ಬೈಕ್ ಪರಿಕರಗಳ ಮಾರಾಟಕ್ಕೆ ರೈಡರ್ ಝಡ್ ಶಾಪ್ ತೆರೆದ ಸ್ಟೀಲ್‌ಬರ್ಡ್‌

ವಿಶ್ವದಲ್ಲಿಯೇ ಅತಿ ಹೆಚ್ಚು ಸಂಖ್ಯೆಯ ಅಪಘಾತಗಳು ಭಾರತದಲ್ಲಿ ಸಂಭವಿಸುತ್ತವೆ. ಸಂಚಾರ ನಿಯಮಗಳ ಉಲ್ಲಂಘನೆಯೇ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಹೆಚ್ಚು ಅಪಘಾತಕ್ಕೀಡಾಗುತ್ತಿದ್ದಾರೆ.

ಬೈಕ್ ಪರಿಕರಗಳ ಮಾರಾಟಕ್ಕೆ ರೈಡರ್ ಝಡ್ ಶಾಪ್ ತೆರೆದ ಸ್ಟೀಲ್‌ಬರ್ಡ್‌

ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾದಾಗ ಸವಾರರ ತಲೆಗೆ ಪೆಟ್ಟು ಬಿದ್ದು ಪ್ರಾಣಾಪಾಯಗಳಾಗುವ ಸಾಧ್ಯತೆಗಳಿರುತ್ತವೆ. ಈ ಕಾರಣಕ್ಕೆ ಭಾರತದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹಾಗೂ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ 2019ರ ಮೋಟಾರು ವಾಹನ ಕಾಯ್ದೆಯನ್ವಯ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತದೆ.

ಬೈಕ್ ಪರಿಕರಗಳ ಮಾರಾಟಕ್ಕೆ ರೈಡರ್ ಝಡ್ ಶಾಪ್ ತೆರೆದ ಸ್ಟೀಲ್‌ಬರ್ಡ್‌

ಭಾರತದಲ್ಲಿ ಹಲವಾರು ಹೆಲ್ಮೆಟ್ ತಯಾರಕ ಕಂಪನಿಗಳು ಹೆಲ್ಮೆಟ್ ಮಾರಾಟ ಮಾಡುತ್ತವೆ. ಅವುಗಳಲ್ಲಿ ಸ್ಟೀಲ್‌ಬರ್ಡ್‌ ಸಹ ಒಂದು. ಸ್ಟೀಲ್‌ಬರ್ಡ್‌ ಕಂಪನಿಯು ನೋಯ್ಡಾದ ಗೌತಮ್ ಬುದ್ಧ ನಗರದಲ್ಲಿ ನಿನ್ನೆ ರೈಡರ್ ಶಾಪ್ ಅನ್ನು ತೆರೆದಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಬೈಕ್ ಪರಿಕರಗಳ ಮಾರಾಟಕ್ಕೆ ರೈಡರ್ ಝಡ್ ಶಾಪ್ ತೆರೆದ ಸ್ಟೀಲ್‌ಬರ್ಡ್‌

ಗ್ರಾಹಕರು ಬೈಕ್‌ ಉಡುಪುಗಳಿಗೆ ಸಂಬಂಧಿಸಿದ ಎಲ್ಲಾ ಪರಿಕರಗಳನ್ನು ಸ್ಟೀಲ್‌ಬರ್ಡ್‌ನ ರೈಡರ್ ಝಡ್ ಶಾಪ್'ನಲ್ಲಿ ಖರೀದಿಸಬಹುದು. ಈ ಶಾಪ್'ನಲ್ಲಿ ಹೆಲ್ಮೆಟ್‌, ರೈಡಿಂಗ್ ಜಾಕೆಟ್‌, ಸೂಟ್‌, ಹ್ಯಾಂಡ್ ಗ್ಲೌಸ್, ಗಾಗಲ್‌ ಸೇರಿದಂತೆ ಅನೇಕ ಪರಿಕರಗಳನ್ನು ಖರೀದಿಸಬಹುದು.

