ಒಂದೇ ಬಾರಿಗೆ ಮೂರು ಎಲೆಕ್ಟ್ರಿಕ್ ವಾಹನಗಳನ್ನು ಅನಾವರಣಗೊಳಿಸಿದ ಸೂಪರ್ ಸೊಕೊ

ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಸೂಪರ್ ಸೊಕೊ ಮೂರು ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಅನಾವರಣಗೊಳಿಸಿದೆ. ಕಂಪನಿಯು ತನ್ನ ಎರಡು ಎಲೆಕ್ಟ್ರಿಕ್ ಬೈಕುಗಳನ್ನು ಹಾಗೂ ಒಂದು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಿದೆ.

ಒಂದೇ ಬಾರಿಗೆ ಮೂರು ಎಲೆಕ್ಟ್ರಿಕ್ ವಾಹನಗಳನ್ನು ಅನಾವರಣಗೊಳಿಸಿದ ಸೂಪರ್ ಸೊಕೊ

ಈ ಎಲೆಕ್ಟ್ರಿಕ್ ಬೈಕುಗಳಲ್ಲಿ ಟಿಸಿ ವಾಂಡರರ್ ಹಾಗೂ ಟಿಎಸ್ ಹಂಟರ್'ಗಳು ಸೇರಿದ್ದರೆ ಎಲೆಕ್ಟ್ರಿಕ್ ಸ್ಕೂಟರ್'ನಲ್ಲಿ ಸಿಯುಮಿನಿ ಇ-ಸ್ಕೂಟರ್ ಸೇರಿದೆ. ಟಿಸಿ ವಾಂಡರರ್ ಟಿಸಿ ಸರಣಿಯಲ್ಲಿ ಪರಿಚಯಿಸಲಾದ ರೆಟ್ರೊ ಎಲೆಕ್ಟ್ರಿಕ್ ಬೈಕ್ ಆಗಿದೆ. ಈ ಬೈಕಿನಲ್ಲಿ ಯಾವುದೇ ಎಂಜಿನ್ ಇಲ್ಲದಿದ್ದರೂ ಸಹ ಈ ಬೈಕ್ ಸರಳ ರೆಟ್ರೊ ಬೈಕಿನಂತೆ ಕಾಣುತ್ತದೆ.

ಒಂದೇ ಬಾರಿಗೆ ಮೂರು ಎಲೆಕ್ಟ್ರಿಕ್ ವಾಹನಗಳನ್ನು ಅನಾವರಣಗೊಳಿಸಿದ ಸೂಪರ್ ಸೊಕೊ

ಈ ಎಲೆಕ್ಟ್ರಿಕ್ ಬೈಕ್ ಲಿಥಿಯಂ ಐಯಾನ್ ಬ್ಯಾಟರಿಗಳ ಮೂಲಕ ಚಲಿಸುತ್ತದೆ. ಈ ಬೈಕ್‌ನ ಹಿಂದಿನ ವ್ಹೀಲ್ ಎಲೆಕ್ಟ್ರಿಕ್ ಮೋಟರ್ ಹೊಂದಿದ್ದು 180 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಒಂದೇ ಬಾರಿಗೆ ಮೂರು ಎಲೆಕ್ಟ್ರಿಕ್ ವಾಹನಗಳನ್ನು ಅನಾವರಣಗೊಳಿಸಿದ ಸೂಪರ್ ಸೊಕೊ

ಈ ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಬೈಕ್ ರೌಂಡ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳ ಮೇಲೆ ಕಪ್ಪು ವಿಂಡ್‌ಶೀಲ್ಡ್ ಹೊಂದಿದೆ. ಈ ಬೈಕಿನ ವಿನ್ಯಾಸವು ಅಗ್ರೆಸಿವ್ ಆಗಿದೆ. ಈ ಬೈಕಿನ ಮಧ್ಯ ಭಾಗವನ್ನು ಇಂಧನ ಚಾಲಿತ ಬೈಕಿನಂತೆ ವಿನ್ಯಾಸಗೊಳಿಸಲಾಗಿದೆ.

