YouTube

ಇವಿ ಇಂಡಿಯಾ ಎಕ್ಸ್‌ಪೋ: 150 ಕಿ.ಮೀ ಮೈಲೇಜ್ ಎರಡು ಇವಿ ಸ್ಕೂಟರ್ ಅನಾವರಣಗೊಳಿಸಿದ ಶಿಮಾ ಎಲೆಕ್ಟ್ರಿಕ್

ಭವಿಷ್ಯದ ಎಲೆಕ್ಟ್ರಿಕ್ ವಾಹನಗಳ ಕುರಿತಂತೆ ವಿಶೇಷ ಪ್ರದರ್ಶನಕ್ಕಾಗಿ ಇವಿ ಇಂಡಿಯಾ ಎಕ್ಸ್‌ಪೋ ಆರಂಭಗೊಂಡಿದ್ದು, 2021ರ ಇವಿ ಇಂಡಿಯಾ ಎಕ್ಸ್‌ಪೋದಲ್ಲಿ ಪ್ರಮುಖ ಇವಿ ವಾಹನ ತಯಾರಕ ಕಂಪನಿಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಪ್ರದರ್ಶನಗೊಳಿಸುತ್ತಿವೆ.

ಇವಿ ಇಂಡಿಯಾ ಎಕ್ಸ್‌ಪೋ: 150 ಕಿ.ಮೀ ಮೈಲೇಜ್ ಎರಡು ಇವಿ ಸ್ಕೂಟರ್ ಅನಾವರಣಗೊಳಿಸಿದ ಶಿಮಾ ಎಲೆಕ್ಟ್ರಿಕ್

ದುಬಾರಿ ಇಂಧನ ದರ ಮತ್ತು ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಯಾಗಿ ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನ ಬಳಕ ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳಿಗೆ ಜಾರಿಗೆ ತಂದಿದ್ದು, ಹೊಸ ಯೋಜನೆಗಳ ಪರಿಣಾಮ ಇವಿ ವಾಹನಗಳ ಮಾರಾಟದಲ್ಲಿ ಸಾಕಷ್ಟು ಏರಿಕೆಯಾಗಿದೆ.

ಇವಿ ಇಂಡಿಯಾ ಎಕ್ಸ್‌ಪೋ: 150 ಕಿ.ಮೀ ಮೈಲೇಜ್ ಎರಡು ಇವಿ ಸ್ಕೂಟರ್ ಅನಾವರಣಗೊಳಿಸಿದ ಶಿಮಾ ಎಲೆಕ್ಟ್ರಿಕ್

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದ್ದು, ಗ್ರಾಹಕರ ಬೇಡಿಕೆ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಗೊಳಿಸುವಲ್ಲಿ ಸ್ಟಾರ್ಟ್ ಕಂಪನಿಗಳು ಯಶಸ್ವಿಯಾಗುತ್ತಿವೆ.

ಇವಿ ಇಂಡಿಯಾ ಎಕ್ಸ್‌ಪೋ: 150 ಕಿ.ಮೀ ಮೈಲೇಜ್ ಎರಡು ಇವಿ ಸ್ಕೂಟರ್ ಅನಾವರಣಗೊಳಿಸಿದ ಶಿಮಾ ಎಲೆಕ್ಟ್ರಿಕ್

ಒಡಿಶಾ ಮೂಲದ ಶಿಮಾ ಎಲೆಕ್ಟ್ರಿಕ್ ಕಂಪನಿಯು ಕೂಡಾ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಹೊಸ ಇವಿ ಸ್ಕೂಟರ್‌ಗಳನ್ನು ಅಭಿವೃದ್ದಿಗೊಳಿಸಿದ್ದು, ಹೊಸ ಇವಿ ಸ್ಕೂಟರ್ ಮಾದರಿಗಳನ್ನು ಕಂಪನಿಯು 2021ರ ಇವಿ ಇಂಡಿಯಾ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದೆ.

