ಪರಿಹಾರ ಕಾರ್ಯಗಳಿಗಾಗಿ ರೂ.20 ಕೋಟಿ ಮೀಸಲಿಟ್ಟ ರಾಯಲ್ ಎನ್‌ಫೀಲ್ಡ್

ಖ್ಯಾತ ಬೈಕ್ ತಯಾರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ಕರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ರೂ.20 ಕೋಟಿಗಳನ್ನು ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಾಗಿ ಬಳಸುವುದಾಗಿ ತಿಳಿಸಿದೆ.

ಪರಿಹಾರ ಕಾರ್ಯಗಳಿಗಾಗಿ ರೂ.20 ಕೋಟಿ ಮೀಸಲಿಟ್ಟ ರಾಯಲ್ ಎನ್‌ಫೀಲ್ಡ್

ಕಳೆದ ವರ್ಷ ಐಷರ್ ಗ್ರೂಪ್ ಖರ್ಚು ಮಾಡಿದ ರೂ.50 ಕೋಟಿಗಳಿಗೆ ಹೆಚ್ಚುವರಿಯಾಗಿ ಈ ಹಣವನ್ನು ಬಳಸಲಾಗುವುದು ಎಂದು ಕಂಪನಿ ತಿಳಿಸಿದೆ. ಕಳೆದ ವರ್ಷದಿಂದ ರಾಜ್ಯ ಸರ್ಕಾರಗಳ ಸಹಾಯದಿಂದ ಕರೋನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಅಭಿಯಾನದಲ್ಲಿ ತೊಡಗಿಸಿಕೊಂಡಿರುವುದಾಗಿ ಕಂಪನಿ ತಿಳಿಸಿದೆ.

ಪರಿಹಾರ ಕಾರ್ಯಗಳಿಗಾಗಿ ರೂ.20 ಕೋಟಿ ಮೀಸಲಿಟ್ಟ ರಾಯಲ್ ಎನ್‌ಫೀಲ್ಡ್

ದೆಹಲಿ ಹಾಗೂ ತಮಿಳುನಾಡಿನ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಕಂಪನಿಯು ಕಾರ್ಯ ನಿರ್ವಹಿಸುತ್ತಿದೆ. ಆಸ್ಪತ್ರೆಗಳಲ್ಲಿ ವೈದ್ಯಕೀಯ ವ್ಯವಸ್ಥೆಯನ್ನು ಸುಧಾರಿಸುವುದರ ಜೊತೆಗೆ ಕಂಪನಿಯು ಮುಂಚೂಣಿ ಕಾರ್ಮಿಕರಿಗೂ ನೆರವಾಗುತ್ತಿದೆ.

ಪರಿಹಾರ ಕಾರ್ಯಗಳಿಗಾಗಿ ರೂ.20 ಕೋಟಿ ಮೀಸಲಿಟ್ಟ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ತನ್ನ ಲೋಕೋಪಕಾರಿ ವಿಭಾಗದ ಮೂಲಕ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮೆಡಿಕಲ್ ಆಕ್ಸಿಜನ್ ಜನರೇಟರ್ ಅನ್ನು ಸ್ಥಾಪಿಸಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ತಮಿಳುನಾಡಿನ ಸರ್ಕಾರಿ ಆಸ್ಪತ್ರೆಗಳಲ್ಲಿ 6 ಆಕ್ಸಿಜನ್ ಉತ್ಪಾದಕ ಘಟಕಗಳನ್ನು ಸ್ಥಾಪಿಸಿದೆ.

ಪರಿಹಾರ ಕಾರ್ಯಗಳಿಗಾಗಿ ರೂ.20 ಕೋಟಿ ಮೀಸಲಿಟ್ಟ ರಾಯಲ್ ಎನ್‌ಫೀಲ್ಡ್

ಇದರ ಜೊತೆಗೆ ಕಂಪನಿಯು ತಮಿಳುನಾಡಿನ 6 ಸರ್ಕಾರಿ ಆಸ್ಪತ್ರೆಗಳು ಹಾಗೂ 2 ಚಾರಿಟಿ ಆಸ್ಪತ್ರೆಗಳಿಗೆ ವೈದ್ಯಕೀಯ ಉಪಕರಣ ಹಾಗೂ ಆಕ್ಸಿಜನ್ ಸಿಲಿಂಡರ್‌ಗಳನ್ನು ಪೂರೈಸುತ್ತಿದೆ.

