ಕೈಗೆಟುಕುವ ದರದಲ್ಲಿ ಹ್ಯಾಂಡ್ಸ್ ಫ್ರೀ ಹೆಲ್ಮೆಟ್ ಬಿಡುಗಡೆಗೊಳಿಸಿದ ಸ್ಟೀಲ್ ಬರ್ಡ್

ಖ್ಯಾತ ಹೆಲ್ಮೆಟ್ ತಯಾರಕ ಕಂಪನಿಯಾದ ಸ್ಟೀಲ್ ಬರ್ಡ್ ಕಡಿಮೆ ಬೆಲೆಯ ಹೊಸ ಹ್ಯಾಂಡ್ಸ್ ಫ್ರೀ ಹೆಲ್ಮೆಟ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ ಎಂದು ವರದಿಯಾಗಿದೆ. ಈ ಹೆಲ್ಮೆಟ್ ಬೆಲೆಯನ್ನು ಕಂಪನಿಯು ರೂ. 2,589 ಗಳಿಗೆ ನಿಗದಿಪಡಿಸಿದೆ. ಈ ಮೂಲಕ ಹ್ಯಾಂಡ್ಸ್ ಫ್ರೀ ಸೌಲಭ್ಯವಿರುವ ಹೆಲ್ಮೆಟ್ ಅನ್ನು ಇಷ್ಟು ಕಡಿಮೆ ಬೆಲೆಗೆ ಬಿಡುಗಡೆಗೊಳಿಸಿದ ದೇಶದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಸ್ಟೀಲ್ ಬರ್ಡ್ ಪಾತ್ರವಾಗಿದೆ.

ಕೈಗೆಟುಕುವ ದರದಲ್ಲಿ ಹ್ಯಾಂಡ್ಸ್ ಫ್ರೀ ಹೆಲ್ಮೆಟ್ ಬಿಡುಗಡೆಗೊಳಿಸಿದ ಸ್ಟೀಲ್ ಬರ್ಡ್

ಈ ಬೆಲೆಯಲ್ಲಿ ಹ್ಯಾಂಡ್ಸ್ ಫ್ರೀ ಟೆಕ್ನಾಲಜಿಯನ್ನು ಹೊಂದಿರುವ ಹೆಲ್ಮೆಟ್ ಅನ್ನು ಬೇರೆ ಯಾವುದೇ ಕಂಪನಿ ಬಿಡುಗಡೆಗೊಳಿಸಿಲ್ಲವೆಂದು ವರದಿಯಾಗಿದೆ. ಸ್ಟೀಲ್‌ ಬರ್ಡ್ ಕಂಪನಿಯು ಹಲವಾರು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೆಲ್ಮೆಟ್‌ಗಳನ್ನು ಬಿಡುಗಡೆಗೊಳಿಸುತ್ತಿದೆ. ದೂರದಿಂದ ಈ ಹೆಲ್ಮೆಟ್ ನೋಡುವವರಿಗೆ ನಿರಾಶೆ ಮೂಡಿಸುತ್ತದೆ. ಈ ಹೆಲ್ಮೆಟ್'ನ ಹೊರಭಾಗವನ್ನು ಸರಳವಾಗಿ ವಿನ್ಯಾಸಗೊಳಿಸಿರುವುದೇ ಇದಕ್ಕೆ ಪ್ರಮುಖ ಕಾರಣ.