ಇವಿ ಇಂಡಿಯಾ ಎಕ್ಸ್‌ಪೋ: 150 ಕಿ.ಮೀ ಮೈಲೇಜ್ ಎರಡು ಇವಿ ಸ್ಕೂಟರ್ ಅನಾವರಣಗೊಳಿಸಿದ ಶಿಮಾ ಎಲೆಕ್ಟ್ರಿಕ್

ಶಿಮಾ ಎಲೆಕ್ಟ್ರಿಕ್ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸೆಸ್ ಟಫ್(SES TUFF) ಮತ್ತು ಸೆಸ್ ಹಾಬಿ(SES HOBBY) ಎನ್ನುವ ಎರಡು ಇವಿ ಸ್ಕೂಟರ್‌ಗಳನ್ನು ಪ್ರದರ್ಶನಗೊಳಿಸಿದ್ದು, ಹೊಸ ಇವಿ ಸ್ಕೂಟರ್ ಮಾರಾಟವನ್ನು ಶೀಘ್ರದಲ್ಲಿಯೇ ಆರಂಭಗೊಳಿಸುವ ಸಿದ್ದತೆಯಲ್ಲಿದೆ.

ಇವಿ ಇಂಡಿಯಾ ಎಕ್ಸ್‌ಪೋ: 150 ಕಿ.ಮೀ ಮೈಲೇಜ್ ಎರಡು ಇವಿ ಸ್ಕೂಟರ್ ಅನಾವರಣಗೊಳಿಸಿದ ಶಿಮಾ ಎಲೆಕ್ಟ್ರಿಕ್

ಹೊಸ ಸೆಸ್ ಟಫ್ ಮಾದರಿಯು ಹೈ ಸ್ಪೀಡ್ ಇವಿ ಸ್ಕೂಟರ್ ಮಾದರಿಯಾಗಿದ್ದರೆ ಸೆಸ್ ಹಾಬಿ ಮಾದರಿಯು ಲೋ ಸ್ಪೀಡ್ ಇವಿ ಸ್ಕೂಟರ್ ಆವೃತ್ತಿಯಾಗಿದ್ದು, ಸೆಸ್ ಟಫ್ ಮಾದರಿಯು ಪ್ರತಿ ಗಂಟೆಗೆ 60 ಕಿ.ಮೀ ಟಾಪ್ ಸ್ಪೀಡ್‌ ಹೊಂದಿದ್ದರೆ ಸೆಸ್ ಹಾಬಿ ಮಾದರಿಯು ಪ್ರತಿ ಗಂಟೆಗೆ 25 ಕಿ.ಮೀ ಟಾಪ್ ಸ್ಪೀಡ್ ಹೊಂದಿವೆ.

ಇವಿ ಇಂಡಿಯಾ ಎಕ್ಸ್‌ಪೋ: 150 ಕಿ.ಮೀ ಮೈಲೇಜ್ ಎರಡು ಇವಿ ಸ್ಕೂಟರ್ ಅನಾವರಣಗೊಳಿಸಿದ ಶಿಮಾ ಎಲೆಕ್ಟ್ರಿಕ್

ಶಿಮಾ ಎಲೆಕ್ಟ್ರಿಕ್ ಕಂಪನಿಯು ಹೊಸ ಸೆಸ್ ಟಫ್ ಮಾದರಿಯಲ್ಲಿ ಪ್ರತಿ ಚಾರ್ಜ್‌ಗೆ 150 ಕಿ.ಮೀ ಮೈಲೇಜ್ ಪ್ರೇರಿತ ಡ್ಯುಯಲ್ 60 ವೊಲ್ಟ್ 30ಎಹೆಚ್ ಲಿಥಿಯಂ ಡಿಟ್ಯಾಚೇಬಲ್ ಬ್ಯಾಟರಿ ಹೊಂದಿದ್ದರೆ ಸೆಸ್ ಹಾಬಿ ಮಾದರಿಯಲ್ಲಿ ಪ್ರತಿ ಚಾರ್ಜ್‌ಗೆ 100 ಕಿ.ಮೀ ಮೈಲೇಜ್ ಪ್ರೇರಿತ 60 ವೊಲ್ಟ್ 30ಎಹೆಚ್ ಡಿಟ್ಯಾಚೇಬಲ್ ಬ್ಯಾಟರಿ ಜೋಡಣೆ ಹೊಂದಿದೆ.

