ಕೇವಲ 1 ನಿಮಿಷದ ಚಾರ್ಜ್‌ಗೆ 2.5 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ ಸಿಂಪಲ್ ಒನ್ ಇವಿ ಸ್ಕೂಟರ್

ಬೆಂಗಳೂರು ಮೂಲದ ಸಿಂಪಲ್ ಎನರ್ಜಿ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಕಂಪನಿಯು ಇದೇ ತಿಂಗಳು 15ರಂದು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಾದ 'ಸಿಂಪಲ್ ಒನ್' ಬಿಡುಗಡೆ ಮಾಡುತ್ತಿದ್ದು, ಹೊಸ ಸ್ಕೂಟರ್ ಬಿಡುಗಡೆಗೂ ಮುನ್ನ ಕಂಪನಿಯು ಪ್ರಮುಖ ತಾಂತ್ರಿಕ ಅಂಶಗಳನ್ನು ಹಂಚಿಕೊಂಡಿದೆ.

ಕೇವಲ 1 ನಿಮಿಷ ಚಾರ್ಜ್ ಮಾಡಿದರೂ 2.5 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ ಸಿಂಪಲ್ ಒನ್ ಇವಿ ಸ್ಕೂಟರ್

ಹೊಸ ನೀರಿಕ್ಷೆಯೊಂದಿಗೆ ಆಟೋ ಉದ್ಯಮಕ್ಕೆ ಪ್ರವೇಶಿಸುತ್ತಿರುವ ಸಿಂಪಲ್ ಎನರ್ಜಿ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಹೊಸ ಇವಿ ಸ್ಕೂಟರ್‌ನಲ್ಲಿ ಹಲವಾರು ಫೀಚರ್ಸ್ ಜೋಡಣೆಯೊಂದಿಗೆ ಅತ್ಯುತ್ತಮ ಮೈಲೇಜ್ ಸ್ಕೂಟರ್ ಮಾದರಿಯಾಗಿ ಬಿಡುಗಡೆ ಮಾಡುತ್ತಿದ್ದು, ಹೊಸ ಸ್ಕೂಟರ್‌ನಲ್ಲಿರುವ ಕೆಲವು ಆಕರ್ಷಕ ತಾಂತ್ರಿಕ ಸೌಲಭ್ಯಗಳು ಹೊಸ ಇವಿ ಸ್ಕೂಟರ್ ಮೌಲ್ಯವನ್ನು ಹೆಚ್ಚಿಸಲಿವೆ.

ಕೇವಲ 1 ನಿಮಿಷ ಚಾರ್ಜ್ ಮಾಡಿದರೂ 2.5 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ ಸಿಂಪಲ್ ಒನ್ ಇವಿ ಸ್ಕೂಟರ್

ಹೊಸ ಇವಿ ಸ್ಕೂಟರ್ ಮಾದರಿಯನ್ನು ಬಜೆಟ್ ಬೆಲೆಯಲ್ಲಿ ಉತ್ತಮ ಮೈಲೇಜ್ ಮಾದರಿಯಾಗಿ ಅಭಿವೃದ್ದಿಗೊಳಿಸಿರುವ ಸಿಂಪಲ್ ಎನರ್ಜಿ ಕಂಪನಿಯು 4.8 ಕಿಲೋವ್ಯಾಟ್ ಸಾಮಾರ್ಥ್ಯದ ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆ ಮಾಡಿದ್ದು, ಪ್ರತಿ ಚಾರ್ಜ್‌ಗೆ ಗರಿಷ್ಠ 240 ಕಿ.ಮೀ ಮೈಲೇಜ್ ಹಿಂದಿರುಗಿಸುವ ಭರವಸೆ ನೀಡಿದೆ.

ಕೇವಲ 1 ನಿಮಿಷ ಚಾರ್ಜ್ ಮಾಡಿದರೂ 2.5 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ ಸಿಂಪಲ್ ಒನ್ ಇವಿ ಸ್ಕೂಟರ್

ಹೊಸ ಎಲೆಕ್ಟ್ರಿಕ್ ಸ್ಕೂಟರಿನ ಅಧಿಕೃತ ಮೈಲೇಜ್ ಪ್ರಮಾಣವನ್ನು ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆಯೇ ಪ್ರಮಾಣೀಕರಿಸಿದ್ದು, ಹೊಸ ಸ್ಕೂಟರಿನ ಚಾರ್ಜಿಂಗ್ ಅವಧಿಯು ಇತರೆ ಇವಿ ಸ್ಕೂಟರ್‌‌ಗಳಿಂತಲೂ ಅತಿ ಕಡಿಮೆ ಅವಧಿಯಲ್ಲಿ ಪೂರ್ಣಪ್ರಮಾಣದ ಚಾರ್ಜ್ ಮಾಡಬಹುದಾಗಿದೆ.