ಬೈಕ್ ಪರಿಕರಗಳ ಮಾರಾಟಕ್ಕೆ ರೈಡರ್ ಝಡ್ ಶಾಪ್ ತೆರೆದ ಸ್ಟೀಲ್‌ಬರ್ಡ್‌

ಸ್ಟೀಲ್‌ಬರ್ಡ್‌ನ ರೈಡರ್ ಝಡ್ ಶಾಪ್ ಬಗ್ಗೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ರಾಜೀವ್ ಕಪೂರ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ದೇಶದಲ್ಲಿ ಪ್ರತಿ ಗಂಟೆಗೆ 53 ರಸ್ತೆ ಅಪಘಾತಗಳು ಸಂಭವಿಸುತ್ತವೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಬೈಕ್ ಪರಿಕರಗಳ ಮಾರಾಟಕ್ಕೆ ರೈಡರ್ ಝಡ್ ಶಾಪ್ ತೆರೆದ ಸ್ಟೀಲ್‌ಬರ್ಡ್‌

ಇದು ವಿಶ್ವದಲ್ಲೇ ಅತಿ ಹೆಚ್ಚು. ಈ ಅಪಘಾತಗಳಲ್ಲಿ ಗಂಭೀರವಾಗಿ ಗಾಯಗೊಳ್ಳುವವರ ಸಂಖ್ಯೆ ತುಂಬಾ ಹೆಚ್ಚಾಗಿದೆ. ಬೈಕ್ ಸವಾರರು ಸರಿಯಾದ ಗುಣಮಟ್ಟದ ಹೆಲ್ಮೆಟ್ ಧರಿಸದಿದ್ದರೆ ಗಂಭೀರವಾಗಿ ಗಾಯಗೊಳ್ಳುತ್ತಾರೆ ಎಂದು ಹೇಳಿದರು.

ಬೈಕ್ ಪರಿಕರಗಳ ಮಾರಾಟಕ್ಕೆ ರೈಡರ್ ಝಡ್ ಶಾಪ್ ತೆರೆದ ಸ್ಟೀಲ್‌ಬರ್ಡ್‌

ಬೈಕ್ ಸವಾರರು ಐಎಸ್‌ಐ ಮಾರ್ಕ್ ಹೆಲ್ಮೆಟ್ ಬಗ್ಗೆ ಜಾಗೃತಿ ವಹಿಸಬೇಕಾಗಿದೆ ಎಂದು ಅವರು ಹೇಳಿದರು. ಐಎಸ್ಐ ಮಾರ್ಕ್ ಹೆಲ್ಮೆಟ್‌ಗಳು ಸುರಕ್ಷತೆಯ ಬಗ್ಗೆ ಖಾತ್ರಿ ನೀಡುತ್ತವೆ. ಈ ಹೆಲ್ಮೆಟ್‌ಗಳು ಅಪಘಾತಗಳಲ್ಲಿ ಸವಾರನ ತಲೆಯನ್ನು ಸಂಪೂರ್ಣವಾಗಿ ರಕ್ಷಿಸುತ್ತವೆ ಎಂದು ತಿಳಿಸಿದರು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಬೈಕ್ ಪರಿಕರಗಳ ಮಾರಾಟಕ್ಕೆ ರೈಡರ್ ಝಡ್ ಶಾಪ್ ತೆರೆದ ಸ್ಟೀಲ್‌ಬರ್ಡ್‌

ಬೈಕ್‌ನ ಇತರ ಪರಿಕರಗಳಲ್ಲಿ ಗುಣಮಟ್ಟದ ವಸ್ತುಗಳನ್ನು ಬಳಸುವುದಾಗಿ ಸ್ಟೀಲ್‌ಬರ್ಡ್‌ ಕಂಪನಿ ಹೇಳಿದೆ. ಸ್ಟೀಲ್‌ಬರ್ಡ್ ಶಾಪ್'ನಲ್ಲಿ ಜನರಿಗೆ ಪರಿಕರಗಳ ಬಗ್ಗೆ ತಾಂತ್ರಿಕ ಮಾಹಿತಿಯನ್ನು ಒದಗಿಸಲಾಗುತ್ತದೆ.

