ಈ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆಗೆ ಆರ್‌ಸಿ, ಡಿಎಲ್ ಅವಶ್ಯವಿಲ್ಲ..

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ಈ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆಗೆ ಆರ್‌ಸಿ, ಡಿಎಲ್ ಬೇಕಿಲ್ಲ..

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಈಗಾಗಲೇ ಫೇಮ್ 2 ಸಬ್ಸಡಿ ಯೋಜನೆಯನ್ನು ಜಾರಿಗೆ ತಂದಿದ್ದು, ಹೊಸ ಯೋಜನೆಯಡಿ ಎಲೆಕ್ಟ್ರಿಕ್ ವಾಹನ ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದೆ. ಹಾಗೆಯೇ ಫೇಮ್ 2 ಯೋಜನೆಯೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ತಮ್ಮದೇ ಆದ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿದ್ದು, ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ವಿವಿಧ ರಾಜ್ಯದ ಸರ್ಕಾರಗಳು ಸಹ ಕೆಲವು ವಿನಾಯ್ತಿಗಳನ್ನು ನೀಡುತ್ತಿವೆ.

ಈ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆಗೆ ಆರ್‌ಸಿ, ಡಿಎಲ್ ಬೇಕಿಲ್ಲ..

ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಸದ್ಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿ ಪ್ರಕ್ರಿಯೆ ಜೋರಾಗಿದ್ದು, ಹಲವಾರು ಸ್ಟಾರ್ಟ್ ಅಪ್ ಕಂಪನಿಗಳ ಜೊತೆಗೆ ಸಾಂಪ್ರಾದಾಯಿಕ ವಾಹನ ಕಂಪನಿಗಳು ಕೂಡಾ ಹೊಸ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿವೆ.

ಈ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆಗೆ ಆರ್‌ಸಿ, ಡಿಎಲ್ ಬೇಕಿಲ್ಲ..

ಗ್ರಾಹಕರ ಬೇಡಿಕೆಯೆಂತೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಗಳು ಬೆಲೆ ಮತ್ತು ಬ್ಯಾಟರಿ ಸಾಮರ್ಥ್ಯದ ಆಧಾರದ ಮೇಲೆ ಎರಡು ರೀತಿಯ ಮಾದರಿಗಳನ್ನು ಪರಿಚಯಿಸುತ್ತಿದ್ದು, ಲೋ ಸ್ಪೀಡ್ ಮತ್ತು ಹೈ ಸ್ಪೀಡ್ ಮಾದರಿಗಳನ್ನು ಖರೀದಿ ಮಾಡಬಹುದಾಗಿದೆ.

ಈ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆಗೆ ಆರ್‌ಸಿ, ಡಿಎಲ್ ಬೇಕಿಲ್ಲ..

ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಸಾಮಾನ್ಯ ಸ್ಕೂಟರ್‌ಗಳಂತೆ ನೋಂದಣಿ ಮಾಡಿಸುವುದು, ವಿಮೆ ಹೊಂದಿರುವುದು ಮತ್ತು ಚಾಲನೆಗೆ ಕಡ್ಡಾಯವಾಗಿ ಡಿಎಲ್ ಹೊಂದಿರಲೇಬೇಕಾಗುತ್ತದೆ. ಆದರೆ ಲೋ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಚಾಲನೆಗಾಗಿ ನೋಂದಣಿ, ಡಿಎಲ್ ಯಾವುದು ಅವಶ್ಯವಿರುವುದಿಲ್ಲ. ಲೋ ಸ್ಪೀಡ್ ಮತ್ತು ಹೈ ಸ್ಪೀಡ್ ಇವಿ ಸ್ಕೂಟರ್‌ಗಳ ಆಯ್ಕೆಯು ಬಳಕೆಯ ಆಧಾರದ ಮೇಲೆ ನಿರ್ಧರಿತವಾಗಿದ್ದು, ಕಡಿಮೆ ಅಂತರದಲ್ಲಿ ದಿನನಿತ್ಯದ ಓಡಾಟಕ್ಕಾಗಿ ಲೋ ಸ್ಪೀಡ್ ಇವಿ ಸ್ಕೂಟರ್‌ಗಳು ಅನುಕೂಲಕರವಾಗಿವೆ. ಹಾಗಾದ್ರೆ ನೋಂದಣಿ ಮತ್ತು ಡಿಎಲ್ ಇಲ್ಲದೆ ರೈಡ್ ಮಾಡಬಹುದಾದ ಎಲೆಕ್ಟ್ರಿಕ್ ಸ್ಕೂಟರ್ ಮಾಹಿತಿಯನ್ನು ಇಲ್ಲಿ ತಿಳಿಯೋಣ.

