ಅಗಸ್ಟ್ 15ರಂದು ಬಿಡುಗಡೆಯಾಗಲಿರುವ ಸಿಂಪಲ್ ಎನರ್ಜಿ ಸ್ಕೂಟರ್ ಮೊದಲ ಟೀಸರ್ ಚಿತ್ರ ಪ್ರಕಟ

ಸಿಂಪಲ್ ಎನರ್ಜಿ ಕಂಪನಿಯು ತನ್ನ ಬಹುನೀರಿಕ್ಷಿತ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯೊಂದಿಗೆ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದ್ದು, ಅಗಸ್ಟ್ 15ರಂದು ಬಿಡುಗಡೆಯಾಗಲಿರುವ ಹೊಸ ಸ್ಕೂಟರಿನ ಮೊದಲ ಟೀಸರ್ ಚಿತ್ರವನ್ನು ಪ್ರಕಟಿಸಿದೆ.

ಅಗಸ್ಟ್ 15ರಂದು ಬಿಡುಗಡೆಯಾಗಲಿರುವ ಸಿಂಪಲ್ ಎನರ್ಜಿ ಸ್ಕೂಟರ್ ಮೊದಲ ಟೀಸರ್ ಚಿತ್ರ ಪ್ರಕಟ

ಬೆಂಗಳೂರು ಮೂಲದ ಸಿಂಪಲ್ ಎನರ್ಜಿ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಸಿಂಪಲ್ ಒನ್ ಹೆಸರಿನಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಹೊಸ ಸ್ಕೂಟರ್ ಅಧಿಕೃತ ಹೆಸರಿನಲ್ಲಿಯೇ ಕಂಪನಿಯು ಮೊದಲ ಟೀಸರ್ ಚಿತ್ರವನ್ನು ಪ್ರಕಟಿಸಿದೆ. ಹೊಸ ಸ್ಕೂಟರ್ ಮಾದರಿಯನ್ನು ಈ ಹಿಂದೆ ಮಾರ್ಕ್ 2 ಹೆಸರಿನಲ್ಲಿ ಪರೀಕ್ಷೆ ಕೈಗೊಂಡಿದ್ದ ಕಂಪನಿಯು ಇದೀಗ ಅಧಿಕೃತ ಹೆಸರನ್ನು ಬಹಿರಂಗಪಡಿಸಿದ್ದು, ಹೊಸ ಸ್ಕೂಟರ್ ಅಗಸ್ಟ್ 15ರಂದೇ ಮಾರುಕಟ್ಟೆಗೆ ಪ್ರವೇಶಿಸಲಿದೆ.

ಅಗಸ್ಟ್ 15ರಂದು ಬಿಡುಗಡೆಯಾಗಲಿರುವ ಸಿಂಪಲ್ ಎನರ್ಜಿ ಸ್ಕೂಟರ್ ಮೊದಲ ಟೀಸರ್ ಚಿತ್ರ ಪ್ರಕಟ

ಸಿಂಪಲ್ ಎನರ್ಜಿ ಕಂಪನಿಯ ಮಾಹಿತಿಯ ಪ್ರಕಾರ ಹೊಸ ಸಿಂಪಲ್ ಒನ್ ಸ್ಕೂಟರ್ ಮಾದರಿಯು ತೆಗೆದುಹಾಕಬಹುದಾದ 4.8 ಕಿಲೋವ್ಯಾಟ್ ಸಾಮಾರ್ಥ್ಯದ ಲೀಥಿಯಂ ಅಯಾನ್ ಬ್ಯಾಟರಿ ಪ್ರೇರಣೆಯೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 240 ಕಿ.ಮೀ ಮೈಲೇಜ್ ಹಿಂದಿರುಗಿಸುವ ಭರವಸೆ ನೀಡಿದೆ.

