ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Suzuki ಸ್ಕೂಟರ್

ಸುಜುಕಿ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಸುಜುಕಿ ಕಂಪನಿಯು ಭಾರತೀಯ ಮಾರುಕಟ್ಟೆಗಾಗಿ ಹೊಸ ಸ್ಕೂಟರ್ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Suzuki ಸ್ಕೂಟರ್

ಸುಜುಕಿ ಕಂಪನಿಯು ನವೆಂಬರ್ 9 ರಿಂದ ದೇಶೀಯ ಮಾರುಕಟ್ಟೆಗೆ ಹೊಚ್ಚ ಹೊಸ ಸ್ಕೂಟರ್ ಅನ್ನು ಟೀಸಿಂಗ್ ಮಾಡುತ್ತಿದೆ ಮತ್ತು ಇದು ಬರ್ಗ್‌ಮ್ಯಾನ್ ಸ್ಟ್ರೀಟ್‌ನ ಎಲೆಕ್ಟ್ರಿಫೈಡ್ ಆವೃತ್ತಿಯಾಗಿದೆ ಎಂದು ಹೇಳಲಾಗುತ್ತಿತ್ತು. ಇತ್ತೀಚಿನ ತಿಂಗಳುಗಳಲ್ಲಿ ಬರ್ಗ್‌ಮ್ಯಾನ್ ಎಲೆಕ್ಟ್ರಿಕ್ ಸ್ಕೂಟರ್ ಸಾರ್ವಜನಿಕ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟ್ ನಡೆಸುವಾಗ ಹಲವು ಬಾರಿ ಕಾಣಿಸಿಕೊಂಡಿದೆ. ಇದರಿಂದ ಎಲೆಕ್ಟ್ರಿಕ್ ಸ್ಕೂಟರ್ ಟೀಸರ್ ಆಗಿರಬಹುದು ಎಂದು ಊಹಾಪೋಹಗಳು ಬಂದವು. ಇನ್ನು ಹೊಸ 5 ಸೆಕೆಂಡುಗಳ ಕಾಲದ ಟೀಸರ್ ವೀಡಿಯೋ ಇದು ಎಲೆಕ್ಟ್ರಿಕ್ ಸ್ಕೂಟರ್ ಅಲ್ಲ ಎಂದು ಖಚಿತಪಡಿಸುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Suzuki ಸ್ಕೂಟರ್

ಏಕೆಂದರೆ ಹೊಸ ಟೀಸರ್ ನಲ್ಲಿ ಸ್ಟಬಿ ಎಕ್ಸಾಸ್ಟ್ ಅನ್ನು ಸ್ಪಷ್ಟವಾಗಿ ನೋಡಬಹುದಾಗಿದೆ. ಟೀಸರ್ ನಲ್ಲಿ 'ಜಗತ್ತಿಗೆ ನಿಮ್ಮ ಆಗಮನವನ್ನು ಪ್ರಕಟಿಸಿ' ಎಂಬ ಅಡಿಬರಹವನ್ನು ಹೊಂದಿದೆ. ಕೆಲವು ಸ್ಪಷ್ಟ ವಿನ್ಯಾಸದ ವಿವರಗಳನ್ನು ನೀಡುವಾಗ ಶೈಲಿ, ಜಿಪ್ ಮತ್ತು ಎಲ್ಲವನ್ನೂ ಪಡೆಯಿರಿ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Suzuki ಸ್ಕೂಟರ್

ಜಪಾನಿನ ತಯಾರಕರು ಪ್ರಸ್ತುತ ಬರ್ಗ್‌ಮ್ಯಾನ್ ಸ್ಟ್ರೀಟ್ 125 ಮತ್ತು ಆಕ್ಸೆಸ್ 125 ಅನ್ನು ಮಾರಾಟ ಮಾಡುತ್ತಾರೆ. ಇವೆರಡೂ ಮಾರಾಟದ ಪಟ್ಟಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಟೀಸರ್‌ಗಳ ಮೂಲಕ ನಿರ್ಣಯಿಸುವ ಮೂಲಕ ಮತ್ತೊಂದು 125 ಸಿಸಿ ಸ್ಕೂಟರ್‌ನೊಂದಿಗೆ ಸೇರಿಕೊಳ್ಳಬಹುದು.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Suzuki ಸ್ಕೂಟರ್

