ಫ್ರೀ ಸರ್ವೀಸ್, ವಾರಂಟಿ ಅವಧಿ ವಿಸ್ತರಿಸಿದ ಸುಜುಕಿ ಮೋಟಾರ್‌ಸೈಕಲ್

ದೇಶಾದ್ಯಂತ ಕರೋನಾ ವೈರಸ್ ಎರಡನೇ ಅಲೆ ಆರ್ಭಟಿಸುತ್ತಿದೆ. ಪ್ರತಿದಿನ ದೇಶಾದ್ಯಂತ ಎರಡು ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಕರೋನಾ ವೈರಸ್ ಹರಡುವುದನ್ನು ತಡೆಯಲು ದೇಶದ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.

ಫ್ರೀ ಸರ್ವೀಸ್, ವಾರಂಟಿ ಅವಧಿಯನ್ನು ವಿಸ್ತರಿಸಿದ ಸುಜುಕಿ ಮೋಟಾರ್‌ಸೈಕಲ್

ಲಾಕ್‌ಡೌನ್ ಜಾರಿಗೊಳಿಸಿರುವುದರಿಂದ ಜನರು ವಿನಾ ಕಾರಣ ಮನೆಯಿಂದ ಹೊರ ಬರುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಜೊತೆಗೆ ಆಟೋ ಮೊಬೈಲ್ ಕಂಪನಿಗಳು ತಮ್ಮ ಸರ್ವೀಸ್ ಸೆಂಟರ್ ಹಾಗೂ ಶೋರೂಂಗಳನ್ನು ಮುಚ್ಚಿವೆ. ಲಾಕ್‌ಡೌನ್ ಅವಧಿಯಲ್ಲಿ ಜನರು ತಮ್ಮ ವಾಹನಗಳ ಫ್ರೀ ಸರ್ವೀಸ್ ಹಾಗೂ ವಾರಂಟಿ ಅವಧಿ ಕೊನೆಯಾಗುತ್ತದೆ ಎಂಬ ಆತಂಕದಲ್ಲಿದ್ದರು.

ಫ್ರೀ ಸರ್ವೀಸ್, ವಾರಂಟಿ ಅವಧಿಯನ್ನು ವಿಸ್ತರಿಸಿದ ಸುಜುಕಿ ಮೋಟಾರ್‌ಸೈಕಲ್

ಜನರ ಆತಂಕವನ್ನು ದೂರ ಮಾಡಲು ಬಹುತೇಕ ವಾಹನ ತಯಾರಕ ಕಂಪನಿಗಳು ಲಾಕ್‌ಡೌನ್ ಸಂದರ್ಭದಲ್ಲಿ ಕೊನೆಯಾಗಲಿದ್ದ ಫ್ರೀ ಸರ್ವೀಸ್ ಹಾಗೂ ವಾರಂಟಿ ಅವಧಿಯನ್ನು ವಿಸ್ತರಿಸಿವೆ.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಫ್ರೀ ಸರ್ವೀಸ್, ವಾರಂಟಿ ಅವಧಿಯನ್ನು ವಿಸ್ತರಿಸಿದ ಸುಜುಕಿ ಮೋಟಾರ್‌ಸೈಕಲ್

ಈಗ ಭಾರತದ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಒಂದಾದ ಸುಜುಕಿ ಮೋಟಾರ್‌ಸೈಕಲ್ ಸಹ ತನ್ನ ದ್ವಿಚಕ್ರ ವಾಹನಗಳ ವಾರಂಟಿ ಹಾಗೂ ಫ್ರೀ ಸರ್ವೀಸ್ ಅವಧಿಯನ್ನು ಈ ವರ್ಷದ 20 ಜುಲೈರವರೆಗೆ ವಿಸ್ತರಿಸಿದೆ.

ಫ್ರೀ ಸರ್ವೀಸ್, ವಾರಂಟಿ ಅವಧಿಯನ್ನು ವಿಸ್ತರಿಸಿದ ಸುಜುಕಿ ಮೋಟಾರ್‌ಸೈಕಲ್

ಈ ವಿಸ್ತರಣೆಯು 2021ರ ಏಪ್ರಿಲ್ 15ರಿಂದ ಮೇ 31ರ ನಡುವೆ ವಾರಂಟಿ ಹಾಗೂ ಫ್ರೀ ಸರ್ವೀಸ್ ಅವಧಿ ಮುಕ್ತಾಯಗೊಳ್ಳಲಿದ್ದ ಕಂಪನಿಯ ದ್ವಿಚಕ್ರ ವಾಹನಗಳಿಗೆ ಅನ್ವಯಿಸುತ್ತದೆ.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಫ್ರೀ ಸರ್ವೀಸ್, ವಾರಂಟಿ ಅವಧಿಯನ್ನು ವಿಸ್ತರಿಸಿದ ಸುಜುಕಿ ಮೋಟಾರ್‌ಸೈಕಲ್