ಪರಿಹಾರ ಕಾರ್ಯಗಳಿಗಾಗಿ ರೂ.20 ಕೋಟಿ ಮೀಸಲಿಟ್ಟ ರಾಯಲ್ ಎನ್‌ಫೀಲ್ಡ್

ಐಷರ್ ಗ್ರೂಪ್'ನ ಭಾಗವಾದ ರಾಯಲ್ ಎನ್‌ಫೀಲ್ಡ್ ತಮಿಳುನಾಡಿನಲ್ಲಿ ಬೈಕ್‌ಗಳನ್ನು ಉತ್ಪಾದಿಸುತ್ತದೆ. ಈಗ ಕಂಪನಿಯು ತಮಿಳುನಾಡಿನ 3 ಉತ್ಪಾದನಾ ಘಟಕಗಳಲ್ಲಿ ಬೈಕುಗಳನ್ನು ಉತ್ಪಾದಿಸುತ್ತಿದೆ.

ಪರಿಹಾರ ಕಾರ್ಯಗಳಿಗಾಗಿ ರೂ.20 ಕೋಟಿ ಮೀಸಲಿಟ್ಟ ರಾಯಲ್ ಎನ್‌ಫೀಲ್ಡ್

ಉತ್ಪಾದನಾ ಘಟಕಗಳ ಸುತ್ತಮುತ್ತ ವಾಸಿಸುವ ಜನರಿಗೆ ಜೀವನೋಪಾಯಕ್ಕಾಗಿ ಕಂಪನಿಯು ಫುಡ್ ಪ್ಯಾಕೆಟ್‌ ಸೇರಿದಂತೆ ಹಲವು ಅಗತ್ಯ ವಸ್ತುಗಳನ್ನು ಒದಗಿಸಿದೆ. ಕರೋನಾ ಅವಧಿಯಲ್ಲಿ ಕಂಪನಿಯು 39,000ಕ್ಕೂ ಹೆಚ್ಚು ಕುಟುಂಬಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಹಾಯ ಮಾಡಿದೆ.

ಪರಿಹಾರ ಕಾರ್ಯಗಳಿಗಾಗಿ ರೂ.20 ಕೋಟಿ ಮೀಸಲಿಟ್ಟ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯು ತಮಿಳುನಾಡು ಸರ್ಕಾರದ ಕರೋನಾ ಪರಿಹಾರ ನಿಧಿಗೆ ರೂ.2 ಕೋಟಿ ದೇಣಿಗೆ ನೀಡಿದೆ. ಐಷರ್ ಗ್ರೂಪ್‌ನ ಬೈಕ್ ತಯಾರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ದೇಶದ ಪ್ರಮುಖ ನಗರಗಳು ಹಾಗೂ ಪಟ್ಟಣಗಳಲ್ಲಿ 1,025 ಮಾರಾಟಗಾರರನ್ನು ಹಾಗೂ 1,031 ಸ್ಟುಡಿಯೋ ಮಳಿಗೆಗಳನ್ನು ಹೊಂದಿದೆ.

ಪರಿಹಾರ ಕಾರ್ಯಗಳಿಗಾಗಿ ರೂ.20 ಕೋಟಿ ಮೀಸಲಿಟ್ಟ ರಾಯಲ್ ಎನ್‌ಫೀಲ್ಡ್

ಕಂಪನಿಯು 60ಕ್ಕೂ ಹೆಚ್ಚು ದೇಶಗಳಿಗೆ ತನ್ನ ಬೈಕುಗಳನ್ನು ರಫ್ತು ಮಾಡುತ್ತದೆ. 2022ರಲ್ಲಿ ಮತ್ತಷ್ಟು ಹೊಸ ಮಾದರಿ ಹಾಗೂ ಐಷಾರಾಮಿ ಬೈಕುಗಳನ್ನು ಬಿಡುಗಡೆಗೊಳಿಸುವುದಾಗಿ ಕಂಪನಿ ತಿಳಿಸಿದೆ.

ಪರಿಹಾರ ಕಾರ್ಯಗಳಿಗಾಗಿ ರೂ.20 ಕೋಟಿ ಮೀಸಲಿಟ್ಟ ರಾಯಲ್ ಎನ್‌ಫೀಲ್ಡ್

ಈ ವರ್ಷ ರಾಯಲ್ ಎನ್‌ಫೀಲ್ಡ್ ಕಂಪನಿಯು ವಿಭಿನ್ನ ಎಂಜಿನ್ ಸಾಮರ್ಥ್ಯದ ಹೊಸ ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸುವುದರಿಂದ 2022 ಕಂಪನಿಗೆ ಮುಖ್ಯವಾಗಲಿದೆ.

Most Read Articles

Kannada
English summary
Royal Enfield to spend Rs.20 crore for Covid 19 relief activities. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X