ಒಂದೇ ಬಾರಿಗೆ ಮೂರು ಎಲೆಕ್ಟ್ರಿಕ್ ವಾಹನಗಳನ್ನು ಅನಾವರಣಗೊಳಿಸಿದ ಸೂಪರ್ ಸೊಕೊ

ಈ ಭಾಗವು ಬೈಕುಗಳ ಬ್ಯಾಟರಿಯನ್ನು ಹೊಂದಿದ್ದು ಮೇಲಿನಿಂದ ತೆಗೆದುಹಾಕಬಹುದು. ಈ ಬೈಕಿನಲ್ಲಿ ಎಂಜಿನ್ ಇಲ್ಲದ ಕಾರಣಕ್ಕೆ ಅದರ ಸೈಡ್ ಪ್ಯಾನಲ್ ಅನ್ನು ಸಂಪೂರ್ಣವಾಗಿ ಕವರ್ ಮಾಡಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಒಂದೇ ಬಾರಿಗೆ ಮೂರು ಎಲೆಕ್ಟ್ರಿಕ್ ವಾಹನಗಳನ್ನು ಅನಾವರಣಗೊಳಿಸಿದ ಸೂಪರ್ ಸೊಕೊ

ಈ ಬೈಕಿನಲ್ಲಿರುವ ರೆಟ್ರೊ ಶೈಲಿಯ ಸಣ್ಣ ಸೀಟಿನಲ್ಲಿ ಇಬ್ಬರು ಆರಾಮವಾಗಿ ಕುಳಿತುಕೊಳ್ಳಬಹುದು. ಈ ಬೈಕಿನಲ್ಲಿ ಎಲ್ಇಡಿ ಟರ್ನ್ ಇಂಡಿಕೇಟರ್, ಡ್ಯುಯಲ್ ಡಿಸ್ಕ್ ಬ್ರೇಕ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಅಪ್ ಸೈಡ್ ಡೌನ್ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಂಷನ್ ನೀಡಲಾಗಿದೆ.

ಒಂದೇ ಬಾರಿಗೆ ಮೂರು ಎಲೆಕ್ಟ್ರಿಕ್ ವಾಹನಗಳನ್ನು ಅನಾವರಣಗೊಳಿಸಿದ ಸೂಪರ್ ಸೊಕೊ

ಇನ್ನು ಟಿಎಸ್ ಹಂಟರ್ ಬೈಕಿನ ಬಗ್ಗೆ ಹೇಳುವುದಾದರೆ, ಈ ಬೈಕ್ ಸ್ವಲ್ಪ ಆಕ್ರಮಣಕಾರಿಯಾಗಿದ್ದು, ಸ್ಪೋರ್ಟಿಯಾಗಿ ಕಾಣುತ್ತದೆ. ಈ ಬೈಕಿನಲ್ಲಿರುವ ಎಲೆಕ್ಟ್ರಿಕ್ ಪವರ್‌ಟ್ರೇನ್ ಕೂಡ ಟಿಎಸ್ ವಾಂಡರರ್‌ನಂತೆಯೇ ಇದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಒಂದೇ ಬಾರಿಗೆ ಮೂರು ಎಲೆಕ್ಟ್ರಿಕ್ ವಾಹನಗಳನ್ನು ಅನಾವರಣಗೊಳಿಸಿದ ಸೂಪರ್ ಸೊಕೊ

ಈ ಬೈಕ್ ಫ್ರಂಟ್ ಟಿಲ್ಟ್ ಎಲ್ಇಡಿ ಹೆಡ್ ಲ್ಯಾಂಪ್, ಎಲ್ಇಡಿ ಟೇಲ್ ಲೈಟ್ ಹಾಗೂ ಎಲ್ಇಡಿ ಟರ್ನ್ ಇಂಡಿಕೇಟರ್'ಗಳನ್ನು ಹೊಂದಿದೆ. ಎರಡು ಬೈಕುಗಳ ನಡುವಿನ ವಿನ್ಯಾಸವೂ ಹೋಲಿಕೆಯಾಗುತ್ತದೆ.

