ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಹೆಚ್ಚಳಕ್ಕಾಗಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ ಸಿಂಪಲ್ ಎನರ್ಜಿ

ಸಿಂಪಲ್ ಎನರ್ಜಿ(Simple Energy) ಕಂಪನಿಯು ಈಗಾಗಲೇ ತನ್ನ ಹೊಸ ಇವಿ ಸ್ಕೂಟರ್ ಮಾದರಿಯಾದ ಸಿಂಪಲ್ ಒನ್(Simple One) ಆವೃತ್ತಿಯನ್ನು ಬಿಡುಗಡೆ ಮಾಡಿ ವಿತರಣೆಗೆ ಸಿದ್ದವಾಗುತ್ತಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ವಿಶ್ವದಲ್ಲೇ ಅತಿ ಹೆಚ್ಚು ಮೈಲೇಜ್ ಹೊಂದಿರುವ ಇವಿ ಸ್ಕೂಟರ್ ಎಂಬ ಹೆಗ್ಗೆಳಿಕೆಗೆ ಪಾತ್ರವಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಹೆಚ್ಚಳಕ್ಕಾಗಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ ಸಿಂಪಲ್ ಎನರ್ಜಿ

ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಬ್ಯಾಟರಿ ರೇಂಜ್ ಮತ್ತು ಬೆಲೆ ವಿಚಾರವಾಗಿ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಹೊಸ ಇವಿ ಸ್ಕೂಟರ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಇತರೆ ಎಲ್ಲಾ ಇವಿ ಸ್ಕೂಟರ್‌ಗಳಿಗೂ ಉತ್ತಮ ಪೈಪೋಟಿ ನೀಡುವ ತವಕದಲ್ಲಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಹೆಚ್ಚಳಕ್ಕಾಗಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ ಸಿಂಪಲ್ ಎನರ್ಜಿ

ಸದ್ಯಕ್ಕೆ ಹೊಸ ಸಿಂಪಲ್ ಒನ್ ಇವಿ ಸ್ಕೂಟರ್ ಬಿಡುಗಡೆ ಮಾಡಿ ಬುಕ್ಕಿಂಗ್ ಸ್ವಿಕರಿಸುತ್ತಿದ್ದು, ಕಂಪನಿಯು ಮುಂದಿನ ಕೆಲವೇ ದಿನಗಳಲ್ಲಿ ವಿತರಣೆ ಆರಂಭಿಸವ ಸಿದ್ದತೆಯಲ್ಲಿದೆ. ಇದಕ್ಕೂ ಮುನ್ನ ಸಿಂಪಲ್ ಎನರ್ಜಿ ಕಂಪನಿಯು ಉದ್ಯಮ ಕಾರ್ಯಾಚರಣೆ ವಿಸ್ತರಣೆಗಾಗಿ ಭಾರೀ ಪ್ರಮಾಣದ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದು, ಹೊಸ ಬಂಡವಾಳದೊಂದಿಗೆ ಉತ್ಪಾದನಾ ಘಟಕ ವಿಸ್ತರಣೆಗೆ ಮುಂದಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಹೆಚ್ಚಳಕ್ಕಾಗಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ ಸಿಂಪಲ್ ಎನರ್ಜಿ

ಸಿಂಪಲ್ ಎನರ್ಜಿ ಕಂಪನಿಯು ಸದ್ಯ ನಮ್ಮ ಬೆಂಗಳೂರಿನಲ್ಲಿಯೇ ಹೊಸ ಉತ್ಪಾದನಾ ಘಟಕದಲ್ಲಿ ಇವಿ ಸ್ಕೂಟರ್ ಉತ್ಪಾದನೆ ಮಾಡುತ್ತಿದ್ದು, ಕಂಪನಿಯು ಶೀಘ್ರದಲ್ಲಿಯೇ ಎರಡನೇ ಘಟಕವನ್ನು ತೆರೆಯುವ ಮಾಹಿತಿ ಹಂಚಿಕೊಂಡಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಹೆಚ್ಚಳಕ್ಕಾಗಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ ಸಿಂಪಲ್ ಎನರ್ಜಿ

