ಜುಲೈ 15ರ ತನಕ ಬೈಕ್ ವಾರಂಟಿ ವಿಸ್ತರಿಸಿದ ಸುಜುಕಿ ಮೋಟಾರ್‌ಸೈಕಲ್

ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಲಾಕ್‌ಡೌನ್ ಹಿನ್ನಲೆಯಲ್ಲಿ ಹೊಸ ದ್ವಿಚಕ್ರ ವಾಹನಗಳ ವಾರಂಟಿ ಅವಧಿಯನ್ನು ವಿಸ್ತರಿಸಿದ್ದು, ಈ ತಿಂಗಳಾಂತ್ಯಕ್ಕೆ ಮುಕ್ತಾಯಗೊಳ್ಳಲಿದ್ದ ಸ್ಟ್ಯಾಂಡರ್ಡ್ ವಾರಂಟಿ ಮತ್ತು ಉಚಿತ ಸೇವೆಗಳನ್ನು ಜುಲೈ 15ರ ತನಕ ಮುಂದೂಡಿಕೆ ಮಾಡಿದೆ.

ಜುಲೈ 15ರ ತನಕ ಬೈಕ್ ವಾರಂಟಿ ವಿಸ್ತರಿಸಿದ ಸುಜುಕಿ ಮೋಟಾರ್‌ಸೈಕಲ್

ಕೋವಿಡ್ 2ನೇ ಅಲೆ ಹೆಚ್ಚುತ್ತಿರುವ ಸಂದರ್ಭದಲ್ಲಿ ವಾಹನ ಮಾರಾಟ ಮತ್ತು ಗ್ರಾಹಕರ ಸೇವೆಗಳು ಆಟೋ ಉತ್ಪಾದನಾ ಕಂಪನಿಗಳಿಗೆ ಸವಾಲಿನ ಕೆಲಸವಾಗಿದ್ದು, ಲಾಕ್‌ಡೌನ್ ಅವಧಿಯಲ್ಲಿ ನಿಗದಿತ ಅವಧಿಯ ಸೇವೆಗಳನ್ನು ಪಡೆದುಕೊಳ್ಳಬೇಕಿದ್ದ ವಾಹನಗಳ ವಾರಂಟಿ ಅವಧಿಯು ಮುಗಿದುಹೋಗುವುದನ್ನು ತಪ್ಪಿಸಲು ಸ್ಟ್ಯಾಂಡರ್ಡ್ ವಾರಂಟಿ ಅವಧಿಯನ್ನು ಹೆಚ್ಚಿಸಲಾಗಿದೆ.

ಜುಲೈ 15ರ ತನಕ ಬೈಕ್ ವಾರಂಟಿ ವಿಸ್ತರಿಸಿದ ಸುಜುಕಿ ಮೋಟಾರ್‌ಸೈಕಲ್

ವಿಸ್ತರಿತ ವಾರಂಟಿಯಿಂದಾಗಿ ಗ್ರಾಹಕರು ಮುಂದಿನ ದಿನಗಳಲ್ಲಿ ಪರಿಸ್ಥಿತಿ ತುಸು ಸುಧಾರಣೆಗೊಂಡ ನಂತರ ಗ್ರಾಹಕರ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದ್ದು, ಸುರಕ್ಷತೆಯ ದೃಷ್ಠಿಯಿಂದ ವಾಹನಗಳ ಖರೀದಿ ಮತ್ತು ಗ್ರಾಹಕರ ಸೇವೆಗಳಿಗಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡುತ್ತಿದೆ.

ಜುಲೈ 15ರ ತನಕ ಬೈಕ್ ವಾರಂಟಿ ವಿಸ್ತರಿಸಿದ ಸುಜುಕಿ ಮೋಟಾರ್‌ಸೈಕಲ್

ಲಾಕ್‌ಡೌನ್ ಅವಧಿಯಲ್ಲಿ ಮುಕ್ತಾಯಗೊಳ್ಳಲಿರುವ ನಿಗದಿತ ಅವಧಿಯ ಸೇವೆಗಳನ್ನು ಪಡೆದುಕೊಳ್ಳದ ವಾಹನಗಳ ವಾರಂಟಿ ಆಫರ್ ಮುಗಿದುಹೋಗಲಿದ್ದು, ವಾರಂಟಿ ಅವಧಿ ಮುಕ್ತಾಯದಿಂದ ಉಚಿತ ಸೇವೆಗಳನ್ನು ಕಳೆದುಕೊಳ್ಳಲಿರುವ ಗ್ರಾಹಕರಿಗೆ ಸುಜುಕಿ ಮೋಟಾರ್‌ಸೈಕಲ್ ಸೇರಿದಂತೆ ಬಹುತೇಕ ವಾಹನ ತಯಾರಕ ಕಂಪನಿಗಳು ವಾರಂಟಿ ಅವಧಿಯನ್ನು ಮುಂದಿನ ಎರಡು ತಿಂಗಳಿಗೆ ಹೆಚ್ಚಿಸಿವೆ.