ಕೇವಲ 1 ನಿಮಿಷ ಚಾರ್ಜ್ ಮಾಡಿದರೂ 2.5 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ ಸಿಂಪಲ್ ಒನ್ ಇವಿ ಸ್ಕೂಟರ್

4.8 ಕಿಲೋವ್ಯಾಟ್ ಸಾಮಾರ್ಥ್ಯದ ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಅನ್ನು ಗೃಹ ಬಳಕೆಯ ಎಸಿ ಚಾರ್ಜರ್ ಮೂಲಕ 40 ನಿಮಿಷಗಳಲ್ಲಿ ಪೂರ್ಣ ಪ್ರಮಾಣದ ಚಾರ್ಜ್ ಮಾಡಬಹುದಾದರೆ ಡಿಸಿ ಫಾಸ್ಟ್ ಚಾರ್ಜಿಂಗ್ ಸೆಂಟರ್‌ಗಳ ಮೂಲಕ 17 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ.

ಕೇವಲ 1 ನಿಮಿಷ ಚಾರ್ಜ್ ಮಾಡಿದರೂ 2.5 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ ಸಿಂಪಲ್ ಒನ್ ಇವಿ ಸ್ಕೂಟರ್

ಜೊತೆಗೆ ಕ್ವಿಕ್ ಚಾರ್ಜ್ ಟೆಕ್ನಾಲಜಿ ಹೊಂದಿರುವ ಹೊಸ ಸ್ಕೂಟರ್‌ನಲ್ಲಿ ಸಾಮಾನ್ಯ ಚಾರ್ಜರ್ ಮೂಲಕವೇ ಕೇವಲ ಒಂದು ನಿಮಿಷ ಚಾರ್ಜ್ ಮಾಡಿದರೂ ಕನಿಷ್ಠ 2.5 ಕಿ.ಮೀ ಮೈಲೇಜ್ ಹಿಂಪಡೆಯಬಹುದಾಗಿದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯಕ್ಕಾಗಿ ಕಂಪನಿಯು ಪ್ರಮುಖ ರೆಸ್ಟೊರೆಂಟ್‌ಗಳು, ಮಾಲ್, ಶಾಂಪಿಂಗ್ ಕಾಪ್ಲೆಕ್ಸ್‌ಗಳೊಂದಿಗೆ ಸಹಭಾಗಿತ್ವದ ಚಾರ್ಜಿಂಗ್ ಪಾಯಿಂಟ್‌ಗಳನ್ನು ತೆರೆಯಲು ಮಾತುಕತೆ ನಡೆಸಿದೆ.

ಕೇವಲ 1 ನಿಮಿಷ ಚಾರ್ಜ್ ಮಾಡಿದರೂ 2.5 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ ಸಿಂಪಲ್ ಒನ್ ಇವಿ ಸ್ಕೂಟರ್

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯ ನಂತರ ಸದ್ಯಕ್ಕೆ ದೇಶದ ಪ್ರಮುಖ ಮಾಹಾನಗರಗಳಲ್ಲಿ ಮಾತ್ರ ಮಾರಾಟ ಸೌಲಭ್ಯವನ್ನು ತೆರೆಯಲಿರುವ ಸಿಂಪಲ್ ಎನರ್ಜಿ ಕಂಪನಿಯು ಮೊದಲ ಹಂತದಲ್ಲಿ ವಿವಿಧ ನಗರಗಳಲ್ಲಿ 300 ಚಾರ್ಜಿಂಗ್ ಪಾಯಿಂಟ್‌ಗಳನ್ನು ತೆರೆಯುವುದಾಗಿ ಹೇಳಿಕೊಂಡಿದೆ.