ಕೈಗೆಟುಕುವ ದರದಲ್ಲಿ ಹ್ಯಾಂಡ್ಸ್ ಫ್ರೀ ಹೆಲ್ಮೆಟ್ ಬಿಡುಗಡೆಗೊಳಿಸಿದ ಸ್ಟೀಲ್ ಬರ್ಡ್

ಸ್ಟೀಲ್ ಬರ್ಡ್ ಕಂಪನಿಯು ಈಗ ಮಾರುಕಟ್ಟೆಯಲ್ಲಿರುವ ತನ್ನ ಜನಪ್ರಿಯ ಎಸ್‌ಬಿ‌ಎ 1 ಸರಣಿಯ ಹೆಲ್ಮೆಟ್ ಗಳನ್ನು ಆಧರಿಸಿ ಈ ಹೊಸ ಎಸ್‌ಬಿ‌ಎ 1 ಹೆಚ್‌ಎಫ್ ಹೆಲ್ಮೆಟ್ ಅನ್ನು ವಿನ್ಯಾಸಗೊಳಿಸಿದೆ. ಈ ಹೆಲ್ಮೆಟ್‌ನಲ್ಲಿ ಬಳಸಿರುವ ಹೆಚ್‌ಎಫ್ ಪದವು ಹ್ಯಾಂಡ್ಸ್ ಫ್ರೀ ಎಂಬುದನ್ನು ಸೂಚಿಸುತ್ತದೆ. ಸೆಲ್ ಫೋನಿನಲ್ಲಿ ಕರೆ ಸ್ವೀಕರಿಸಿ, ಮಾತನಾಡಲು ಈ ಹೆಲ್ಮೆಟ್ ಬೈಕ್ ಸವಾರರಿಗೆ ನೆರವಾಗುತ್ತದೆ.

ಕೈಗೆಟುಕುವ ದರದಲ್ಲಿ ಹ್ಯಾಂಡ್ಸ್ ಫ್ರೀ ಹೆಲ್ಮೆಟ್ ಬಿಡುಗಡೆಗೊಳಿಸಿದ ಸ್ಟೀಲ್ ಬರ್ಡ್

ಸ್ಟೀಲ್ ಬರ್ಡ್ ಕಂಪನಿಯು ಈ ಟೆಕ್ನಾಲಜಿಯನ್ನು ಹೆಲ್ಮೆಟ್ ಒಳಗಡೆ ಅಳವಡಿಸಿದೆ. ಇದಕ್ಕೆ ಯಾವುದೇ ಬ್ಯಾಟರಿಯ ಅಗತ್ಯವಿಲ್ಲ ಎಂಬುದು ಗಮನಾರ್ಹ ಸಂಗತಿ. ಈ ಹೆಲ್ಮೆಟ್ ಮೂಲಕ ಅನ್ ಲಿಮಿಟೆಡ್ ಮ್ಯೂಸಿಕ್ ಪಡೆಯಬಹುದು ಹಾಗೂ ಕರೆಗಳನ್ನು ಸ್ವೀಕರಿಸಬಹುದು. ಎಸ್‌ಬಿ‌ಎ 1 ಹೆಚ್‌ಎಫ್ ಹೆಲ್ಮೆಟ್ ಅನ್ನು ಎರಡು ವಿಭಿನ್ನ ಗಾತ್ರಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಕೈಗೆಟುಕುವ ದರದಲ್ಲಿ ಹ್ಯಾಂಡ್ಸ್ ಫ್ರೀ ಹೆಲ್ಮೆಟ್ ಬಿಡುಗಡೆಗೊಳಿಸಿದ ಸ್ಟೀಲ್ ಬರ್ಡ್

ಎಸ್‌ಬಿ‌ಎ 1 ಹೆಚ್‌ಎಫ್ ಹೆಲ್ಮೆಟ್ 580 ಎಂಎಂ ಹಾಗೂ 600 ಎಂಎಂ ಎಂಬ ಎರಡು ಗಾತ್ರಗಳನ್ನು ಹೊಂದಿದೆ. ಇದರ ಜೊತೆಗೆ ಈ ಹೆಲ್ಮೆಟ್ ಅನ್ನು ಕಪ್ಪು, ಬಿಳಿ, ಕೆಂಪು ಸೇರಿದಂತೆ ವಿವಿಧ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಸ್ಟೀಲ್‌ ಬರ್ಡ್ ಕಂಪನಿಯು ಹ್ಯಾಂಡ್ಸ್ ಫ್ರೀ ಅಲ್ಲದ ಹೆಲ್ಮೆಟ್ ಅನ್ನು ಸಹ ಮಾರಾಟ ಮಾಡುತ್ತದೆ. ಇದರ ಬೆಲೆ ರೂ. 1,339 ಗಳಾಗಿದೆ.