ಜುಲೈ 15ರ ತನಕ ಬೈಕ್ ವಾರಂಟಿ ವಿಸ್ತರಿಸಿದ ಸುಜುಕಿ ಮೋಟಾರ್‌ಸೈಕಲ್

ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಮುಕ್ತಾಯಗೊಂಡಿರುವ ಮತ್ತು ಮುಕ್ತಾಯಗೊಳ್ಳಬೇಕಿರುವ ಹೊಸ ದ್ವಿಚಕ್ರ ವಾಹನಗಳ ವಾರಂಟಿ ಅವಧಿಯನ್ನು ಸುಜುಕಿ ಕಂಪನಿಯು ಮುಂಬರುವ ಜುಲೈ 15ರ ತನಕ ಮುಂದೂಡಿದ್ದು, ಹೊಸ ವಾಹನಗಳ ಮಾರಾಟಕ್ಕೆ ಷರತ್ತುಬದ್ದ ಅವಕಾಶದೊಂದಿಗೆ ವಾಹನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಆನ್‌ಲೈನ್ ಪ್ಲ್ಯಾಟ್ ಮೂಲಕ ಮುಂದುವರಿಸಲಾಗುತ್ತಿದೆ.

ಜುಲೈ 15ರ ತನಕ ಬೈಕ್ ವಾರಂಟಿ ವಿಸ್ತರಿಸಿದ ಸುಜುಕಿ ಮೋಟಾರ್‌ಸೈಕಲ್

ಇನ್ನು ಕಳೆದ ವರ್ಷದ ಲಾಕ್‌ಡೌನ್‌ ಹೊಡೆತಕ್ಕೆ ಸಿಲುಕಿ ಸುಧಾರಣೆಯ ಹಾದಿಯಲ್ಲಿದ್ದ ಆಟೋ ಉದ್ಯಮವು ಇದೀಗ ಮತ್ತೆ ಸಂಕಷ್ಟ ಎದುರಿಸುತ್ತಿದ್ದು, ದೇಶಾದ್ಯಂತ ಹಲವು ಆಟೋ ಕಂಪನಿಗಳು ಈಗಾಗಲೇ ಕನಿಷ್ಠ ಪ್ರಮಾಣದ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದರೆ ಇನ್ನು ಕೆಲವು ವಾಹನ ಕಂಪನಿಗಳು ಉದ್ಯೋಗಿಗಳ ಆರೋಗ್ಯದ ದೃಷ್ಠಿಯಿಂದ ಹೊಸ ವಾಹನಗಳ ಉತ್ಪಾದನೆಯನ್ನೇ ತಾತ್ಕಾಲಿಕವಾಗಿ ಬಂದ್ ಮಾಡಿವೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಜುಲೈ 15ರ ತನಕ ಬೈಕ್ ವಾರಂಟಿ ವಿಸ್ತರಿಸಿದ ಸುಜುಕಿ ಮೋಟಾರ್‌ಸೈಕಲ್

ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ವಾಹನ ಉತ್ಪಾದನೆಯು ತಗ್ಗಿರುವುರುವುದು ಭಾರೀ ನಷ್ಟ ಎದುರಿಸುವ ಭೀತಿ ಎದುರಾಗಿದ್ದು, ಹೊಸ ಸುರಕ್ಷಾ ಕ್ರಮಗಳೊಂದಿಗೆ ಕೆಲವೇ ಕೆಲವು ಕಂಪನಿಗಳು ಮಾತ್ರ ವಾಹನ ಉತ್ಪಾದನೆ ಕೈಗೊಳ್ಳುತ್ತಿವೆ.

ಜುಲೈ 15ರ ತನಕ ಬೈಕ್ ವಾರಂಟಿ ವಿಸ್ತರಿಸಿದ ಸುಜುಕಿ ಮೋಟಾರ್‌ಸೈಕಲ್

ಇದರ ನಡುವೆ ಹೊಸ ವಾಹನಗಳ ಖರೀದಿಗೆ ಬುಕ್ಕಿಂಗ್ ಸಲ್ಲಿಕೆ ಕೂಡಾ ತೀವ್ರ ಕಂಡಿರುವುದಲ್ಲದೆ ಈಗಾಗಲೇ ಬುಕ್ಕಿಂಗ್ ಸಲ್ಲಿಕೆ ಮಾಡಿದ್ದ ಲಕ್ಷಾಂತರ ಹೊಸ ವಾಹನ ಖರೀದಿದಾರರು ಬುಕ್ಕಿಂಗ್ ಹಿಂಪಡೆಯುತ್ತಿದ್ದಾರೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಜುಲೈ 15ರ ತನಕ ಬೈಕ್ ವಾರಂಟಿ ವಿಸ್ತರಿಸಿದ ಸುಜುಕಿ ಮೋಟಾರ್‌ಸೈಕಲ್

ಸದ್ಯದ ಪರಿಸ್ಥಿತಿಯಲ್ಲಿ ಹೊಸ ವಾಹನ ಖರೀದಿಯು ಆರ್ಥಿಕ ಸಂಕಷ್ಟ ಇನ್ನಷ್ಟು ಹೆಚ್ಚಳವಾಗುವ ಭೀತಿಯಿಂದ ಹೊಸ ವಾಹನ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿದ್ದು, ಈ ಪರಿಸ್ಥಿತಿ ಸುಧಾರಣೆಯಾಗಲು ಇನ್ನು ಕೆಲ ತಿಂಗಳುಗಳೇ ಬೇಕಾಗಬಹುದು ಎನ್ನಲಾಗುತ್ತಿದೆ.

Most Read Articles

Kannada
English summary
Suzuki Motorcycle India extended warranty till 15th July. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X