ಬೈಕ್ ಪರಿಕರಗಳ ಮಾರಾಟಕ್ಕೆ ರೈಡರ್ ಝಡ್ ಶಾಪ್ ತೆರೆದ ಸ್ಟೀಲ್‌ಬರ್ಡ್‌

ಕಂಪನಿಯು ಪ್ರತಿಯೊಬ್ಬ ಗ್ರಾಹಕರ ಸಮಸ್ಯೆಯನ್ನು ಪರಿಣಿತರ ಸಹಾಯದಿಂದ ಬಗೆ ಹರಿಸಲಿದೆ. ಸ್ಟೀಲ್‌ಬರ್ಡ್‌ ಕಂಪನಿಯು ಇತ್ತೀಚಿಗಷ್ಟೇ ಪಾಟ್ನಾ ಹಾಗೂ ರಾಂಚಿ ನಗರಗಳಲ್ಲಿ ಸಹ ರೈಡರ್ ಶಾಪ್ ಆರಂಭಿಸಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಬೈಕ್ ಪರಿಕರಗಳ ಮಾರಾಟಕ್ಕೆ ರೈಡರ್ ಝಡ್ ಶಾಪ್ ತೆರೆದ ಸ್ಟೀಲ್‌ಬರ್ಡ್‌

ಸ್ಟೀಲ್‌ಬರ್ಡ್‌ ಕಂಪನಿಯು 2019ರಲ್ಲಿ ಜಮ್ಮು - ಕಾಶ್ಮೀರದಲ್ಲಿ ಹೆಲ್ಮೆಟ್ ಉತ್ಪಾದನಾ ಘಟಕವನ್ನು ತೆರೆಯಲು ಮುಂದಾಗಿತ್ತು. ಕಾಶ್ಮೀರ ಕಣಿವೆಯಲ್ಲಿ ಈ ಉತ್ಪಾದನಾ ಘಟಕವು ಆರಂಭವಾಗುವುದರಿಂದ ಅಲ್ಲಿನ ಸ್ಥಳೀಯ ಜನರಿಗೆ ಉದ್ಯೋಗ ಲಭಿಸಲಿದೆ.

ಬೈಕ್ ಪರಿಕರಗಳ ಮಾರಾಟಕ್ಕೆ ರೈಡರ್ ಝಡ್ ಶಾಪ್ ತೆರೆದ ಸ್ಟೀಲ್‌ಬರ್ಡ್‌

ಜೊತೆಗೆ ಅವರ ಆದಾಯ ಸಹ ಹೆಚ್ಚಾಗಲಿದೆ ಎಂದು ಸ್ಟೀಲ್‌ಬರ್ಡ್ ಕಂಪನಿ ಹೇಳಿಟ್ಟು. ಸ್ಟೀಲ್‌ಬರ್ಡ್‌ ಕಂಪನಿಯು ಹಿಮಾಚಲ ಪ್ರದೇಶದ ಬಡ್ಡಿ ಎಂಬಲ್ಲಿರುವ ಉತ್ಪಾದನಾ ಘಟಕದಲ್ಲಿ ರೂ.150 ಕೋಟಿ ಬಂಡವಾಳ ಹೂಡಿಕೆ ಮಾಡಿದೆ.

Most Read Articles

Kannada
English summary
Steelbird opens RiderZ shoppe to sell bike accessories in Noida. Read in Kannada.
Story first published: Wednesday, April 21, 2021, 9:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X