ಆಗಸ್ಟ್ ತಿಂಗಳ ಮಾರಾಟದಲ್ಲಿ 27% ನಷ್ಟು ಏರಿಕೆ ದಾಖಲಿಸಿದ Suzuki Motorcycle

Suzuki Motorcycle ಆಗಸ್ಟ್ ತಿಂಗಳ ಮಾರಾಟದ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದೆ. ಆಗಸ್ಟ್ ತಿಂಗಳಿನಲ್ಲಿ Suzuki Motorcycle ಕಂಪನಿಯು ಒಟ್ಟು 73,463 ಯುನಿಟ್‌ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 61,809 ಯುನಿಟ್ ದ್ವಿಚಕ್ರ ಮಾರಾಟ ಮಾಡಿದ್ದರೆ, 11,654 ಯುನಿಟ್‌ ವಾಹನಗಳನ್ನು ರಫ್ತು ಮಾಡಿದೆ.

ಆಗಸ್ಟ್ ತಿಂಗಳ ಮಾರಾಟದಲ್ಲಿ 27% ನಷ್ಟು ಏರಿಕೆ ದಾಖಲಿಸಿದ Suzuki Motorcycle

ಕಳೆದ ವರ್ಷ ಇದೇ ಅವಧಿಯಲ್ಲಿ Suzuki Motorcycle ಇಂಡಿಯಾ ಕಂಪನಿಯು ಒಟ್ಟು 57,909 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿತ್ತು. ಮುಂಬರುವ ದಿನಗಳಲ್ಲಿ ಮಾರಾಟದಲ್ಲಿ ಮತ್ತಷ್ಟು ಏರಿಕೆಯಾಗುವ ಭರವಸೆಯನ್ನು ಕಂಪನಿ ವ್ಯಕ್ತಪಡಿಸಿದೆ. 2021 ರ ಆಗಸ್ಟ್ ತಿಂಗಳ ದ್ವಿಚಕ್ರ ವಾಹನ ಮಾರಾಟದ ಕುರಿತು Suzuki Motorcycle ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸತೋಶಿ ಉಚಿದಾ ಮಾಹಿತಿ ನೀಡಿದ್ದಾರೆ.

ಆಗಸ್ಟ್ ತಿಂಗಳ ಮಾರಾಟದಲ್ಲಿ 27% ನಷ್ಟು ಏರಿಕೆ ದಾಖಲಿಸಿದ Suzuki Motorcycle

ಈ ಬಗ್ಗೆ ಮಾತನಾಡಿರುವ ಅವರು ಅನ್‌ಲಾಕ್ ಹಂತದೊಂದಿಗೆ ದ್ವಿ ಚಕ್ರ ವಾಹನ ಉದ್ಯಮವು ಈಗ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಸಾಮಾನ್ಯ ಸ್ಥಿತಿಯತ್ತ ಸಾಗುತ್ತಿದೆ. ಇದರಿಂದಾಗಿ ಗ್ರಾಹಕರ ಭಾವನೆಗಳು ದಿನದಿಂದ ದಿನಕ್ಕೆ ಸುಧಾರಿಸುತ್ತಿದೆ. ಇದು ಆಟೋ ಮೊಬೈಲ್ ಉದ್ಯಮಕ್ಕೆ ಶುಭ ಸುದ್ದಿಯಾಗಿದೆ.

ಆಗಸ್ಟ್ ತಿಂಗಳ ಮಾರಾಟದಲ್ಲಿ 27% ನಷ್ಟು ಏರಿಕೆ ದಾಖಲಿಸಿದ Suzuki Motorcycle

2021ರ ಆಗಸ್ಟ್ ತಿಂಗಳಿನಲ್ಲಿ ನಮ್ಮ ಒಟ್ಟಾರೆ ಮಾರಾಟದಲ್ಲಿ ನಾವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸುಮಾರು 27% ನಷ್ಟು ಬೆಳವಣಿಗೆಯನ್ನು ದಾಖಲಿಸಿದ್ದೇವೆ ಎಂದು ಹೇಳಿದರು. Suzuki ಆಕ್ಸೆಸ್ 125, Suzuki ಮೋಟಾರ್ ಸೈಕಲ್ ಕಂಪನಿಯ ಅತ್ಯಂತ ಜನಪ್ರಿಯ ದ್ವಿ ಚಕ್ರ ವಾಹನಗಳಲ್ಲಿ ಒಂದಾಗಿದೆ.