ಕೈಗೆಟುಕುವ ದರದಲ್ಲಿ ಹ್ಯಾಂಡ್ಸ್ ಫ್ರೀ ಹೆಲ್ಮೆಟ್ ಬಿಡುಗಡೆಗೊಳಿಸಿದ ಸ್ಟೀಲ್ ಬರ್ಡ್

ಈ ಹೆಲ್ಮೆಟ್ ಅನ್ನು ಎಸ್‌ಬಿ‌ಎ 1 ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ಈ ಹೆಲ್ಮೆಟ್ ಹ್ಯಾಂಡ್ಸ್ ಫ್ರೀ ಸೌಲಭ್ಯ ಹೊಂದಿಲ್ಲದಿದ್ದರೂ ಹೆಚ್ಚು ಸುರಕ್ಷತಾ ಫೀಚರ್ ಗಳನ್ನು ಹೊಂದಿದೆ ಎಂದು ಕಂಪನಿ ಹೇಳಿದೆ. ಕಂಪನಿಯು ಎಸ್‌ಬಿ‌ಎ 1 ಹೆಚ್‌ಎಫ್ ಹಾಗೂ ಎಸ್‌ಬಿ‌ಎ 1 ಹೆಲ್ಮೆಟ್‌ಗಳನ್ನು ಹೆಚ್ಚು ಸುರಕ್ಷತಾ ಫೀಚರ್ ಗಳೊಂದಿಗೆ ಅಭಿವೃದ್ಧಿಪಡಿಸಿದೆ.

ಕೈಗೆಟುಕುವ ದರದಲ್ಲಿ ಹ್ಯಾಂಡ್ಸ್ ಫ್ರೀ ಹೆಲ್ಮೆಟ್ ಬಿಡುಗಡೆಗೊಳಿಸಿದ ಸ್ಟೀಲ್ ಬರ್ಡ್

ದ್ವಿಚಕ್ರ ಸವಾರರಿಗೆ ಹೆಚ್ಚಿನ ರಕ್ಷಣೆ ನೀಡುವ ಅಗತ್ಯವನ್ನು ಆಧರಿಸಿ ಈ ಎರಡೂ ಹೆಲ್ಮೆಟ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪನಿ ಹೇಳಿದೆ. ಈ ಹೆಲ್ಮೆಟ್ ಸಂಗೀತ ಆಲಿಸುವಾಗ ಅಥವಾ ಕರೆ ಮಾಡುವಾಗ ಹೊರಗಿನ ಶಬ್ದಗಳನ್ನು ಕೇಳುವ ಸಾಮರ್ಥ್ಯವನ್ನು ಹೊಂದಿದೆ. ಆಂಬ್ಯುಲೆನ್ಸ್ ಅಥವಾ ಇತರ ವಾಹನಗಳ ಶಬ್ದಗಳನ್ನು ಕೇಳಲು ಸುಲಭವಾಗುವಂತೆ ಈ ಹೆಲ್ಮೆಟ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಕೈಗೆಟುಕುವ ದರದಲ್ಲಿ ಹ್ಯಾಂಡ್ಸ್ ಫ್ರೀ ಹೆಲ್ಮೆಟ್ ಬಿಡುಗಡೆಗೊಳಿಸಿದ ಸ್ಟೀಲ್ ಬರ್ಡ್

ಇದರಿಂದ ದ್ವಿಚಕ್ರ ವಾಹನ ಸವಾರರು ಸಂಗೀತ ಕೇಳುತ್ತಲೇ ಹೊರಗಿನಿಂದ ಬರುವ ಶಬ್ದವನ್ನು ಕೇಳುವ ಮೂಲಕ ಪ್ರಯಾಣಿಸಬಹುದು. ಈ ಹೆಲ್ಮೆಟ್ ಇನ್ ಬಿಲ್ಟ್ ಮೈಕ್ರೊಫೋನ್ ಶಬ್ದವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ನಿಖರವಾದ ಆಡಿಯೋವನ್ನು ಕೇಳಬಹುದು ಹಾಗೂ ನಮ್ಮ ಮಾತನ್ನು ಇತರರೊಂದಿಗೆ ವಿನಿಮಯ ಮಾಡಿಕೊಳ್ಳಬಹುದು.