ಕಂಪನಿಯ ಈ ನಿರ್ಧಾರವು ಗ್ರಾಹಕರಿಗೆ ಈ ಸಂಕಷ್ಟದ ಸಮಯದಲ್ಲಿ ವರದಾನವಾಗಲಿದೆ. ಕಂಪನಿಯು ಗ್ರಾಹಕರಿಗೆ ಮನೆಯಲ್ಲಿಯೇ ಕುಳಿತು ವಾಹನಗಳ ಸರ್ವೀಸ್ ಬಗ್ಗೆ ಮಾಹಿತಿ ನೀಡುವ ಸೇವೆಯನ್ನು ಒದಗಿಸಲಿದೆ.

ಫ್ರೀ ಸರ್ವೀಸ್, ವಾರಂಟಿ ಅವಧಿಯನ್ನು ವಿಸ್ತರಿಸಿದ ಸುಜುಕಿ ಮೋಟಾರ್‌ಸೈಕಲ್

ಈ ಸೇವೆಯ ಮೂಲಕ ಗ್ರಾಹಕರು ತಮ್ಮ ದ್ವಿಚಕ್ರ ವಾಹನಗಳ ಸಂಪೂರ್ಣ ಸರ್ವೀಸ್ ವಿವರಗಳನ್ನು ಡಿಜಿಟಲ್ ರೀತಿಯಲ್ಲಿ ಪಡೆಯಬಹುದು. ಸುಜುಕಿ ಕಂಪನಿಗೂ ಮುನ್ನ ಹಲವು ವಾಹನ ತಯಾರಕ ಕಂಪನಿಗಳು ಈ ಸೇವೆಯನ್ನು ನೀಡಿದ್ದವು.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಫ್ರೀ ಸರ್ವೀಸ್, ವಾರಂಟಿ ಅವಧಿಯನ್ನು ವಿಸ್ತರಿಸಿದ ಸುಜುಕಿ ಮೋಟಾರ್‌ಸೈಕಲ್

ಈಗ ಸುಜುಕಿ ಕಂಪನಿಯು ತನ್ನ ಗ್ರಾಹಕರ ಸುರಕ್ಷತೆಗಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ದೇಶಾದ್ಯಂತ ಕರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದು ವಾಹನ ಉತ್ಪಾದನೆಯ ಮೇಲೂ ಪರಿಣಾಮ ಬೀರಿದೆ.

ಫ್ರೀ ಸರ್ವೀಸ್, ವಾರಂಟಿ ಅವಧಿಯನ್ನು ವಿಸ್ತರಿಸಿದ ಸುಜುಕಿ ಮೋಟಾರ್‌ಸೈಕಲ್

ಈ ಪರಿಸ್ಥಿತಿಯಲ್ಲಿ ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಗುರುಗ್ರಾಮದಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಉತ್ಪಾದನಾ ಶಿಫ್ಟ್‌ಗಳ ಸಂಖ್ಯೆಯನ್ನು ಕಡಿಮೆಗೊಳಿಸಿದೆ. ಗುರುಗ್ರಾಮದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದ ನಂತರ ಏಪ್ರಿಲ್ 28ರಿಂದ ಮೇ 1ರವರೆಗೆ ಉತ್ಪಾದನೆಯನ್ನು ಕಡಿಮೆ ಮಾಡಲಾಗಿತ್ತು.

MOST READ: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಫ್ರೀ ಸರ್ವೀಸ್, ವಾರಂಟಿ ಅವಧಿಯನ್ನು ವಿಸ್ತರಿಸಿದ ಸುಜುಕಿ ಮೋಟಾರ್‌ಸೈಕಲ್

ಗುರುಗ್ರಾಮದಲ್ಲಿರುವ ಹಲವು ಕೈಗಾರಿಕೆಗಳ ಕಾರ್ಮಿಕರಲ್ಲಿ ಪಾಸಿಟಿವ್ ಕಂಡು ಬಂದಿತ್ತು. ಈ ಸಂದರ್ಭದಲ್ಲಿ ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ತನ್ನ ನೌಕರರ ಸುರಕ್ಷತೆಗೆ ಬದ್ಧವಾಗಿರುವುದಾಗಿ ತಿಳಿಸಿತ್ತು.

ಫ್ರೀ ಸರ್ವೀಸ್, ವಾರಂಟಿ ಅವಧಿಯನ್ನು ವಿಸ್ತರಿಸಿದ ಸುಜುಕಿ ಮೋಟಾರ್‌ಸೈಕಲ್

ಕೋವಿಡ್ 19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ ಅನೇಕ ವಾಹನ ತಯಾರಕ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ.

Most Read Articles

Kannada
English summary
Suzuki Motorcycle extends warranty and free service period till July 20. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X