ದ್ವಿಚಕ್ರ ವಾಹನ ತಯಾರಕರು ತಮ್ಮ 125 ಸಿಸಿ ಸರಣಿಯನ್ನು ವಿಸ್ತರಿಸುವುದರ ಜೊತೆಗೆ ತಮ್ಮ ಅಸ್ತಿತ್ವದಲ್ಲಿರುವ 125 ಸಿಸಿ ಮಾಡೆಲ್‌ಗಳ ಪೋರ್ಟ್‌ಫೋಲಿಯೊವನ್ನು ಹೊಸ ರೂಪಾಂತರಗಳನ್ನು ಸೇರಿಸುವ ಮೂಲಕ ವಿಸ್ತರಿಸುವ ಸಾಧ್ಯತೆಗಳಿದೆ. ಆದರ ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗಪಡಿಸಿಲ್ಲ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Suzuki ಸ್ಕೂಟರ್

ಟರ್ನ್ ಸಿಗ್ನಲ್‌ಗಳ ಮೇಲೆ ಇರಿಸಲಾಗಿರುವ ಟ್ವಿನ್ ತ್ರಿಕೋನ ಎಲ್‌ಇಡಿ ಟೈಲ್ ಲ್ಯಾಂಪ್‌ಗಳು, ಸ್ಪ್ಲಿಟ್-ಟೈಪ್ ಗ್ರ್ಯಾಬ್ ರೈಲ್, ಎಲ್‌ಇಡಿ ಹೆಡ್‌ಲ್ಯಾಂಪ್‌ನೊಂದಿಗೆ ತೀಕ್ಷ್ಣವಾದ ಮುಂಭಾಗದ ಫಾಸಿಕ, ಸಣ್ಣ ಬ್ಲ್ಯಾಕ್ ಫ್ಲೈಸ್ಕ್ರೀನ್, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‌ಗಳು, ಆಲ್-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಇರುವಿಕೆಯನ್ನು ಟೀಸರ್‌ಗಳು ತೋರಿಸುತ್ತವೆ. ಇದರೊಂದಿಗೆ ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಬಹು ಡ್ಯುಯಲ್-ಟೋನ್ ಬಣ್ಣದ ಆಯ್ಜೆಗಳನ್ನು ಸುಜುಕಿಯ ಸಾಮಾನ್ಯ ಭಾಗಗಳ ಬಿನ್‌ನಿಂದ ಸ್ವಿಚ್‌ಗಿಯರ್ ಮತ್ತು ಇತ್ಯಾದಿಗಳನ್ನು ಒಳಗೊಂಡಿರಬಹುದು.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Suzuki ಸ್ಕೂಟರ್

ಮುಂಬರುವ ಸ್ಕೂಟರ್‌ಗಾಗಿ ಸುಜುಕಿ ವಿಭಿನ್ನವಾದ ಹೆಸರನ್ನು ನೀಡಬಹುದು. ಹೊಸ ಸ್ಕೂಟರ್ ಆಕ್ಸೆಸ್ 125 ಗಿಂತ ಸ್ವಲ್ಪ ಪ್ರೀಮಿಯಂನಲ್ಲಿ ಬೆಲೆಯನ್ನು ಹೊಂದಿರಬಹುದು ಅಥವಾ ಇದು ಹೋಂಡಾ ಡಿಯೊಗೆ ಪ್ರತಿಸ್ಪರ್ಧಿಯಾಗಿರಬಹುದು. ಇನ್ನುಟೀಸರ್‌ನಲ್ಲಿ, ಹಿಂಭಾಗವು ಮೋಟಾರ್‌ಸೈಕಲ್‌ಗಳಿಂದ ಪ್ರೇರಿತವಾಗಿದೆ ಎಂದು ಸುಜುಕಿ ಹೇಳಿಕೊಂಡಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Suzuki ಸ್ಕೂಟರ್

ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಅದೇ 124 ಸಿಸಿ ಸಿಂಗಲ್-ಸಿಲಿಂಡರ್ ಫ್ಯೂಯಲ್-ಇಂಜೆಕ್ಟೆಡ್ ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 6,750 ಆರ್‌ಪಿಎಂನಲ್ಲಿ 8.58 ಬಿಹೆಚ್‍ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 10 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಬಹುದು ಎಂದು ನಿರೀಕ್ಷಿಸುತ್ತೇವೆ. ಇನ್ನು ಇದರೊಂದಿಗೆ ಸಿವಿಟಿ ಅನ್ನು ಜೋಡಿಸಬಹುದು.

ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿ ಪಡಿಸಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿವೆ. ಸುಜುಕಿ ಮೋಟಾರ್‍‍ಸೈಕಲ್ ಸಹ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Suzuki ಸ್ಕೂಟರ್

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಲಿಮಿಟೆಡ್ ದೇಶಿಯ ಮಾರುಕಟ್ಟೆಯಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ ಹಾಗೂ ಅಭಿವೃದ್ಧಿಪಡಿಸಿದ ವಾಹನಗಳೊಂದಿಗೆ ಅದ್ಭುತ ಯಶಸ್ಸನ್ನು ಕಾಣುತ್ತಿದೆ. ಕಂಪನಿಯ ಜಿಕ್ಸರ್ ಸರಣಿಯ ಬೈಕುಗಳು ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಇದರ ಜೊತೆಗೆ ಕಂಪನಿಯ ಸುಜುಕಿ ಆಕ್ಸೆಸ್, ಬರ್ಗ್‌ಮ್ಯಾನ್ ಹಾಗೂ ಇಂಟ್ರುಡರ್ ವಾಹನಗಳು ಸಹ ತಮ್ಮ ತಮ್ಮ ಸೆಗ್ ಮೆಂಟ್'ಗಳಲ್ಲಿ ಜನಪ್ರಿಯವಾಗಿವೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Suzuki ಸ್ಕೂಟರ್

ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಜುಕಿ ಮೋಟಾರ್‌ಸೈಕಲ್ ಸಹ ಈ ಸೆಗ್ ಮೆಂಟಿನಲ್ಲಿ ತನ್ನ ವಾಹನವನ್ನು ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಭಾರತದಲ್ಲಿ ಪ್ರಮುಖ ದ್ವಿಚಕ್ರ ವಾಹನ ಕಂಪನಿಗಳಾದ ಬಜಾಜ್ ಆಟೋ ಹಾಗೂ ಟಿವಿಎಸ್ ಮೋಟಾರ್ ಕಂಪನಿಗಳು ಕ್ರಮವಾಗಿ ಬಜಾಜ್ ಚೇತಕ್ ಎಲೆಕ್ಟ್ರಿಕ್ ಹಾಗೂ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿವೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Suzuki ಸ್ಕೂಟರ್

ಇದರೊಂದಿಗೆ ಹೀರೋ ಮೋಟೋಕಾರ್ಪ್ ಕಂಪನಿಯು ಸಹ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 2022 ರಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಮಾಹಿತಿ ನೀಡಿದೆ. ಹೋಂಡಾ ಹಾಗೂ ಯಮಹಾ ಕಂಪನಿಗಳು ಸಹ ಈ ವಿಭಾಗವನ್ನು ಪ್ರವೇಶಿಸುವ ಯೋಜನೆಯನ್ನು ಹೊಂದಿವೆ. ಈ ಸನ್ನಿವೇಶದಲ್ಲಿ ಸುಜುಕಿ ಮೋಟಾರ್‌ಸೈಕಲ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗಕ್ಕೆ ಪ್ರವೇಶಿಸುವ ಮುಂದಿನ ಕಂಪನಿಯಾಗಬಹುದು. ಸುಜುಕಿ ಮೋಟಾರ್‌ಸೈಕಲ್‌ ಕಂಪನಿಯ ಸುಜುಕಿ ಬರ್ಗ್‌ಮ್ಯಾನ್ ಎಲೆಕ್ಟ್ರಿಕ್ ಸ್ಕೂಟರ್ ದೆಹಲಿ ಎನ್‌ಸಿಆರ್ ಪ್ರದೇಶದಲ್ಲಿ ಹಲವು ಬಾರಿ ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಕಂಡುಬಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Suzuki ಸ್ಕೂಟರ್

ಸುಜುಕಿ ಮೋಟಾರ್‌ಸೈಕಲ್ ಆಗಸ್ಟ್ ತಿಂಗಳಿನಲ್ಲಿ ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಒಟ್ಟು 73,463 ಯುನಿಟ್‌ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 61,809 ಯುನಿಟ್ ದ್ವಿಚಕ್ರ ಮಾರಾಟ ಮಾಡಿದ್ದರೆ, 11,654 ಯುನಿಟ್‌ ವಾಹನಗಳನ್ನು ರಫ್ತು ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಒಟ್ಟು 57,909 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿತ್ತು. ಮುಂಬರುವ ದಿನಗಳಲ್ಲಿ ಮಾರಾಟದಲ್ಲಿ ಮತ್ತಷ್ಟು ಏರಿಕೆಯಾಗುವ ಭರವಸೆಯನ್ನು ಕಂಪನಿ ವ್ಯಕ್ತಪಡಿಸಿದೆ. ಇನ್ನು ಸುಜುಕಿ ಕಂಪನಿಯು ಟೀಸರ್ ಬಿಡುಗಡೆಗೊಳಿಸಿದ ಸ್ಕೂಟರ್ ನಾಳೆ ಬಿಡುಗಡೆಯಾಗಲಿದೆ.

Most Read Articles

Kannada
English summary
Suzuki teases new sporty scooter for india details
Story first published: Wednesday, November 17, 2021, 17:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X