ಆಗಸ್ಟ್ ತಿಂಗಳ ಮಾರಾಟದಲ್ಲಿ 27% ನಷ್ಟು ಏರಿಕೆ ದಾಖಲಿಸಿದ Suzuki Motorcycle

ಕಮ್ಯೂಟರ್ ಬೈಕ್ ಸರಣಿಯಲ್ಲಿ Suzuki Gixxer 155 ಹಾಗೂ Suzuki Gixxer SF ಬೈಕುಗಳು ಜನಪ್ರಿಯ ಮಾದರಿಗಳಾಗಿವೆ, ಇವುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. Suzuki Motorcycle ಕಂಪನಿಯು ಈ ವರ್ಷದ ಜೂನ್ ತಿಂಗಳಿನಲ್ಲಿ ನವೀಕರಿಸಿದ ಹೊಸ Suzuki ಹಯಬುಸಾ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿತು.

ಆಗಸ್ಟ್ ತಿಂಗಳ ಮಾರಾಟದಲ್ಲಿ 27% ನಷ್ಟು ಏರಿಕೆ ದಾಖಲಿಸಿದ Suzuki Motorcycle

ಈ ಬೈಕ್ ಅನ್ನು ಕಂಪ್ಲೀಟ್ ನಾಕ್ಡ್ ಡೌನ್ ಯುನಿಟ್ (ಸಿಕೆಡಿ) ಮೂಲಕ ಭಾರತದಲ್ಲಿ ಮಾರಾಟ ಮಾಡಲಾಗುತ್ತದೆ. Suzuki ಹಯಬುಸಾದ ಮೊದಲ ಹಾಗೂ ಎರಡನೇ ಬ್ಯಾಚ್ ಬುಕ್ಕಿಂಗ್ ಆರಂಭವಾದ ಕೆಲವೇ ದಿನಗಳಲ್ಲಿ ಈ ಬೈಕಿನ ಎಲ್ಲಾ ಯುನಿಟ್ ಗಳು ಮಾರಾಟವಾದವು. ಎಲೆಕ್ಟ್ರಿಕ್ ವಾಹನಗಳತ್ತ ಸಾಗುತ್ತಿರುವ Suzuki ತನ್ನ ಬರ್ಗ್‌ಮನ್ ಸ್ಟ್ರೀಟ್ ಸ್ಕೂಟರ್‌ನ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಆಗಸ್ಟ್ ತಿಂಗಳ ಮಾರಾಟದಲ್ಲಿ 27% ನಷ್ಟು ಏರಿಕೆ ದಾಖಲಿಸಿದ Suzuki Motorcycle

Suzuki Gixxer ಬೈಕುಗಳ ಬೆಲೆ ಹೆಚ್ಚಳ

ಇತ್ತೀಚೆಗಷ್ಟೇ Suzuki Motorcycle ಕಂಪನಿಯು Suzuki Gixxer 150 ಹಾಗೂ Gixxer 250 ಬೈಕುಗಳ ಬೆಲೆಯನ್ನು ಹೆಚ್ಚಿಸಿದೆ Suzuki Gixxer 150 ಬೈಕಿನ ಬೆಲೆಯನ್ನು ರೂ. 2,000 ಗಳಷ್ಟು ಹಾಗೂ Gixxer 250 ಬೈಕಿನ ಬೆಲೆಯನ್ನು ರೂ. 3,000 ಗಳಷ್ಟು ಹೆಚ್ಚಿಸಲಾಗಿದೆ.

ಆಗಸ್ಟ್ ತಿಂಗಳ ಮಾರಾಟದಲ್ಲಿ 27% ನಷ್ಟು ಏರಿಕೆ ದಾಖಲಿಸಿದ Suzuki Motorcycle

ಈ ಬೈಕುಗಳ ಬೆಲೆಯ ಬಗ್ಗೆಹೇಳುವುದಾದರೆ, ಎಕ್ಸ್ ಶೋರೂಂ ದರದಂತೆ ರೂ. 1,16,800 ಗಳಿದ್ದ Suzuki Gixxer 150 ಬೈಕಿನ ಬೆಲೆ ಈಗ ಎಕ್ಸ್ ಶೋರೂಂ ದರದಂತೆ ರೂ. 1,18,800 ಗಳಿಂದ ಏರಿಕೆಯಾಗಿದೆ. ಇನ್ನು Suzuki Gixxer 150 SF ಬೈಕಿನ ಬಗ್ಗೆ ಹೇಳುವುದಾದರೆ, ಕಂಪನಿಯು ಈ ಬೈಕ್ ಅನ್ನು ಎಕ್ಸ್ ಶೋರೂಂ ದರದಂತೆ ರೂ. 1,27,300 ಗಳಿಗೆ ಮಾರಾಟ ಮಾಡುತ್ತಿತ್ತು. ಈಗ ಬೆಲೆ ಏರಿಕೆಯ ನಂತರ ಈ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1,29,300 ಗಳಾಗಿದೆ.