ಈ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆಗೆ ಆರ್‌ಸಿ, ಡಿಎಲ್ ಬೇಕಿಲ್ಲ..

ಹೀರೋ ಎಲೆಕ್ಟ್ರಿಕ್ ಕಂಫರ್ಟ್ ಸ್ಪೀಡ್ ಎಲ್ಎಕ್ಸ್

ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಸದ್ಯ ಮುಂಚೂಣಿಯಲ್ಲಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಕಂಫರ್ಟ್ ಸ್ಪೀಡ್ ಎಲ್ಎಕ್ಸ್ ವಿಭಾಗದಲ್ಲಿ ಆಟ್ರಿಯಾ, ಫ್ಲಾಶ್, ಎನ್‌ವೈಎಕ್ಸ್ ಮತ್ತು ಆಪ್ಟಿಮಾ ಮಾದರಿಗಳನ್ನು ಮಾರಾಟಮಾಡುತ್ತಿದ್ದು, ಈ ಎಲ್ಲಾ ಸ್ಕೂಟರ್‌ಗಳು ಪ್ರತಿಗಂಟೆಗೆ ಗರಿಷ್ಠ 25 ಕಿ.ಮೀ ಗರಿಷ್ಠ ವೇಗದೊಂದಿಗೆ ಲೀಥಿಯಂ ಮತ್ತು ಲೀಡ್ ಆ್ಯಸಿಡ್ ಬ್ಯಾಟರಿ ಆಯ್ಕೆ ಹೊಂದಿವೆ.

ಈ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆಗೆ ಆರ್‌ಸಿ, ಡಿಎಲ್ ಬೇಕಿಲ್ಲ..

250 ವ್ಯಾಟ್ ಹಬ್ ಹೊಂದಿರುವ ಡಿಸಿ ಎಲೆಕ್ಟ್ರಿಕ್ ಮೋಟಾರ್ ಅನ್ನು 48 ವಿ / 28 ಎಎಚ್ ಲಿಥಿಯಂ ಅಯಾನ್ ಬ್ಯಾಟರಿಗೆ ಜೋಡಿಸಲಾಗಿದ್ದು, ಪ್ರತಿ ಚಾರ್ಜ್‌ನಲ್ಲಿ ಗರಿಷ್ಠ 65 ಕಿ.ಮೀ ವರೆಗೆ ಮೈಲೇಜ್ ಹಿಂದಿರುಗಿಸುವ ಮೂಲಕ ನಗರಪ್ರದೇಶದಲ್ಲಿನ ಸಂಚಾರಕ್ಕೆ ಅನುಕೂಲಕರವಾಗಿವೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಈ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆಗೆ ಆರ್‌ಸಿ, ಡಿಎಲ್ ಬೇಕಿಲ್ಲ..

ಒಕಿನಾವ ಲೈಟ್

ಹೊಚ್ಚ ಹೊಸ ಒಕಿನಾವ ಲೈಟ್ ಆಸಕ್ತಿದಾಯಕವಾದ ವಿನ್ಯಾಸ ಮತ್ತು ಆಧುನಿಕ ವೈಶಿಷ್ಟ್ಯತೆಗಳಾದ ಆಲ್-ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಆಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್ಇಡಿ ಟೈಲ್ಯಾಂಪ್ ಮತ್ತು ಎಲ್ಇಡಿ ಇಂಡಿಕೇಟರ್, ರೀ ಜನರೇಟಿವ್ ಬ್ರೇಕಿಂಗ್, ಫ್ರಂಟ್ ಡಿಸ್ಕ್ ಸೇರಿದಂತೆ ಹೊಸ ತಂತ್ರಜ್ಞಾನ ಸೌಲಭ್ಯದೊಂದಿಗೆ ಅಭಿವೃದ್ದಿಗೊಂಡಿದೆ.

ಈ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆಗೆ ಆರ್‌ಸಿ, ಡಿಎಲ್ ಬೇಕಿಲ್ಲ..

