120ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ವಿಶೇಷ ಹೆಲ್ಮೆಟ್‌ಗಳನ್ನು ಬಿಡುಗಡೆಗೊಳಿಸಿದ Royal Enfield

ರೆಟ್ರೋ ಶೈಲಿಯ ಬೈಕ್ ತಯಾರಕ ಕಂಪನಿಯಾದ Royal Enfield - ದಿ ಪಿಕ್ನಿಕ್ ಸ್ಪೆಷಲ್ ಹಾಗೂ ಬರ್ತ್ ಆಫ್ ದಿ ಬುಲೆಟ್ - ಎಂಬ ಹೆಸರಿನ ಎರಡು ಹೊಸ ಹೆಲ್ಮೆಟ್‌ಗಳನ್ನು ಬಿಡುಗಡೆಗೊಳಿಸಿದೆ. ಈ ಹೆಲ್ಮೆಟ್‌ಗಳು ಕಂಪನಿಯ 120 ನೇ ವಾರ್ಷಿಕೋತ್ಸವವನ್ನು ಆಚರಿಸಲು ಸೀಮಿತ ಸಂಖ್ಯೆಯಲ್ಲಿ ಬಿಡುಗಡೆಗೊಳಿಸಲಾದ ವಿಶೇಷ ಸರಣಿಯ ಭಾಗವಾಗಿವೆ. ಈ ಹೆಲ್ಮೆಟ್ ಗಳನ್ನು 12 ವಿಶಿಷ್ಟ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

120ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ವಿಶೇಷ ಹೆಲ್ಮೆಟ್‌ಗಳನ್ನು ಬಿಡುಗಡೆಗೊಳಿಸಿದ Royal Enfield

ಈ ಹಿಂದೆ Royal Enfield ಕಂಪನಿಯು ದಿ ಒರಿಜಿನಲ್ ರಾಯಲ್ ಎನ್‌ಫೀಲ್ಡ್ ಹಾಗೂ ದಿ ವಿ ಟ್ವಿನ್ ಹೆಲ್ಮೆಟ್‌ಗಳನ್ನು ಬಿಡುಗಡೆಗೊಳಿಸಿತ್ತು. ಈ ಎರಡೂ ಹೆಲ್ಮೆಟ್ ಗಳನ್ನು ಒಂದೇ ದಿನದಲ್ಲಿ ಮಾರಾಟ ಮಾಡಲಾಗಿತ್ತು. ಅಂದ ಹಾಗೆ Royal Enfield ಕಂಪನಿಯು 1901 ರಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿತು. ಈಗ ಬಿಡುಗಡೆಯಾಗಿರುವ ಹೆಲ್ಮೆಟ್‌ಗಳ 12 ವಿಶಿಷ್ಟ ವಿನ್ಯಾಸಗಳು ಕಂಪನಿಯ 12 ದಶಕಗಳ ಕಾರ್ಯಾಚರಣೆಯನ್ನು ಬಿಂಬಿಸುತ್ತವೆ.

120ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ವಿಶೇಷ ಹೆಲ್ಮೆಟ್‌ಗಳನ್ನು ಬಿಡುಗಡೆಗೊಳಿಸಿದ Royal Enfield

ಪ್ರತಿ ಹೆಲ್ಮೆಟ್'ನ ವಿನ್ಯಾಸವು ಕಂಪನಿಯ ಒಂದೊಂದು ದಶಕದ ಕಾರ್ಯಾಚರಣೆಗೆ ಸಂಬಂಧಿಸಿವೆ. ದಿ ಪಿಕ್ನಿಕ್ ಸ್ಪೆಷಲ್ ಹೆಲ್ಮೆಟ್ 1920 ರ ದಶಕಕ್ಕೆ ಸಂಬಂಧಿಸಿದೆ. ಈ ಹೆಲ್ಮೆಟ್ ಅಕ್ಟೋಬರ್ 30 ರಂದು ಮಾರಾಟವಾಗಲಿದೆ. ಇನ್ನು ಬರ್ತ್ ಆಫ್ ದಿ ಬುಲೆಟ್ ಹೆಲ್ಮೆಟ್ 1930 ರ ದಶಕವನ್ನು ಪ್ರತಿಬಿಂಬಿಸುತ್ತದೆ. ಈ ಹೆಲ್ಮೆಟ್ ಅಕ್ಟೋಬರ್ 31 ರಂದು ಮಾರಾಟಕ್ಕೆ ಲಭ್ಯವಿರಲಿದೆ.

120ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ವಿಶೇಷ ಹೆಲ್ಮೆಟ್‌ಗಳನ್ನು ಬಿಡುಗಡೆಗೊಳಿಸಿದ Royal Enfield

ಈ ಸೀಮಿತ ಆವೃತ್ತಿಯ ಹೆಲ್ಮೆಟ್‌ಗಳನ್ನು ಕೈಯಿಂದ ಚಿತ್ರಿಸಲಾಗಿದೆ. ಪ್ರತಿ ವಿನ್ಯಾಸದ 120 ಹೆಲ್ಮೆಟ್‌ಗಳನ್ನು ಮಾತ್ರ ತಯಾರಿಸಲಾಗುತ್ತದೆ. ಪಿಕ್ನಿಕ್ ಸ್ಪೆಷಲ್ ಹೆಲ್ಮೆಟ್ ಐ‌ಎಸ್‌ಐ, ಡಿಒಟಿ ಹಾಗೂ ಇಸಿಇಗಳಿಂದ ಪ್ರಮಾಣೀಕರಣಗೊಂಡಿದೆ. ಪಿಕ್ನಿಕ್ ಸ್ಪೆಷಲ್ಪೂರ್ಣ ಮುಖದ ಹೆಲ್ಮೆಟ್ ಆಗಿದ್ದು, ಬ್ರೀತ್ ಡಿಫ್ಲೆಕ್ಟರ್, ನೆಕ್ ಕರ್ಟನ್ ಹಾಗೂ ಡಿ ರಿಂಗ್ ಗಳ ಜೊತೆಗೆ ಹೆಚ್ಚಿನ ಸುರಕ್ಷತೆಯನ್ನು ಹೊಂದಿದೆ.

120ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ವಿಶೇಷ ಹೆಲ್ಮೆಟ್‌ಗಳನ್ನು ಬಿಡುಗಡೆಗೊಳಿಸಿದ Royal Enfield

ಈ ಹೆಲ್ಮೆಟ್ ಪಾಲಿಜೀನ್ ಆ್ಯಂಟಿ ಮೈಕ್ರೋಬಿಯಲ್ ಟ್ರೀಟೆಡ್ ಇಂಟರ್ನಲ್ ಗಳನ್ನು ಹೊಂದಿದೆ. ಈ ಹೆಲ್ಮೆಟ್'ನ ಹೊರಭಾಗದಲ್ಲಿ, ಕಾರ್ಯಾಚರಣೆಯ ಸ್ವಿಚ್ನೊಂದಿಗೆ ಸನ್ ವೈಸರ್ ಹಾಗೂ ಆ್ಯಂಟಿ ಫಾಗ್ ಫಿಲ್ಮ್ ಹೊಂದಿರುವ ಮೈನ್ ವೈಸರ್ ನೀಡಲಾಗಿದೆ. ಈ ಹೆಲ್ಮೆಟ್'ನ ಬೆಲೆಯ ಬಗ್ಗೆ ಹೇಳುವುದಾದರೆ ಸೀಮಿತ ಆವೃತ್ತಿಯ ಪಿಕ್ನಿಕ್ ಸ್ಪೆಷಲ್ ಹೆಲ್ಮೆಟ್ ಬೆಲೆ ರೂ. 8,450 ಗಳಾಗಿದೆ. ದಿ ಪಿಕ್ನಿಕ್ ಸ್ಪೆಷಲ್‌ 1920 ರ ದಶಕವನ್ನು ಪ್ರತಿನಿಧಿಸುತ್ತದೆ.

120ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ವಿಶೇಷ ಹೆಲ್ಮೆಟ್‌ಗಳನ್ನು ಬಿಡುಗಡೆಗೊಳಿಸಿದ Royal Enfield

ಈ ಅವಧಿಯಲ್ಲಿ Royal Enfield ಕಂಪನಿಯು ಒಂದು ದಶಕದ ಬಲವರ್ಧನೆಯ ನಂತರ, ವಿಸ್ತರಣೆ ಹಾಗೂ ಕನಿಷ್ಠ ಎರಡು ಮಾದರಿ ಕಾರ್ಯಕ್ರಮದೊಂದಿಗೆ ಮೊದಲ ಮಹಾಯುದ್ದದಿಂದ ಚೇತರಿಸಿಕೊಂಡಿತು. ಈ ದಶಕದಲ್ಲಿ Royal Enfield ಕಂಪನಿಯು 350 ಸಿಸಿ ಹಾಗೂ 500 ಸಿಸಿ ಸೈಡ್ ವಾಲ್ವ್ ಹಾಗೂ ಓವರ್‌ಹೆಡ್ ವಾಲ್ವ್ ಸಿಂಗಲ್‌ ಬೈಕುಗಳನ್ನು ಅಭಿವೃದ್ಧಿ ಪಡಿಸಿತು. ಇನ್ನು ಬರ್ತ್ ಆಫ್ ದಿ ಬುಲೆಟ್ ಹೆಲ್ಮೆಟ್ ಸಹ ಐ‌ಎಸ್‌ಐ, ಡಿಒಟಿ ಹಾಗೂ ಇಸಿಇಗಳಿಂದ ಪ್ರಮಾಣೀಕರಣಗೊಂಡಿರುವ ಓಪನ್ ಫೇಸ್ ಹೆಲ್ಮೆಟ್ ಆಗಿದೆ.

120ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ವಿಶೇಷ ಹೆಲ್ಮೆಟ್‌ಗಳನ್ನು ಬಿಡುಗಡೆಗೊಳಿಸಿದ Royal Enfield

ಈ ಫೇಸ್ ಕವರಿಂಗ್ ಬಬಲ್ ವೈಸರ್ ಪಾಲಿಜೀನ್ ಟ್ರೀಟ್ ಮಾಡಿದ ಫ್ಯಾಬ್ರಿಕ್ ಇಂಟರ್ನಲ್‌ಗಳೊಂದಿಗೆ ಪ್ರೀಮಿಯಂ ಲೆದರ್‌ ಹೊಂದಿದೆ. ಶೆಲ್ ಬೀಡಿಂಗ್‌ನಲ್ಲಿ ಕೈಯಿಂದ ಸ್ಟಿಚ್ ಮಾಡಲಾದ ಲೆದರ್ ಟ್ರಿಮ್‌ಗಳಿವೆ. ಈ ಹೆಲ್ಮೆಟ್‌ನ ಹೊರಕವಚವು ಹಗುರವಾದ ಫೈಬರ್‌ಗ್ಲಾಸ್ ವಸ್ತುಗಳಿಂದ ಮಾಡಲ್ಪಟ್ಟಿದೆ. ಬಬಲ್ ವೈಸರ್‌ ಅಲ್ಟ್ರಾ ವಯೋಲೆಟ್ ಲೇಪನವನ್ನು ಹೊಂದಿದೆ.

120ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ವಿಶೇಷ ಹೆಲ್ಮೆಟ್‌ಗಳನ್ನು ಬಿಡುಗಡೆಗೊಳಿಸಿದ Royal Enfield

ಇದು ಬೈಕ್ ಸವಾರನ ಕಣ್ಣುಗಳನ್ನು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸುತ್ತದೆ. ಈ ಹೆಲ್ಮೆಟ್'ನ ಬೆಲೆಯ ಬಗ್ಗೆ ಹೇಳುವುದಾದರೆ, ಬರ್ತ್ ಆಫ್ ದಿ ಬುಲೆಟ್ ಹೆಲ್ಮೆಟ್ ಬೆಲೆ ರೂ. 6,950 ಗಳಾಗಿದೆ. ಬರ್ತ್ ಆಫ್ ದಿ ಬುಲೆಟ್ ಹೆಲ್ಮೆಟ್, 1932 ರಲ್ಲಿ ದಿ ಮೋಟಾರ್‌ಸೈಕಲ್ ಮ್ಯಾಗಜೀನ್‌ನ ಆರ್ಮ್‌ಚೇರ್ ಪ್ರದರ್ಶನದಲ್ಲಿ ಮೊದಲ ಬುಲೆಟ್‌ನ ವರ್ಚುವಲ್ ಬಿಡುಗಡೆಗೆ ಗೌರವ ಸಲ್ಲಿಸುತ್ತದೆ.

120ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ವಿಶೇಷ ಹೆಲ್ಮೆಟ್‌ಗಳನ್ನು ಬಿಡುಗಡೆಗೊಳಿಸಿದ Royal Enfield