ಆಗಸ್ಟ್ ತಿಂಗಳ ಮಾರಾಟದಲ್ಲಿ 27% ನಷ್ಟು ಏರಿಕೆ ದಾಖಲಿಸಿದ Suzuki Motorcycle

Suzuki Gixxer 250 ಬೈಕ್ ಅನ್ನು ಮೊದಲು ಎಕ್ಸ್ ಶೋರೂಂ ದರದಂತೆ ರೂ .169,200 ಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಬೆಲೆ ಏರಿಕೆಯ ನಂತರ ಈ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1,71,200 ಗಳಾಗಿದೆ. Suzuki Gixxer SF 250 ಬೈಕ್ ಅನ್ನು ಈ ಹಿಂದೆ ಎಕ್ಸ್ ಶೋರೂಂ ದರದಂತೆ ರೂ. 1,79,700 ಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಬೆಲೆ ಏರಿಕೆಯ ನಂತರ ಈ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1,82,700 ಗಳಾಗಿದೆ.

ಆಗಸ್ಟ್ ತಿಂಗಳ ಮಾರಾಟದಲ್ಲಿ 27% ನಷ್ಟು ಏರಿಕೆ ದಾಖಲಿಸಿದ Suzuki Motorcycle

ಇನ್ನು Gixxer ಬೈಕಿನ ಟಾಪ್ ಎಂಡ್ ಮಾದರಿಯಾದ Moto GP ಬಗ್ಗೆ ಹೇಳುವುದಾದರೆ ಈಗ ಈ ಬೈಕಿನ ಬೆಲೆ 1,82,700 ಕ್ಕೆ ಏರಿಕೆಯಾಗಿದೆ. ಬೆಲೆಯಲ್ಲಿನ ಹೆಚ್ಚಳವನ್ನು ಹೊರತುಪಡಿಸಿ Suzuki Motorcycle ಕಂಪನಿಯು ಬೈಕ್‌ನಲ್ಲಿ ಯಾವುದೇ ತಾಂತ್ರಿಕ ಬದಲಾವಣೆಗಳನ್ನು ಮಾಡಿಲ್ಲ.

ಆಗಸ್ಟ್ ತಿಂಗಳ ಮಾರಾಟದಲ್ಲಿ 27% ನಷ್ಟು ಏರಿಕೆ ದಾಖಲಿಸಿದ Suzuki Motorcycle

Suzuki Motorcycle ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹಲವು ವರ್ಷಗಳಿಂದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದೆ. ಇದರ ಜೊತೆಗೆ ಕಂಪನಿಯು ತನ್ನ ಸಮಾಜ ಮುಖಿ ಕಾರ್ಯಗಳಿಂದಲೂ ಗಮನ ಸೆಳೆಯುತ್ತಿದೆ. ಕಳೆದ ವರ್ಷ ಲಾಕ್ ಡೌನ್ ಘೋಷಣೆಯಾದ ಸಂದರ್ಭದಲ್ಲಿ ಕಂಪನಿಯು ಹಲವಾರು ಜನರಿಗೆ ಫುಡ್ ಕಿಟ್ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಿ ಗಮನ ಸೆಳೆದಿತ್ತು.

ಆಗಸ್ಟ್ ತಿಂಗಳ ಮಾರಾಟದಲ್ಲಿ 27% ನಷ್ಟು ಏರಿಕೆ ದಾಖಲಿಸಿದ Suzuki Motorcycle

Suzuki Motorcycle ಕಂಪನಿಯು ಕರೋನಾ ವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ಮನೆ ಬಾಗಿಲಲ್ಲೇ ಸೇವೆಯನ್ನು ನೀಡುವ ಸಲುವಾಗಿ ಹೊಸ ಅಭಿಯಾನವನ್ನು ಆರಂಭಿಸಿತ್ತು ಎಂಬುದು ಗಮನಾರ್ಹ.

Most Read Articles

Kannada
English summary
Suzuki motorcycle sales increases by 27 percent in august 2021 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X