1.25 ಕಿ.ವ್ಯಾ ಲಿಥಿಯಂ ಅಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಜೋಡಿಯಾಗಿರುವ 250 ವ್ಯಾಟ್ ಬಿಎಲ್‌ಡಿಸಿ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 60 ಕಿ.ಮೀ ವ್ಯಾಪ್ತಿಯನ್ನು ಖಾತ್ರಿಗೊಳಿಸುತ್ತದೆ. ಸಂಪೂರ್ಣ ಚಾರ್ಜ್ ಮಾಡಲು ಇದು ಸುಮಾರು 4-5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.ಇದು 25 ಕಿ.ಮೀ ವೇಗವನ್ನು ಹೊಂದಿರುತ್ತದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಈ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆಗೆ ಆರ್‌ಸಿ, ಡಿಎಲ್ ಬೇಕಿಲ್ಲ..

ಒಕಿನಾವ ಆರ್30

ಲೋ ಸ್ಪೀಡ್ ಇವಿ ಸ್ಕೂಟರ್‌ನಲ್ಲಿ ಒಕಿನಾವ ಆರ್ 30 ಎಲೆಕ್ಟ್ರಿಕ್ ಸ್ಕೂಟರ್ ಕೂಡಾ ಉತ್ತಮ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದ್ದು, ಪ್ರತಿ ಗಂಟೆಗೆ 25ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ 250 ವ್ಯಾಟ್ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ 1.25 ಕಿ.ವ್ಯಾ ಲಿಥಿಯಂ ಅಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಜೋಡಿಸಲ್ಪಟ್ಟಿದೆ.

ಈ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆಗೆ ಆರ್‌ಸಿ, ಡಿಎಲ್ ಬೇಕಿಲ್ಲ..

ಆಂಪಿಯರ್ ರಿಯೊ ಎಲೈಟ್

ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಆಂಪಿಯರ್ ರಿಯೊ ಎಲೈಟ್ ಕೂಡಾ ಒಂದು ಸಾಂಪ್ರದಾಯಿಕ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಾಗಿ ಗುರುತಿಸಿಕೊಂಡಿದ್ದು, ದೂರದಿಂದ ಹೋಂಡಾ ಡಿಯೊದಂತೆ ಕಾಣುವ ಏಪ್ರಾನ್ ಲಗತ್ತಿಸಲಾದ ಹೆಡ್‌ಲ್ಯಾಂಪ್ ಹೊಂದಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಬಿಎಸ್ಐ ಸರ್ಟಿಫೈಡ್ ಟ್ರೆಡ್ ಹೆಲ್ಮೆಟ್ ಬಿಡುಗಡೆ

ಈ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆಗೆ ಆರ್‌ಸಿ, ಡಿಎಲ್ ಬೇಕಿಲ್ಲ..

ಜೊತೆಗೆ ಪ್ರೀಮಿಯಂ ಲುಕಿಂಗ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್‌ಲೈಟ್‌ಗಳು, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಫ್ರಂಟ್ ಏಪ್ರಾನ್ ಪಾಕೆಟ್ ಮತ್ತು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಹೊಂದಿದ್ದು, 250 ವ್ಯಾಟ್ ಬಿಎಲ್‌ಡಿಸಿ ಹಬ್ ಮೋಟರ್ ನಿಂದ ನಿಯಂತ್ರಿಸಲ್ಪಡುತ್ತದೆ. ಪ್ರತಿ ಚಾರ್ಜ್‌ಗೆ 60 ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ರಿಯೊ ಎಲೈಟ್ ಇವಿ ಸ್ಕೂಟರ್ ಮಾದರಿಯು ಕೂಡಾ ಪ್ರತಿ ಗಂಟೆಗೆ ಗರಿಷ್ಠ 25 ಕಿ.ಮೀ ವೇಗ ಮಾತ್ರ ಹೊಂದಿದೆ.

ಈ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆಗೆ ಆರ್‌ಸಿ, ಡಿಎಲ್ ಬೇಕಿಲ್ಲ..

ಹೋಪ್ ಎಲೆಕ್ಟ್ರಿಕ್ ಮೊಪೆಡ್

ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಪ್ರಾರಂಭಿಸಿರುವ ಸ್ಟಾರ್ಟ್ ಅಪ್ ಗೆಲಿಯೋಸ್ ಮೊಬಿಲಿಟಿ ಸಂಸ್ಥೆಯು ಮೊದಲ ಬಾರಿಗೆ ವಾಣಿಜ್ಯ ಬಳಕೆಗೆ ಸಹಕಾರಿಯಾಗುವ ಇವಿ ಮೊಪೆಡ್ ಸಿದ್ದಪಡಿಸಿದ್ದು, ಹೊಸ ಹೋಪ್ ಎಲೆಕ್ಟ್ರಿಕ್ ಮಾದರಿಯ ಬೆಲೆಯನ್ನು ರೂ.46,999ಕ್ಕೆ ನಿಗದಿಪಡಿಸಿದೆ.