ಕೇವಲ 1 ನಿಮಿಷ ಚಾರ್ಜ್ ಮಾಡಿದರೂ 2.5 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ ಸಿಂಪಲ್ ಒನ್ ಇವಿ ಸ್ಕೂಟರ್

ಹೊಸ ಸ್ಕೂಟರ್‌ಗೆ ಬೇಡಿಕೆ ಹೆಚ್ಚಿದಂತೆ ಉತ್ಪಾದನಾ ಹೆಚ್ಚಳದೊಂದಿಗೆ ವಿವಿಧ ನಗರಗಳಿಗೆ ಮಾರಾಟ ಸೌಲಭ್ಯ ವಿಸ್ತರಿಸಲಿದ್ದು, ಸರ್ಕಾರಿ ಸಹಭಾಗಿತ್ವದ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣದ ಆಧಾರದ ಮೇಲೆ ಇವಿ ವಾಹನಗಳ ಭವಿಷ್ಯ ನಿರ್ಧಾರವಾಗಲಿದೆ.

ಕೇವಲ 1 ನಿಮಿಷ ಚಾರ್ಜ್ ಮಾಡಿದರೂ 2.5 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ ಸಿಂಪಲ್ ಒನ್ ಇವಿ ಸ್ಕೂಟರ್

ಹೆಚ್ಚುತ್ತಿರುವ ಇಂಧನಗಳ ಬೆಲೆ ನಿಯಂತ್ರಣಕ್ಕೆ ಕಡಿವಾಣ ಹಾಕಲು ಹಲವಾರು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದು, ಚಾರ್ಜಿಂಗ್ ನಿಲ್ದಾಣಗಳ ಹೆಚ್ಚಳಕ್ಕೂ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.

ಕೇವಲ 1 ನಿಮಿಷ ಚಾರ್ಜ್ ಮಾಡಿದರೂ 2.5 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ ಸಿಂಪಲ್ ಒನ್ ಇವಿ ಸ್ಕೂಟರ್

ಹೀಗಾಗಿ ಸಿಂಪಲ್ ಎನರ್ಜಿ ಸೇರಿದಂತೆ ವಿವಿಧ ಎಲೆಕ್ಟ್ರಿಕ್ ವಾಹನ ಕಂಪನಿಗಳು ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಸರ್ಕಾರಿ ಸಹಭಾಗಿತ್ವದ ಚಾರ್ಜಿಂಗ್ ನಿಲ್ದಾಣಗಳು ಮಾತ್ರವಲ್ಲದೇ ಖಾಸಗಿ ಕಂಪನಿಗಳು ಸಹ ವಿವಿಧ ಮಾದರಿಯ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುತ್ತಿವೆ.

ಕೇವಲ 1 ನಿಮಿಷ ಚಾರ್ಜ್ ಮಾಡಿದರೂ 2.5 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ ಸಿಂಪಲ್ ಒನ್ ಇವಿ ಸ್ಕೂಟರ್

ಈ ನಿಟ್ಟಿನಲ್ಲಿ ಸಿಂಪಲ್ ಎನರ್ಜಿ ಕಂಪನಿಯು ಅತ್ಯುತ್ತಮ ಮೈಲೇಜ್ ಪ್ರೇರಿತ ಇವಿ ಸ್ಕೂಟರ್‌ ಜೊತೆಗೆ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣಕ್ಕೂ ಮುಂದಾಗಿರುವುದು ಉತ್ತಮ ಕ್ರಮವಾಗಿದ್ದು, ಇವಿ ಸ್ಕೂಟರ್ ಮಾರಾಟದಲ್ಲಿ ಸಿಂಪಲ್ ಎನರ್ಜಿ ಹೊಸ ಸಂಚಲನ ಮೂಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕೇವಲ 1 ನಿಮಿಷ ಚಾರ್ಜ್ ಮಾಡಿದರೂ 2.5 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ ಸಿಂಪಲ್ ಒನ್ ಇವಿ ಸ್ಕೂಟರ್

ಇನ್ನು ಸಿಂಪಲ್ ಎನರ್ಜಿ ಕಂಪನಿಯ ಹೊಸ ಸ್ಕೂಟರ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 1.10 ಲಕ್ಷದಿಂದ ರೂ. 1.20 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದೆಂದು ನೀರಿಕ್ಷಿಸಲಾಗಿದ್ದು, ಶೇ.90 ರಷ್ಟು ಸ್ಥಳೀಯ ನಿರ್ಮಾಣದ ಬಿಡಿಭಾಗಗಳ ಜೋಡಣೆ ಪಡೆದುಕೊಂಡಿದೆ.

