ಆಕರ್ಷಕ ವಿನ್ಯಾಸದ ಲೂನಾ ಕೆಫೆ ರೇಸರ್ ಎಲೆಕ್ಟ್ರಿಕ್ ಬೈಕನ್ನು ಪರಿಚಯಿಸಿದ ಟಾರ್ಫಾರ್ಮ್

ಅಮೆರಿಕದ ಬ್ರೂಕ್ಲಿನ್ ಮೂಲದ ಎಲೆಕ್ಟ್ರಿಕ್ ಮೊಬಿಲಿಟಿ ಸ್ಟಾರ್ಟ್ಅಪ್ ಕಂಪನಿಯಾದ ಟಾರ್ಫಾರ್ಮ್ ಇತ್ತೀಚೆಗೆ ಹೊಸ ಎಲೆಕ್ಟ್ರಿಕ್ ಬೈಕನ್ನು ಅನಾವರಣಗೊಳಿಸಿತು. ಈ ಹೊಸ ಮಾದರಿಯು ಲೂನಾದ ಕೆಫೆ-ರೇಸರ್ ಆವೃತ್ತಿಯಾಗಿದ್ದು, ಇದನ್ನು 'ರೇಸರ್ ಎಡಿಷನ್' ಎಂದು ಕರೆಯಲಾಗುತ್ತದೆ.

ಆಕರ್ಷಕ ವಿನ್ಯಾಸದ ಲೂನಾ ಕೆಫೆ ರೇಸರ್ ಎಲೆಕ್ಟ್ರಿಕ್ ಬೈಕನ್ನು ಪರಿಚಯಿಸಿದ ಟಾರ್ಫಾರ್ಮ್

ಈ ಹೊಸ ಟಾರ್ಫಾರ್ಮ್ ಎಲೆಕ್ಟ್ರಿಕ್ ಬೈಕ್ ಲೂನಾದ ಅದೇ ಮಾಡ್ಯುಲರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಇದೀಗ ಲೂನಾ ಎಲೆಕ್ಟ್ರಿಕ್ ಬೈಕ್ ಸ್ಕ್ರ್ಯಾಂಬ್ಲರ್ ಎಡಿಷನ್ ಮತ್ತು ರೇಸರ್ ಎಡಿಷನ್ ಎಂಬ ಎರಡು ಮಾದರಿಗಳಲ್ಲಿ ಲಭ್ಯವಿದೆ. ಟಾರ್ಫಾರ್ಮ್ ಕಂಪನಿಯು ಲೂನಾ ಎಲೆಕ್ಟ್ರಿಕ್ ಬೈಕಿನ ಸ್ಕ್ರ್ಯಾಂಬ್ಲರ್ ಎಡಿಷನ್ ಕಳದ ವರ್ಷ ಪರಿಚಯಿಸಲಾಗಿತ್ತು. ಇನ್ನು ಹೊಸ ಲೂನಾ ಎಲೆಕ್ಟ್ರಿಕ್ ಕೆಫೆ ರೇಸರ್ ಬೈಕಿನ ಉತ್ಪಾದನೆ ಈ ವರ್ಷ ಪ್ರಾರಂಭವಾಗಲಿದೆ.

ಆಕರ್ಷಕ ವಿನ್ಯಾಸದ ಲೂನಾ ಕೆಫೆ ರೇಸರ್ ಎಲೆಕ್ಟ್ರಿಕ್ ಬೈಕನ್ನು ಪರಿಚಯಿಸಿದ ಟಾರ್ಫಾರ್ಮ್

ಹೊಸ ಕೆಫೆ ರೇಸರ್ ಮಾದರಿಯು ಸ್ಕ್ರ್ಯಾಂಬ್ಲರ್ ಮಾದರಿಯಂತೆಯೇ ವಿಶೇಷಣಗಳನ್ನು ಹೊಂದಿದೆ. ಇದು 55 ಎಚ್‌ಪಿ ಎಲೆಕ್ಟ್ರಿಕ್ ಮೋಟರ್ ಅನ್ನು ಪಡೆಯುತ್ತದೆ, ಇದರೊಂದಿಗೆ 11.8 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿದೆ. ಇನ್ನು ಈ ಬೈಕ್ 200 ಕೆಜಿ ತೂಕವನ್ನು ಹೊಂದಿದೆ.

MOST READ: ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಹೋಂಡಾ ಶೈನ್ ಬೈಕ್

ಆಕರ್ಷಕ ವಿನ್ಯಾಸದ ಲೂನಾ ಕೆಫೆ ರೇಸರ್ ಎಲೆಕ್ಟ್ರಿಕ್ ಬೈಕನ್ನು ಪರಿಚಯಿಸಿದ ಟಾರ್ಫಾರ್ಮ್

ಹೊಸ ಟಾರ್ಫಾರ್ಮ್ ಎಲೆಕ್ಟ್ರಿಕ್ ಬೈಕ್ ಮೂರು ರೈಡಿಂಗ್ ಮೋಡ್‌ಗಳಿವೆ. ಇನ್ನು ಈ ಬೈಕಿನಲ್ಲಿ ಸೋನಿಕ್ ಔರಾ ಎಂದು ಕರೆಯಲ್ಪಡುವ ಸೌಂಡ್ ಜನರೇಟರ್ ಅನ್ನು ಸಹ ಪಡೆಯುತ್ತದೆ. ಇದು ವಿಶೇಷವಾದ ಫೀಚರ್ ಆಗಿದೆ.

