ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಹೊಂದಿರುವ ದ್ವಿಚಕ್ರ ವಾಹನಗಳಿವು

ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಅನ್ನು ಇತ್ತೀಚಿಗೆ ದೇಶಿಯ ದ್ವಿಚಕ್ರ ವಾಹನ ಮಾರುಕಟ್ಟೆ ಬಿಡುಗಡೆಯಾಗುತ್ತಿರುವ ಹಲವು ವಾಹನಗಳಲ್ಲಿ ನೀಡಲಾಗುತ್ತಿದೆ. ಈ ಫೀಚರ್ ಅನ್ನು ಕೆಲವು ವರ್ಷಗಳ ಹಿಂದಷ್ಟೇ ಪರಿಚಯಿಸಲಾಗಿತ್ತು.

ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಹೊಂದಿರುವ ದ್ವಿಚಕ್ರ ವಾಹನಗಳಿವು

ಮೊದಲು ಈ ಫೀಚರ್ ಅನ್ನು ಕೆಲವೇ ಕೆಲವು ಬೈಕ್ ಹಾಗೂ ಸ್ಕೂಟರ್‌ಗಳಲ್ಲಿ ಮಾತ್ರ ನೀಡಲಾಗುತ್ತಿತ್ತು. ಆದರೆ ಈಗ ಈ ಫೀಚರ್ ಅನ್ನು ಹೀರೋ ಮೊಟೊಕಾರ್ಪ್, ಟಿವಿಎಸ್, ಯಮಹಾ, ಸುಜುಕಿಯಂತಹ ಕಂಪನಿಗಳ ಬೈಕ್ ಹಾಗೂ ಸ್ಕೂಟರ್‌ಗಳಲ್ಲಿ ನೀಡಲಾಗುತ್ತಿದೆ. ದೇಶಿಯ ಮಾರುಕಟ್ಟೆಯಲ್ಲಿರುವ ಯಾವ ಯಾವ ದ್ವಿಚಕ್ರ ವಾಹನಗಳು ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಹೊಂದಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಹೊಂದಿರುವ ದ್ವಿಚಕ್ರ ವಾಹನಗಳಿವು

ಹೀರೋ ಮೊಟೊಕಾರ್ಪ್

ಗ್ಲಾಮರ್ ಎಕ್ಸ್‌ಟೆಕ್, ಹೀರೋ ಮೋಟೊಕಾರ್ಪ್‌ ಕಂಪನಿಯ ಹೊಸ ಬೈಕ್‌ ಆಗಿದ್ದು, ಈ ಬೈಕಿನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ನೀಡಲಾಗಿದೆ. ಈ ಬೈಕ್ ಅನ್ನು ಇತ್ತೀಚೆಗಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ.

ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಹೊಂದಿರುವ ದ್ವಿಚಕ್ರ ವಾಹನಗಳಿವು

ಹೀರೋ ಮೋಟೊಕಾರ್ಪ್ ಕಂಪನಿಯ ಹೀರೋ ಎಕ್ಟ್ರೀಮ್ 200 ಎಸ್, ಎಕ್ಸ್‌ಪಲ್ಸ್ 200, ಎಕ್ಸ್‌ಪಲ್ಸ್ 200 ಟಿ ಬೈಕ್‌ಗಳಲ್ಲಿ ಸಹ ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ನೀಡಲಾಗುತ್ತದೆ. ಇದರ ಜೊತೆಗೆ ಎಲ್ಇಡಿ ಡಿಸ್ ಪ್ಲೇ ಕೂಡ ನೀಡಲಾಗುತ್ತದೆ.

ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಹೊಂದಿರುವ ದ್ವಿಚಕ್ರ ವಾಹನಗಳಿವು

ಬೈಕ್ ಸವಾರರು ತಮ್ಮ ಮೊಬೈಲ್ ಫೋನ್ ಮೂಲಕ ಬೈಕ್‌ ಅನ್ನು ಬ್ಲೂಟೂತ್‌ಗೆ ಕನೆಕ್ಟ್ ಮಾಡಬಹುದು. ಈ ಫೀಚರ್ ಮೂಲಕ ಫೋನ್ ಕಾಲ್ ಹಾಗೂ ಎಸ್‌ಎಂಎಸ್'ಗಳನ್ನು ನಿರ್ವಹಿಸುವುದು ಮಾತ್ರವಲ್ಲದೇ ನ್ಯಾವಿಗೇಷನ್ ಹಾಗೂ ಗೇರ್ ಸಂಖ್ಯೆಯ ಬಗ್ಗೆಯೂ ಮಾಹಿತಿ ಪಡೆಯಬಹುದು.

ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಹೊಂದಿರುವ ದ್ವಿಚಕ್ರ ವಾಹನಗಳಿವು

ಟಿವಿಎಸ್ ಅಪಾಚೆ ಆರ್‌ಟಿಆರ್ 200 4 ವಿ

ಟಿವಿಎಸ್ ಮೋಟಾರ್ ಕಂಪನಿಯ ಅಪಾಚೆ ಆರ್‌ಟಿಆರ್ 200 4 ವಿ ಬೈಕಿನಲ್ಲಿಯೂ ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ನೀಡಲಾಗಿದೆ. ಈ ಬೈಕ್‌ನಲ್ಲಿ ಬ್ಲೂಟೂತ್ ಅನ್ನು ಇನ್ಸ್'ಟ್ರೂಮೆಂಟ್ ಕ್ಲಸ್ಟರ್‌ನೊಂದಿಗೆ ಜೋಡಿಸಬಹುದು.

ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಹೊಂದಿರುವ ದ್ವಿಚಕ್ರ ವಾಹನಗಳಿವು

ಇದರ ಮೂಲಕ ಫೋನ್ ಕಾಲ್, ಬೈಕ್ ಸ್ಪೀಡ್ ಹಾಗೂ ಲ್ಯಾಪ್ ಸಮಯವನ್ನು ನಿಯಂತ್ರಿಸಬಹುದು. ಟಿವಿಎಸ್ ಕಂಪನಿಯು ಈ ಬೈಕ್‌ನೊಂದಿಗೆ ಫೋನ್ ಅಪ್ಲಿಕೇಶನ್ ಅನ್ನು ಸಹ ಒದಗಿಸುತ್ತಿದೆ. ಇದರ ಸಹಾಯದಿಂದ ಬೈಕ್ ಸವಾರರು ತಮ್ಮ ಮಾರ್ಗವನ್ನು ಟ್ರ್ಯಾಕ್ ಮಾಡಬಹುದು.

ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಹೊಂದಿರುವ ದ್ವಿಚಕ್ರ ವಾಹನಗಳಿವು

ಟಿವಿಎಸ್ ಎನ್ ಟಾರ್ಕ್ 125

ಟಿವಿಎಸ್ ಎನ್ ಟಾರ್ಕ್ 125 ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಹೊಂದಿದ ಮೊದಲ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಎನ್ ಟಾರ್ಕ್, 125 ಸಿಸಿ ಸ್ಕೂಟರ್ ಸೆಗ್ ಮೆಂಟಿನಲ್ಲಿ ಹಲವಾರು ಫೀಚರ್'ಗಳನ್ನು ಹೊಂದಿದೆ.

ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಹೊಂದಿರುವ ದ್ವಿಚಕ್ರ ವಾಹನಗಳಿವು

ಈ ಸ್ಕೂಟರ್‌ನಲ್ಲಿ ಬ್ಲೂಟೂತ್‌ಗೆ ಸಂಪರ್ಕ ಕಲ್ಪಿಸಲು ಸ್ಮಾರ್ಟ್ ಕನೆಕ್ಟ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ನೀಡಲಾಗಿದೆ. ಈ ಅಪ್ಲಿಕೇಶನ್ ಸವಾರರಿಗೆ ಫೋನ್ ನೋಟಿಫಿಕೇಶನ್, ನ್ಯಾವಿಗೇಷನ್ ಸೇರಿದಂತೆ ಹಲವಾರು ಮಾಹಿತಿಗಳನ್ನು ಒದಗಿಸುತ್ತದೆ.

ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಹೊಂದಿರುವ ದ್ವಿಚಕ್ರ ವಾಹನಗಳಿವು

ಸುಜುಕಿ

ಸುಜುಕಿ ಕಂಪನಿಯು ತನ್ನ ಆಕ್ಸೆಸ್ 125 ಹಾಗೂ ಬರ್ಗ್‌ಮನ್ ಸ್ಟ್ರೀಟ್ ಸ್ಕೂಟರ್'ಗಳನ್ನು 2020 ರಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಫೀಚರ್'ನೊಂದಿಗೆ ಅಪ್ ಡೇಟ್ ಮಾಡಿದೆ. ಈ ಎರಡೂ ಸ್ಕೂಟರ್‌ಗಳು ಹಲವಾರು ಫೀಚರ್'ಗಳನ್ನು ಹೊಂದಿವೆ.

ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಹೊಂದಿರುವ ದ್ವಿಚಕ್ರ ವಾಹನಗಳಿವು

ಇವುಗಳಲ್ಲಿ ಹೊಸ ಎಲ್‌ಸಿಡಿ ಡಿಸ್‌ಪ್ಲೇ ಸ್ಕ್ರೀನ್ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ವಾಟ್ಸಾಪ್ ಅಲರ್ಟ್‌, ಮಿಸ್ಡ್ ಕಾಲ್ ಅಲರ್ಟ್‌, ಕಾಲರ್ ಐಡಿ, ಓವರ್-ಸ್ಪೀಡ್ ವಾರ್ನಿಂಗ್ ಫೋನ್ ಬ್ಯಾಟರಿ ಲೆವೆಲ್ ಫೀಚರ್'ಗಳು ಸೇರಿವೆ. ಕನೆಕ್ಟಿವಿಟಿಗಾಗಿ ಈ ಸ್ಕೂಟರ್‌ಗಳಲ್ಲಿ ಸುಜುಕಿ ರೈಡ್ ಕನೆಕ್ಟ್ ಸ್ಮಾರ್ಟ್ ಫೋನ್ ಅಪ್ಲಿಕೇಶನ್ ನೀಡಲಾಗಿದೆ.

ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಹೊಂದಿರುವ ದ್ವಿಚಕ್ರ ವಾಹನಗಳಿವು

ಯಮಹಾ

ಇತ್ತೀಚೆಗೆ ಬಿಡುಗಡೆಯಾದ ಯಮಹಾ ಕಂಪನಿಯ ಎಫ್‌ಝಡ್ ಎಕ್ಸ್ 150 ಸಿಸಿ ಬೈಕಿನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ನೀಡಲಾಗಿದೆ. ಇದರ ಹೊರತಾಗಿ ಕಂಪನಿಯ ಜನಪ್ರಿಯ ಎಫ್‌ಝಡ್‌ಎಸ್ -ಎಫ್‌ಐ ಬೈಕಿನಲ್ಲಿಯೂ ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ನೀಡಲಾಗಿದೆ.

ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಹೊಂದಿರುವ ದ್ವಿಚಕ್ರ ವಾಹನಗಳಿವು

ಹೊಸ ಫ್ಯಾಸಿನೊ ಹಾಗೂ ರೇ ಝಡ್ ಆರ್ ಸ್ಕೂಟರ್‌ಗಳಲ್ಲಿಯೂ ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ನೀಡಲಾಗಿದೆ. ಶೀಘ್ರದಲ್ಲೇ ಎಂಟಿ -15, ಆರ್ 15 ಮತ್ತು 250 ಸಿಸಿ ಸರಣಿಯ ಬೈಕ್‌ಗಳಲ್ಲಿಯೂ ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ನೀಡಲಾಗುವುದು ಎಂದು ಕಂಪನಿ ಹೇಳಿದೆ.

ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಹೊಂದಿರುವ ದ್ವಿಚಕ್ರ ವಾಹನಗಳಿವು

ಯಮಹಾ ಮೋಟಾರ್ ಇಂಡಿಯಾ ಕಂಪನಿಯು ತನ್ನ ವಾಹನಗಳಲ್ಲಿ ಎರಡು ಬ್ಲೂಟೂತ್ ಆಪ್‌ಗಳನ್ನು ನೀಡುತ್ತದೆ. ಇವುಗಳಲ್ಲಿ ಯಮಹಾ ಮೋಟಾರ್‌ಸೈಕಲ್ ಕನೆಕ್ಟ್ ಎಕ್ಸ್ ಹಾಗೂ ವೈ-ಕನೆಕ್ಟ್'ಗಳು ಸೇರಿವೆ.

ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಹೊಂದಿರುವ ದ್ವಿಚಕ್ರ ವಾಹನಗಳಿವು

ಯಮಹಾದ ಮೋಟಾರ್‌ಸೈಕಲ್ ಕನೆಕ್ಟ್-ಎಕ್ಸ್ ಅಪ್ಲಿಕೇಶನ್ ಬ್ಯಾಟರಿ ವೋಲ್ಟೇಜ್, ಪಾರ್ಕಿಂಗ್ ರೆಕಾರ್ಡ್, ಇ-ಲಾಕ್, ಲೊಕೇಶನ್ ಟ್ರ್ಯಾಕಿಂಗ್, ರೈಡಿಂಗ್ ಹಿಸ್ಟರಿ ಮುಂತಾದ ಫೀಚರ್'ಗಳನ್ನು ಹೊಂದಿದ್ದರೆ, ವೈ-ಕನೆಕ್ಟ್ ಫೋನ್ ಕಾಲ್, ಎಸ್‌ಎಂಎಸ್ ಅಲರ್ಟ್, ಕನೆಕ್ಟೆಡ್ ಮೊಬೈಲ್ ಫೋನ್ ಬ್ಯಾಟರಿ ಲೆವೆಲ್ ಹಾಗೂ ಇನ್ನಿತರ ನೋಟಿಫಿಕೇಶನ್'ಗಳನ್ನು ನೀಡುತ್ತದೆ.

Most Read Articles

Kannada
English summary
Scooters and bikes with Bluetooth connectivity features. Read in Kannada.
Story first published: Friday, July 30, 2021, 18:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X