ಅಗಸ್ಟ್ 15ರಂದು ಬಿಡುಗಡೆಯಾಗಲಿರುವ ಸಿಂಪಲ್ ಎನರ್ಜಿ ಸ್ಕೂಟರ್ ಮೊದಲ ಟೀಸರ್ ಚಿತ್ರ ಪ್ರಕಟ

ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆಯು ನಡೆಸಿದ ಟೆಸ್ಟಿಂಗ್ ಪ್ರಕ್ರಿಯೆಯಲ್ಲಿ ಹೊಸ ಸ್ಕೂಟರ್ ವಿವಿಧ ರೈಡಿಂಗ್ ಮೋಡ್‌ನಲ್ಲಿ ಪ್ರತಿ ಚಾರ್ಚ್‌ಗೆ 230 ಕಿ.ಮೀ ಮತ್ತು 240 ಕಿ.ಮೀ ತನಕ ಮೈಲೇಜ್ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದೆ.

ಅಗಸ್ಟ್ 15ರಂದು ಬಿಡುಗಡೆಯಾಗಲಿರುವ ಸಿಂಪಲ್ ಎನರ್ಜಿ ಸ್ಕೂಟರ್ ಮೊದಲ ಟೀಸರ್ ಚಿತ್ರ ಪ್ರಕಟ

ಈ ಮೂಲಕ ಅತ್ಯುತ್ತಮ ಮೈಲೇಜ್ ಜೊತೆಗೆ ಕೇವಲ 3.6 ಸೆಕೆಂಡುಗಳಲ್ಲಿ ಸೊನ್ನೆಯಿಂದ 50 ಕಿ.ಮೀ ವೇಗ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿರುವ ಹೊಸ ಸ್ಕೂಟರ್ ಪ್ರತಿ ಗಂಟೆಗೆ ಗರಿಷ್ಠ 100 ಕಿ.ಮೀ ವೇಗದಲ್ಲಿ ಚಲಿಸಬಲ್ಲದು.

ಅಗಸ್ಟ್ 15ರಂದು ಬಿಡುಗಡೆಯಾಗಲಿರುವ ಸಿಂಪಲ್ ಎನರ್ಜಿ ಸ್ಕೂಟರ್ ಮೊದಲ ಟೀಸರ್ ಚಿತ್ರ ಪ್ರಕಟ

ಇದರೊಂದಿಗೆ ಆರಂಭಿಕ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಲ್ಲೇ ಅತಿ ವೇಗದ ಮತ್ತು ಹೆಚ್ಚು ಮೈಲೇಜ್ ನೀಡಬಲ್ಲ ಇವಿ ಸ್ಕೂಟರ್ ಮಾದರಿಯಾಗಿ ಗುರುತಿಸಿಕೊಳ್ಳಲಿದ್ದು, ಕೆಲವೇ ನಿಮಿಷಗಳಲ್ಲಿ ಪೂರ್ಣ ಪ್ರಮಾಣದ ಚಾರ್ಜಿಂಗ್ ಪಡೆದುಕೊಳ್ಳಬಹುದು.

ಅಗಸ್ಟ್ 15ರಂದು ಬಿಡುಗಡೆಯಾಗಲಿರುವ ಸಿಂಪಲ್ ಎನರ್ಜಿ ಸ್ಕೂಟರ್ ಮೊದಲ ಟೀಸರ್ ಚಿತ್ರ ಪ್ರಕಟ

ಸಿಂಪಲ್ ಒನ್ ಸ್ಕೂಟರ್‌ನಲ್ಲಿ ಅಳವಡಿಸಲಾಗಿರುವ 4.8 ಕಿಲೋವ್ಯಾಟ್ ಸಾಮಾರ್ಥ್ಯದ ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಗೃಹ ಬಳಕೆಯ ಚಾರ್ಜರ್ ಮೂಲಕ 40 ನಿಮೀಷಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಬಹುದಾದರೆ ಫಾಸ್ಟ್ ಚಾರ್ಜಿಂಗ್ ಸೆಂಟರ್‌ಗಳಲ್ಲಿ ಕೇವಲ 17 ನೀಮಿಷಗಳಲ್ಲೇ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ.

