Just In
Don't Miss!
- News
ಪೊಲೀಸ್ ಆಯುಕ್ತರ ಕಚೇರಿಯಿಂದ ಕಾಲ್ ಬರುತ್ತೆ
- Sports
ಕೋಲ್ಕತ್ತಾ, ಅಹ್ಮದಾಬಾದ್ ಸೇರಿ 5 ತಾಣಗಳಲ್ಲಿ 2021ರ ಐಪಿಎಲ್
- Finance
30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಕ್ಯಾಪ್ಜೆಮಿನಿ
- Movies
ರಾಬರ್ಟ್ ಸಂಭ್ರಮ: ವಿನಯದಿಂದ ತೆಲುಗು ಅಭಿಮಾನಿಗಳ ಮನಸು ಕದ್ದ ದರ್ಶನ್
- Lifestyle
ಮಾರ್ಚ್ ತಿಂಗಳಲ್ಲಿ ವಿವಾಹವಾಗಲು ಇಲ್ಲಿದೆ ಶುಭದಿನಾಂಕಗಳು
- Education
RBI Grade B Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೈಗೆಟುಕುವ ದರದಲ್ಲಿ ಲಭ್ಯವಿರುವ ಟಾಪ್ 5 ಬೈಕುಗಳಿವು
ದೇಶಿಯ ವಾಹನ ಮಾರುಕಟ್ಟೆಯಲ್ಲಿ ಪರ್ಫಾಮೆನ್ಸ್ ಬೈಕ್ಗಳ ಜೊತೆಗೆ ಕೈಗೆಟುಕುವ, ಬಜೆಟ್ ಬೆಲೆಯ ಬೈಕ್ಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಭಾರತದಲ್ಲಿ ಪ್ರತಿ ತಿಂಗಳು ಕೈಗೆಟುಕುವ ಬೆಲೆಯ ದ್ವಿಚಕ್ರ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಭಾರತದಲ್ಲಿ ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದಾದ ಟಾಪ್ 5 ಬೈಕುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

5. ಬಜಾಜ್ ಪ್ಲಾಟಿನಾ 100
ಬಜಾಜ್ ಆಟೋದ ಪ್ಲಾಟಿನಾ 100 ಬೈಕ್ ಅನ್ನು ಡ್ರಮ್ ಬ್ರೇಕ್ ಹಾಗೂ ಡಿಸ್ಕ್ ಬ್ರೇಕ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಡ್ರಮ್ ಬ್ರೇಕ್ ಮಾದರಿಯ ಬೆಲೆ ಎಕ್ಸ್ಶೋರೂಂ ದರದಂತೆ ರೂ.59,859ಗಳಾದರೆ, ಡಿಸ್ಕ್ ಬ್ರೇಕ್ ಮಾದರಿಯ ಬೆಲೆ ಎಕ್ಸ್ಶೋರೂಂ ದರದಂತೆ ರೂ.63,578ಗಳಾಗಿದೆ.

ಈ ಬೈಕಿನಲ್ಲಿ ಬಜಾಜ್ ಆಟೋ ಕಂಪನಿಯು 102 ಸಿಸಿಯ 4-ಸ್ಟ್ರೋಕ್, ಡಿಟಿಎಸ್-ಐ, ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಿದೆ. ಈ ಎಂಜಿನ್ 7,500 ಆರ್ಪಿಎಂನಲ್ಲಿ 7.8 ಬಿಹೆಚ್ಪಿ ಪವರ್ ಹಾಗೂ 5,500 ಆರ್ಪಿಎಂನಲ್ಲಿ 8.3 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

4. ಟಿವಿಎಸ್ ಸ್ಪೋರ್ಟ್
ಟಿವಿಎಸ್ ಮೋಟಾರ್ ಕಂಪನಿಯು ಈ ಬೈಕ್ ಅನ್ನು ಕಿಕ್ ಸ್ಟಾರ್ಟ್ ಹಾಗೂ ಎಲೆಕ್ಟ್ರಿಕ್ ಸ್ಟಾರ್ಟ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡುತ್ತದೆ. ಕಿಕ್ ಸ್ಟಾರ್ಟ್ ಮಾದರಿಯ ಬೆಲೆ ಎಕ್ಸ್ಶೋರೂಂ ದರದಂತೆ ರೂ.56,100ಗಳಾದರೆ, ಎಲೆಕ್ಟ್ರಿಕ್ ಸ್ಟಾರ್ಟ್ ಮಾದರಿಯ ಬೆಲೆ ಎಕ್ಸ್ಶೋರೂಂ ದರದಂತೆ ರೂ.62,950ಗಳಾಗಿದೆ. ಈ ಬೈಕಿನಲ್ಲಿ ಅಳವಡಿಸಿರುವ 109.7 ಸಿಸಿ ಎಂಜಿನ್ 8.2 ಬಿಹೆಚ್ಪಿ ಪವರ್ ಹಾಗೂ 8.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