ಆರಂಭಿಕ ಬಂಡವಾಳದೊಂದಿಗೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಈಗಾಗಲೇ ಮುಖ್ಯ ಕಚೇರಿ ಮತ್ತು ಉತ್ಪಾದನಾ ಘಟಕ ಹೊಂದಿರುವ ಸಿಂಪಲ್ ಎನರ್ಜಿ ಕಂಪನಿಯು ಮುಂದಿನ ಒಂದು ವರ್ಷದೊಳಗೆ ತಮಿಳುನಾಡಿನ ಧರ್ಮಪುರಿಯಲ್ಲಿ ಎರಡನೇ ಘಟಕ ತೆರೆಯಲು ಯೋಜನೆ ರೂಪಿಸಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಹೆಚ್ಚಳಕ್ಕಾಗಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ ಸಿಂಪಲ್ ಎನರ್ಜಿ

ಎರಡನೇ ಉತ್ಪಾದನಾ ಘಟಕವು ಸುಮಾರು 600 ಎಕರೆ ವಿಸ್ತಾರವಾಗಿದ್ದು, ಹೊಸ ಘಟಕ ನಿರ್ಮಾಣ ಮತ್ತು ಹೊಸ ಇವಿ ವಾಹನಗಳ ಅಭಿವೃದ್ದಿಗಾಗಿ ಕಂಪನಿಯು ಸುಮಾರು ರೂ. 2,500 ಕೋಟಿ ಹೂಡಿಕೆ ಮಾಡುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಹೆಚ್ಚಳಕ್ಕಾಗಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ ಸಿಂಪಲ್ ಎನರ್ಜಿ

ಸಿಂಪಲ್ ಎನರ್ಜಿ ಕಂಪನಿಯು ರೂ.2,500 ಕೋಟಿ ಬಂಡವಾಳದಲ್ಲಿ ರೂ. 1 ಸಾವಿರ ಕೋಟಿಯನ್ನು ಎರಡನೇ ಉತ್ಪಾದನಾ ಘಟಕ ನಿರ್ಮಾಣಕ್ಕಾಗಿ ಮತ್ತು ಇನ್ನುಳಿದ ರೂ. 1,500 ಕೋಟಿ ಬಂಡವಾಳವನ್ನು ಮುಂದಿನ ಐದು ವರ್ಷಗಳಿಗೆ ಹಂತ-ಹಂತವಾಗಿ ಆರ್‌ ಅಂಡ್ ಡಿ, ಟೆಸ್ಟಿಂಗ್ ಟ್ರ್ಯಾಕ್ ಸೇರಿದಂತೆ ಮಾರುಕಟ್ಟೆ ವಿಸ್ತರಣೆಯ ಮೇಲೆ ಹೂಡಿಕೆಗೆ ಸಿದ್ದವಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಹೆಚ್ಚಳಕ್ಕಾಗಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ ಸಿಂಪಲ್ ಎನರ್ಜಿ

ಸದ್ಯ ಉತ್ಪಾದನಾ ಹಂತದಲ್ಲಿರುವ ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಯು ಈ ತಿಂಗಳಾಂತ್ಯಕ್ಕೆ ಅಥವಾ ಮುಂಬರುವ ಜನವರಿ ಮಧ್ಯಂತರದಲ್ಲಿ ವಿತರಣೆ ಆರಂಭವಾಗಲಿದ್ದು, ಇದುವರೆಗೆ ಹೊಸ ಇವಿ ಸ್ಕೂಟರ್ ಖರೀದಿಗಾಗಿ ಸುಮಾರು 40 ಸಾವಿರಕ್ಕೂ ಹೆಚ್ಚು ಗ್ರಾಹಕರು ಬುಕ್ಕಿಂಗ್ ದಾಖಲಿಸಿದ್ದಾರೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಹೆಚ್ಚಳಕ್ಕಾಗಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ ಸಿಂಪಲ್ ಎನರ್ಜಿ

ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 1.10 ಲಕ್ಷ ಬೆಲೆ ಹೊಂದಿದ್ದು, ವಿತರಣೆ ಆರಂಭಕ್ಕೂ ಮುನ್ನ ಕಂಪನಿಯು ಮುಂದಿನ ಕೆಲವೇ ವಾರಗಳಲ್ಲಿ ಟೆಸ್ಟ್ ರೈಡ್ ಆರಂಭಿಸಲಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಹೆಚ್ಚಳಕ್ಕಾಗಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ ಸಿಂಪಲ್ ಎನರ್ಜಿ

ಸ್ಟಾರ್ಟ್ಅಪ್ ಕಂಪನಿಯಾಗಿರುವ ಸಿಂಪಲ್ ಎನರ್ಜಿ ಕಂಪನಿಯು ಹಲವು ವರ್ಷಗಳ ಪ್ರಯತ್ನದ ನಂತರ ಸಿಂಪಲ್ ಒನ್ ಮಾದರಿಯನ್ನು ಹೊರತಂದಿದ್ದು, ಹೊಸ ಸ್ಕೂಟರ್ ಮಾದರಿಯನ್ನು ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಅತ್ಯುತ್ತಮ ಮೈಲೇಜ್ ಪ್ರೇರಿತ ಬ್ಯಾಟರಿ ರೇಂಜ್ ಮತ್ತು ಕೈಗೆಟುವ ಬೆಲೆಯಲ್ಲಿ ಹೊಸ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಹೆಚ್ಚಳಕ್ಕಾಗಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ ಸಿಂಪಲ್ ಎನರ್ಜಿ

ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಗ್ರೆಸ್ ವೈಟ್, ಅಜ್ಯುರ್ ಬ್ಲ್ಯೂ, ಬ್ರೆನೆಜ್ ಬ್ಲ್ಯಾಕ್ ಮತ್ತು ನಮ್ಮ ರೆಡ್ ಬಣ್ಣಗಳ ಆಯ್ಕೆ ನೀಡಿದ್ದು, ಹೊಸ ಸ್ಕೂಟರ್‌ನಲ್ಲಿ ಬೆಲೆಗೆ ತಕ್ಕಂತೆ ಅತ್ಯುತ್ತಮ ಫೀಚರ್ಸ್‌, ಬ್ಯಾಟರಿ ರೇಂಜ್ ನೀಡಲಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಹೆಚ್ಚಳಕ್ಕಾಗಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ ಸಿಂಪಲ್ ಎನರ್ಜಿ

ಸಿಂಪಲ್ ಎನರ್ಜಿ ಕಂಪನಿಯು ದೇಶದ 13 ರಾಜ್ಯಗಳ ಪ್ರಮುಖ ನಗರಗಳಲ್ಲಿ ಸದ್ಯ ಮಾರಾಟ ಸೌಲಭ್ಯವನ್ನು ಆರಂಭಿಸುತ್ತಿದ್ದು, ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ಹೆಚ್ಚಿದಂತೆ ಇವಿ ಸ್ಕೂಟರ್ ಮಾರಾಟ ಸೌಲಭ್ಯವು ಹಂತ-ಹಂತವಾಗಿ ದೇಶದ ಪ್ರಮುಖ ದೇಶಗಳಲ್ಲಿ ವಿಸ್ತರಣೆಯಾಗಲಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಹೆಚ್ಚಳಕ್ಕಾಗಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ ಸಿಂಪಲ್ ಎನರ್ಜಿ

ಸಿಂಪಲ್ ಎನರ್ಜಿ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸ್ಪೋರ್ಟಿ ವಿನ್ಯಾಸದೊಂದಿಗೆ ಅತ್ಯುತ್ತಮ ತಂತ್ರಜ್ಞಾನ ಸೌಲಭ್ಯಗಳನ್ನು ಹೊಂದಿದ್ದು, ಹೊಸ ಸ್ಕೂಟರ್‌ನಲ್ಲಿ ತ್ರಿಕೊನಾಕಾರದ ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಹೆಡ್‌‌ಲ್ಯಾಂಪ್, ಸೈಡ್ ಬೈ ಟರ್ನ್ ಸಿಗ್ನಲ್ ಇಂಡಿಕೇಟರ್, ಫ್ಲ್ಯಾಟ್ ಫುಟ್‌ಬೋರ್ಡ್, ಅಯಾಲ್ ವ್ಹೀಲ್, ಸ್ಪೋರ್ಟಿ ರಿಯರ್ ವ್ಯೂ ಮಿರರ್, 30-ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಹೊಂದಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಹೆಚ್ಚಳಕ್ಕಾಗಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ ಸಿಂಪಲ್ ಎನರ್ಜಿ