ಇವಿ ಇಂಡಿಯಾ ಎಕ್ಸ್‌ಪೋ: 150 ಕಿ.ಮೀ ಮೈಲೇಜ್ ಎರಡು ಇವಿ ಸ್ಕೂಟರ್ ಅನಾವರಣಗೊಳಿಸಿದ ಶಿಮಾ ಎಲೆಕ್ಟ್ರಿಕ್

ಸೆಸ್ ಟಫ್ ಇವಿ ಮಾದರಿಯು ಬಿಟುಬಿ ಜೊತೆಗೆ ವ್ಯಯಕ್ತಿಕ ಬಳಕೆಗೂ ಖರೀದಿಗೆ ಲಭ್ಯವಿರಲಿದ್ದು, ಸೆಸ್ ಹಾಬಿ ಮಾದರಿಯು ಸಂಪೂರ್ಣವಾಗಿ ಬಿಟುಬಿ ಉದ್ದೇಶಗಳಿಗಾಗಿ ಅಭಿವೃದ್ದಿಗೊಳಿಸಲಾಗಿದ್ದು, ಸೆಸ್ ಟಫ್ ಮಾದರಿಯು ಗರಿಷ್ಠ 150 ಕೆ.ಜಿ ಮತ್ತು ಸೆಸ್ ಹಾಬಿ ಮಾದರಿಯು 110 ಕೆ.ಜಿ ಪ್ಲೇಲೋಡ್ ಸಾಮರ್ಥ್ಯವನ್ನು ಹೊಂದಿದೆ.

ಇವಿ ಇಂಡಿಯಾ ಎಕ್ಸ್‌ಪೋ: 150 ಕಿ.ಮೀ ಮೈಲೇಜ್ ಎರಡು ಇವಿ ಸ್ಕೂಟರ್ ಅನಾವರಣಗೊಳಿಸಿದ ಶಿಮಾ ಎಲೆಕ್ಟ್ರಿಕ್

ಶಿಮಾ ಎಲೆಕ್ಟ್ರಿಕ್ ಕಂಪನಿಯು ಹೊಸ ಇವಿ ಸ್ಕೂಟರ್ ಮಾದರಿಗಳನ್ನು ಸಂಪೂರ್ಣವಾಗಿ ಸ್ಥಳೀಯ ಬಿಡಿಭಾಗಗಳೊಂದಿಗೆ ಮೇಕ್ ಇನ್ ಇಂಡಿಯಾ ಯೋಜನೆಯಡಿ ನಿರ್ಮಾಣಗೊಂಡಿದ್ದು, ಗ್ರಾಹಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ತನ್ನ ಉತ್ಪನ್ನವನ್ನು ವಿಸ್ತರಿಸುತ್ತಿದೆ.

ಇವಿ ಇಂಡಿಯಾ ಎಕ್ಸ್‌ಪೋ: 150 ಕಿ.ಮೀ ಮೈಲೇಜ್ ಎರಡು ಇವಿ ಸ್ಕೂಟರ್ ಅನಾವರಣಗೊಳಿಸಿದ ಶಿಮಾ ಎಲೆಕ್ಟ್ರಿಕ್

ಸೆಸ್ ಟಫ್ ಮತ್ತು ಸೆಸ್ ಹಾಬಿ ಜೊತೆಗೆ ಶಿಮಾ ಎಲೆಕ್ಟ್ರಿಕ್ ಕಂಪನಿಯು ಸೆಸ್ ಜೂಮ್, ಸೆಸ್ ಬೋಲ್ಡ್, ಸೆಸ್ ಈಗಲ್ ಸೇರಿದಂತೆ ಇತರೆ ಸ್ಕೂಟರ್‌ಗಳನ್ನು ಸಹ ಪ್ರದರ್ಶಿಸಿದ್ದು, ಹೊಸದಾಗಿ ಪರಿಚಯಿಸಲಾದ ಈ ದ್ವಿಚಕ್ರ ವಾಹನಗಳೊಂದಿಗೆ ಕಂಪನಿಯು ಈಗ ಒಟ್ಟು 6 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹೊಂದಿದಂತಾಗಿದೆ.