ಈ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆಗೆ ಆರ್‌ಸಿ, ಡಿಎಲ್ ಬೇಕಿಲ್ಲ..

ಲೋ ಸ್ಪೀಡ್ ಇವಿ ಮೊಪೆಡ್ ಆವೃತ್ತಿಯಾಗಿರುವ ಹೋಪ್ ಮಾದರಿಯು ಎರಡು ಪ್ರಮುಖ ವೆರಿಯೆಂಟ್‌ಗಳೊಂದಿಗೆ ಪ್ರತಿ ಚಾರ್ಜ್‌ಗೆ 50 ಕಿ.ಮೀ(ಆರಂಭಿಕ ಮಾದರಿ) ಮತ್ತು ಟಾಪ್ ಎಂಡ್ ಮಾದರಿಯು 75 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಈ ಸ್ಕೂಟರ್‌ನ ಉನ್ನತ ವೇಗವನ್ನು ಗಂಟೆಗೆ 25 ಕಿಲೋಮೀಟರ್‌ಗೆ ಸೀಮಿತಗೊಳಿಸಲಾಗಿದ್ದು, ಲೋ ಸ್ಪೀಡ್ ಮಾದರಿಯಾಗಿರುವುದರಿಂದ ಕಡಿಮೆ ವೇಗದ ಎಲೆಕ್ಟ್ರಿಕ್ ವಾಹನಗಳ ವ್ಯಾಪ್ತಿಯಲ್ಲಿ ಬರುತ್ತದೆ.

ಈ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆಗೆ ಆರ್‌ಸಿ, ಡಿಎಲ್ ಬೇಕಿಲ್ಲ..

ಡೆಟಲ್ ಈಸಿ ಪ್ಲಸ್ ಮೊಪೆಡ್

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಈಸಿ ಪ್ಲಸ್ ಮೊಪೆಡ್ ಆವೃತ್ತಿಯಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸಿರುವ ಡೆಟೆಲ್ ಕಂಪನಿಯು ಇದೀಗ ಹೊಸ ಈಸಿ ಪ್ಲಸ್ ಮೊಪೆಡ್ ಆವೃತ್ತಿಯನ್ನು ಸ್ವಂತ ಬಳಕೆಯ ಜೊತೆಗೆ ಬಿಟುಬಿ(ಬ್ಯುಸಿನೆಸ್ ಟು ಬ್ಯುಸಿನೆಸ್) ಉದ್ದೇಶಗಳಿಗೂ ಬಿಡುಗಡೆ ಮಾಡಿದ್ದು, ಈಸಿ ಮೊಪೆಡ್‌ಗಿಂತಲೂ ಉತ್ತಮ ಸೌಲಭ್ಯಗಳನ್ನು ಹೊಂದಿರುವ ಈಸಿ ಪ್ಲಸ್ ಆವೃತ್ತಿಯು ವಿಸ್ತರಿತ ಬ್ಯಾಟರಿ ಪಡೆದುಕೊಂಡಿದೆ.

ಈ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆಗೆ ಆರ್‌ಸಿ, ಡಿಎಲ್ ಬೇಕಿಲ್ಲ..

ಹೊಸ ಈಸಿ ಪ್ಲಸ್ ಮೊಪೆಡ್ ಎಲೆಕ್ಟ್ರಿಕ್ ಮೊಪೆಡ್ ಮಾದರಿಯು 39,999 ಕ್ಕೆ ಖರೀದಿ ಲಭ್ಯವಿದ್ದು, ಪ್ರತಿ ಚಾರ್ಜ್‌ಗೆ ಗರಿಷ್ಠ 70ಕಿ.ಮೀ ಮೈಲೇಜ್ ಹೊಂದಿರಲಿದೆ. 20 ಎಹೆಚ್ ಲಿಥೀಯಂ ಅಯಾನ್ ಬ್ಯಾಟರಿ ಹೊಂದಿರುವ ಈ ಮೊಪೆಡ್ ಮಾದರಿಯು 4-5 ಗಂಟೆಗಳಲ್ಲಿ ಪೂರ್ಣ ಪ್ರಮಾಣ ಚಾರ್ಜ್ ಆಗಲಿದೆ.

Most Read Articles

Kannada
English summary
Electric Scooters That Can Be Ride Without Driving Licence And Vehicle Registration. Read in Kannada.
Story first published: Tuesday, April 13, 2021, 19:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X