140 ಕಿ.ಮೀ ರೇಂಜ್ ಹೊಂದಿರುವ ಸೂಪರ್ ಸೊಕೊ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಚೀನಾ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ 'ಸೂಪರ್ ಸೊಕೊ' ತನ್ನ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರನ್ನು ಯುರೋಪಿಯನ್ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದೀಗ ಸೂಪರ್ ಸೊಕೊ ಕಂಪನಿಯು ಈ ಹೊಸ ಪಿಸಿಎಕ್ಸ್ ಸ್ಕೂಟರ್ ಅನ್ನು ಆಸ್ಟ್ರೇಲಿಯಾದಲ್ಲಿ ಬಿಡುಗಡೆಗೊಳಿಸಿದೆ.

140 ಕಿ.ಮೀ ರೇಂಜ್ ಹೊಂದಿರುವ ಸೂಪರ್ ಸೊಕೊ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಸೂಪರ್ ಸೊಕೊ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಆಸ್ಟ್ರೇಲಿಯಾದಲ್ಲಿ ಸೂಪರ್ ಸೊಕೊ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ಭಾರತದ ಕರೆನ್ಸಿ ಪ್ರಕಾರ ಸರಿಸುಮಾರು ರೂ.4.34 ಲಕ್ಷಗಳಾಗಿದೆ. ಈ ಸ್ಕೂಟರ್ ವಿತರಣೆಯು ಶೀಘ್ರದಲ್ಲೇ ಪ್ರಾರಂಭವಾಗಿದೆ. ಸೂಪರ್ ಸೊಕೊ ಪಿಸಿಎಕ್ಸ್ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಸೂಪರ್ ಸೊಕೊ ಬ್ರಿಟನ್ ನಲ್ಲಿ ಅತ್ಯಂತ ಯಶಸ್ವಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿದೆ.

140 ಕಿ.ಮೀ ರೇಂಜ್ ಹೊಂದಿರುವ ಸೂಪರ್ ಸೊಕೊ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಈ ಸೂಪರ್ ಸೊಕೊ ಕಂಪನಿಯು ತನ್ನ ಪೋರ್ಟ್ಫೋಲಿಯೊದಲ್ಲಿ ಸಿಯುಎಕ್ಸ್, ಸಿಯುಎಕ್ಸ್ ಡುಕಾಟಿ ವರ್ಷನ್, ಟಿಎಸ್ಎಕ್ಸ್, ಟಿಸಿ, ಸಿಪಿಎಕ್ಸ್ ಮತ್ತು ಟಿಸಿ ಮಾಕ್ಸ್ ಎಂಬ ಆರು ರೂಪಾಂತರಗಳಲ್ಲಿ ಲಭ್ಯವಿರಲಿದೆ

140 ಕಿ.ಮೀ ರೇಂಜ್ ಹೊಂದಿರುವ ಸೂಪರ್ ಸೊಕೊ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಸೂಪರ್ ಸೊಕೊ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬ್ಲ್ಯಾಕ್, ಗ್ರೇ ಮತ್ತು ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಫುಲ್ ಎಲ್ಇಡಿ ಹೆಡ್‌ಲ್ಯಾಂಪ್, ದೊಡ್ಡ ಫ್ಲೈಸ್ಕ್ರೀನ್, ಡಿಜಿಟಲ್ ಇನ್ಸ್ ಟ್ರೂ,ಮೆಂಟ್ ಕನ್ಸೋಲ್ ಮತ್ತು ಯುಎಸ್‌ಬಿ ಚಾರ್ಜಿಂಗ್ ಫೀಚರ್ ಗಳನ್ನು ಒಳಗೊಂಡಿದೆ.

140 ಕಿ.ಮೀ ರೇಂಜ್ ಹೊಂದಿರುವ ಸೂಪರ್ ಸೊಕೊ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಇನ್ನು ಈ ಹೊಸ ಸೂಪರ್ ಸೊಕೊ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ನೀಡಲಾಗಿದೆ.

140 ಕಿ.ಮೀ ರೇಂಜ್ ಹೊಂದಿರುವ ಸೂಪರ್ ಸೊಕೊ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಇನ್ನು ಈ ಹೊಸ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಡ್ಯುಯಲ್ ಫ್ಲಾಟ್ ಸೀಟ್ ಕಾನ್ಫಿಗರೇಶನ್ ಅನ್ನು ಒಳಗೊಂಡಿದೆ. ಈ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ 8-ಸ್ಪೋಕ್ ಅಲಾಯ್ ವ್ಹೀಲ್ ಅನ್ನು ಅಳವಡಿಸಲಾಗಿದೆ,

140 ಕಿ.ಮೀ ರೇಂಜ್ ಹೊಂದಿರುವ ಸೂಪರ್ ಸೊಕೊ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಈ ಹೊಸ ಸೂಪರ್ ಸೊಕೊ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ರಿವರ್ಸ್ ಮೋಡ್ ಮತ್ತು ಸೂಪರ್ ಸೊಕೊ ಅಪ್ಲಿಕೇಶನ್ ಮೂಲಕ ಸ್ಮಾರ್ಟ್ ಫೋನ್ ಕನೆಕ್ಟ್ ಮಾಡಬಹುದಾಗಿದೆ. ಇನ್ನು ಈ ಸ್ಕೂಟರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

140 ಕಿ.ಮೀ ರೇಂಜ್ ಹೊಂದಿರುವ ಸೂಪರ್ ಸೊಕೊ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಹೊಸಸೂಪರ್ ಸೊಕೊ ಸಿಪಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 4 ಕಿ.ವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ಅನ್ನು ಅಳವಡಿಸಲಾಗಿದೆ. ಈ ಎಲೆಕ್ಟ್ರಿಕ್ ಮೋಟಾರ್ 5.36 ಬಿಹೆಚ್‌ಪಿ ಪವರ್ ಮತ್ತು 171 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

140 ಕಿ.ಮೀ ರೇಂಜ್ ಹೊಂದಿರುವ ಸೂಪರ್ ಸೊಕೊ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಸೂಪರ್ ಸೊಕೊ ಸಿಪಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ 140 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಶೇ.90 ರಷ್ಟು ಚಾರ್ಜ್ ಆಗಲು ಸುಮಾರು 3-4 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ 95 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

Most Read Articles

Kannada
English summary
Super Soco Cpx Electric Scooter Launched. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X