ಕೇವಲ 1 ನಿಮಿಷ ಚಾರ್ಜ್ ಮಾಡಿದರೂ 2.5 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ ಸಿಂಪಲ್ ಒನ್ ಇವಿ ಸ್ಕೂಟರ್

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಲ್ಲಿ ಐಪಿ67 ಪ್ರಮಾಣಿಕೃತ ಟಚ್‌ಸ್ಕ್ರೀನ್ ಡಿಸ್‌ಪ್ಲೇ, ಕನೆಕ್ಟೆಡ್ ಫೀಚರ್ಸ್‌ಗಳು, ಆನ್ ಬೋರ್ಡ್ ನ್ಯಾವಿಗೇಷನ್, 30 ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ಮತ್ತು ಬ್ಲೂಟೂಥ್ ಕನೆಕ್ಟಿವಿಟಿ ಒಳಗೊಂಡಿದ್ದು, ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಾಗಿ ಗುರುತಿಸಿಕೊಳ್ಳಲಿದೆ.

ಕೇವಲ 1 ನಿಮಿಷ ಚಾರ್ಜ್ ಮಾಡಿದರೂ 2.5 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ ಸಿಂಪಲ್ ಒನ್ ಇವಿ ಸ್ಕೂಟರ್

ನಮ್ಮ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಸಿಂಪಲ್ ಎನರ್ಜಿ ಕಂಪನಿಯ ಆರಂಭಿಕ ಸ್ಕೂಟರ್ ಉತ್ಪಾದನಾ ಘಟಕವು ಆರಂಭವಾಗುತ್ತಿದ್ದು, ಸುಧಾರಿತ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ನಿರ್ಮಾಣವಾಗುತ್ತಿರುವ ಹೊಸ ವಾಹನ ಉತ್ಪದನಾ ಘಟಕದಲ್ಲಿ ವಾರ್ಷಿಕವಾಗಿ 50 ಸಾವಿರ ಸ್ಕೂಟರ್ ನಿರ್ಮಾಣ ಮಾಡುವ ಗುರಿಹೊಂದಲಾಗಿದೆ.

ಕೇವಲ 1 ನಿಮಿಷ ಚಾರ್ಜ್ ಮಾಡಿದರೂ 2.5 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ ಸಿಂಪಲ್ ಒನ್ ಇವಿ ಸ್ಕೂಟರ್

ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಸ್ಕೂಟರ್ ನಿರ್ಮಾಣ ಮಾಡಿರುವ ಸಿಂಪಲ್ ಎನರ್ಜಿ ಕಂಪನಿಯ ಕಾರ್ಯವೈಖರಿಯನ್ನು ಮೆಚ್ಚಿರುವ ಹಲವು ಬೃಹತ್ ಆಟೋ ಉತ್ಪಾದನಾ ಕಂಪನಿಗಳು ಹೊಸ ಕಂಪನಿಯ ಮೇಲೆ ಭಾರೀ ಪ್ರಮಾಣದ ಹೂಡಿಕೆಗೆ ಮುಂದಾಗಿವೆ.

ಕೇವಲ 1 ನಿಮಿಷ ಚಾರ್ಜ್ ಮಾಡಿದರೂ 2.5 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ ಸಿಂಪಲ್ ಒನ್ ಇವಿ ಸ್ಕೂಟರ್

ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಮಟ್ಟದಲ್ಲಿ ಬಳಕೆಯಾಗುವ ನೀರಿಕ್ಷೆಯಿರುವುದರಿಂದ ಇವಿ ಸ್ಕೂಟರ್ ವಿಭಾಗದಲ್ಲಿ ಸಿಂಪಲ್ ಎನರ್ಜಿ ಕಂಪನಿಯು ಗ್ರಾಹಕರ ಆಯ್ಕೆ ಮುಂಚೂಣಿ ಸಾಧಿಸುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಕಂಪನಿಯು ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆಯೊಂದಿಗೆ ವಾರ್ಷಿಕ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸುವ ಯೋಜನೆಯಲ್ಲಿದೆ.

Most Read Articles

Kannada
English summary
Simple energy reveals upcoming simple one electric scooter features
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X