ಇವಿ ಇಂಡಿಯಾ ಎಕ್ಸ್‌ಪೋ: 150 ಕಿ.ಮೀ ಮೈಲೇಜ್ ಎರಡು ಇವಿ ಸ್ಕೂಟರ್ ಅನಾವರಣಗೊಳಿಸಿದ ಶಿಮಾ ಎಲೆಕ್ಟ್ರಿಕ್

ಶಿಮಾ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಒಟ್ಟು ಐದು ಲೋ ಸ್ಪೀಡ್ ಮತ್ತು ಒಂದು ಹೈ ಸ್ಪೀಡ್ ಮಾದರಿಯನ್ನು ಪರಿಚಯಿಸುತ್ತಿದ್ದು, ಪ್ರತಿ ಇವಿ ಸ್ಕೂಟರ್‌ ಮಾದರಿಗಳಲ್ಲೂ ನಾಲ್ಕರಿಂದ ಐದು ವೆರಿಯಂಟ್‌ಗಳು ಖರೀದಿಗೆ ಲಭ್ಯವಿರಲಿವೆ.

ಇವಿ ಇಂಡಿಯಾ ಎಕ್ಸ್‌ಪೋ: 150 ಕಿ.ಮೀ ಮೈಲೇಜ್ ಎರಡು ಇವಿ ಸ್ಕೂಟರ್ ಅನಾವರಣಗೊಳಿಸಿದ ಶಿಮಾ ಎಲೆಕ್ಟ್ರಿಕ್

ಭಾರತದಲ್ಲಿ ಶಿಮಾ ಎಲೆಕ್ಟ್ರಿಕ್ ಕಂಪನಿಯು 2016ರಿಂದ ಇವಿ ವಾಹನ ಉತ್ಪಾದನೆಯನ್ನು ಕೈಗೊಳ್ಳುತ್ತಿದ್ದು, ಕಳೆದ ಐದು ವರ್ಷಗಳಲ್ಲಿ ಕಂಪನಿಯು ಹಲವಾರು ಹೊಸ ಬದಲಾವಣೆಗಳೊಂದಿಗೆ ಇವಿ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.

ಇವಿ ಇಂಡಿಯಾ ಎಕ್ಸ್‌ಪೋ: 150 ಕಿ.ಮೀ ಮೈಲೇಜ್ ಎರಡು ಇವಿ ಸ್ಕೂಟರ್ ಅನಾವರಣಗೊಳಿಸಿದ ಶಿಮಾ ಎಲೆಕ್ಟ್ರಿಕ್

ಸದ್ಯ ದೇಶಾದ್ಯಂತ ಕಂಪನಿಯು ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ 75 ಡೀಲರ್ ನೆಟ್‌ವರ್ಕ್ ಹೊಂದಿದ್ದು, ಹೊಸ ಉತ್ಪನ್ನಗಳೊಂದಿಗೆ ಕಂಪನಿಯು ಮುಂದಿನ ವರ್ಷದ ಕೊನೆಯಲ್ಲಿ 150ಕ್ಕೂ ಹೆಚ್ಚು ಡೀಲರ್ಸ್ ತೆರೆಯುವ ಯೋಜನೆಯಲ್ಲಿದೆ.

ಇವಿ ಇಂಡಿಯಾ ಎಕ್ಸ್‌ಪೋ: 150 ಕಿ.ಮೀ ಮೈಲೇಜ್ ಎರಡು ಇವಿ ಸ್ಕೂಟರ್ ಅನಾವರಣಗೊಳಿಸಿದ ಶಿಮಾ ಎಲೆಕ್ಟ್ರಿಕ್

ಇನ್ನು ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗುತ್ತಿದೆ.

Most Read Articles

Kannada
English summary
Shema electric unveiled ses hobby and ses tuff ev scooter at the ev india expo
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X