ಹೊಸ ಸಿಂಪಲ್ ಎನರ್ಜಿ ಇವಿ ಸ್ಕೂಟರ್‌ನಲ್ಲಿ 4.5KW ಎಲೆಕ್ಟ್ರಿಕ್ ಮೋಟಾರ್ ಜೊತೆಗೆ 4.8kWh ಲೀಥಿಯಂ ಅಯಾನ್ ಬ್ಯಾಟರಿ(ಡ್ಯುಯಲ್ ಬ್ಯಾಟರಿ) ಜೋಡಣೆ ಮಾಡಿದ್ದು, ಪ್ರತಿ ಚಾರ್ಚ್‌ಗೆ ವಿವಿಧ ರೈಡ್ ಮೋಡ್‌ಗಳ ಚಾಲನಾ ಶೈಲಿ ಆಧಾರದ ಮೇಲೆ ಕನಿಷ್ಠ 203 ಕಿ.ಮೀ ನಿಂದ ಗರಿಷ್ಠ 236 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಹೆಚ್ಚಳಕ್ಕಾಗಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ ಸಿಂಪಲ್ ಎನರ್ಜಿ

ಪ್ರತಿ ಗಂಟೆಗೆ 105 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಹೊಸ ಸಿಂಪಲ್ ಒನ್ ಸ್ಕೂಟರ್ 72 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಕೇವಲ 2.95 ಸೆಕೆಂಡುಗಳಲ್ಲಿ ಸೊನ್ನೆಯಿಂದ 40ಕಿ.ಮೀ ಕ್ವಿಕ್ ಸ್ಪೀಡ್ ಪಡೆದುಕೊಳ್ಳಲಿದ್ದು, ಹೊಸ ಸ್ಕೂಟರ್ ಅನ್ನು ಸಿಂಪಲ್ ಕಂಪನಿಯು ಟ್ಯೂಬಲರ್ ಫ್ರೆಮ್ ಬಳಕೆ ಮಾಡಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಹೆಚ್ಚಳಕ್ಕಾಗಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ ಸಿಂಪಲ್ ಎನರ್ಜಿ

ಜೊತೆಗೆ ಸಿಂಪಲ್ ಒನ್ ಸ್ಕೂಟರ್ ಮಾದರಿಯಲ್ಲಿ 1024x600 ಫಿಕ್ಸೆಲ್ ಹೊಂದಿರುವ 7 ಇಂಚಿನ ಟಚ್‌ಸ್ಕ್ರೀನ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂಥ್ ಮತ್ತು 4ಜಿ ಇಂಟರ್‌ನೆಟ್ ಸಂಪರ್ಕಕ್ಕಾಗಿ ಕನೆಕ್ಟೆಡ್ ಟೆಕ್ನಾಲಜಿ ನೀಡಲಾಗಿದೆ. ಕನೆಕ್ಟೆಡ್ ಫೀಚರ್ಸ್‌ನಲ್ಲಿ ಜಿಯೋ ಫೆನ್ಸಿಂಗ್, ಮ್ಯೂಜಿಕ್ ಕಂಟ್ರೋಲ್, ಎಸ್ಒಎಸ್ ಮೆಸೇಜ್, ವೆಹಿಕಲ್ ಟ್ರ್ಯಾಕಿಂಗ್, ಡ್ಯಾಕುಮೆಂಟ್ ಸ್ಟೋರೇಜ್, ಫೈಂಡ್ ಮೈ ಬೈಕ್ ಸೌಲಭ್ಯಗಳಿವೆ.

Most Read Articles

Kannada
English summary
Simple energy to invest 2500 cr in next 5 years details
Story first published: Wednesday, December 8, 2021, 16:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X