ಅಗಸ್ಟ್ 15ರಂದು ಬಿಡುಗಡೆಯಾಗಲಿರುವ ಸಿಂಪಲ್ ಎನರ್ಜಿ ಸ್ಕೂಟರ್ ಮೊದಲ ಟೀಸರ್ ಚಿತ್ರ ಪ್ರಕಟ

ಹಾಗೆಯೇ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಲ್ಲಿ ಐಪಿ67 ಪ್ರಮಾಣಿಕೃತ ಟಚ್‌ಸ್ಕ್ರೀನ್ ಡಿಸ್‌ಪ್ಲೇ, ಕನೆಕ್ಟೆಡ್ ಫೀಚರ್ಸ್‌ಗಳು, ಆನ್ ಬೋರ್ಡ್ ನ್ಯಾವಿಗೇಷನ್, ಬ್ಲೂಟೂಥ್ ಕನೆಕ್ಟಿವಿಟಿ ಒಳಗೊಂಡಿದ್ದು, ಗುಣಮಟ್ಟದ ಬಿಡಿಭಾಗಗಳೊಂದಿಗೆ ಹೊಸ ಸ್ಕೂಟರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 1.10 ಲಕ್ಷದಿಂದ ರೂ. 1.20 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವುದಾಗಿ ಕಂಪನಿಯೇ ಮಾಹಿತಿ ನೀಡಿದೆ.

ಅಗಸ್ಟ್ 15ರಂದು ಬಿಡುಗಡೆಯಾಗಲಿರುವ ಸಿಂಪಲ್ ಎನರ್ಜಿ ಸ್ಕೂಟರ್ ಮೊದಲ ಟೀಸರ್ ಚಿತ್ರ ಪ್ರಕಟ

ಸಿಂಪಲ್ ಎನರ್ಜಿ ಕಂಪನಿಯು ಶೇ.90 ರಷ್ಟು ಸ್ಥಳೀಯ ಸಂಪನ್ಮೂಲಗಳೊಂದಿಗೆ ಹೊಸ ಸ್ಕೂಟರ್ ಉತ್ಪನ್ನಗಳನ್ನು ಅಭಿವೃದ್ದಿಗೊಳಿಸುತ್ತಿದ್ದು, ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಆರಂಭಿಕ ಸ್ಕೂಟರ್ ಉತ್ಪಾದನಾ ಘಟಕಕ್ಕೆ ಈಗಾಗಲೇ ಅಧಿಕೃತ ಚಾಲನೆ ನೀಡಿದೆ.

ಅಗಸ್ಟ್ 15ರಂದು ಬಿಡುಗಡೆಯಾಗಲಿರುವ ಸಿಂಪಲ್ ಎನರ್ಜಿ ಸ್ಕೂಟರ್ ಮೊದಲ ಟೀಸರ್ ಚಿತ್ರ ಪ್ರಕಟ

ಸುಧಾರಿತ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ನಿರ್ಮಾಣವಾಗುತ್ತಿರುವ ವೈಟ್‌ಫೀಲ್ಡ್ ಸಿಂಪಲ್ ಎನರ್ಜಿ ವಾಹನ ಉತ್ಪದನಾ ಘಟಕದಲ್ಲಿ ವಾರ್ಷಿಕವಾಗಿ 50 ಸಾವಿರ ಸ್ಕೂಟರ್ ನಿರ್ಮಾಣ ಮಾಡುವ ಗುರಿಹೊಂದಲಾಗಿದ್ದು, ಬಿಡುಗಡೆಗೂ ಮುನ್ನವೇ ಹೊಸ ಸಂಚಲನಕ್ಕೆ ಕಾರಣವಾಗಿರುವ ಸಿಂಪಲ್ ಎನರ್ಜಿ ಕಂಪನಿಯ ಮೇಲೆ ಹಲವಾರು ಬೃಹತ್ ಆಟೋ ಆಟೋ ಕಂಪನಿಗಳು ಭಾರೀ ಹೂಡಿಕೆಗೆ ಮುಂದಾಗಿವೆ.

Most Read Articles

Kannada
English summary
Simple Energy One Teased Ahead Of Launch. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X