ಒಂದೇ ಬಾರಿಗೆ ಮೂರು ಎಲೆಕ್ಟ್ರಿಕ್ ವಾಹನಗಳನ್ನು ಅನಾವರಣಗೊಳಿಸಿದ ಸೂಪರ್ ಸೊಕೊ

ಟಿಸಿ ಹಂಟರ್ ಆಕ್ರಮಣಕಾರಿ ಸವಾರಿ ಸ್ಥಾನವನ್ನು ಹೊಂದಿರುವುದರಿಂದ ಈ ಬೈಕಿನ ಮೂಲಕ ಸ್ಪೋರ್ಟ್ಸ್ ಬೈಕು ಚಾಲನೆ ಮಾಡಿದ ಅನುಭವವನ್ನು ಪಡೆಯಬಹುದು. ಈ ಎರಡೂ ಬೈಕ್‌ಗಳ ಎಲ್ಲಾ ಫೀಚರ್'ಗಳು ಒಂದೇ ಆಗಿವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಒಂದೇ ಬಾರಿಗೆ ಮೂರು ಎಲೆಕ್ಟ್ರಿಕ್ ವಾಹನಗಳನ್ನು ಅನಾವರಣಗೊಳಿಸಿದ ಸೂಪರ್ ಸೊಕೊ

ಇನ್ನು ಸೂಪರ್ ಸೊಕೊ ಕ್ಯುಮಿನಿ ಇ-ಸ್ಕೂಟರ್ ಬಗ್ಗೆ ಹೇಳುವುದಾದರೆ ಈ ಸ್ಕೂಟರ್ ಅನ್ನು ಸಿಟಿ ರೈಡ್ ಹಾಗೂ ಅಲ್ಪ ದೂರದ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಈ ಸ್ಕೂಟರ್'ನಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್, ಎಲ್ಇಡಿ ಹೆಡ್ ಲೈಟ್, ಟೇಲ್ ಲೈಟ್ ಹಾಗೂ ಟರ್ನ್ ಇಂಡಿಕೇಟರ್ ಗಳನ್ನು ನೀಡಲಾಗಿದೆ.

ಒಂದೇ ಬಾರಿಗೆ ಮೂರು ಎಲೆಕ್ಟ್ರಿಕ್ ವಾಹನಗಳನ್ನು ಅನಾವರಣಗೊಳಿಸಿದ ಸೂಪರ್ ಸೊಕೊ

ಈ ಸ್ಕೂಟರ್ 12 ಇಂಚಿನ ದೊಡ್ಡ ಗಾತ್ರದ ಟಯರ್‌ಗಳನ್ನು ಹೊಂದಿದೆ. ಈ ಟಯರ್‌ಗಳು ರಸ್ತೆಯಲ್ಲಿ ಹೆಚ್ಚಿನ ಗ್ರಿಪ್ ನೀಡುತ್ತವೆ. ಈ ಸ್ಕೂಟರ್ ಪೂರ್ತಿಯಾಗಿ ಚಾರ್ಜ್ ಆದ ನಂತರ 75-80 ಕಿ.ಮೀಗಳವರೆಗೆ ಚಲಿಸುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಒಂದೇ ಬಾರಿಗೆ ಮೂರು ಎಲೆಕ್ಟ್ರಿಕ್ ವಾಹನಗಳನ್ನು ಅನಾವರಣಗೊಳಿಸಿದ ಸೂಪರ್ ಸೊಕೊ

ಇನ್ನು ಈ ಎರಡೂ ಬೈಕ್‌ಗಳು ಪೂರ್ತಿಯಾಗಿ ಚಾರ್ಜ್ ಆದ ನಂತರ 200 ಕಿ.ಮೀಗಳವರೆಗೆ ಚಲಿಸುತ್ತವೆ. ಈ ಎಲ್ಲಾ ವಾಹನಗಳಲ್ಲಿ ಜಿಪಿಎಸ್ ಆಧಾರಿತ ನ್ಯಾವಿಗೇಷನ್ ಹಾಗೂ ಕೀಲೆಸ್ ಎಂಟ್ರಿಯಂತಹ ಫೀಚರ್'ಗಳನ್ನು ನೀಡಲಾಗಿದೆ.

Most Read Articles

Kannada
English summary
Super Soco reveals three electric two wheelers at once. Read in Kannada.
Story first published: Thursday, February 25, 2021, 21:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X