ಆಕರ್ಷಕ ವಿನ್ಯಾಸದ ಲೂನಾ ಕೆಫೆ ರೇಸರ್ ಎಲೆಕ್ಟ್ರಿಕ್ ಬೈಕನ್ನು ಪರಿಚಯಿಸಿದ ಟಾರ್ಫಾರ್ಮ್

ವಿಶಿಷ್ಟವಾದ ರೆಟ್ರೊ-ವಿಷಯದ ಕೆಫೆ ರೇಸರ್ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿರುವ ಲೂನಾ ಎಲೆಕ್ಟ್ರಿಕ್ ಬೈಕ್ ಫ್ಯೂಚರಿಸ್ಟಿಕ್ ಎಲೆಕ್ಟ್ರಿಕ್ ಪವರ್‌ಟ್ರೇನ್ ಪಡೆಯುತ್ತದೆ. ಟಾರ್ಫಾರ್ಮ್ ಕಳೆದ ವರ್ಷ ಈ ಸಮಯದಲ್ಲಿ ಲೂನಾವನ್ನು ತನ್ನ ಪ್ರಧಾನ ರೂಪದಲ್ಲಿ ಪರಿಚಯಿಸಿತು.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಆಕರ್ಷಕ ವಿನ್ಯಾಸದ ಲೂನಾ ಕೆಫೆ ರೇಸರ್ ಎಲೆಕ್ಟ್ರಿಕ್ ಬೈಕನ್ನು ಪರಿಚಯಿಸಿದ ಟಾರ್ಫಾರ್ಮ್

ಇದನ್ನು ಒರಟಾಗಿ ಕಾಣುವ ಸ್ಕ್ರ್ಯಾಂಬ್ಲರ್ ರೂಪದಲ್ಲಿ ವಿನ್ಯಾಸಗೊಳಿಸಲಾಗಿದೆ. ಇನ್ನು ಹೊಸ ತಲೆಮಾರಿನ ಮಾದರಿಯು ಕೆಫೆ ರೇಸರ್ ವಿನ್ಯಾಸದಲ್ಲಿದೆ. ಈ ಬೈಕಿನ ಪ್ರತಿ ಇಂಚು ರೆಟ್ರೊ ಮೋಡಿಯನ್ನು ಹೊರಹಾಕುತ್ತದೆ.

ಆಕರ್ಷಕ ವಿನ್ಯಾಸದ ಲೂನಾ ಕೆಫೆ ರೇಸರ್ ಎಲೆಕ್ಟ್ರಿಕ್ ಬೈಕನ್ನು ಪರಿಚಯಿಸಿದ ಟಾರ್ಫಾರ್ಮ್

ಈ ಹೊಸ ಬೈಕ್ ವೃತ್ತಾಕಾರದ ಎಲ್ಇಡಿ ಹೆಡ್ ಲ್ಯಾಂಪ್, ಮಸ್ಕಲರ್ ಫ್ಯೂಯಲ್ ಟ್ಯಾಂಕ್, ಲೆದರ್ ಸೀರ್, ನಯವಾದ ದುಂಡಗಿನ ಆಕಾರದ ಎಲ್ಇಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಸಂಯೋಜಿತ ಎಲ್ಇಡಿ ಟೈಲ್ ಲೈಟ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಆಕರ್ಷಕ ವಿನ್ಯಾಸದ ಲೂನಾ ಕೆಫೆ ರೇಸರ್ ಎಲೆಕ್ಟ್ರಿಕ್ ಬೈಕನ್ನು ಪರಿಚಯಿಸಿದ ಟಾರ್ಫಾರ್ಮ್

ಒಟ್ಟಾರೆಯಾಗಿ ಇದರ ವಿನ್ಯಾಸವು ಆಕರ್ಷಕ ಮತ್ತು ವಿಭಿನ್ನವಾಗಿದೆ. ಟಾಫಾರ್ಮ್ ಲೂನಾ ಸಿಟಿಯಲ್ಲಿ 193 ಕಿ.ಮೀ ರೇಂಜ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಹೆದ್ದಾರಿಯಲ್ಲಿ ಇದರ ರೇಂಜ್ ಶೇ.50 ಕ್ಕಿಂತ ಹೆಚ್ಚು ಕುಸಿಯುತ್ತದೆ.

ಆಕರ್ಷಕ ವಿನ್ಯಾಸದ ಲೂನಾ ಕೆಫೆ ರೇಸರ್ ಎಲೆಕ್ಟ್ರಿಕ್ ಬೈಕನ್ನು ಪರಿಚಯಿಸಿದ ಟಾರ್ಫಾರ್ಮ್

ಇನ್ನು ಈ ಹೊಸ ಟಾರ್ಫಾರ್ಮ್ ಎಲೆಕ್ಟ್ರಿಕ್ ಕೆಫೆ ರೇಸರ್ ಬೈಕಿನಲ್ಲಿ ಕೀ ಲೆಸ್ ಎಂಟ್ರಿ, 180 ಡಿಗ್ರಿ ರಿಯರ್-ವ್ಯೂ ಕ್ಯಾಮೆರಾ, ಹ್ಯಾಪ್ಟಿಕ್ ಬ್ಲೈಂಡ್‌ಸ್ಪಾಟ್ ರೆಸ್ಪಾನ್ಸ್, 3.4-ಕಿ.ವ್ಯಾಟ್ ಆನ್‌ಬೋರ್ಡ್ ಚಾರ್ಜರ್, ರೀಜನರೇಟ್ ಬ್ರೇಕಿಂಗ್, ಬ್ಲೂಟೂತ್ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಮತ್ತು ಇನ್ನಿತರ ಫೀಚರ್ಸ್ ಗಳನ್ನು ಒಳಗೊಂಡಿದೆ.

Most Read Articles

Kannada
English summary
Check Out Tarform Luna Cafe Racer. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X