Royal Enfield ಕಂಪನಿಯ ಪ್ರಕಾರ, 1930 ರ ದಶಕವು Royal Enfield ಬೈಕುಗಳ ಅಭಿವೃದ್ಧಿಗೆ ಸುವರ್ಣಯುಗವಾಗಿತ್ತು. ಈ ಅವಧಿಯಲ್ಲಿ ವಿಶ್ವ ವಿಖ್ಯಾತ ಬುಲೆಟ್ ಬೈಕ್ ಅನ್ನು ಉತ್ಪಾದಿಸಲಾಯಿತು. ಇನ್ನು Royal Enfield ಕಂಪನಿಯ ದೇಶಿಯ ಮಾರುಕಟ್ಟೆಯಲ್ಲಿನ ಮಾರಾಟದ ಬಗ್ಗೆ ಹೇಳುವುದಾದರೆ ಕಂಪನಿಯು 2021ರ ಸೆಪ್ಟೆಂಬರ್ ತಿಂಗಳಿನಲ್ಲಿ 33,529 ಯುನಿಟ್ ದ್ವಿ ಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಈ ಪ್ರಮಾಣವು 2020 ರ ಸೆಪ್ಟೆಂಬರ್ ತಿಂಗಳಿನಲ್ಲಿ ಮಾರಾಟವಾದ ವಾಹನಗಳಿಗಿಂತ 40% ನಷ್ಟು ಕಡಿಮೆಯಾಗಿದೆ.

120ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ವಿಶೇಷ ಹೆಲ್ಮೆಟ್‌ಗಳನ್ನು ಬಿಡುಗಡೆಗೊಳಿಸಿದ Royal Enfield

ಚೆನ್ನೈ ಮೂಲದ Royal Enfield ಕಂಪನಿಯು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 60,331 ಯುನಿಟ್ ದ್ವಿ ಚಕ್ರ ವಾಹನಗಳನ್ನು ಮಾರಾಟ ಮಾಡಿತ್ತು. ಇನ್ನು ಕಳೆದ ತಿಂಗಳು ದಾಖಲಾದ 33,529 ಯುನಿಟ್ ಮಾರಾಟ ಪ್ರಮಾಣವು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾದ ಹಾಗೂ ವಿದೇಶಗಳಿಗೆ ರಫ್ತು ಮಾಡಲಾದ ವಾಹನಗಳನ್ನು ಒಳಗೊಂಡಿದೆ.

120ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ವಿಶೇಷ ಹೆಲ್ಮೆಟ್‌ಗಳನ್ನು ಬಿಡುಗಡೆಗೊಳಿಸಿದ Royal Enfield

ಕಂಪನಿಯು ಕಳೆದ ತಿಂಗಳು 27,233 ಯುನಿಟ್ ಬೈಕುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದರೆ, 6,296 ಯುನಿಟ್ ಬೈಕುಗಳನ್ನು ರಫ್ತು ಮಾಡಿದೆ. ಕಳೆದ ತಿಂಗಳು ಮಾರಾಟವಾದ Royal Enfield ಬೈಕ್‌ಗಳ ಒಟ್ಟು ಪ್ರಮಾಣವು ದೇಶಿಯ ಮಾರುಕಟ್ಟೆಯಲ್ಲಿಯೇ 81.22% ನಷ್ಟಾಗಿದೆ. ಅದೇ ರೀತಿ Royal Enfield ಕಂಪನಿಯ ಒಟ್ಟು ಮಾರಾಟವನ್ನು 350 ಸಿಸಿ ಹಾಗೂ 350 ಸಿಸಿಗಿಂತ ಕಡಿಮೆ ಎಂದು ವಿಂಗಡಿಸಬಹುದು.

120ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ವಿಶೇಷ ಹೆಲ್ಮೆಟ್‌ಗಳನ್ನು ಬಿಡುಗಡೆಗೊಳಿಸಿದ Royal Enfield

Royal Enfield ಕಂಪನಿಯು 350 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಬೈಕುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಒಟ್ಟು ಮಾರಾಟದಲ್ಲಿ ಸುಮಾರು 76.11% ಅಥವಾ 25,520 ಯುನಿಟ್‌ಗಳು 350 ಸಿಸಿಗಿಂತ ಕಡಿಮೆ ಸಾಮರ್ಥ್ಯವನ್ನು ಹೊಂದಿವೆ. ಉಳಿದ 8,009 ಯುನಿಟ್ ಗಳು 350 ಸಿಸಿಗಿಂತ ಹೆಚ್ಚು ಸಾಮರ್ಥ್ಯವನ್ನು ಹೊಂದಿವೆ. ವಾಸ್ತವವಾಗಿ Royal Enfield ಕಂಪನಿಯ 350 ಸಿಸಿಗಿಂತ ಕಡಿಮೆ ಇರುವ ಬೈಕುಗಳ ಮಾರಾಟವು ಕಳೆದ ತಿಂಗಳು ಸುಮಾರು 53.12% ನಷ್ಟು ಕುಸಿದಿದೆ.

Most Read Articles

Kannada
English summary
Royal enfield to sell two special helmets details
Story first published: Thursday, October 28, 2021, 11:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X