ಕೈಗೆಟುಕುವ ದರದಲ್ಲಿ ಹ್ಯಾಂಡ್ಸ್ ಫ್ರೀ ಹೆಲ್ಮೆಟ್ ಬಿಡುಗಡೆಗೊಳಿಸಿದ ಸ್ಟೀಲ್ ಬರ್ಡ್

ಈ ಹೆಲ್ಮೆಟ್ ಐಪಿ 5 ವಾಟರ್ ಪ್ರೂಫ್ ಪ್ರಮಾಣೀಕೃತವಾಗಿದೆ. ಇದರಿಂದ ಈ ಹೆಲ್ಮೆಟ್ ಅನ್ನು ಮಳೆಯಲ್ಲಿಯೂ ಬಳಸಬಹುದು. ಅದರಲ್ಲಿ ಅಳವಡಿಸಿರುವ ಬಟನ್ ಗಳನ್ನು ಯಾವುದೇ ಆತಂಕವಿಲ್ಲದೇ ಬಳಸಬಹುದು. ಇವುಗಳಲ್ಲಿ ಕಾಲ್ ರಿಸೀವ್ ಹಾಗೂ ಕಾಲ್ ಡಿಸ್ ಕನೆಕ್ಟ್ ಬಟನ್ ಗಳೂ ಸಹ ಸೇರಿವೆ. ಈ ಹೆಲ್ಮೆಟ್ ಗೂಗಲ್ ಅಸಿಸ್ಟೆಂಟ್ ಫೀಚರ್ ಅನ್ನು ಸಹ ಹೊಂದಿದೆ.

ಕೈಗೆಟುಕುವ ದರದಲ್ಲಿ ಹ್ಯಾಂಡ್ಸ್ ಫ್ರೀ ಹೆಲ್ಮೆಟ್ ಬಿಡುಗಡೆಗೊಳಿಸಿದ ಸ್ಟೀಲ್ ಬರ್ಡ್

ಹೆಲ್ಮೆಟ್ ಗಳು ದ್ವಿಚಕ್ರ ವಾಹನ ಸವಾರರ ಪ್ರಾಣ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾದಾಗ ತಲೆಗೆ ಪೆಟ್ಟು ಬೀಳುವ ಸಾಧ್ಯತೆಗಳಿರುತ್ತವೆ. ತಲೆಗೆ ಪೆಟ್ಟು ಬಿದ್ದಾಗ ಗಂಭೀರ ಸಮಸ್ಯೆಗಳು ಉಂಟಾಗುತ್ತವೆ. ಕೆಲವೊಮ್ಮೆ ಸವಾರರ ಪ್ರಾಣಹರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರರು ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಕೈಗೆಟುಕುವ ದರದಲ್ಲಿ ಹ್ಯಾಂಡ್ಸ್ ಫ್ರೀ ಹೆಲ್ಮೆಟ್ ಬಿಡುಗಡೆಗೊಳಿಸಿದ ಸ್ಟೀಲ್ ಬರ್ಡ್

ಕೆಲ ವರ್ಷಗಳಿಂದ ಹಿಂಬದಿ ಸವಾರರಿಗೂ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಹೆಲ್ಮೆಟ್ ಧರಿಸದ ಸವಾರ ಹಾಗೂ ಹಿಂಬದಿ ಸವಾರರಿಗೆ 2019 ರಲ್ಲಿ ಜಾರಿಗೆ ತಂದ ಹೊಸ ಮೋಟಾರು ವಾಹನ ಕಾಯ್ದೆಯನ್ವಯ ರೂ. 1,000 ಗಳ ದಂಡ ವಿಧಿಸಲಾಗುತ್ತದೆ. ದಂಡ ವಿಧಿಸುವುದನ್ನು ತಪ್ಪಿಸಿಕೊಳ್ಳಲು ದ್ವಿಚಕ್ರ ವಾಹನ ಸವಾರರು ಟೋಪಿಯಂತಹ ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸುತ್ತಿದ್ದಾರೆ.

ಕೈಗೆಟುಕುವ ದರದಲ್ಲಿ ಹ್ಯಾಂಡ್ಸ್ ಫ್ರೀ ಹೆಲ್ಮೆಟ್ ಬಿಡುಗಡೆಗೊಳಿಸಿದ ಸ್ಟೀಲ್ ಬರ್ಡ್

ಇಂತಹ ಹೆಲ್ಮೆಟ್ ಗಳನ್ನು ಧರಿಸುವ ಬದಲು ಗುಣಮಟ್ಟದ ಐ‌ಎಸ್‌ಐ ಮಾರ್ಕ್ ಹೊಂದಿರುವ ಹೆಲ್ಮೆಟ್ ಗಳನ್ನು ಧರಿಸುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು. ಕಳಪೆ ಗುಣಮಟ್ಟದ ಹೆಲ್ಮೆಟ್ ಗಳು ದ್ವಿಚಕ್ರ ವಾಹನ ಸವಾರರ ಪ್ರಾಣಕ್ಕೆ ಸಂಚಕಾರ ತರಬಲ್ಲವು.

Most Read Articles

Kannada
English summary
Steelbird launches hands free helmet at affordable price details
Story first published: Tuesday, September 21, 2021, 14:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X