3. ಬಜಾಜ್ ಸಿಟಿ 110
ಬಜಾಜ್ ಸಿಟಿ 110, ಸಿಟಿ 100 ಬೈಕಿನ ಪ್ರೀಮಿಯಂ ಆವೃತ್ತಿಯಾಗಿದ್ದು, ಕೆಲವು ಹೆಚ್ಚುವರಿ ಫೀಚರ್'ಗಳನ್ನು ಹೊಂದಿದೆ. ಈ ಬೈಕಿನ ಬೆಲೆ ಎಕ್ಸ್ಶೋರೂಂ ದರದಂತೆ ರೂ.54,138ಗಳಾಗಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ಬೈಕ್ನಲ್ಲಿ ಬಜಾಜ್ ಆಟೋ ಕಂಪನಿಯು 115.45 ಸಿಸಿಯ 4-ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಿದೆ. ಈ ಎಂಜಿನ್ 7,000 ಆರ್ಪಿಎಂನಲ್ಲಿ 8.5 ಬಿಹೆಚ್ಪಿ ಪವರ್ ಹಾಗೂ 5,000 ಆರ್ಪಿಎಂನಲ್ಲಿ 9.81 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

2. ಹೀರೋ ಹೆಚ್ಎಫ್ ಡೀಲಕ್ಸ್
ಹೆಚ್ಎಫ್ ಡೀಲಕ್ಸ್ ಹೆಚ್ಚು ಮಾರಾಟವಾಗುವ ಹೀರೋ ಮೋಟೊಕಾರ್ಪ್ ಬೈಕ್ಗಳಲ್ಲಿ ಒಂದಾಗಿದೆ. ಈ ಬೈಕ್ 2020ರ ಡಿಸೆಂಬರ್ ತಿಂಗಳಿನಲ್ಲಿ 1.4 ಲಕ್ಷಕ್ಕೂ ಹೆಚ್ಚು ಮಾರಾಟವಾಗಿದೆ. ಈ ಬೈಕಿನ ಬೆಲೆ ಎಕ್ಸ್ಶೋರೂಂ ದರದಂತೆ ರೂ.51,200 ರಿಂದ ರೂ.61,225ಗಳಾಗಿದೆ. ಈ ಬೈಕಿನಲ್ಲಿ 97.2 ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

1. ಬಜಾಜ್ ಸಿಟಿ 100
ಭಾರತದಲ್ಲಿ ಸದ್ಯಕ್ಕೆ ಕಡಿಮೆ ಬೆಲೆಯನ್ನು ಹೊಂದಿರುವ ಬೈಕ್ ಬಜಾಜ್ ಸಿಟಿ 100 ಮಾತ್ರ. ಈ ಬೈಕಿನ ಬೆಲೆ ಎಕ್ಸ್ಶೋರೂಂ ದರದಂತೆ ರೂ.47,654ಗಳಾಗಿದೆ. ಈ ಬೈಕ್ ಅನ್ನು ಕಿಕ್ ಸ್ಟಾರ್ಟ್ ಹಾಗೂ ಎಲೆಕ್ಟ್ರಿಕ್ ಸ್ಟಾರ್ಟ್ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಈ ಬೈಕಿನಲ್ಲಿ 102 ಸಿಸಿಯ 4-ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 7.8 ಬಿಹೆಚ್ಪಿ ಪವರ್ ಹಾಗೂ 8.34 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ನೊಂದಿಗೆ 4-ಸ್ಪೀಡ್ ಗೇರ್ಬಾಕ್ಸ್ ಅನ್ನು ಜೋಡಿಸಲಾಗಿದೆ.