ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವಾಗ ಪರಿಗಣಿಸಬೇಕಾದ ಸಂಗತಿಗಳಿವು

ಕಳೆದ ಕೆಲವು ತಿಂಗಳುಗಳಿಂದ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಜಾಗತಿಕ ತೈಲ ಮತ್ತು ಅನಿಲ ಉದ್ಯಮವು ತನ್ನ ಭವಿಷ್ಯದ ಬಗ್ಗೆ ಗೊಂದಲದಲ್ಲಿದ್ದು, ಮುಂಬರುವ ದಶಕಗಳಲ್ಲಿ ಹೊಸ ವ್ಯಾಪಾರ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಎಲೆಕ್ಟ್ರಿಕ್ ವಾಹನ ಉದ್ಯಮದ ಬೇಡಿಕೆಯಲ್ಲಿ ತ್ವರಿತ ಏರಿಕೆ ಕಂಡು ಬರುತ್ತಿದೆ.

ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವಾಗ ಪರಿಗಣಿಸಬೇಕಾದ ಸಂಗತಿಗಳಿವು

ಕೋವಿಡ್ 19 ಸಾಂಕ್ರಾಮಿಕದ ಕಾರಣಕ್ಕೆ ಹಲವು ಉದ್ಯಮಗಳು ನೆಲ ಕಚ್ಚಿವೆ. ಆದರೆ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿರುವುದರ ಜೊತೆಗೆ ಮಾರಾಟದಲ್ಲಿಯೂ ಗಮನಾರ್ಹ ಹೆಚ್ಚಳ ಕಂಡು ಬಂದಿದೆ. ಹೆಚ್ಚುತ್ತಿರುವ ಇಂಧನ ಬೆಲೆಗಳಿಂದ ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡಿದ್ದಾರೆ. ಕೋವಿಡ್ 19 ನಂತರ ಜನರು ಸ್ವಂತ ವಾಹನಗಳಲ್ಲಿ ಪ್ರಯಾಣಿಸಲು ಆದ್ಯತೆ ನೀಡುತ್ತಿರುವುದರಿಂದ ಸೆಕೆಂಡ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ.

ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವಾಗ ಪರಿಗಣಿಸಬೇಕಾದ ಸಂಗತಿಗಳಿವು

ಹೊಸ ವಾಹನಗಳಿಗೆ ಹೋಲಿಸಿದರೆ ಬಳಸಿದ ವಾಹನಗಳು ಕೈಗೆಟುಕುವ ಬೆಲೆಗೆ ದೊರಕುತ್ತವೆ ಎಂಬುದು ಇದಕ್ಕೆ ಪ್ರಮುಖ ಕಾರಣ. ಜನರು ಪೆಟ್ರೋಲ್, ಡೀಸೆಲ್ ವಾಹನಗಳಂತೆ ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನಗಳನ್ನು ಸಹ ಖರೀದಿಸಲು ಮುಂದಾಗುತ್ತಿದ್ದಾರೆ. ಬಳಸಿದ ಪೆಟ್ರೋಲ್, ಡೀಸೆಲ್ ಎಂಜಿನ್ ವಾಹನಗಳನ್ನು ಖರೀದಿಸುವಾಗ ಪರಿಗಣಿಸಬೇಕಾದ ಸಂಗತಿಗಳ ಬಗ್ಗೆ ಗ್ರಾಹಕರಿಗೆ ತಿಳಿದಿದ್ದರೂ, ಎಲೆಕ್ಟ್ರಿಕ್ ವಾಹನವನ್ನು ಖರೀದಿಸುವಾಗ ಪರಿಗಣಿಸಬೇಕಾದ ಅಂಶಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವಾಗ ಪರಿಗಣಿಸಬೇಕಾದ ಸಂಗತಿಗಳಿವು

ಬಳಸಿದ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಕಾರಣಗಳೇನು?

ಈ ಪ್ರಶ್ನೆಗೆ ಮೊದಲ ಉತ್ತರವೆಂದರೆ ಎಲೆಕ್ಟ್ರಿಕ್ ವಾಹನಗಳು ಹೊಸದಾಗಿರಲಿ ಅಥವಾ ಸೆಕೆಂಡ್ ಹ್ಯಾಂಡ್ ಆಗಿರಲಿ ಮಾಲಿನ್ಯಕ್ಕೆ ಕಾರಣವಾಗುವುದಿಲ್ಲ. ಎರಡನೆಯದಾಗಿ ಪೆಟ್ರೋಲ್, ಡೀಸೆಲ್ ಎಂಜಿನ್ ವಾಹನಗಳಿಗೆ ಹೋಲಿಸಿದರೆ ಅವುಗಳು ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿವೆ.

ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವಾಗ ಪರಿಗಣಿಸಬೇಕಾದ ಸಂಗತಿಗಳಿವು

ಮತ್ತೊಂದು ಕಾರಣವೆಂದರೆ ಪೂರೈಕೆ ಸರಪಳಿಯಲ್ಲಿನ ಅಡೆ ತಡೆಗಳಿಂದಾಗಿ ಗ್ರಾಹಕರು ಹೊಸ ಎಲೆಕ್ಟ್ರಿಕ್ ವಾಹನಗಳ ವಿತರಣೆ ಪಡೆಯಲು ಹೆಚ್ಚು ಕಾಲ ಕಾಯಬೇಕಾಗಿದೆ. ಆದರೆ ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನಗಳು ತಕ್ಷಣವೇ ಗ್ರಾಹಕರ ಕೈ ಸೇರುತ್ತವೆ. ವೈಯಕ್ತಿಕ ಬಳಕೆಗಾಗಿ ಇವಿಗಳನ್ನು ಹುಡುಕುತ್ತಿರುವವರಿಗೆ ಇದು ನಿಜಕ್ಕೂ ವರದಾನವಾಗಿದೆ.

ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವಾಗ ಪರಿಗಣಿಸಬೇಕಾದ ಸಂಗತಿಗಳಿವು

ಉಳಿದಿರುವ ಬ್ಯಾಟರಿ ಬಾಳಿಕೆ

ಬಳಸಿದ ಪೆಟ್ರೋಲ್, ಡೀಸೆಲ್ ಎಂಜಿನ್ ವಾಹನವನ್ನು ಖರೀದಿಸುವ ಮುನ್ನ ಪರಿಶೀಲಿಸುವಂತೆ ಎಲೆಕ್ಟ್ರಿಕ್ ವಾಹನದ ಮೇಲೆ ಹಣ ಖರ್ಚು ಮಾಡುವ ಮೊದಲು ಉಳಿದಿರುವ ಬ್ಯಾಟರಿ ಬಾಳಿಕೆ ಹಾಗೂ ವ್ಯಾಪ್ತಿಯನ್ನು ಪರಿಗಣಿಸಬೇಕು. ನಂತರ ಆ ವಾಹನವು ನೀಡುವ ಹಣಕ್ಕೆ ಯೋಗ್ಯವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು.

ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವಾಗ ಪರಿಗಣಿಸಬೇಕಾದ ಸಂಗತಿಗಳಿವು

ಬ್ಯಾಟರಿ ಬಾಳಿಕೆ ಹಾಗೂ ವ್ಯಾಪ್ತಿಯನ್ನು ಪತ್ತೆ ಹಚ್ಚುವುದು ಕಷ್ಟವೇ ಆದರೂ ಅದನ್ನು ಅಧ್ಯಯನ ಮಾಡಲು ಪ್ರಯತ್ನಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಅವುಗಳನ್ನು ಪತ್ತೆ ಹಚ್ಚುವುದಕ್ಕಾಗಿಯೇ ಕೆಲವು ಸ್ಟಾರ್ಟ್ ಅಪ್ ಕಂಪನಿಗಳು ಮಾರುಕಟ್ಟೆಯಲ್ಲಿವೆ. ಹಾಗೆಯೇ ಬ್ಯಾಟರಿ ಬಾಳಿಕೆಯು ಚಾರ್ಜಿಂಗ್ ವಿಧ, ಚಾರ್ಜಿಂಗ್ ಆವರ್ತನ ಹಾಗೂ ಬ್ಯಾಟರಿ ಮಟ್ಟ ಮುಂತಾದವುಗಳನ್ನು ಅವಲಂಬಿಸಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ.

ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವಾಗ ಪರಿಗಣಿಸಬೇಕಾದ ಸಂಗತಿಗಳಿವು

ವೇಗವಾಗಿ ಚಾರ್ಜ್ ಮಾಡುವುದರಿಂದ ಕಾಯುವ ಸಮಯವನ್ನು ಕಡಿಮೆ ಮಾಡಬಹುದು. ಆದರೆ ಸ್ಥಿರವಾದ ಹೋಮ್ ಚಾರ್ಜಿಂಗ್ ಸಾಕೆಟ್ ದೀರ್ಘ ಬ್ಯಾಟರಿ ಬಾಳಿಕೆಯನ್ನು ಖಾತ್ರಿಗೊಳಿಸುತ್ತದೆ. ನಿಯಮಿತವಾಗಿ ಚಾರ್ಜ್ ಮಾಡದೇ ಇರುವುದು ಹಾಗೂ ಬ್ಯಾಟರಿಯಲ್ಲಿ ಪೂರ್ತಿ ಚಾರ್ಜ್ ಖಾಲಿಯಾದ ಮೇಲೆ ಚಾರ್ಜ್ ಮಾಡುವುದರಿಂದ ಬ್ಯಾಟರಿಯ ಅವಧಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ.

ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವಾಗ ಪರಿಗಣಿಸಬೇಕಾದ ಸಂಗತಿಗಳಿವು

ಶ್ರೇಣಿ

ಇವಿ ವ್ಯಾಪ್ತಿಯು ಬ್ಯಾಟರಿಯ ಗಾತ್ರವನ್ನು ಅವಲಂಬಿಸಿರುತ್ತದೆ. ಬ್ಯಾಟರಿ ದೊಡ್ಡದಾಗಿದ್ದರೆ, ಇವುಗಳು ಹೆಚ್ಚು ದೂರ ಚಲಿಸುತ್ತವೆ. ಆದ್ದರಿಂದ ಬಳಸಿದ ಇವಿ ಖರೀದಿಸುವಾಗ ಬ್ಯಾಟರಿಯ ಗಾತ್ರ ಹಾಗೂ ಅದು ನೀಡುವ ಸರಾಸರಿ ವ್ಯಾಪ್ತಿಯನ್ನು ಪರಿಶೀಲಿಸಿ.

ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವಾಗ ಪರಿಗಣಿಸಬೇಕಾದ ಸಂಗತಿಗಳಿವು

ಮೂಲ ಸೌಕರ್ಯದ ಲಭ್ಯತೆ

ಇದು ಇವಿ ಖರೀದಿ ವೇಳೆ ಪರಿಗಣಿಸಬೇಕಾದ ಮತ್ತೊಂದು ನಿರ್ಣಾಯಕ ಅಂಶವಾಗಿದೆ. ನಗರ ಹಾಗೂ ಸುತ್ತಮುತ್ತ ನಿಯಮಿತ ಪ್ರಯಾಣಕ್ಕಾಗಿ ಇವಿ ಖರೀದಿಸುತ್ತಿದ್ದರೆ, ಹೋಂ ಚಾರ್ಜಿಂಗ್ ಸುಲಭವಾಗಿ ಲಭ್ಯವಿರುವ ಪರಿಹಾರವಾಗಿದೆ. ಆದರೆ ಹೊರ ತೆಗೆಯಬಹುದಾದ ಅಥವಾ ಸ್ಥಿರವಾದ ಬ್ಯಾಟರಿಯ ಪ್ರಕಾರದ ಬಗ್ಗೆ ಖಚಿತಪಡಿಸಿಕೊಳ್ಳಿ.

ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವಾಗ ಪರಿಗಣಿಸಬೇಕಾದ ಸಂಗತಿಗಳಿವು

ಇವುಗಳನ್ನು ಖರೀದಿಸುವ ಜನರಿಗೆ ಹೆದ್ದಾರಿಗಳಲ್ಲಿ ಹಾಗೂ ದೂರದ ಪ್ರಯಾಣಕ್ಕೆ ನೆರವಾಗುತ್ತದೆ. ಇವಿಗಳ ವ್ಯಾಪ್ತಿ ಹಾಗೂ ಚಾರ್ಜಿಂಗ್ ಮೂಲಸೌಕರ್ಯಗಳ ಲಭ್ಯತೆಯನ್ನು ತಿಳಿದುಕೊಳ್ಳುವುದು ಸಹ ಮುಖ್ಯವಾಗಿದೆ. ಈಗ ಹಲವು ಸ್ಟಾರ್ಟಪ್‌ ಕಂಪನಿಗಳು ಬ್ಯಾಟರಿ ಗುತ್ತಿಗೆ ಸೌಲಭ್ಯಗಳನ್ನು ನೀಡುತ್ತಿವೆ. ಹೊರ ತೆಗೆಯಬಹುದಾದ ಬ್ಯಾಟರಿಗಳನ್ನು ಬಳಸುವವರಿಗೆ ಇದು ಉಪಯುಕ್ತವಾಗಿದೆ.

ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವಾಗ ಪರಿಗಣಿಸಬೇಕಾದ ಸಂಗತಿಗಳಿವು

ಮಾಲೀಕತ್ವ ವೆಚ್ಚ

ವಾಹನಗಳನ್ನು ಖರೀದಿಸುವಾಗ ನಾವು ಪರಿಗಣಿಸಬೇಕಾದ ಮತ್ತೊಂದು ಅಂಶವೆಂದರೆ ವೆಚ್ಚ. ಮಾಲೀಕತ್ವದ ವೆಚ್ಚವು ಖರೀದಿಯ ವೆಚ್ಚ ಹಾಗೂ ಇದುವರೆಗೂ ಇವಿ ರಿಪೇರಿ ಮಾಡುವ ಒಟ್ಟು ವೆಚ್ಚವನ್ನು ಒಳಗೊಂಡಿದೆ.

ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವಾಗ ಪರಿಗಣಿಸಬೇಕಾದ ಸಂಗತಿಗಳಿವು

ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಹೋಲಿಸಿದರೆ ಇವುಗಳಿಗೆ ಹೆಚ್ಚಿನ ವೆಚ್ಚ ಬರುತ್ತದೆ, ಆದರೆ ಮಾಲೀಕತ್ವದ ಒಟ್ಟಾರೆ ವೆಚ್ಚವು ಕಡಿಮೆಯಾಗುತ್ತದೆ. ವಾಹನವನ್ನು ಖರೀದಿಸುವಾಗ ಇವಿ ಖರೀದಿಯ ಬೆಲೆ ಹಾಗೂ ವಾಹನ ಮಾಲೀಕತ್ವದ ಒಟ್ಟಾರೆ ವೆಚ್ಚವನ್ನು ಪರಿಗಣಿಸುವುದು ಅತ್ಯಗತ್ಯ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Things to keep in mind while purchasing second hand electric vehicle details
Story first published: Tuesday, October 5, 2021, 14:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X