಪರ್‌ನೊವಾದಲ್ಲಿ ಡ್ಯುಯಲ್-ಟೋನ್ ಬಣ್ಣದ ಆಯ್ಕೆಯನ್ನು ಹೊಂದಿದ್ದು, ಇದು ಪ್ರೀಮಿಯಂ ಸೀಟ್ ಫಿನಿಶಿಂಗ್, ವಿಂಡ್‌ಸ್ಕ್ರೀನ್ ಮತ್ತು ಕ್ರೋಮ್ ಇಂಡಿಕೇಟರ್ ಸಹ ಹೊಂದಿದೆ. ಜೊತೆಗೆ ಹೊಸ ಬೈಕಿನಲ್ಲಿ ಟಿಪ್ಲರ್ ಸ್ಕ್ರೀನ್ ಒಳಗೊಂಡಿರುವ ಟರ್ನ್-ಬೈ-ಟರ್ನ್ ಗೂಗಲ್ ನ್ಯಾವಿಗೇಷನ್, ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಬಹುದಾದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಪಡೆದುಕೊಂಡಿದೆ.

Most Read Articles

Kannada
English summary
Royal Enfield Supports Silent Expedition Motorcycle Ride For A Cause. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X